ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಹಿಂದೆಂದೂ ಆಗದಷ್ಟು ಬೆಲೆಯೇರಿಕೆಯಾಗುತ್ತಿದೆ!! ಲೀಟರ್-ಗೆ 100ರು ಆಗೋ ಕಾಲ ಹತ್ತಿರ ಬಂತಾ??

0
642

ಅಂತರಾಷ್ಟೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಗಳ ಬೆಲೆಯು ಸತತವಾಗಿ ಏರಿಕೆ ಯಾಗುತ್ತಿರುವುದರಿಂದ ದೇಶಿ ಮಾರುಕಟ್ಟೆಯಲ್ಲೂ ಅದರ ಪರಿಣಾಮ ಕಂಡುಬರುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ದರವೂ ದಿನದಿಂದ ದಿನಕ್ಕೆ ಸಾರ್ವಜನಿಕರಿಗೆ ದುಬಾರಿಯಾಗುತ್ತಿದೆ. ನವದೆಹಲಿಯಲ್ಲಿ ಪೆಟ್ರೋಲ್ ದರ ಒಂದು ಲೀಟರಿಗೆ 73.73ಕ್ಕೆ ತಲುಪಿದೆ. ಅದರಲ್ಲು ನಾಲ್ಕು ವರ್ಷಗಳಲ್ಲಿ ದಾಖಲಾಗಿರುವ ಅತ್ಯಂತ ಗರಿಷ್ಟ ಮಟ್ಟವಾಗಿದೆ.ಮತ್ತು ಡೀಜಲ್ ದರವೂ ಕೂಡ ಲೀಟರಿಗೆ 64.58 ಕ್ಕೆ ಏರಿಕ್ಕೆ ಕಂಡುಬಂದಿದ್ದೆ.

ಬೆಂಗಳೂರಿನ ಪೆಟ್ರೋಲ್ ದರ ಮತ್ತು ಡೀಜಲ ದರದ ಪಟ್ಟಿಯನ್ನು ಗಮನಿಸಿದರೆ. march-1-2018 ಏಪ್ರಿಲ್-1-2018 ಕ್ಕೆ ಗಮನಿಸಿದರೆ, ಪೆಟ್ರೋಲ್ ಮತ್ತು ಡೀಜಲ್ ದರ ಕ್ರವವಾಗಿ 2.21 ಮತ್ತು 2.37 ರಷ್ಟು ಏರಿಕೆಯಾಗಿದೆ. ಇದರಿಂದ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 74.90 ಕ್ಕೆ ಮತ್ತು ಡೀಜಲ್ ದರ 65.67 ಕ್ಕೆ ತಲುಪಿದೆ.

 

ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಈಗ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಜಲ್ ಬೆಲೆಗಳನ್ನು, ಪ್ರತಿ ದಿನದ ಆಧಾರದಲ್ಲಿ ಪರಿಷ್ಕರಣೆ ಮಾಡಲಾರಂಭಿಸಿವೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಜಲ್ ಕರವನ್ನು ಭಾನುವಾರ 18 ಪೈಸೆಯಷ್ಟು ಏರಿಕೆ ಮಾಡಿವೆ.

ಮನವಿ ತಿರಸ್ಕರಿಸಿದ ಸರ್ಕಾರ:-
ಅಂತರಾಷ್ಟೀಯ ಮಾತುಕಟ್ಟೆಯಲ್ಲಿ ಕಚ್ಚಾ ತೈಲ ಏರಿಕೆ ಆಗುತ್ತಿದೆ. ಇದು ದೇಶದ ಮಾರುಕಟ್ಟೆಯ ಮೇಲು ಪರಿಣಾಮ ಬೀರಿದೆ. ಹೀಗಾಗಿ ದರದ ಏರಿಕೆಯ ಬಿಸಿ ತಗ್ಗಿಸಲು ಪೆಟ್ರೋಲ್ ಮತ್ತು ಡೀಜಲ್ ಮೀಲಿನ ಏಕ್ಸೈಸ್ ಸುಂಕ ಕಡಿಮೆ ಮಾಡುವಂತೆ ಪೆಟ್ರೋಲಿಯಂ ಸಚಿವಾಲಯವು ಕೇಂದ್ರ ಸರ್ಕಾರಕ್ಕೆ ಮನಮಿ ಸಲ್ಲಿಸಿತ್ತು. ಆದರೆ 2018-19ನೇ ಅರ್ಥಿಕ ವರ್ಷದ ಬಜೆಟ್ನಲ್ಲಿ ಕೇಂದ್ರ ಸರ್ಕಾರ ಅಂತಹ ಯಾವುದೇ ನಿರ್ಧಾರ ಪ್ರಕಟಿಸಿರಲಿಲ್ಲ.

ದಕ್ಷಿಣ ಏಷ್ಯಾದಲಿಯೇ ತುಟ್ಟಿ:-
ದಕ್ಷಿಣ ಏಷ್ಯಾದ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ಮಾರಾಟ ದರವು ಅತ್ಯಂತ ಗರಿಷ್ಟ ಮಟ್ಟದಲ್ಲಿದೆ.