ಅರೆ ತಲೆನೋವು ಅನುಭವಿಸುವರು ಇದನ್ನು ನೋಡಿ ಜೀವನ ಪೂರ್ತಿ ತಲೆನೋವಿನಿಂದ ಮುಕ್ತಿ ಹೊಂದಿ.

0
3400

ತಲೆನೋವು ಬರುವುದು ಸಾಮಾನ್ಯವಾಗಿದೆ ಅದರಲ್ಲಿ ಅರೆ ತಲೆನೋವು ಬಂದರೆ ಅದರ ಯಾತನೆಯನ್ನು ಅನುಭವಿಸಿದವರಿಗೆ ಗೊತ್ತು ಈ ನೋವು ನಮ್ಮ ವಿರೋಧಿ ಪಾಕಿಸ್ತಾನದವರಿಗೂ ಬರಬಾರದು ಅನ್ಸುತ್ತೆ ಇಂತಹ ಅರೆ ತಲೆನೋವು ವೈದ್ಯಲೋಕದ ಪ್ರಕಾರ ಇದೊಂದು ವಿಚಿತ್ರ ಕಾಯಿಲೆ.

ಹವಾಮಾನದಲ್ಲಿ ವೈಫರಿತ್ಯದಿಂದ ಬಿಸಿಲು ಜಾಸ್ತಿಯಾದರೂ, ವಾತಾವರಣದಲ್ಲಿ ತೇವಾಂಶ ಹೆಚ್ಚಾದರೂ, ತೇವಾಂಶ ಮಿಶ್ರಿತ ತಾಪಮಾನವಿದ್ದರೂ ಇಲ್ಲವೇ ಬಿಸಿಗಾಳಿ ಬೀಸಿದರೂ ಸರಿ ತೀವ್ರ ತಲೆನೋವಿಗೆ ಕಾಣುತ್ತೆ. ಅರೆತಲೆನೋವು ಸಾಧಾರಣವಾಗಿ ಎಲ್ಲರಲ್ಲೂ ಒಂದೇ ರೀತಿ ಕಾಣಿಸಿಕೊಳ್ಳುತ್ತದೆ ಅಥವಾ ನಿಗದಿತ ಸಮಯದಲ್ಲೇ ಕಾಡುತ್ತದೆ. ಕೆಲವರಿಗೆ ಇದು ಪ್ರತಿನಿತ್ಯದ ನೋವಾಗಬಹುದು ಮತ್ತೆ ಕೆಲವರಿಗೆ ತಿಂಗಳಿಗೊಮ್ಮೆ ಬರಬಹುದು. 2-3 ತಿಂಗಳಿಗೂ ಕಾಣಿಸಿಕೊಳ್ಳಬಹುದು. ಆದರೆ, ಒಮ್ಮೆ ಅಂಟಿಕೊಂಡರೆ ಸುಲಭವಾಗಿ ಬಿಟ್ಟು ಹೋಗುವುದಿಲ್ಲ. ಈ ಸ್ಥಿತಿ ಮೂರ್‍ನಾಲ್ಕು ದಿನಗಳವರೆಗೂ ಮುಂದುವರಿಯಬಹುದು. ಈ ಕಾಯಿಲೆ ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ ವಿಶ್ವದೆಲ್ಲೆಡೆಯೂ ಇದೆ.

ಅರೆ ತಲೆನೋವಿನ ಲಕ್ಷಣಗಳು:
ಕಣ್ಣು ಬಿಡಲಾಗದಂತ ತಲೆನೋವು. ಹೊತ್ತು ಏರಿದಂತೆ ನೋವು ಜಾಸ್ತಿಯಾಗುತ್ತದೆ. ಯಾರೂ ಏನೇ ಹೇಳಿದರೂ ಕೋಪ ಬರುತ್ತದೆ. ಸಂಜೆಯಾದಂತೆ ಎಲ್ಲವೂ ಉಲ್ಪಾಪಲ್ಟ. ವಾಕರಿಕೆ, ವಾಂತಿ, ಆಲಸ್ ಧ್ವನಿ ಅಥವಾ ಶಬ್ದ ಭಯ, ತೀವ್ರ ಬೆಳಕಿನ ಭಯ ಅತಿಯಾದ ಯಾವುದೇ ವಾಸನೆ ತಾಳಿಕೊಳ್ಳಲು ಆಗದಿರುವುದು, ಕಣ್ಣು ಮಂಜಾಗುವುದು, ಮಸುಕಾಗುವುದು, ದೃಷ್ಟಿ ಮಧ್ಯೆ ಬೆಳಕಿನ ಕಿರಣ ಕಂಡಂತಾಗುವುದು, ತಲೆಬುರುಡೆ ಅಥವಾ ಮುಖದಲ್ಲಿ ನೀರಿನ ದ್ರವ ತುಂಬಿ ಊದಿಕೊಳ್ಳುವುದು, ತಲೆಬುರುಡೆ ಮೃದುವಾಗುವುದು, ಕಪೋಲದಲ್ಲಿ ಅಭಿಧಮನಿ ಅಥವಾ ಅಪಧಮನಿಗಳು ಹೊರಕ್ಕೆ ಎದ್ದುಕಾಣುವುದು ಅಥವಾ ಕತ್ತು ಬಿಗುವಾಗುವುದು ಮತ್ತು ಮೃದುವಾಗುವುದು.

ಕಾರಣಗಳೆಂದರೆ:
ಪ್ರಮುಖವಾಗಿ ಮಹಿಳೆಯರಲ್ಲಿ ಕಾಣುತ್ತದೆ ಅನುವಂಶಿಕವಾಗಿ ಶೇ.50, ಸುತ್ತಮುತ್ತಲಿನ ವಾತಾವರಣದಲ್ಲಿನ ವ್ಯತ್ಯಾಸ, ಹಾರ್ಮೋನ್‌ ಬದಲಾವಣೆಗಳು, ಆಹಾರ ಸೇವನೆ ಸಮಯದಲ್ಲಿ ವ್ಯತ್ಯಾಸ, ಮಾನಸಿಕ ಒತ್ತಡ, ಅತಿಯಾದ ಶಬ್ದ, ಕೆಲವು ವಾಸನೆಗಳು, ಮಲಗುವ ಸಮಯದಲ್ಲಿ ವ್ಯತ್ಯಾಸ, ಲೈಂಗಿಕ ಕ್ರಿಯೆ, ದಣಿವು, ಕೆಲವೊಂದು ಔಷಧಗಳು, ಗರ್ಭನಿರೋಧಕ ಮಾತ್ರೆಗಳು.

ಅರೆತಲೆನೋವಿಗೆ ಮನೆಮದ್ದುಗಳು
1. ಪುದೀನ ಎಲೆಯ ರಸ ತೆಗೆದು ಹಣೆಯ ಮೇಲೆ ಹಚ್ಚಿಕೊಂಡು ಮಸಾಜ್‌ ಮಾಡಬೇಕು. ಸ್ವಲ್ಪ ಸಮಯ ಹಾಗೆಯೇ ಬಿಟ್ಟು ತಣ್ಣೀರಿನಿಂದ ತೊಳೆಯಬೇಕು. ಇದರ ಸುವಾಸನೆಯಿಂದ ತಲೆನೋವು ಕಡಿಮೆಯಾಗುತ್ತದೆ.
2. ಸೇಬುಹಣ್ಣಿಗೆ ವಿನಿಗರ್‌ ಸೇರಿಸಿ ಸೇವಿಸುವುದರಿಂದ ನೋವು ಕಡಿಮೆಯಾಗುತ್ತದೆ.
3. ಸೇಬುಹಣ್ಣಿಗೆ ಜೇನುತುಪ್ಪ ಸೇರಿಸಿ ಪ್ರತಿನಿತ್ಯ ಸೇವಿಸುವುದರಿಂದ ತಲೆನೋವು ಕಡಿಮೆಯಾಗುತ್ತದೆ.
4. ಕಾಟನ್‌ ಬಟ್ಟೆಯಲ್ಲಿ ಐಸ್‌ನ ತುಂಡುಗಳನ್ನು ಸುತ್ತಿ ಹಣೆಯ ಮೇಲೆ 10 ರಿಂದ 15 ನಿಮಿಷಗಳವರೆಗೆ ಹಾಗೆಯೇ ಇಟ್ಟುಕೊಂಡರೆ ಮೈಂಡ್‌ ರಿಲ್ಯಾಕ್ಸ್‌ ಆಗುವುದರ ಜತೆಗೆ ನೋವು ಕೂಡ ಮಾಯವಾಗುತ್ತದೆ.
5. ಹಿಪ್ಪಲಿ ಮತ್ತು ಬಜೆಯ ಪುಡಿಯನ್ನು ಬಿಸಿ ಹಾಲು ಅಥವಾ ಬಿಸಿ ನೀರಿನಲ್ಲಿ ದಿನಕ್ಕೆ 2 ಬಾರಿ ಸೇವಿಸಿದರೆ ಅರೆತೆನೋವು ಗುಣವಾಗುತ್ತದೆ.
6. ಬಸಳೆ ಸೊಪ್ಪಿನ ರಸವನ್ನು ಹಣೆಗೆ ಲೇಪ ಮಾಡಬೇಕು. ಆಗ ನಿದ್ದೆ ಚೆನ್ನಾಗಿ ಬರುತ್ತದೆ ಮತ್ತು ತಲೆನೋವು ಗುಣವಾಗುತ್ತದೆ.
7. ಪಾಲಾಕ್‌ ಸೊಪ್ಪಿನ ರಸ ಮತ್ತು ಕ್ಯಾರೆಟ್‌ ರಸ ಬೆರೆಸಿ ಸೇವಿಸಿದರೆ ಮೈಗ್ರೇನ್‌ ಕಡಿಮೆಯಾಗುತ್ತದೆ.
8. ಲವಂಗದ ಎಣ್ಣೆ , ಕೊಬ್ಬರಿ ಎಣ್ಣೆ ಸೇರಿಸಿ ತಲೆಗೆ ಮಸಾಜ್‌ ಮಾಡಿಕೊಂಡರೆ ತಲೆನೋವು ಕಡಿಮೆಯಾಗುತ್ತದೆ.
9. ತುಳಸಿ ಎಲೆಯ ರಸವನ್ನು ಶ್ರೀಗಂಧದ ಪುಡಿ ಜತೆ ಕಲಸಿ ಹಣೆಗೆ ಲೇಪ ಮಾಡಿದರೆ ತಲೆನೋವು ಶಮನವಾಗುತ್ತದೆ.
10. ತಲೆನೋವು ಹೆಚ್ಚಿದ್ದರೆ ಜಾಯಿಕಾಯಿಯ ಪುಡಿಯನ್ನು ಬಿಸಿ ನೀರಲ್ಲಿ ಕಲಸಿ ಸೇವಿಸಬೇಕು.
11. ಬಿಸಿಲಿನಲ್ಲಿ ಹೆಚ್ಚು ಅಲೆದಾಡಿ ತಲೆನೋವು ಬಂದರೆ ಬೇವಿನ ಎಣ್ಣೆಯನ್ನು ಹಣೆಗೆ ಹಚ್ಚಬೇಕು.

12. ಸೀಬೆ ಹಣ್ಣಿನ ಸಿಪ್ಪೆ ಮತ್ತು ಸೀಬೆ ಎಲೆಯನ್ನು ಅರೆದು ಹಣೆಗೆ ಲೇಪ ಮಾಡಿದರೆ ತಲೆನೋವು ಶಮನವಾಗುತ್ತದೆ.
13. ಕಫ ಹೆಚ್ಚಾಗಿ ತಲೆ ಭಾರ ಮತ್ತು ತಲೆನೋವಿದ್ದರೆ ಹಿಪ್ಪಲಿ ಪುಡಿ ಮತ್ತು ಹಸಿ ಶುಂಠಿ ರಸವನ್ನು ಬಿಸಿ ನೀರಲ್ಲಿ ಕಲಸಿ ಹಣೆಗೆ ಪಟ್ಟು ಹಾಕಿದರೆ ಕಫ ಕರಗಿ ತಲೆನೋವು ಕಡಿಮೆಯಾಗುತ್ತದೆ.
14. ಶೀತದಿಂದ ಮೂಗು ಕಟ್ಟಿ ತಲೆನೋವಿದ್ದರೆ ತುಂಬೆ ಗಿಡದ ಕಾಂಡವನ್ನು ಬಿಸಿ ನೀರಿನಲ್ಲಿ ಕುದಿಸಬೇಕು. ಕುದಿಸುವಾಗ ಬರುವ ಆವಿಯನ್ನು ಮುಖಕ್ಕೆ ತೆಗೆದುಕೊಂಡರೆ ತಲೆನೋವು ಶಮನವಾಗುತ್ತದೆ.
15. ಆಹಾರ ಕ್ರಮ
ಹಣ್ಣು, ತರಕಾರಿ, ಮೊಳಕೆ ಕಾಳು, ಮಜ್ಜಿಗೆ, ಎಳನೀರು, ತಾಜಾ ತರಕಾರಿ ರಸ, ಹಣ್ಣಿನ ರಸ ಹೆಚ್ಚೆಚ್ಚು ಸೇವಿಸಬೇಕು. ಪ್ರತಿದಿನ ಕನಿಷ್ಟ 2-3 ಲೀಟರ್ ನೀರು ಕುಡಿಯಲೇಬೇಕು.1-2 ತಿಂಗಳ ಮಟ್ಟಿಗೆ ರಾತ್ರಿ ಊಟದ ಬದಲು ಹಸಿ ತರಕಾರಿ, ಹಣ್ಣು, ಮೊಳಕೆ ಕಾಳು, ಸೂಪ್ ಮಾತ್ರ ಸೇವಿಸಿ. ಖಾರ, ಮಸಾಲೆ, ಕರಿದ ಆಹಾರ, ಬೇಕರಿ ತಿನಿಸು, ತಂಪು ಪಾನೀಯ, ಐಸ್‌ಕ್ರೀಮ್ ಕಡಿಮೆ ಮಾಡಿ.
16. ಪ್ರಾಣಾಯಾಮ
ತಜ್ಞರಿಂದ ಯೋಗ ಕಲಿತು ಪ್ರತಿದಿನ ಅರ್ಧಗಂಟೆಯಾದರೂ ಯೋಗಾಸನ ಮಾಡಿ. ಇದು ಉತ್ತಮ ಫಲಿತಾಂಶ ನೀಡುತ್ತದೆ