12, ಕ್ಷೇತ್ರಗಳಲ್ಲಿ ಬಿಜೆಪಿಗೆ ಭರ್ಜರಿ ಗೆಲುವು; ಕರ್ನಾಟಕದ ಮತದಾರನ್ನು ಕುರಿತು ಪ್ರಧಾನಿ ಮೋದಿ ಹೇಳಿದ್ದೇನು??

0
324

ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದಲ್ಲಿ ಬಿಜೆಪಿಯ ಗೆಲುವಿನ ಬಗ್ಗೆ ಹೇಳಿಕೆ ನೀಡಿದ್ದು, ಕರ್ನಾಟಕದಲ್ಲಿ ಜನಾದೇಶಕ್ಕೆ ಮೋಸ ಮಾಡಿದವರಿಗೆ ಅಲ್ಲಿನ ಮತದಾರರು ಪ್ರಜಾಪ್ರಭುತ್ವ ರೀತಿಯಲ್ಲೇ ಉತ್ತರ ನೀಡಿದ್ದಾರೆ. ಅದರಿಂದಲೇ ಕರ್ನಾಟಕದ ಜನತೆ ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಗೆ ತಕ್ಕ ಪಾಠ ಕಲಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅದರಂತೆ ಸಂಭ್ರಮದಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮೋದಿ ಕರೆ ಮಾಡಿ ಶುಭಾಶಯ ಕೋರಿದ್ದಾರೆ.

Also read: ರಾಜ್ಯದ ತುಂಬೆಲ್ಲ ಅರಳಿದ ಕಮಲ; 5 ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಗೆಲುವು, 7 ಕ್ಷೇತ್ರಗಳಲ್ಲಿ ಮುನ್ನಡೆ.!

ಹೌದು ರಾಜ್ಯದ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಹೇಳಿದಂತೆ ಈಗಾಗಲೇ 12 ಸ್ಥಾನಗಳನ್ನು ತನ್ನದಾಗಿಸಿಕೊಂಡಿದ್ದು, ಇನ್ನೂ ಎರಡು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದರೆ ಕಾಂಗ್ರೆಸ್-02, ಇತರೆ-01 ಸ್ಥಾನವನ್ನು ಗೆದ್ದುಕೊಂಡಿವೆ. ಈ ಗೆಲುವಿನ ಸಂತಸದಲ್ಲಿರುವ ಮೋದಿ ಜಾರ್ಖಂಡ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯ ಒಂದೂವರೆ ವರ್ಷದ ಆಡಳಿತ ನೋಡಿದ್ದರು. ಹಾಗಾಗಿ ಇಂದು ಜನತೆ ಕಮಲದ ಗುರುತಿಗೆ ಮತ ನೀಡುವ ಮೂಲಕ ಉತ್ತರ ನೀಡಿದ್ದಾರೆ.

Also read: ಜನರು ಪಕ್ಷಾಂತರಿಗಳನ್ನು ಒಪ್ಪಿಕೊಂಡಿದ್ದಾರೆ. ನಾವು ಸೋಲನ್ನು ಒಪ್ಪಿಕೊಂಡಿದ್ದೇವೆ, ಆದರೆ, ನಿರಾಸರಾಗುವುದಿಲ್ಲ ಡಿ.ಕೆ ಶಿವಕುಮಾರ್.!

ಕಾಂಗ್ರೆಸ್ ಮತ್ತು ಜೆಡಿಎಸ್ ರಾತ್ರೊರಾತ್ರಿ ಸರ್ಕಾರ ರಚನೆ ಮಾಡಿ ಕುರ್ಚಿಯ ಮೇಲೆ ಕೂತಿದ್ದರು. ಜನಾದೇಶದ ವಿರುದ್ಧ ಕೆಲಸ ಮಾಡಿದವರಿಗೆ ಜನರು ತಮಗೆ ಸಿಕ್ಕ ಮೊದಲ ಅವಕಾಶದಲ್ಲಿ ತಕ್ಕ ಉತ್ತರ ನೀಡಿದ್ದಾರೆ. ಕಾಂಗ್ರೆಸ್ ತನ್ನ ಹಿತಕ್ಕಾಗಿ ಮುಖ್ಯಮಂತ್ರಿಯಾಗಿ ಒಬ್ಬರನ್ನು ಮಾಡಿ ಒತ್ತಡ ಹಾಕಲು ಆರಂಭಿಸಿತು. ಕಾಂಗ್ರೆಸ್ ಕೈಗೊಂಬೆಯಾಗಿದ್ದ ಅಂದಿನ ಮುಖ್ಯಮಂತ್ರಿಯನ್ನು ಕಿಡ್ನಾಪ್ ಮಾಡಿತ್ತು. ಮುಖ್ಯಮಂತ್ರಿಯನ್ನ ಅಪಹರಿಸಿದ್ದ ಕಾಂಗ್ರೆಸ್, ದೆಹಲಿಗಾಗಿ ಆ ಕೆಲಸ ಮಾಡಿಕೊಡಿ, ಇದು ಮಾಡಬೇಕೆಂದು ಷರತ್ತುಗಳ ಜೊತೆ ಒತ್ತಡ ಹಾಕುತ್ತಿತ್ತು. ಇದೆಲ್ಲದರಿಂದ ನೊಂದ ಕರ್ನಾಟಕದ ಅಂದಿನ ಮುಖ್ಯಮಂತ್ರಿ ಜನರ ಮುಂದೆ ಬಂದು ಕಣ್ಣೀರು ಹಾಕುತ್ತಿದ್ದರು ಎಂದು ತಿಳಿಸಿದರು. ಅಷ್ಟೇಅಲ್ಲದೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಇತರರೊಂದಿಗೆ ತೆರೆಮರೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿತ್ತು.

Also read: ನಿತ್ಯಾನಂದನಿಗೆ ಪ್ರಧಾನಿ ಮೋದಿ ತಲೆ ಬಾಗಿದ ಫೋಟೋ ವೈರಲ್; ಅತ್ಯಾಚಾರಿಗೆ ತಲೆ ಬಾಗಿಸಿದರೆ ಅವರ ತಲೆಯನ್ನು ಪರೀಕ್ಷಿಸಬೇಕಾಗುತ್ತದೆ. ನಟ ಸಿದ್ಧಾರ್ಥ್.!

ಈ ರೀತಿಯ ಅನೈತಿಕ ಮೈತ್ರಿಗಳು ನಮಗೆ ಬೇಡವೆಂದು ಕರ್ನಾಟಕ ಜನತೆ ಉತ್ತರ ನೀಡುವ ಮೂಲಕ ಬಿಜೆಪಿ ಸರ್ಕಾರಕ್ಕೆ ಮತ ನೀಡಿದ್ದಾರೆ. ಅದೇ ರೀತಿ ಜಾರ್ಖಂಡ್ ನಲ್ಲಿಯೂ ಸುಭದ್ರ ಸರ್ಕಾರಕ್ಕೆ ಕಮಲದ ಗುರುತಿಗೆ ನೀವು ಮತ ನೀಡಬೇಕಿದೆ ಎಂದು ಮನವಿ ಮಾಡಿದರು. ಇದೆಲ್ಲದರ ಫಲವಾಗಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರಲಿದೆಯೇ ಅಥವಾ ಇಲ್ಲವೇ ಎಂಬುದನ್ನು ಇಂದು ನಿರ್ಧರಿಸಿಲ್ಲ. ಅಲ್ಲಿನ ಜನರು ಕಾಂಗ್ರೆಸ್​ಗೆ ತಕ್ಕಶಾಸ್ತಿ ಮಾಡಿದ್ದಾರೆ. ಭಾರತದ ಯಾವುದೇ ರಾಜ್ಯದಲ್ಲಾದಲ್ಲಿ ಆಗಲಿ, ಜನಾದೇಶದ ವಿರುದ್ಧ ನಡೆದುಕೊಂಡರೆ ಅವರಿಗೆ ಜನತೆ ಅವಮಾನ ಮಾಡಬೇಕು ಹಾಗೂ ಮತದಾರರು ಅವರಿಗೆ ಸರಿಯಾದ ಪಾಠ ಕಲಿಸಬೇಕು ಎಂದರು.

ಈ ಮಧ್ಯೆ ಬಿಎಸ್‍ವೈಗೆ ದೂರವಾಣಿ ಕರೆ ಮಾಡಿರುವ ಪ್ರಧಾನಿಯವರು, ಈ ಗೆಲುವು ಸಂತಸ ತಂದಿದೆ. ಇವಾಗೆ ನಿಮಗೆ ಸಂತೋಷವೇ ಎಂದು ಕೇಳಿ ಶುಭಾಶಯ ಕೋರಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಪ್ರಧಾನಿಗೆ ಧನ್ಯವಾದ ತಿಳಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.