PETA ಗೊ೦ದು ಬಹಿರ೦ಗ ಪತ್ರ

0
680

ಪ್ರೀತಿಯ PETA ಮತ್ತು ಸ೦ಬ೦ಧಪಟ್ಟವರಿಗೆ,

ಕರಾವಳಿ ಕರ್ನಾಟಕಕ್ಕೆ ಪ್ರಾಣಿ ಪ್ರೀತಿಯ ಬಗ್ಗೆ ಪಾಠ ಹೇಳಲು ಹೊರಟಿರುವ PETAಕ್ಕೆ ಕರಾವಳಿ ಕರ್ನಾಟಕದ ಬಗ್ಗೆ ಒ೦ದಿಷ್ಟು ಪರಿಚಯ. ಈ ದೇಶ ಭಾಷೆ ಆಚಾರ ವಿಚಾರ ದ ಬಗ್ಗೆ ನಿಮಗೆ ಹೆಚ್ಚಿನದ್ದೇನು ತಿಳಿಯುವುದಿಲ್ಲ ಎ೦ಬ ಮನವರಿಕೆ ನನಗಿರುವ ಕಾರಣ.

ಇರುವುದೆಲ್ಲಾ ತನ್ನ ಬಳಕೆಗೆ ಎ೦ದು ಜಗತ್ತು ನ೦ಬಿದ್ದ ಸಮಯದಲ್ಲಿ ನಾವು ದೈವಾರಾಧನೆಯಲ್ಲಿ ತೊಡಗಿದ್ದೆವು. ಬಿಡಿ, ನಿಮಗದು ಅ೦ದಾಚಾರವಾಗಿ ಕಾಣಬಹುದು. ಆದರೆ ಯಾವ ಕಾರಣದಿ೦ದ ನಾವು ಬದುಕಿ ಬೆಳಗುತ್ತಿದ್ದೇವೋ ಅದನ್ನು ದೈವೀ ಸ್ಥಾನದಲ್ಲಿ ಕಲ್ಪಿಸಿ ಆರಾಧಿಸುವುದು ನಮ್ಮ ಸ೦ಸ್ಕಾರ. ನೀವಿ೦ದು OXFORDನಲ್ಲೋ Harvard ನಲ್ಲೋ ಓದಿ ಕಲಿತು ದೇಶಕ್ಕೆ ಹಿ೦ದುರುಗಿ ಪ್ರಾಣೀ ಪ್ರೀತಿಯ ಬಗ್ಗೆ ಕಲಿಸುತ್ತಿದ್ದರೆ, ಶತ ಶತಮಾನಗಳ ಹಿ೦ದೆ ನಮ್ಮವರು ಪ್ರಕ್ರತಿಯ ಭಾಗವಾಗಿರುವ ಪ್ರಾಣಿಗಳನ್ನು ಆರಾಧನೆಗೆ ತೊಡಗಿದ್ದರು. ನೀವು ಪ್ರೀತಿಸಿದರೆ ನಾವು ಆರಾದಿಸುತ್ತಿದ್ದೇವೆ. ಕೋಣವಿಲ್ಲಿ ಮೈಸ೦ದಾಯ, ಹುಲಿಯಿಲ್ಲಿ ಪಿಲಿಚ೦ಡಿ, ಕಾಡುಹ೦ದಿಯಿಲ್ಲಿ ವಾರಾಹ ಪ೦ಜುರ್ಲಿ, ಹಾವಿಲ್ಲಿ ನಾಗದೇವ. ಕ೦ಬುಳದ ಕೋಣಕ್ಕೆ ಓಟದ ಗದ್ದೆಯಲ್ಲಿ ನಾಲ್ಕೇಟು ಬಾರಿಸುತ್ತಾರೆ ಎ೦ಬ ಕಾರಣಕ್ಕೆ ಅದನ್ನು ಶೋಷಣೆ ಎ೦ದು ಕರೆಯುವುದಾದರೆ ನೀವು ನಿಮ್ಮ ಮಕ್ಕಳ ಮೇಲೆ ಹೇರುವ ಓದು ವಿದ್ಯೆ ಶಿಕ್ಷಣವಾಗಲು ಹೇಗೆ ಸಾಧ್ಯ, ಬುದ್ದಿ ಬರಲಿ ಎ೦ದು ನೀಡುವ ಶಿಕ್ಷೆ ಹಿ೦ಸೆ ಹೇಗಾಗುವುದಿಲ್ಲ.

ನೀವೆ೦ದಾದರೂ ಕರಾವಳಿ ಕರ್ನಾಟಕಕ್ಕೆ ಬ೦ದರೆ, ಬನ್ನಿ ನಮ್ಮೊ೦ದಿಗೆ, ಕ೦ಬಳದ ಕೋಣಗಳನ್ನು ಹೇಗೆ ನೋಡಿಕೊಳ್ಳಲಾಗುತ್ತದೆ ಎ೦ದು ತೋರಿಸುತ್ತೇವೆ. ಅಷ್ಟೇ ಜತನದಿ೦ದ ನೀವು ನಿಮ್ಮ ಸ್ವ೦ತ ಮಕ್ಕಳ ಆರೈಕೆಯನ್ನಾದರೂ ಮಾಡುತ್ತೀರಾ?, ನ೦ತರ ನಿಮ್ಮನ್ನು ಪ್ರಶ್ನಿಸಿಕೊಳ್ಳಿ. ಪ್ರತಿ ಕ೦ಬಳದ ಕೋಣಗಳ ಆರೈಕೆ ಗೆ 3-4 ಜನ ಆಳುಗಳಿದ್ದಾರೆ. ಹೆಸರಾ೦ತ ಕ೦ಬಳವೊ೦ದಕ್ಕೆ 200 ಜೋಡಿಗಳಷ್ಟು ಕೋಣಗಳು ಬರುತ್ತವೆ, ಹಾಗಾದರೆ ಕ೦ಬಳವನ್ನು ನಿರ್ಬ೦ಧಿಸಿದ ನ೦ತರ ಬೀದಿಗೆ ಬರುವ ಆ 600ರಿ೦ದ 700 ಕುಟು೦ಬಗಳ ಜವಾಬ್ದಾರಿ ಯಾರ ಪಾಲಿಗೆ? (ಇಷ್ಟು ಕರುಣಾಳುಗಳ PETA ಸ೦ಘಟನೆ ಖ೦ಡಿತ ಆ ಕುಟು೦ಬಗಳನ್ನು ಬೀದಿಗೆ ಹಾಕದು ಎ೦ಬ ನ೦ಬಿಕೆ ನನ್ನದು). ಕ೦ಬಳ ನಿಲ್ಲಿಸಿದ ತರುವಾಯ ಇನ್ನೂರಕ್ಕು ಹೆಚ್ಚು ಜೋಡಿ ಕೋಣಗಳನ್ನು ಅಷ್ಟೇ ರಾಜಮರ್ಯಾದೆಯಿ೦ದ ಸಾಕುವ ದೊಡ್ಡತನ ಯಾರಿಗಿದೆ (ಖ೦ಡಿತ PETAಕ್ಕೆ ಇರಬಹುದು) ಇಷ್ಟೆಲ್ಲಾ ಪ್ರಶ್ನೆಗೆ ಉತ್ತರಿಸುವ ಸೌಜನ್ಯ ನಿಮ್ಮಲ್ಲಿರಲಿ. ಪ್ರಾಣಿ ಪ್ರೇಮದ ಪಾಠಕ್ಕಾಗಿ ಧನ್ಯವಾದಗಳು ಕೊನೆಗೊ೦ದು ಮಾತು- AC Roomನಲ್ಲಿ ಕೂತು breed ed Dogಗೆ ಬೆಲ್ಟ್ ಹಾಕಿ ಪ್ರೀತಿಸುವ ನಿಮಗೆ ರೈತನೊಬ್ಬನ ಬದುಕಿಗೂ ಕೊಟ್ಟಿಗೆಗೂ ಇರುವ ಸ೦ಬ೦ಧ ಅರ್ಥವಾಗದು. ಯಾಕ೦ದರೆ ಇದು ಎದೆಯ ಭಾಷೆ ಕಿವಿಗೆ ಕೇಳಿಸದು.

ಇತಿ ನೊ೦ದ
ಕರಾವಳಿ ಕನ್ನಡಿಗ