ರಾಹುಲ್ ಗಾಂಧಿ ವಿರುದ್ದ ಮತ್ತೊಂದು ಹೇಳಿಕೆ ನೀಡಿದ ಅನಂತ್ ಕುಮಾರ್; ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್..

0
457

ವಿವಾದಾತ್ಮಕ ಹೇಳಿಕೆಗಳಿಗೆ ಪ್ರಶಿದ್ದಿ ಪಡೆದಿರುವ ಅನಂತ್ ಕುಮಾರ್ ಹೆಗಡೆ. ಒಂದಾದ ಮೇಲೊಂದು ಹೇಳಿಕೆ ನೀಡಿ ಬಾರಿ ವೈರಲ್ ಆಗಿರುವ ಹೆಗಡೆ. ಮತ್ತೆ ರಾಹುಲ್ ಗಾಂಧಿಯನ್ನು ಕೆಣಕಿ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಒಳಗಾಗಿದೆ. ರಾಹುಲ್ ಗಾಂಧಿಗೆ ಕೇಳಿದ ಪ್ರಶ್ನೆಯನ್ನೇ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರಿಗೆ ಕೇಳಿದ ಟ್ವೀಟಿಗರು ನಾಲಿಗೆ ಹರಿಬಿಟ್ಟ ಹೆಗಡೆ ಮೊದಲು ನೀವು ಡಿ.ಎನ್.ಎ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.

@publictv.in

Also read: ಟೀಂ ಇಂಡಿಯಾ ಪುಲ್ವಾಮಾ ದಾಳಿಯ ಸ್ಮರಣಾರ್ಥವಾಗಿ ಸೇನಾ ಕ್ಯಾಪ್ ಧರಿಸಿದ್ದಕ್ಕೆ, ಕೆಣಕಿದ ಪಾಕಿಸ್ತಾನಕ್ಕೆ ಬಾರಿ ಮುಖಬಂಗ..

ಏನಿದು ಹೇಳಿಕೆ?

ಕಳೆದ ಎರಡು ದಿನಗಳ ಹಿಂದೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ತಂದೆ ಮುಸಲ್ಮಾನ ತಾಯಿ ಕ್ರಿಶ್ಚಿಯನ್ ರಾಹುಲ್ ಗಾಂಧಿ ಬ್ರಾಹ್ಮಣ ಹೇಗಾದ ಎಂದು ಹೆಗ್ಡೆ ಪ್ರಶ್ನೆ ಮಾಡಿದ್ದರು. ಅಲ್ಲದೆ ರಾಜೀವ್ ಗಾಂಧಿ ಹತ್ಯೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಡಿಎನ್‍ಎ ಪರೀಕ್ಷೆ ಮಾಡಿಸಿರಲಿಲ್ಲ. ಬದಲಾಗಿ ಪ್ರಿಯಾಂಕ ಗಾಂಧಿ ಡಿಎನ್‍ಎ ಪರೀಕ್ಷೆಯನ್ನು ಸೋನಿಯಾ ಗಾಂಧಿ ಮಾಡಿಸಿದ್ದರು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ವಿಷಯವನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

@publictv.in

Also read: ಲೋಕಸಭಾ ಚುನಾವಣೆಗೆ ವಿವಿ ಪ್ಯಾಟ್​ ಎನ್ನುವ ಹೊಸ ತಂತ್ರಜ್ಞಾನ ಬಳಕೆ; ಮತದಾರರು ಇದನ್ನು ಬಳಸುವುದು ಹೇಗೆ ಗೊತ್ತಾ?

ಭಟ್ಕಳದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅನಂತ ಕುಮಾರ್ ಹೆಗಡೆ ಅವರು ಈ ರೀತಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿಯನ್ನು ನಡೆಸಿದ ಅವರು ಇಡೀ ಜಗತ್ತು ಏರ್ ಸ್ಟ್ರೈಕ್ ನಡೆದಿರುವುದನ್ನ ಒಪ್ಪಿಕೊಂಡಿದೆ. ಆದರೆ, ಕೆಲವರಿಗೆ ಸಾಕ್ಷ್ಯ ಕೊಡಬೇಕಂತೆ. ನಮ್ಮ ಸೈನಿಕರು ಪಾಕಿಸ್ತಾನದಲ್ಲಿ ಹೋಗಿ ಉಗ್ರರನ್ನ ಹೊಡೆದಿದ್ದಕ್ಕೆ ಸಾಕ್ಷಿ ಕೇಳುತ್ತಿದ್ದಾರೆ. ಆದರೆ, ಮುಸಲ್ಮಾನನ ಮಗ ಗಾಂಧಿ ಹೇಗಾದ ಅನ್ನೋದಕ್ಕೆ ಸಾಕ್ಷಿ ಕೊಡುತ್ತಾರಾ?’ ಎಂದು ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಪ್ರಶ್ನಿಸಿದರು.

ಜಾಲತಾಣದಲ್ಲಿ ಅಕ್ರೋಶ;

ರಾಹುಲ್ ಗಾಂಧಿಯವರಿಗೆ ವ್ಯಂಗ್ಯವಾಡಿದ ಅನಂತ್ ಕುಮಾರ್ ಅವರಿಗೆ ಪಶ್ನೆ ಮಾಡಿದ ಒಬ್ಬರು. ಈ ಅನಂತ್ ಮಾಣಿಗೆ ಇಷ್ಟೆಲ್ಲಾ ತಡೆಯಲಾಗದ ಸಿಟ್ಟು, ಆಕ್ರೋಶ ಬರತ್ತೆ ಅಂದರೆ ಅನುಮಾನ. ಅವರ ಡಿ.ಎನ್.ಎ ಟೀಸ್ಟ್ ಮಾಡೋದು ತೀರಾ ಅವ್ಯಶಕತೆ ಇದೆ ಅಲ್ವೇ? ಇದಕ್ಕೆ ಇನ್ನೋಬರು ಟ್ವೀಟ್ ಮಾಡಿ ಇಲ್ಲಿ ಎಲ್ಲಾ ತರಹದ ರಕ್ತ ಪರೀಕ್ಷೆ ಮಾಡಿಕೊಡಲಾಗುವುದು. ಅನಂತಕುಮಾರ ಹೆಗಡೆ ರಕ್ತ ಪರೀಕ್ಷಾ ಕೇಂದ್ರ. ಸ್ಥಳ: ಬಿಜೆಪಿ ಕಛೇರಿ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಅದರಂತೆ ಹೌದು ಇವನು ಮಿಶ್ರತಳಿ ಅಥವಾ ಕಸಿ ಇರಬೇಕು ಅವರ ಅಪ್ಪನ ಬಗ್ಗೆ ಅವನಿಗೆ ಅನುಮಾನವಿರಬೇಕು. ಹಾಗಾಗಿ ಬೇರೆಯವರ ಅಪ್ಪಂದಿರ ಬಗ್ಗೆ ಕೇವಲವಾಗಿ ಮಾತಾಡುತ್ತಾನೆ. ಇಂತ ಹೊಲಸು ಸೆಂಟ್ರಲ್ ಮಿನಿಸ್ಟರ್ ನನ್ನು ರಾಜಕೀಯ ಜೀವನದಲ್ಲಿ ಕಂಡಿಲ್ಲ ಎಂದು ನೂರಾರು ಜನರು ಅನಂತ್ ಕುಮಾರ ವಿರುದ್ದ ಕಿಡಿ ಕಾರಿದ್ದಾರೆ.

@publictv.in

Also read: ಲೋಕಸಭಾ ಚುನಾವಣೆ ದಿನಾಂಕ ಘೋಷಣೆ; whatsapp, facebook, ಟ್ವೀಟ್, ಗಳಲ್ಲಿ ಎಲೆಕ್ಷನ್​​ ಪ್ರಚಾರ ಮಾಡಿದ್ರೆ ಜೈಲು ಪಕ್ಕಾ..

ಈ ಹಿಂದೆವೂ ಕೂಡ ಇದೆ ರೀತಿಯ ಮಾತುಗಳನ್ನು ರಾಹುಲ್ ಗಾಂಧಿಯವರಿಗೆ ಮಾತನಾಡಿದ ಹೆಗಡೆ. ಭಾರತ ದೇಶವನ್ನು ಭಾರತೀಯ ರಕ್ಷವೇ ಆಳಬೇಕು, ಇಟಲಿಯ ವಿದೇಶಿ ರಕ್ತ ಆಳುವುದು ಬೇಡ. ಇಷ್ಟುವರ್ಷ ನಮ್ಮನ್ನಾಳಿದ ಕಾಂಗ್ರೆಸ್ ದಿವಾಳಿ ಆಗಬೇಕು, ಆ ರೀತಿ ಅವರು ಈ ಚುನಾವಣೆಯಲ್ಲಿ ಸೋಲಬೇಕು. ಮಸೀದಿ ಚರ್ಚ್​ಗೆ ಹೋಗುವವರು ದೇವಸ್ಥಾನಕ್ಕೆ ಹೋಗಿ ನಾನು ಹಿಂದು ಎನ್ನುತ್ತಿದ್ದಾರೆ. ಅಪ್ಪ ಮುಸ್ಲಿಂ, ಅಮ್ಮ ಕ್ರಿಶ್ಚಿಯನ್, ಮಗ ಹಿಂದೂ ಇದು ಜಗತ್ತಿನಲ್ಲಿ ಸಿಗದ ಹೈಬ್ರೀಡ್ ಬೀಜ, ಎಂದು ಪರೋಕ್ಷವಾಗಿ ರಾಹುಲ್ ಧರ್ಮವನ್ನು ಟೀಕಿಸಿದ ಅವರು ಅಮ್ಮ ಅಪ್ಪನ ಪರಿಚಯ ಇಲ್ಲದವರು ಇಂದು ದೇವರ ಪೂಜೆ ಮಾಡುತ್ತಿದ್ದಾರೆ. ಇಂತಹ ಹೈಬ್ರೀಡ್ ಬೀಜ ಬೇಕು ಎಂದರೆ ಅದು ಕಾಂಗ್ರೆಸ್​ನಲ್ಲಿ ಮಾತ್ರ ಎಂದು ವ್ಯಂಗ್ಯವಾಡಿ ಟೀಕೆಗೆ ಗುರಿಯಾಗಿದರು.