ವಾಹನ ಪ್ರಿಯರಿಗೆ ಕೇಂದ್ರ ಸರ್ಕಾರದಿಂದ ಬಿಗ್ ಶಾಕ್; ಹೊಸ ಬೈಕ್ ಮತ್ತು ಸ್ಕೂಟರ್‌ಗಳ ಮೇಲೆ ಹೆಚ್ಚುವರಿ ತೆರಿಗೆ..

0
431

ಎತ್ತಿಗೆ ಜ್ವರ ಬದ್ರೆ ಎಮ್ಮೆಗೆ ಬರೆಯಳೆದಂತೆ ಅನ್ನುವ ಹಾಗೆ ಮಾಲಿನ್ಯ ತಡೆಗೆ ತೆರಿಗೆ ಬಾಣ ಬಿಟ್ಟ ಕೇಂದ್ರ ಸರ್ಕಾರದ ನಿಯಮ ವಾಹನ ಖರೀದಿದಾರರಿಗೆ ಹೊರೆಯಾಗಿದೆ. ದೇಶಾದ್ಯಂತ ಪ್ರತಿನಿತ್ಯವೂ ಲಕ್ಷಾಂತರ ಹೊಸ ವಾಹನಗಳು ರಸ್ತೆಗೆ ಇಳಿಯುತ್ತಿವೆ. ಇದರಿಂದ ಪ್ರತಿದಿನವೂ ಮಾಲಿನ್ಯ ಪ್ರಮಾಣ ಹೆಚ್ಚಾಗುತ್ತ ಹೋಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡ ಕೇಂದ್ರ ಸರ್ಕಾರ ಪೆಟ್ರೋಲ್ ಎಂಜಿನ್ ಪ್ರೇರಿತ ಹೊಸ ಬೈಕ್ ಮತ್ತು ಸ್ಕೂಟರ್‌ಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಲು ಮುಂದಾಗಿದೆ.

ಮಾಲಿನ್ಯ ತಡೆಗೆ ಅದು ಒಂದು ಅಸ್ತ್ರವಾದರೆ ಎಲೆಕ್ಟ್ರಿಕ್ ಎಂಜಿನ್ ಬೈಕ್‌ ಮತ್ತು ಸ್ಕೂಟರ್ ಮಾರಾಟಕ್ಕೆ ಹೆಚ್ಚಿನ ಉತ್ತೇಜನ ನೀಡುತ್ತಿದ್ದು. ಎಲೆಕ್ಟ್ರಿಕ್ ಎಂಜಿನ್ ಬೈಕ್ ಮತ್ತು ಸ್ಕೂಟರ್‌ಗಳನ್ನು ಹೊರತುಪಡಿಸಿ ಪೆಟ್ರೋಲ್ ಎಂಜಿನ್ ಬೈಕ್ ಮತ್ತು ಸ್ಕೂಟರ್‌ಗಳ ಖರೀದಿ ಮೇಲೆ ಹೆಚ್ಚುವರಿಯಾಗಿ ಗ್ರೀನ್ ಸೆಸ್ ವಿಧಿಸಲು ಸಿದ್ದತೆ ನಡೆಸಲಾಗಿದ್ದು, ಇದರಿಂದ ಹೊಸ ವಾಹನ ಖರೀದಿಯು ಮತ್ತಷ್ಟು ದುಬಾರಿಯಾಗಲಿದೆ. ಲೆಕ್ಕಾಚಾರದ ಪ್ರಕಾರ ಬೆಂಗಳೂರಿನಲ್ಲಿ ಪ್ರತಿದಿನ 1800 ರಿಂದ 2000 ಹೊಸ ವಾಹನಗಳು ನೋಂದಣಿಯಾಗುತ್ತಿದ್ದು, ಇದರಲ್ಲಿ ಶೇ.80ರಷ್ಟು ದ್ವಿಚಕ್ರ ವಾಹನಗಳಾಗಿವೆ. ಹೀಗಿರುವಾಗ ದೇಶಾದ್ಯಂತ ಮಾರಾಟವಾಗುತ್ತಿರುವ ಪೆಟ್ರೋಲ್ ಎಂಜಿನ್ ಬೈಕ್ ಮತ್ತು ಸ್ಕೂಟರ್‌ಗಳ ಸಂಖ್ಯೆ ಎಷ್ಟಿರಬಹುದು ನೀವೇ ಊಹಿಸಿಕೊಳ್ಳಿ. ಹೀಗಾಗಿ ಪೆಟ್ರೋಲ್ ಎಂಜಿನ್ ಬದಲಾಗಿ ಎಲೆಕ್ಟ್ರಿಕ್ ಎಂಜಿನ್ ಬೈಕ್‌ ಮತ್ತು ಸ್ಕೂಟರ್ ಮಾರಾಟಕ್ಕೆ ಹೆಚ್ಚಿನ ಉತ್ತೇಜನ ನೀಡುತ್ತಿರುವ ಕೇಂದ್ರವು ಹೊಸ ತೆರಿಗೆ ಜಾರಿಗೆ ತರುತ್ತಿದೆ.

ಇದರಲ್ಲಿ ಗ್ರೀನ್ ಸೆಸ್‌ನಿಂದ ಸದ್ಯ ಮುಕ್ತವಾಗಿರುವ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್‌ಗಳಿಗೆ ಮುಂದಿನ 3 ವರ್ಷಗಳ ತನಕ ತೆರಿಗೆ ವಿನಾಯ್ತಿ ಸಿಗಲಿದ್ದು, ಪೆಟ್ರೋಲ್ ಎಂಜಿನ್ ಸ್ಕೂಟರ್ ಮತ್ತು ಬೈಕ್ ಬದಲಾಗಿ ಎಲೆಕ್ಟ್ರಿಕ್ ಎಂಜಿನ್ ವಾಹನ ಮಾರಾಟ ಹೆಚ್ಚಳಕ್ಕೆ ಈ ಕ್ರಮ ಕೈಗೊಳ್ಳಲಾಗುತ್ತಿದ್ದು ಮುಂಬರುವ ತಿಂಗಳು ನಡೆಯಲಿರುವ ಕೇಂದ್ರದ ಬಜೆಟ್ ಮಂಡನೆ ವೇಳೆ ಹೊಸ ತೆರಿಗೆ ನೀತಿ ಅಧಿಕೃತವಾಗಿ ಜಾರಿಗೊಳ್ಳಲಿದ್ದು, ಎಲೆಕ್ಟ್ರಿಕ್ ಎಂಜಿನ್ ವಾಹನಗಳನ್ನು ಹೊರತುಪಡಿಸಿ ಪರಿಸರಕ್ಕೆ ಮಾರಾಕವಾಗಿರುವ ಪೆಟ್ರೋಲ್ ಬೈಕ್ ಮತ್ತು ಸ್ಕೂಟರ್‌ಗಳ ಮೇಲೆ ಗ್ರೀನ್ ಸೆಸ್ ವಿಧಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ.

ಬೈಕ್‌ಗಳಿಗೆ ಎಬಿಎಸ್ ಕಡ್ಡಾಯ:

ಏಪ್ರಿಲ್ 1ರಿಂದಲೇ ಹೊಸ ನಿಯಮದ ಪ್ರಕಾರ 125 ಸಿಸಿ ಮೇಲ್ಪಟ್ಟ ಬೈಕ್‌ಗಳು ಮತ್ತು ಸ್ಕೂಟರ್‌ಗಳು ಎಬಿಎಸ್ ಹೊಂದಿದ್ದರೇ ಮಾತ್ರವೇ ನೋಂದಣಿಯಾಗಲಿದ್ದು, ಇದರಿಂದಲೂ ಸಹ ಬೈಕ್‌ಗಳ ಬೆಲೆಯಲ್ಲಿ ಕನಿಷ್ಠ ಅಂದ್ರು ರೂ.5 ಸಾವಿರದಿಂದ ರೂ. 8 ಸಾವಿರ ಬೆಲೆ ಹೆಚ್ಚಳವಾಗಳಿಗೆ. ಏಕೆಂದರೆ 125 ಸಿಸಿ ಹಾಗೂ ಮೇಲ್ಪಟ್ಟ ಬೈಕ್‌ಗಳಿಗೆ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ABS) ಬಳಕೆ ಕೂಡಾ ಕಡ್ಡಾಯವಾಗಲಿದೆ. ದೇಶದಲ್ಲಿ ರಸ್ತೆ ಅಪಘಾತದಿಂದಾಗಿ ಸಂಭವಿಸುತ್ತಿರುವ ಸಾವಿನ ಸಂಖ್ಯೆ ಹೆಚ್ಚುತ್ತಿರುವುದು ಇದಕ್ಕೆ ಕಾರಣವಾಗಿದ್ದು ಎಬಿಎಸ್ ಅಳವಡಿಕೆಯಿಂದ ವಾಹನಗಳಲ್ಲಿ ಬಹಳಷ್ಟು ಬದಲಾವಣೆಗಳು ಕಂಡು ಬರುತ್ತೆ.

ಪ್ರಯೋಜನವೇನು?

ಈಗ ಯುರೋಪ್ ರಸ್ತೆ ಕಾನೂನಿನ ಮಾದರಿಯಲ್ಲಿ ಭಾರತದ ಸಾರಿಗೆ ಅಧಿಕಾರಿಗಳು ದೇಶದಲ್ಲೂ 125 ಸಿಸಿ ಹಾಗೂ ಮೇಲ್ಪಟ್ಟ ದ್ವಿಚಕ್ರ ವಾಹನಗಳಿಗೆ ಎಬಿಎಸ್ ಬಳಕೆ ಕಡ್ಡಾಯಗೊಳಿಸಲು ನಿರ್ಧರಿಸಿದೆ. ಇದು ಕೆಲಸ ವೆಂದರೆ ವೇಗದಲಿ ಬ್ರೇಕ್ ಒತ್ತಿದಾಗ ವಾಹನ ಚಕ್ರ ಒಂದೇ ಬಾರಿ ನಿಲ್ಲುವುದಿಲ್ಲ. ಸ್ಪೀಡ್ ಕಡಿಮೆಮಾಡಿ ಚಕ್ರ ತಿರುಗುತಲೇ ಇರುತ್ತೆ ಈ ಸಮಯದಲ್ಲಿ ಸವಾರ ತಮ್ಮ ರಸ್ತೆಯ ಮಾರ್ಗವನ್ನು ಬದಲಾಯಿಸಲು ಸಹಾಯಕವಾಗುತ್ತೆ. ಒಟ್ಟಾರೆಯಾಗಿ ಮಾಲಿನ್ಯ ತಡೆಗಟ್ಟಲು, ಎಲೆಕ್ಟ್ರಿಕ್ ವಾಹನಗಳಿಗೆ ಪ್ರೋತ್ಸಾಹ ನೀಡಲು ಮತ್ತು ಅಪಘಾತ ತಡೆಗಟ್ಟಲು ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.

Also read: ಗೋವಾಕ್ಕೆ ಮಜಾ ಉಡಾಯಿಸಲು ಹೋಗುವವರಿಗೆ ಬಿಗ್ ಶಾಕ್; ಇನ್ಮುಂದೆ ಬೀಚ್-ನಲ್ಲಿ ಎಣ್ಣೆ ಕುಡಿದರೆ ಬಾರಿದಂಡ..