ವಾಹನ ಮಾಲೀಕರಿಗೆ ಶಾಕಿಂಗ್ ನ್ಯೂಸ್; ಪೆಟ್ರೋಲ್​, ಡಿಸೇಲ್ ಬೆಲೆಯಲ್ಲಿ 5 ರಿಂದ 6 ರೂ ಏರಿಕೆ ಸಾಧ್ಯತೆ, ಬೆಲೆ ಏರಿಕೆಗೆ ಕಾರಣವೇನು??

0
160

ಒಂದು ಲೇವೆಲ್-ನಲ್ಲಿದ್ದ ಪೆಟ್ರೋಲ್ ಡೀಸೆಲ್ ಬೆಲೆ ಜನರಿಗೆ ಅಲ್ಪ ತೃಪ್ತಿ ನೀಡಿತ್ತು, ನಂತರ ಸಂಚಾರ ನಿಯಮದ ದಂಡದಿಂದ ಬೇಸತ್ತ ಜನರಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು ಇಂಧನ ಬೆಲೆಯಲ್ಲಿ ಭಾರಿ ಏರಿಕೆ ಆಗುವ ಬಗ್ಗೆ ಚರ್ಚೆ ನಡೆಯುತ್ತಿದ್ದು. ಪೆಟ್ರೋಲ್ ಹಾಗೂ ಡೀಸೆಲ್ ಸಗಟು ವ್ಯಾಪಾರ ದರ ಶೀಘ್ರದಲ್ಲಿ 5 ರಿಂದ 6 ರೂ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ದಾಳಿಯಿಂದ ಅಪಾರ ಪ್ರಮಾಣದ ನಷ್ಟ ಅನುಭವಿಸುತ್ತಿರುವ ಸೌದಿ ಅರೆಬಿಯಾ ತೈಲ ಉತ್ಪಾದನೆ ಶೇಕಡ 50 ರಷ್ಟು ಕುಸಿತವಾಗಿದೆ. ಇದೆ ಭಾರತದ ಮೇಲೆ ಪರಿಣಾಮ ಬೀರಲಿದೆ.

ಪೆಟ್ರೋಲ್ ಡೀಸೆಲ್ 6 ರೂ ಏರಿಕೆ?

ಹೌದು ವಿಶ್ವದ ಪ್ರಮುಖ ತೈಲ ಉತ್ಪಾದನಾ ರಾಷ್ಟ್ರವಾದ ಸೌದಿ ಅರೇಬಿಯಾದ ತೈಲ ಘಟಕಗಳ ಮೇಲೆ ಕಳೆದ ಶನಿವಾರ ಡ್ರೋನ್ ದಾಳಿಯಾಗಿರುವ ಪರಿಣಾಮ ಸೌದಿ ಅರೇಬಿಯಾದ ತೈಲ ಉತ್ಪಾದನೆಯಲ್ಲಿ ಅರ್ಧದಷ್ಟು ಸ್ಥಗಿತವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಕಚ್ಚಾತೈಲ ಬೆಲೆ ಏರಿಕೆಯಾಗಿದೆ. ಈಗಾಗಲೇ ವಿಶ್ವ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ ಕಚ್ಚಾತೈಲದ ಬೆಲೆ ಶೇ.10.68 ರಷ್ಟು ಏರಿಕೆಯಾಗಿದೆ. ಇದು ಭಾರತದ ಮಾರುಕಟ್ಟೆಯ ಮೇಲೆ ದೊಡ್ಡ ಪ್ರಮಾಣದ ಬೆಲೆ ಏರಿಳತಕ್ಕೆ ಕಾರಣವಾಗಲಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಪೆಟ್ರೋಲ್ ಹಾಗೂ ಡೀಸೆಲ್ ಸಗಟು ವ್ಯಾಪಾರ ದರ ಶೀಘ್ರದಲ್ಲಿ 5 ರಿಂದ 6 ರೂ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುವ ಚರ್ಚೆ ನಡೆಯುತ್ತಿದೆ.

ಭಾರತದ ಅತ್ಯಂತ ದೊಡ್ಡ ತೈಲ ಮಾರಾಟ ಜಾಲವಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹೆಚ್​ಪಿಸಿಎಲ್​ ಮತ್ತು ಬಿಪಿಸಿಎಲ್ ತಮ್ಮ ಕಂಪೆನಿಗಳ ಮೇಲಾಗುವ ನಷ್ಟವನ್ನು ಸರಿದೂಗಿಸಿಕೊಳ್ಳುವ ಸಲುವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಬೆಲೆಯನ್ನು 5 ರಿಂದ 6 ರೂಪಾಯಿಯ ವರೆಗೆ ಎರಿಸುವ ಸಾಧ್ಯತೆ ಇದೆ. ಈಗಾಗಲೇ ಭಾರತದಲ್ಲಿ ಪೆಟ್ರೋಲ್ ನೆಲೆ ಪ್ರತಿ ಲೀಟರ್​ಗೆ 73 ರಿಂದ 78 ರೂ ಆಸುಪಾಸಿನಲ್ಲಿದೆ. ವಿಶ್ವದಲ್ಲೇ ಅತಿಹೆಚ್ಚು ಪೆಟ್ರೋಲಿಯಂ ಕಚ್ಚಾತೈಲದ ಅನುಭೋಗ ರಾಷ್ಟ್ರ ಭಾರತ. ಭಾರತ ಗಲ್ಫ್ ರಾಷ್ಟ್ರಗಳಿಂದ ಪ್ರತಿದಿನ 5.7 ಮಿಲಿಯನ್ ಬ್ಯಾರೆಲ್​ನಷ್ಟು ಪೆಟ್ರೋಲಿಯಂ ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಅಂದರೆ ವಿಶ್ವದ ಪೆಟ್ರೋಲ್ ಬೇಡಿಕೆಯಲ್ಲಿ ಭಾರತದ ಪಾಲು ಶೇ.5 ರಷ್ಟು. ಹೀಗಾಗಿ ಇದೀಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೃತಕವಾಗಿ ಸೃಷ್ಟಿಸಲಾಗಿರುವ ಪೆಟ್ರೋಲಿಯಂ ತೈಲ ಉತ್ಪನ್ನಗಳ ಬಿಕ್ಕಟ್ಟು ಈಗಾಗಲೇ ಕುಸಿದಿರುವ ಭಾರತದ ಆರ್ಥಿಕತೆಯ ಮೇಲೆ ಮತ್ತಷ್ಟು ಬರೆ ಎಳೆದಂತಾಗಿದೆ.

ಕಚ್ಚಾ ತೈಲ ಹಾಗೂ ಅಡುಗೆ ಅನಿಲ ಪೂರೈಕೆಯಲ್ಲಿ ಭಾರತಕ್ಕೆ ಸೌದಿ ಅರೇಬಿಯಾ ಅತ್ಯಂತ ಪ್ರಮುಖ ದೇಶವಾಗಿದೆ. ತೈಲ ಬೆಲೆಯಲ್ಲಿ ಏರಿಕೆಯಾದರೆ ಭಾರತದ ಆಮದು ಮೇಲೆ ಪರಿಣಾಮ ಬೀರುತ್ತದೆ ಮತ್ತು ಇದರಿಂದ ವ್ಯಾಪಾರದಲ್ಲಿ ಅಸಮತೋಲನ ಉಂಟಾಗುತ್ತದೆ. ಬ್ಯಾರೆಲ್‌ ಮೇಲೆ ಒಂದು ಡಾಲರ್‌ ಏರಿಕೆಯಾದರೂ ಭಾರತವು ವಾರ್ಷಿಕ ವಾಗಿ 10,700 ಕೊಟಿ ರೂ. ಹೆಚ್ಚುವರಿ ವೆಚ್ಚ ಮಾಡಬೇಕಾಗುತ್ತದೆ. ಭಾರತ ಶೇ. 80ರಷ್ಟು ತೈಲ ವನ್ನು ಆಮದು ಮಾಡಿಕೊಳ್ಳುತ್ತಿದ್ದು, ಇದರಲ್ಲಿ ಸೌದಿ ಅರೇಬಿಯಾದ ಪಾಲು ಕೂಡ ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ. ಒಟ್ಟಾರೆಯಾಗಿ ವಾಹನ ಸಂಚಾರದ ಮೇಲೆ ಹೊಡೆತ ಬಿರಲಿದ್ದು, ಸವಾರರು ಮತ್ತಷ್ಟು ಹೆಚ್ಚಿನ ಹಣ ನೀಡಿ ಪೆಟ್ರೋಲ್, ಡೀಸೆಲ್ ಕೊಳ್ಳಲೆ ಬೇಕಾಗುವ ಕಾಲ ಹತ್ತಿರವೇ ಇದೆ.