ಋತುಅವಧಿ : ಹೆಣ್ಣು ಮಕ್ಕಳಿಗೆ ಒಂದು ಸಣ್ಣ ಟಿಪ್ಸ್

0
6282

ಅಯ್ಯೋ, ಹೆಣ್ಣಾಗಿ ಯಾಕಾದ್ರೂ ಹುಟ್ಟಿದ್ನೋ ಅನ್ನಿಸೋದು ಮಾಸಿಕ ಋತುಚಕ್ರದ ಸಮಯದಲ್ಲಿ. ಆ ಟೈಮ್ ಯಾತನಾಮಯವಾಗಿದ್ದರಂತೂ ಗೋವಿಂದ. ಸ್ತ್ರೀ ಅಸ್ತಿತ್ವಕ್ಕೆ ಋತುಅವಧಿ ಅವಶ್ಯಕವಾದರೂ, ಅದನ್ನು ಯಾವ ಮಹಿಳಾ ಸಹ ಇಷ್ಟ ಪಡುವುದಿಲ್ಲ. ಆದರೆ ಶರೀರದ ನಿರ್ಮಾಣದ ಪ್ರಕಾರ ಅದು ಅನಿವಾರ್ಯ. ಬಹಳಷ್ಟು ಮಹಿಳೆಯರ ಅದರ ಬಗ್ಗೆ ಅಷ್ಟೊಂದು ತಿಳುವಳಿಕೆ ಇಲ್ಲದ ಕಾರಣ ಕಷ್ಟವಾಗಿರುವ ಋತುಅವಧಿ ಅನ್ನು ಮತ್ತಷ್ಟು ಕಷ್ಟವಾಗುವಂತೆ ಮಾಡಿ ಕೊಳ್ಳುತ್ತಾರೆ. ಅಂತಹ ತಪ್ಪಗಳೇನು ಎಂಬುದನ್ನು ನೋಡೋಣ ಬನ್ನಿ.

  • ಬಹಳಷ್ಟು ಜನ ಮಹಿಳೆಯರು ಋತುಅವಧಿ ಸಮಯದಲ್ಲಿ ಮಲಬದ್ಧತೆ, ಮೊಷನ್ಸ್, ಹೊಟ್ಟೆ ನೋವು, ಮುಂತಾದ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ. ಈ ಸಮಸ್ಯೆಗಳು ಬೇರೆ ಬೇರೆ ಆದರೂ ಇವುಗಳಿಗೆ ಒಂದೇ ಕಾರಣ ಇರಬಹುದು.
  • ತಿಂಡಿ ತಿನ್ನದಿರುವುದು. ಹೌದು ಒಂದು ಟೈಮ್ ಆಹಾರ ತೆಗೆದುಕೊಳ್ಳದಿದ್ದರೂ ತೊಂದರೆ ಅನುಭವಿಸಬೇಕಾಗುತ್ತದೆ. ಋತುಅವಧಿ ಸಮಯದಲ್ಲಿ ಡಯಟ್ ಪಾಲಿಸಬೇಕು. ಸಮಯಕ್ಕೆ ತಕ್ಕಂತೆ ಒಳ್ಳೆಯ ಆಹಾರವನ್ನು ಸೇವಿಸಬೇಕು.
  • ರಕ್ತದ ಬಣ್ಣವನ್ನು ಗಮನಿಸಬೇಕು ಋತುಅವಧಿಯಲ್ಲಿ . ಬಣ್ಣದಲ್ಲಿ ಬದಲಾವಣೆ ಕಂಡುಬಂದರೆ ಯಾವುದೇ ಸಂಕೋಚವಿಲ್ಲದೇ ವೈದ್ಯರನ್ನು ಸಂಪರ್ಕಿಸಬೇಕು.
  • ಕೆಲವರು ಹೈಜೀನ್ ಸರಿಯಾಗಿ ಕಾಪಾಡುವುದಿಲ್ಲ. ಋತುಅವಧಿನಲ್ಲೂ ನಾಲ್ಕು ಜನರ ಮಧ್ಯೆ ಇರಬೇಕಾಗಿರುವುದರಿಂದ ಹೈಜೀನ್ ತುಂಬಾ ಮುಖ್ಯ. ಪ್ಯಾಡ್ಸ್ ಅನ್ನು ಬದಲಾಯಿಸುತ್ತಿರಬೇಕು. ಪ್ಯಾಡ್ಸ್ ಹೆಚ್ಚು ಸಮಯ ಇಟ್ಟುಕೊಳ್ಳುವುದರಿಂದ ಇನ್ಫೆಕ್ಷನ್ ಬರುತ್ತದೆ.
  • ಋತುಅವಧಿ ಸಮಯದಲ್ಲಿ ಲೈಂಗಿಕ ಕ್ರಿಯೆ ಭಾಗವಹಿಸುವುದು ಒಳ್ಳೆಯದಲ್ಲ. ಸಾಮಾನ್ಯವಾಗಿ ಋತುಅವಧಿ ಸಮಯದಲ್ಲಿ ಗುಪ್ತರೋಗಗಳು ಬರುವ ಸಾಧ್ಯತೆ ಹೆಚ್ಚು. ಹಾಗಾಗಿ ನೀವು ಅಂತಹ ತಪ್ಪು ಮಾಡಬೇಡಿ.
  • ಪ್ರತಿಸಾರಿ ನಿಮ್ಮ ಋತುಅವಧಿ ಟ್ರಾಕ್ ಮಾಡುವುದು ಮುಖ್ಯ. ಬಹಳಷ್ಟು ಜನ ಇಲ್ಲಿಯೇ ದೊಡ್ಡ ತಪ್ಪು ಮಾಡುತ್ತಾರೆ. ಋತುಚಕ್ರ ಯಾವಾಗ ಪ್ರಾರಂಭವಾಯಿತು, ಯಾವ ಸಮಯದಲ್ಲಿ ಎಂಬ ವಿಷಯಗಳನ್ನು ತಿಳಿದುಕೊಂಡಿರಬೇಕು. ಋತುಅವಧಿ ಸೈಕಲ್ ಒಂದು ಟ್ರಾಕ್’ನಲ್ಲಿ ಇದ್ದರೆ ನಿಮ್ಮ ಆರೋಗ್ಯ ಸಹ ಟ್ರಾಕ್’ನಲ್ಲಿ ಇದ್ದಂತೆ.
  • ಈ ಸಮಯದಲ್ಲಿ ಅತಿಯಾಗಿ ವಿಶ್ರಾಂತಿ ತೆಗೆದುಕೊಳ್ಳುವುದು ಸಹ ತಪ್ಪು. ವಿಶ್ರಾಂತಿ ಅವಶ್ಯವಾದರೂ ಅದು ಅತಿಯಾಗಬಾರದು. ಶರೀರ ಚಲನೆಯಲ್ಲಿ ಇರಬೇಕು. ಇಲ್ಲದಿದ್ದರೆ ಕ್ರಾಮ್ಪ್ಸ್ ಇನ್ನೂ ಹೆಚ್ಚಾಗುತ್ತವೆ.
  • ಋತುಅವಧಿಯಲ್ಲಿ ಮದ್ಯಪಾನ ಮಾಡದಿರುವುದು ಒಳ್ಳೆಯದು. ಒಂದುವೇಳೆ ಏನಾದರೂ ಮಾಡಿದರೆ ಕ್ರಾಂಪ್ಸ್ ಮತ್ತಷ್ಟು ಹೆಚ್ಚಾಗುತ್ತವೆ.