ವಾಹನ ಸವಾರರಿಗೆ ಸಿಹಿಸುದ್ದಿ; ಸತತ 11ನೇ ದಿನವೂ ಇಂಧನ ದರದಲ್ಲಿ ಇಳಿಕೆಯಾಗಿದ್ದು ಮುಂದಿನ ಕೆಲ ದಿನಗಳವರೆಗೂ ಇಳಿಕೆಯಾಗುವ ಸಂಭವವಿದೆ..

0
312

ಕೆಲದಿನಗಳ ಹಿಂದೆ ಡಾಲರ್ ವಿರುದ್ದ ರೂಪಾಯಿ ಮೌಲ್ಯ ಕುಷಿತರಿಂದ ಇಂಧನ ಬೆಲೆ ಏರಿಕೆಯಾಗಿ ಇಡಿ ದೇಶವೇ ತತ್ತರಿಸಿ ಹೋಗಿತ್ತು. ಇತ್ತೀಚೆಗೆ ಕೇಂದ್ರ ಸರ್ಕಾರ ತೈಲದ ಮೇಲಿನ ಸುಂಕ ಇಳಿಕೆ ಮಾಡಿದ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿನಿತ್ಯ ಕೊಂಚ ಮಟ್ಟಿಗೆ ಇಳಿಕೆಯಾಗುತ್ತಿದೆ. ಇಂದಿಗ ಕಳೆದ ಸ್ವಲ್ಪ ದಿನಗಳಿಂದ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಇಳಿಕೆ ಕಂಡು ಬಂದು ಪ್ರಾಯಾಣಿಕರಿಗೆ ಸ್ವಲ್ಪ ಮಟ್ಟಿನ ನಿರಾಳವಾಗಿತ್ತು.

ಹೌದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಮುಖವಾಗಿದ್ದು, ಸತತ 11ನೇ ದಿನವೂ ಇಂಧನ ದರದಲ್ಲಿ ಇಳಿಕೆಯಾಗಿದ್ದು, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಇಂದು ಬೆಳಗ್ಗೆ ಪರಿಷ್ಕೃತ ದರ ಪಟ್ಟಿ ಪ್ರಕಟಿಸಿದ್ದು, ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಈಗ ಇನ್ನಷ್ಟು ಇಳಿಕೆಯಾಗಿದೆ. ಅಕ್ಟೋಬರ್ 18ರಿಂದಲೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಒಂದು ದಿನವೂ ಏರಿಕೆ ಕಂಡಿಲ್ಲ ಎಂಬುದು ವಿಶೇಷ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು 35 ಮತ್ತು 41 ಪೈಸೆಗಳಷ್ಟು ಕಡಿಮೆ ಆಗಿವೆ. ನಿನ್ನೆಯೂ 59 ಪೈಸೆ ಮತ್ತು 46 ಪೈಸೆಯಷ್ಟು ಬೆಲೆ ಇಳಿಕೆಯಾಗಿತ್ತು. ಕಳೆದ 5 ದಿನದಲ್ಲಿ ಪೆಟ್ರೋಲ್ ಬೆಲೆ ಹೆಚ್ಚುಕಡಿಮೆ 2 ರೂಪಾಯಿಯಷ್ಟು ಕಡಿಮೆಯಾಗಿದೆ. ಡೀಸೆಲ್ ಬೆಲೆ ಸರಿಯಾಗಿ 2 ರೂ.ನಷ್ಟು ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 75.08 ರೂಪಾಯಿಗೆ ಬಂದಿದೆ. ಡೀಸೆಲ್ ಬೆಲೆ 69.65 ರೂ. ತಲುಪಿದಂತಾಗಿದೆ.

ಪೆಟ್ರೋಲ್​ನ ಈಗಿನ ಬೆಲೆಯು ಏಪ್ರಿಲ್ ಮಟ್ಟದಲ್ಲಿದೆ. ಅಂದರೆ, ಏಪ್ರಿಲ್ ನಂತರದ ಕನಿಷ್ಠ ಪೆಟ್ರೋಲ್ ಬೆಲೆ ಇದಾಗಿದೆ. ಹಾಗೆಯೇ, ಜೂನ್ ನಂತರ ಡೀಸೆಲ್ ಕೂಡ ಅತ್ಯಂತ ಕಡಿಮೆ ಬೆಲೆಗೆ ಬಂದಿದೆ. ಹಾಗೆಯೇ, ಇವೆರಡೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯಲ್ಲಿನ ವ್ಯತ್ಯಾಸದಲ್ಲೂ ಇಳಿಕೆಯಾಗುತ್ತಿರುವುದು ವಿಶೇಷ. ಡೀಸೆಲ್ ಬೆಲೆಗಿಂತಲೂ ಪೆಟ್ರೋಲ್ ಬೆಲೆಯಲ್ಲಿ ಹೆಚ್ಚು ಇಳಿಕೆಯಾಗುತ್ತಿರುವುದು ಇದಕ್ಕೆ ಕಾರಣ. ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ನಡುವೆ ಕೇವಲ 5.43 ರೂಪಾಯಿ ಮಾತ್ರ ಬೆಲೆ ವ್ಯತ್ಯಾಸ ಕಂಡು ಬರುತ್ತಿದೆ.

ಸದ್ಯದ ಬೆಲೆ?

ಪೆಟ್ರೋಲ್ ಬೆಲೆ:
ಬೆಂಗಳೂರು: 75.08 ರೂ. ದೆಹಲಿ: 74.49 ರೂ. ಚೆನ್ನೈ: 77.32 ರೂ. ಕೋಲ್ಕತಾ: 76.47 ರೂ. ಮುಂಬೈ: 80.03
ಡೀಸೆಲ್ ಬೆಲೆ:
ಬೆಂಗಳೂರು: 69.65 ರೂ, ದೆಹಲಿ: 69.29, ಚೆನ್ನೈ: 69.65 ರೂ. ಕೋಲ್ಕತಾ: 71.14 ರೂ. ಮುಂಬೈ: 73.20 ರೂ.

ಇಧನ ಬೆಲೆ ಇಳಿಕೆಗೆ ಕಾರಣ?

ಪ್ರಮುಖ ತೈಲ ಮಾರುಕಟ್ಟೆಯಾದ ಬ್ರೆಂಟ್ ಕ್ರೂಡ್​ನಲ್ಲಿ ಬ್ಯಾರೆಲ್ ತೈಲವು 59.23 ಡಾಲರ್​ಗೆ ಇಳಿಕೆಯಾಗಿದೆ. ಹಾಗೆಯೇ ಡಬ್ಲ್ಯೂಟಿಐ ಕ್ರೂಡ್​ನಲ್ಲಿನ ಬ್ಯಾರೆಲ್ ತೈಲವು 50.53 ಡಾಲರ್ ಆಗಿದೆ. ಮುಂದಿನ ಕೆಲ ದಿನಗಳವರೆಗೂ ಈ ತೈಲ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾಗುವ ಸಂಭವವಿದ್ದು, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇನ್ನಷ್ಟು ಇಳಿಯುವ ಸಾಧ್ಯತೆ ಇದೆ. ಪೆಟ್ರೋಲ್ ಬೆಲೆ ಇಳಿಕೆಯ ವೇಗ ಹೆಚ್ಚಲು ಮತ್ತೊಂದು ಕಾರಣವಾಗಿರುವುದು ರೂಪಾಯಿ ಮೌಲ್ಯ ಹೆಚ್ಚಳ. ಡಾಲರ್ ಎದುರು 74ರ ಗಡಿ ದಾಟಿದ್ದ ರೂಪಾಯಿ ಅಕ್ಟೋಬರ್ ತಿಂಗಳ ನಂತರ ಸತತವಾಗಿ ಚೇತರಿಸಿಕೊಳ್ಳುತ್ತಿದೆ. ಇದೀಗ ಒಂದು ಡಾಲರ್​ಗೆ 70.56 ರೂಪಾಯಿ ಆಗಿದೆ. ಸದ್ಯಕ್ಕೆ ತೈಲ ವಹಿವಾಟು ಡಾಲರ್ ಲೆಕ್ಕದಲ್ಲೇ ಅಗುವುದರಿಂದ, ರೂಪಾಯಿ ಮೌಲ್ಯ ಹೆಚ್ಚಳದಿಂದ ತೈಲ ಆಮದು ವೆಚ್ಚ ಕಡಿಮೆ ಕಾಣುತ್ತಿದೆ.