ಇನ್ಮೇಲಿಂದನಾದ್ರು ರಾಹುಲ್ ಗಾಂಧಿ ಬಗ್ಗೆ ಜೋಕ್ಸ್ ಮಾಡೋ ಬದ್ಲು, ಮೋದಿ ಸರ್ಕಾರದ ಅನೇಕ ಜನ ವಿರೋಧಿ ನೀತಿ ಬಗ್ಗೆ ಅವರು ಮಾಡುತ್ತಿರುವ ಕೆಲಸಕ್ಕೆ ನೀವು ದನಿಗೂಡಿಸಿ..

0
508

ಹೆಲೋ ಓದುಗರೆ, ಇನ್ಮೇಲಿಂದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಯವರ ಮಾತುಗಳನ್ನು ಅಣಕಿಸುವ ಬದಲು ಅಥವಾ ಅವರನ್ನು ಕಾಮಿಡಿಯನ್’ನಂತೆ ನೋಡುವ ಬದಲು ಮೋದಿ ಸರ್ಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸುತ್ತಿರುವ ಅವರ ಮಾತುಗಳಿಗೆ ನೀವೂ ಧ್ವನಿಗೂಡಿಸಿ..

Also read: ಕಾಂಗ್ರೆಸ್-ನತ್ತ ವಾಲುತ್ತಿದ್ದಾರೆ ಬಿ.ಜೆ.ಪಿ. ಶಾಸಕರು, ಮುಗಿಯಿತಾ ಮೋದಿ- ಅಮಿತ್ ಶಾ ಆಟ???

ಎಸ್.. ಮೋದಿಯ ಅಚ್ಚೇ ದಿನ್ ಭರವಸೆಗಳು ಹಸಿ ಸುಳ್ಳು ಎಂದು ರಾಹುಲ್ ಗಾಂಧಿ ಕೂಗಿ ಕೂಗಿ ಹೇಳುತ್ತಿದ್ದಾರೆ.. ಅವರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಮೋದಿಯ ಬಣ್ಣ ಬಣ್ಣದ ಮಾತುಗಳಿಗೆ ತಲೆಯಾಡಿಸುವ ಸಮಯವಿದು. ದೇಶದಲ್ಲಿ ಒಂದೇ ಸಮನೆ ಇಂಧನ ಬೆಲೆ ಏರುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಏಕೆ ಮೌನವಹಿಸಿದ್ದಾರೆ; ಜನರ ಸಂಕಷ್ಟಗಳು ಅವರಿಗೆ ಅರ್ಥವಾಗುತ್ತಿಲ್ಲವೇ..? ಇನ್ನು ಮೋದಿ ಸೈಲೆಂಟ್ ಮೂಡ್’’ನಲ್ಲಿದ್ದಾರೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಟ್ವೀಟ್ ಮಾಡಿದ್ದಾರೆ.. ಇಂಧನ ಹಾಗೂ ಅನಿಲ ಬೆಲೆ ಏರಿಕೆಯಾಗುತ್ತಲೇ ಇದೆ. ರೂಪಾಯಿ ಮೌಲ್ಯ ಪಾತಳಕ್ಕೆ ಕುಸಿಯುತ್ತಿದೆ. ಡಾಲರ್ ಎದುರು ರೂಪಾಯಿ 73 ದಾಟಿದೆ. ಇಂಧನ ಮತ್ತು ಅನಿಲ ಬೆಲೆಗಳು ಬೆಂಕಿಯಾಗಿ ಸುಜುತ್ತಿದ್ದು, ಮಾರುಕಟ್ಟೆಗಳಲ್ಲಾ ಗಬ್ಬು ನಾರುತ್ತಿವೆ. ಇಷ್ಟಾದರೂ 56 ಇಂಚಿನ ಎದೆಯ ಮೋದಿ ಯಾಕಿನ್ನು ಸೈಲೆಂಟ್ ಮೂಡಿನಲ್ಲಿದ್ದಾರೆ.. ಆಚ್ಚೇ ದಿನ್ ಭರವಸೆ ಏನಾಯಿತು ಎಂದು ಪ್ರಶ್ನಿಸಿ ಎಐಸಿಸಿ ಅಧ್ಯಕ್ಷ ಟ್ವೀಟ್ ಮಾಡಿದ್ದಾರೆ.

Also read: ನಿಮ್ಮ ಖಾಸಗಿ ಮಾಹಿತಿ ಸುರಕ್ಷಿತವಾಗಿರಬೇಕು ಅಂದ್ರೆ ತಕ್ಷಣವೇ ನಿಮ್ಮ ಆಧಾರ್ -ಅನ್ನು ಬ್ಯಾಂಕ್ ಹಾಗು ಮೊಬೈಲ್ ಕಂಪನಿಗಳಿಂದ ಡಿ-ಲಿಂಕ್ ಮಾಡಿಸಿ, ಹೇಗೆ ಅಂತ ಹೇಳ್ತೀವಿ ಓದಿ

ರೂಪಾಯಿ 44 ಪೈಸೆಯಷ್ಟು ಕುಸಿತ ಕಂಡಿದೆ. ಐತಿಹಾಸಿಕ ಮಟ್ಟದಲ್ಲಿ 73 ಮಟ್ಟವನ್ನು ಮುರಿಯಲು ಕಾರಣವಾಗಿದೆ. ಕಚ್ಚಾತೈಲ ಬೆಲೆಗಳು ಬಂಡವಾಳದ ಹೊರಹರಿವುಗಳ ಕುರಿತಾಗಿ ಚಿಂತೆಗಳನ್ನು ಹೆಚ್ಚಿಸಿವೆ ಮತ್ತು ಪ್ರಸಕ್ತ ಕರೆನ್ಸಿ ಖಾತೆ ಕೊರತೆಯನ್ನು ಹೆಚ್ಚಿಸಿದೆ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಜನ ವಿರೋಧಿ ನೀತಿಯನ್ನು ಖಂಡಿಸಿದರು.
ಅಲ್ಲದೇ ಈ ಹಿಂದೆ “ಪ್ರಧಾನಿ ಮೋದಿ ಕಳೆದ 70 ವರ್ಷಗಳಲ್ಲಿ ಆಗದಿರುವುದು ಈಗ ಕೇವಲ ನಾಲ್ಕು ವರ್ಷಗಳಲ್ಲಿ ಆಗುತ್ತಿದೆ ಎಂದು ಹೇಳುತ್ತಾರೆ. ಅವರು ಹೇಳುತ್ತಿರುವುದು ನಿಜವೇ ಹೌದು. ಈಗ ನೀವೆಲ್ಲರೂ ನೋಡುತ್ತಿರುವಂತೆಯೇ ಮೋದಿ ಸರಕಾರ ಜನರನ್ನು, ಸಮಾಜವನ್ನು ವಿಭಜಿಸುತ್ತಿದ್ದಾರೆ. ರಾಜ್ಯಗಳನ್ನು ಪರಸ್ಪರ ಎತ್ತಿಕಟ್ಟುತ್ತಿದ್ದಾರೆ; ಭಾರತದ ರೂಪಾಯಿ ಕಳೆದ 70 ವರ್ಷಗಳಲ್ಲಿ ಕಾಣದ ತಳ ಮಟ್ಟವನ್ನು ಈ ದಿನಗಳಲ್ಲಿ ಕಾಣುತ್ತಿದೆ; ಪೆಟ್ರೋಲ್‌, ಡೀಸೆಲ್‌ ಬೆಲೆಗಳು ಕಳೆದ 70 ವರ್ಷಗಳಲ್ಲಿ ಕಾಣದ ಎತ್ತರವನ್ನು ಈಗ ಕಾಣುತ್ತಿವೆ’ ಎಂದು ರಾಹುಲ್‌ ವ್ಯಂಗ್ಯವಾಡಿದ್ದರು.

Also read: ಮತೊಮ್ಮೆ ವಿಫಲವಾದ ಆಪರೇಷನ್ ಕಮಲ; ಹೆಬ್ಬಾಳ್ಕರ್-ಗೆ ಸಚಿವ ಸ್ಥಾನ ಹಾಗು 30 ಕೋಟಿ ಆಮಿಷ ಒಡ್ಡಿತ್ತಂತೆ ರಾಜ್ಯ ಬಿ.ಜೆ.ಪಿ.!!

ಒಪೆಕ್‌ ಈ ಮೊದಲು ಒಪ್ಪಿಕೊಂಡಿರುವಂತೆ ಪರ್ಯಾಪ್ತ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಉತ್ಪಾದಿಸುತ್ತಿಲ್ಲ; ಪರಿಣಾಮವಾಗಿ ತೈಲ ಪೂರೈಕೆ ಕಡಿಮೆಯಾಗಿದ್ದು ಇದರಿಂದಾಗಿಯೇ ತೈಲ ಬೆಲೆಗಳು ಏರುತ್ತಿವೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದ್ದರು. ಅಮೆರಿಕನ್‌ ಡಾಲರ್‌ನ ಪಾರಮ್ಯದಿಂದ ವಿಶ್ವ ಆರ್ಥಿಕತೆಗೆ ಒಳಿತಾಗುವುದಿಲ್ಲ ಎಂದವರು ಹೇಳಿದ್ದರು.