ಮತ್ತೆ ಏರಿತು ಪೆಟ್ರೋಲ್, ಡೀಸೆಲ್ ಬೆಲೆ..! ಗ್ರಾಹಕರ ಜೇಬಿಗೆ ಬಿತ್ತು ಮತ್ತೆ ಬರೆ, ಮೋದಿ ಕೇವಲ ಒಂದು ರುಪಾಯಿ ಕಡಿಮೆ ಮಾಡಿದರೆ ಸಾಕೆ??

0
341

ಕಳೆದ ಕೆಲ ತಿಂಗಳಿನಿಂದಲೂ ನಿರಂತರವಾಗಿ ಪೆಟ್ರೋಲ್ ಬೆಲೆ ಗಗನಕ್ಕೇರುತ್ತಲೇ ಇದೆ. ಇದರಿಂದ ಗ್ರಾಹಕರು ತತ್ತರಿಸಿ ಹೋಗಿದ್ದಾರೆ. ಕೇಂದ್ರ ಸರ್ಕಾರ ಮೊನ್ನೆಯಷ್ಟೇ ಪ್ರತಿ ಲೀಟರ್’ಗೆ 2.50 ರೂ. ಬೆಲೆ ಇಳಿಸಿ ಗ್ರಾಹಕರನ್ನು ಸಂಕಷ್ಟದಿಂದ ಕೊಂಚ ನಿರಾಳಗೊಳಿಸಿತ್ತು. ಆದರೆ ಇಂದು ಮತ್ತೆ ತೈಲ ಬೆಲೆಯಲ್ಲಿ ಏರಿಕೆ ಕಂಡಿದ್ದು, ಗ್ರಾಹಕರಿಗೆ ಹೊಡೆತದ ಮೇಲೆ ಹೊಡೆತ ಬಿದ್ದಿದೆ. ಇಂದು ಲೀಟರ್‌ ಪೆಟ್ರೋಲ್‌ಗೆ 18 ಪೈಸೆ ಏರಿಕೆ ಕಂಡಿದ್ದು, ಲೀ. ಡೀಸೆಲ್‌ ಬೆಲೆ 29 ಪೈಸೆಗಳಷ್ಟು ಹೆಚ್ಚಾಗಿದೆ. ಬೆಲೆ ಏರಿಕೆಯಾದ ನಂತರ ಪ್ರತಿ ಲೀ. ಪೆಟ್ರೋಲ್‌ಗೆ 81.68 ರೂ.ಗಳಷ್ಟಿದ್ದರೆ, ಡೀಸೆಲ್‌ ಲೀಟರ್‌ಗೆ 73.24 ರೂ.ಗಳಿಗೆ ದೆಹಲಿಯಲ್ಲಿ ಮಾರಾಟವಾಗುತ್ತಿದೆ.

Also read: ವಿಮಾನ ಪ್ರಯಾಣದಲ್ಲೂ ಫೇಸ್ ರೆಕಾಗ್ನಿಶನ್ ವ್ಯವಸ್ಥೆ, ಈ ಕೀರ್ತಿ ಪಡೆದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ!!

ಮುಂಬೈನಲ್ಲಿಯೂ ಕೂಡ ಬೆಲೆ ಏರಿಕೆಯಾಗಿದ್ದು, ಲೀಟರ್ ಪೆಟ್ರೋಲ್‌ 18 ಪೈಸೆ ಏರಿಕೆ ಕಂಡು 87.15 ರೂ.ಗಳಷ್ಟಿದ್ದರೆ, ಡೀಸೆಲ್‌ನಲ್ಲಿ 70 ಪೈಸೆ ಕಡಿಮೆಯಾಗಿ 76.75 ರೂ.ಗಳಿಗೆ ಮಾರಾಟವಾಗುತ್ತಿದೆ. ಇನ್ನು ಮುಂಬೈನಲ್ಲಿ ನಡೆದ ಹಣಕಾಸು ನೀತಿ ನಿರ್ವಹಣಾ ಸಮಿತಿ ಸಭೆಯಲ್ಲಿ ಆರ್‌ಬಿಐ ಗವರ್ನರ್‌ ಡಾ| ಊರ್ಜಿತ್‌ ಆರ್‌. ಪಟೇಲ್‌, ಜತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚುತ್ತಿರುವ ಕಚ್ಚಾ ತೈಲ ದರ ಕಳವಳಕಾರಿ ಎಂಬ ಎಚ್ಚರಿಕೆಯನ್ನೂ ರವಾನಿಸಿದ್ದಾರೆ. ಕೇಂದ್ರ ಸರಕಾರ ತೈಲದ ಮೇಲಿನ ತೆರಿಗೆ ಪ್ರಮಾಣವನ್ನು 2.50 ರೂ. ಇಳಿಕೆ ಮಾಡಿರುವ ಕ್ರಮ ಚಿಲ್ಲರೆ ಹಣದುಬ್ಬರ ದರ ಏರಿಕೆಗೆ ಅಲ್ಪ ಪ್ರಮಾಣದಲ್ಲಿ ಕಾರಣವಾಗಬಹುದು ಎಂದು ಆರ್‌ಬಿಐ ತಿಳಿಸಿದೆ.. ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 86ರಿಂದ 88 ಡಾಲರ್‌ಗೆ ಹೆಚ್ಚಳವಾಗಿರುವುದು ಶೇ.0.15ರಷ್ಟು ಪ್ರಮಾಣದಲ್ಲಿ ಪ್ರಗತಿ ಮೇಲೆ ಪ್ರತಿಕೂಲ ಮತ್ತು ಶೇ.0.20ರಷ್ಟು ಪ್ರಮಾಣದಲ್ಲಿ ಅಭಿವೃದ್ಧಿಗೆ ಕೊರತೆಯಾದೀತು ಎಂದು ಎಚ್ಚರಿಸಿದೆ.


Also read: ವಯಸ್ಸಾದವರನ್ನು ವೃದ್ದಾಶ್ರಮಕ್ಕೆ ದೂಡುವ ಕಟುಕರಿಗೆ, ಈ ಕಥೆ ತೋರಿಸಿ; ಅವರ ಮನಸ್ಸೂ ಕರಗಬಹುದು!!

ಇತ್ತೀಚೆಗಷ್ಟೇ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಪ್ರತಿ ಲೀ. ಪೆಟ್ರೋಲ್‌ಗೆ 2.50 ರೂ. ಮತ್ತು ಡೀಸೆಲ್‌ಗೂ 2.50 ರೂ. ಕಡಿಮೆ ಮಾಡಿದ್ದರು. ರಾಜ್ಯ ಸರ್ಕಾರಗಳೂ ಕೂಡ 2.50 ರೂ. ಮಾರಾಟ ತೆರಿಗೆ ಅಥವಾ ವ್ಯಾಟ್ ಕಡಿತಗೊಳಿಸುವಂತೆ ಅವರು ಮನವಿ ಮಾಡಿದ್ದರು. ಆದರೆ ಮತ್ತೆ ಮತ್ತೆ ಪೆಟ್ರೋಲ್, ಡೀಸೆಲ್ ನಲ್ಲಿ ಬೆಲೆ ಏರಿಕೆಯಾಗುತ್ತಿರುವುದು ಗ್ರಾಹಕರಲ್ಲಿ ಆತಂಕವನ್ನು ಸೃಷ್ಟಿಸಿದೆ.


Also read: ಬಿ.ಜೆ.ಪಿ. ಆಡಳಿತವಿರುವ ಮಧ್ಯಪ್ರದೇಶದಲ್ಲಿ ಬಾಲಕಿಯ ಮೇಲೆ ದೇವಾಲಯದ ಪ್ರಾಂಗಣದಲ್ಲೇ ಅರ್ಚಕರಿಂದ ಅತ್ಯಾಚಾರ..!

ತೈಲ ಬೆಲೆ ಹೆಚ್ಚಾಗಲು ಮುಖ್ಯ ಕಾರಣಗಳೇನು?

  • ಅಮೆರಿಕನ್ ಪ್ರೆಸಿಡೆಂಟ್ ಟ್ರಂಪ್ ಇರಾನಿನ ಜೊತೆಯ ನ್ಯೂಕ್ಲಿಯರ್ ಒಪ್ಪಂದದಿಂದ ಹೊರನೆಡೆದಿರುವುದು ಇರಾನಿ ಕಚ್ಚಾ ತೈಲ ಸರಬರಾಜು ಮೇಲಿನ ನಂಬಿಕೆಯನ್ನ ಕಡಿಮೆಮಾಡಿದೆ. ಯಾವಾಗ ಏನಾಗುತ್ತದೆಯೋ ಎನ್ನುವ ಅವ್ಯಕ್ತ ಭಯ ಒಂದು ರೀತಿಯ ಅಸ್ಥಿರತೆಯನ್ನ ಸೃಷ್ಟಿಸಿದೆ. ಗಮನಿಸಿ ಲಾಗಾಯ್ತಿನಿಂದ ಭಾರತ ಇರಾನಿನಿಂದಲೆ ತೈಲವನ್ನ ಕೊಳ್ಳುತ್ತಾ ಬಂದಿದೆ.
  • ವೆನಿಜುಯೆಲಾ ದಲ್ಲಿರುವ ಅರಾಜಕತೆಯಿಂದ ಅಲ್ಲಿನ ತೈಲ ಉತ್ಪನ್ನ ದಲ್ಲಿ ಕೊರತೆ ಉಂಟಾಗಿದೆ. ಹೀಗಾಗಿ ಜಗತ್ತಿನಲ್ಲಿ ಅಲ್ಪ ಮಟ್ಟಿನ ತೈಲ ಕೊರತೆ ಉಂಟಾಗಿರುವುದು ಕೂಡ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.
  • ಯಾವುದೇ ವಸ್ತುವಿನ ಬೆಲೆ ದಿಡೀರ್ ಎಂದು ಹೆಚ್ಚಾಗುವುದಿಲ್ಲ ಬೇಡಿಕೆ ಮತ್ತು ಅದರ ಸಿಗುವಿಕೆ ವಸ್ತುವಿನ ಬೆಲೆಯನ್ನ ನಿಗದಿ ಮಾಡುತ್ತವೆ. ಕೊರತೆ ಬೇಡಿಕೆಯನ್ನ ಹೆಚ್ಚಿಸುತ್ತದೆ ಮತ್ತು ಬೆಲೆಯನ್ನ ಕೂಡ ಹೆಚ್ಚುವಂತೆ ಮಾಡುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ತೈಲದ ಬೆಲೆ ಕೊರತೆಗಿಂತ ಮೀರಿ ಹೆಚ್ಚಾಗಲು ಕಾರಣ ಪರಿಸ್ಥಿತಿಯ ಲಾಭ ಪಡೆದು ಹೆಚ್ಚು ಹಣ ಮಾಡುವ ದಲ್ಲಾಳಿ ಮನಸ್ಥಿತಿ.
  • ಗಮನಿಸಿ ಇಲ್ಲಿ ಎರಡು ರೀತಿಯ ಹೊಡೆತ ನಮ್ಮ ಮೇಲೆ ಆಗಲಿದೆ. ತೈಲ ಬೆಲೆ ಹೆಚ್ಚಿದರೆ ನಮ್ಮ ಬೆಳವಣಿಗೆ ಕುಂಠಿತವಾಗುತ್ತದೆ. ಹಣದುಬ್ಬರ ಹೆಚ್ಚುತ್ತದೆ. ನಮ್ಮ ರುಪಾಯಿಯ ಮೌಲ್ಯ ಕುಸಿಯುತ್ತದೆ. ಹೀಗೆ ಕುಸಿದ ರೂಪಾಯಿ ಮೌಲ್ಯ ತೈಲ ಬೆಲೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದು ಎರಡು ಅಲುಗಿನ ಕತ್ತಿ ಇದ್ದಂತೆ ಅಪಾಯ ಮಾತ್ರ ತಪ್ಪಿದ್ದಲ್ಲ.