ಸಂಸ್ಕೃತ ಸಂಸ್ಥಾನದಲ್ಲಿ ನೌಕರಿ
ಖಾಲಿ ಹುದ್ದೆಗಳು 29
ಜನವರಿ 25ರೊಳಗೆ ಅರ್ಜಿ ಸಲ್ಲಿಸಿ
ಬುದ್ಧ ದರ್ಶನ, ಧರ್ಮಶಾಸ್ತ್ರ, ಸಂಖ್ಯಾ ಯೋಗದಲ್ಲಿ ಪಿಜಿ ಓದಿದವರಿಗೆ ಅವಕಾಶ
ಅರ್ಜಿ ಶುಲ್ಕ : 200 ರೂಪಾಯಿ
ದೆಹಲಿಯಲ್ಲಿರುವ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದಲ್ಲಿ ಖಾಲಿ ಇರುವ 29 ವಿವಿಧ ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಬೋಧಕ-ಬೋಧಕೇತರ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ವಿದ್ಯಾರ್ಹತೆ ಜೊತೆಗೆ ನಿಗದಿತ ಸೇವಾನುಭವ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ. ಆಸಕ್ತರು 2017ರ ಜನವರಿ 25ರೊಳಗೆ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ
ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್ ಮತ್ತು ಅಸೋಸಿಯೇಟ್ ಪ್ರೊಫೆಸರ್: ಬುದ್ಧ ದರ್ಶನ, ಧರ್ಮಶಾಸ್ತ್ರ, ಸಂಖ್ಯಾ ಯೋಗ, ಜೈನ ದರ್ಶನ, ಜ್ಯೋತಿಷ್ಯ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಬೋಧಕರ ನೇಮಕಾತಿ ನಡೆಯಲಿದೆ. ಆಯಾ ವಿಭಾಗಗಳಿಗೆ ಸಂಬಂಧಪಟ್ಟಂತೆ ಪಿಎಚ್.ಡಿ ವಿದ್ಯಾರ್ಹತೆ ಇರುವ ಅಭ್ಯರ್ಥಿಗಳು ಪ್ರೊಫೆಸರ್ ಮತ್ತು ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅಸಿಸ್ಟೆಂಟ್ ಪ್ರೊಫೆಸರ್ಗಳಾಗಲು ನಿಗದಿತ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ತೇರ್ಗಡೆಯಾಗಿರಬೇಕು.
ಅಸಿಸ್ಟೆಂಟ್ ಡೈರೆಕ್ಟರ್, ಕಂಟ್ರೋಲರ್ ಆಫ್ ಎಜುಕೇಶನ್, ಡೆಪ್ಯುಟಿ ಕಂಟ್ರೋಲರ್:
ಪ್ರಾಜೆಕ್ಟ್ ಆಫೀಸರ್: ಫಿಸಿಕಲ್ ಎಜುಕೇಶನ್ನಲ್ಲಿ ಸ್ನಾತಕೋತ್ತರ ಪದವೀಧರರು ಅಸಿಸ್ಟೆಂಟ್ ಡೈರೆಕ್ಟರ್ ಹುದ್ದೆಗೂ, ಸಂಬಂಧಪಟ್ಟ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಕಂಟ್ರೋಲ್ ಆಫ್ ಎಜುಕೇಶನ್, ಡೆಪ್ಯುಟಿ ಕಂಟ್ರೋಲರ್ ಮತ್ತು ಪ್ರಾಜೆಕ್ಟ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಅಕೌಂಟ್ ಆಫೀಸರ್, ಸೆಕ್ಷನ್ ಆಫೀಸರ್ ಮತ್ತು ಕ್ಯುರೇಟರ್: ಎಂಬಿಎ ವಿದ್ಯಾರ್ಹತೆ ಇರುವವರು ಅಕೌಂಟ್ ಆಫೀಸರ್ ಹುದ್ದೆಗೆ, ಪದವೀಧರರು ಸೆಕ್ಷನ್ ಆಫೀಸರ್ ಮತ್ತು ಎಂಎ (ಆಚಾರ್ಯ) ವಿದ್ಯಾರ್ಹತೆ ಇರುವವರು ಕ್ಯುರೇಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.