ಅಂಕೋಲದ ಮನೆಯೊಂದರ ಕುಡಿಯುವ ನೀರಿನ ಬಾವಿಯಲ್ಲಿ ಪೆಟ್ರೋಲ್ ಪತ್ತೆ; ಪೆಟ್ರೋಲ್ ಬಾವಿ ನೋಡಲು ಓಡೋಡಿಕೊಂಡು ಬಂದ ಜನರು, ಮುಂದೇನಾಯಿತು??

0
346

ದೇಶಕ್ಕೆ ಅವಶ್ಯಕವಾಗಿರುವ ಪೆಟ್ರೋಲ್ ದರ ಏರಿಕೆಗೆ ಏನಾದರು ಒಂದು ಉಪಾಯ ಹುಡುಕಬೇಕು ಎನ್ನುವ ಯೋಚನೆಯಲ್ಲಿ ಜನರಿದ್ದಾರೆ. ಹಾಗಂತ ಇದನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ, ಭಾರತದಲ್ಲಿ ಭೂಮಿಯನ್ನು ಅಗೆದು ನೋಡಿದರೆ ಎಲ್ಲಾದರೂ ಪೆಟ್ರೋಲ್ ಡೀಸೆಲ್ ಪತ್ತೆಯಾಗಬಹುದು ಎನ್ನುವುದು ಹಲವರ ಯೋಚನೆಯಾದರೆ ಇನ್ನೂ ಕೆಲವು ತಜ್ಞರ ಪ್ರಕಾರ ದೇಶದಲ್ಲಿ ಪೆಟ್ರೋಲ್ ಉತ್ಪಾದನೆ ಕಷ್ಟ ಎಂದು ತಿಳಿಸಿದ್ದಾರೆ. ಆದರೆ ಇದೆಲ್ಲವನೂ ಮೀರಿ ಕಾರವಾರದ ಜಿಲ್ಲೆಯ ಅಂಕೋಲದ ಮನೆಯೊಂದರ ಬಾವಿಯಲ್ಲಿ ಪೆಟ್ರೋಲ್ ಕಾಣಿಸಿಕೊಂಡು ಭಾರಿ ವೈರಲ್ ಆಗಿದೆ.

@publictv.in

Also read: ರಾಜ್ಯದಲ್ಲಿ ಕುಡುಕರ ಸಂಖ್ಯೆ ಕಡಿಮೆಯಾಗಿರುವುದಕ್ಕೆ ಖುಷಿ ಪಡುವುದನ್ನು ಬಿಟ್ಟು, ಇದರ ಕಾರಣ ಕಂಡು ಹಿಡಿದು ಮತ್ತೆ ಸಂಖ್ಯೆ ಏರಿಸಲು ಹೊರಟಿದ್ಯಾ ಘನ ಸರ್ಕಾರ??

ಹೌದು ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ಕೆಲವು ನೈಸರ್ಗಿಕ ಬದಲಾವಣೆ ಕಂಡು ಜನರು ಏನಾದರು ಅದು ಸತ್ಯವೆನ್ನುತ್ತಿದ್ದಾರೆ. ಇದಕ್ಕೆ ಮತ್ತಷ್ಟು ಶಕ್ತಿ ತುಂಬುವಂತ ಘಟನೆ ಕಾರವಾರ ರಸ್ತೆಗೆ ಹೊಂದಿಕೊಂಡಿರುವ ಅಂಕೋಲದ ಮನೆಯೊಂದರ ಕುಡಿಯುವ ಬಾವಿ ನೀರಿಗೆ ಬದಲಾಗಿ ಪೆಟ್ರೊಲ್ ಸಿಕ್ಕು ಭಾರಿ ವೈರಲ್ ಆಗಿತ್ತು, ಈ ಮನೆಯ ನಾಗವೇಣಿ ನಾಗರಾಜ್ ಆಚಾರಿ ಬಾವಿಯಲ್ಲಿ ಪೆಟ್ರೋಲ್ ವಾಸನೆ ಬರುತ್ತಿರುವುದನ್ನು ಗಮನಿಸಿ ಎಂದಿನಂತೆ ಬಾವಿ ನೋಡಿದಾಗ ಬಾವಿಯ ಮೇಲ್ಭಾಗದಲ್ಲಿ ಪೆಟ್ರೋಲ್ ಶೇಖರಣೆಯಾಗಿರುವುದು ಕಂಡು ಬಂದಿದೆ. ಬಾವಿಯಲ್ಲಿ ಪೆಟ್ರೋಲ್ ಬರುತ್ತಿರುವುದನ್ನು ಗಮನಿಸಿ ಜನರಿಗೆ ತಿಳಿಸಿದ್ದಾರೆ.

ಸುದ್ದಿ ಹರಡುತ್ತಿದ್ದಂತೆ ಪೆಟ್ರೋಲ್ ಬಾವಿಯನ್ನು ನೋಡಲು ಸ್ಥಳೀಯ ಜನ ಮುಗಿಬಿದ್ದಿದ್ದಾರೆ. ಪಟ್ಟಣದಲ್ಲಿ ಪೆಟ್ರೋಲ್ ಮಿಶ್ರಿತವಾಗಿ ಬಾವಿ ವಿಷಯ ತಿಳಿದ ಪುರಸಭೆ ಮುಖ್ಯಾಧಿಕಾರಿ ಬಿ.ಪ್ರಲ್ಹಾದ್ ಮತ್ತು ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಮನೆಯ ಮಾಲೀಕರಾದ ನಾಗವೇಣಿ ನಾಗರಾಜ್ ಆಚಾರಿ ತಮ್ಮ ಬಾವಿಯಲ್ಲಿ ಪೆಟ್ರೋಲ್ ಕಂಡು ಬಂದ ಹಿನ್ನೆಲೆಯಲ್ಲಿ ಇಂದು ಪುರಸಭೆ ಮುಖ್ಯಾಧಿಕಾರಿಯವರಿಗೆ ಲಿಖಿತ ದೂರ ನೀಡಿದ್ದಾರೆ. ಅದರಂತೆ ಪುರಸಭೆಯ ಹಿರಿಯ ಆರೋಗ್ಯ ನೀರಿಕ್ಷಕ ಪ್ರವೀಣ್ ನಾಯಕ್ ಪರಿಶೀಲನೆ ನಡೆಸಿದಾಗ, ಮನೆಯ ಎದುರಿನಲ್ಲಿರುವ ಪೆಟ್ರೋಲ್ ಪಂಪ್‍ನಲ್ಲಿರುವ ಟ್ಯಾಂಕ್ ಲೀಕೇಜ್ ಆಗಿದೆ.

@publictv.in

Also read: ಯುವಕನೊಬ್ಬ ಇನ್‍ಸ್ಟಾಗ್ರಾಂನಲ್ಲಿ ಹಾಕಿದ್ದ ಪೋಸ್ಟ್ ಟ್ರ್ಯಾಕ್ ಮಾಡಿ, ನಂಬಿಸಿ ಕರೆದೊಯ್ದು ನಾಲ್ವರಿಂದ ಗ್ಯಾಂಗ್‍ರೇಪ್.!

ಈ ಪೆಟ್ರೋಲ್ ಭೂಮಿಯಲ್ಲಿ ಇಂಗಿ ಜಲಮೂಲದಿಂದ ಇವರ ಬಾವಿಯಲ್ಲಿ ಶೇಖರವಾಗಿರುವ ವಿಷಯ ಬೆಳಕಿಗೆ ಬಂದಿದೆ. ಇದರಿಂದಾಗಿ ಬಾವಿಯಲ್ಲಿ ಪೆಟ್ರೋಲ್ ಸಂಗ್ರಹವಾಗಿದ್ದು ಪುರಸಭಾ ಅಧಿಕಾರಿಗಳು ಪಂಪ್ ಮಾಲೀಕರಿಗೆ ನೋಟಿಸ್ ಜಾರಿಗೆ ಮಾಡಿದ್ದಾರೆ. ಟ್ಯಾಂಕ್ ಸೋರಿಕೆಯಾದ ಹಿನ್ನೆಲೆಯಲ್ಲಿ ಭೂಮಿಯಲ್ಲಿ ಪೆಟ್ರೋಲ್ ಇಂಗಿ ಬಾವಿಯನ್ನು ಸೇರಿಕೊಂಡಿದೆ. ಬಾವಿಯ ನೀರನ್ನು ಖಾಲಿ ಮಾಡಿಸಿ, ಕುಡಿಯುವ ನೀರಿನ ಬಳಕೆಗಾಗಿ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಬಂಕ್ ನವರು ವಹಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಏನೇ ಅಗಲಿ ಈ ಸುದ್ದಿ ನಿರಾಸೆ ಮೂಡಿಸಿದೆ ಎನ್ನುವುದು ಹಲವರ ಪ್ರತಿಕ್ರಿಯೆಯಾಗಿದೆ.

ಮಾಹಿತಿ ಕೃಪೆ: publictv.in