ಶೀಘ್ರವೇ ಪೆಟ್ರೋಲ್ ಹಾಗು ಡೀಸೆಲ್ ಬೆಲೆ ಕಡಿಮೆ ಆಗುತ್ತದೆ!!!

0
724

ವಾಹನ ಸವಾರರೇ ನಿಮಗಿದೆ ಸಂತಸದ ಸುದ್ದಿ.. ಈ ಸುದ್ದಿ ನಿಮ್ಮ ಮುಖದಲ್ಲಿ ಮಂದಹಾಸ ತರದೆ ಇರದು. ಪೆಟ್ರೋಲ್ ಉಳಿಸಲು ನೀವು ಮಾಡಿದ ಪ್ಲಾನ್‌ಗಳಿಗೆ ಬ್ರೇಕ್ ಬೀಳಬಹುದು. ಇದೆಕ್ಕಪ್ಪ ಅಂದ್ರೆ, ಪ್ರತಿ ೧೫ ದಿನಗಳಿಗೊಮ್ಮೆ ಭಾರತೀಯ ತೈಲ ಕಂಪನಿಗಳು ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆಯ ಆಧಾರದ ಮೇಲೆ ಬೆಲೆ ನಿಗದಿ ಪಡಿಸುತ್ತಿದ್ದು, ಪ್ರತಿ ಬ್ಯಾರಲ್ ಕಚ್ಚಾ ತೈಲದಲ್ಲಿ ಭಾರೀ ಕಡಿತವಾಗುವ ಸಾಧ್ಯತೆ ಇದ್ದು, ಶೀಘ್ರದಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ದರದಲ್ಲಿ ಇಳಿಕೆಯ ಸುದ್ದಿ ಪ್ರಕಟ ಗೊಳ್ಳುವ ಸಾಧ್ಯತೆ ಇದೆ.

Image result for petrol bunk india

ಪೆಟ್ರೋಲ್ ಹಾಗೂ ಡಿಸೇಲ್ ದರದಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆ ಆಗುವ ಸಾಧ್ಯತೆ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರಲ್‌ಗೆ ಕಚ್ಚಾ ತೈಲದ ಬೆಲೆ ಸುಮಾರು ೩೭೦೦ ರೂ.ಗೆ ಇಳಿಕೆ ಆಗುವ ಸಾಧ್ಯತೆ ಇದೆ. ಅಂದಾಜಿನ ಪ್ರಕಾರ ಪೆಟ್ರೋಲ್ ಬೆಲೆಯಲ್ಲಿ ಸುಮಾರು ೨ ರೂ. ಹಾಗೂ ಡಿಸೇಲ್‌ನಲ್ಲಿ ಸುಮಾರು ೨.೫೦ ರೂ. ಇಳಿಮುಖವಾಗುವ ಸಾಧ್ಯತೆ ಇದೆ.

ತೈಲ ಕಂಪನಿಗಳು ಪಂಚರಾಜ್ಯ ಚುನಾವಣೆಯನ್ನು ಗಮನದಲಿಟ್ಟುಕೊಂಡು ಬೆಲೆ ಪರಿಷ್ಕರಣೆ ಮಾಡಿರಲಿಲ್ಲ. ಈಗ ರಾಜ್ಯದ ಚುನಾವಣೆಯೂ ಮುಗಿದಿದ್ದು, ಫಲಿತಾಂಶ ಬಂದ ಹಿನ್ನಲೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ.

ಕಳೆದ ಎರಡು ತಿಂಗಳ ಹಿಂದೆ ಪೆಟ್ರೋಲ್ ಬೆಲೆ ೪೨ ಪೈಸೆ, ಡೀಸೆಲ್ ಬೆಲೆ ೧.೦೩ ಪೈಸೆ ಏರಿಕೆಯಾಗಿತ್ತು.

ಇತ್ತೀಚೀಗಷ್ಟೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಹಾಗೂ ಅನಿಲದ ಬೆಲೆ ಏರಿಕೆ ಬಿಸಿ ಜನ ಸಾಮಾನ್ಯರಿಗೂ ತಟ್ಟಿದೆ. ಇದರ ಪರಿಣಾಮ ಸಿಲೆಂಡರ್‌ಗಳ ಬೆಲೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದ್ದು, ೮೬ ರುಪಾಯಿ ದುಬಾರಿ ಆಗಿತ್ತು.