ಎಂಜಿನಿಯರ್‌ ಓದಿದವರಿಗೆ ಪಿಜಿಸಿಐಎಲ್‌ನಲ್ಲಿ ಉದ್ಯೋಗ ಅವಕಾಶ

0
613

ಭಾರತ ಸರ್ಕಾರದ ಅಧೀನದಲ್ಲಿರುವ ದೇಶದ ಪ್ರಮುಖ ವಿದ್ಯುತ್‌ ವಿತರಣಾ ಸಂಸ್ಥೆ ‘ಪವರ್‌ಗ್ರಿಡ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ ಲಿಮಿಟೆಡ್‌’ನಲ್ಲಿ ಎಂಜಿನಿಯರ್‌ ಓದಿದವರಿಗೆ ಹಲವು ಉದ್ಯೋಗಾವಕಾಶಗಳಿವೆ. ವಿವಿಧ ವಿಭಾಗಗಳಲ್ಲಿ ಎಂಜಿನಿಯರ್‌, ಸೂಪರ್‌ವೈಸರ್‌ ಹಾಗೂ ಆಫೀಸರ್‌ಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಖಾಲಿ ಹುದ್ದೆಗಳು 382

ಅರ್ಜಿ ಸಲ್ಲಿಸಲು ಕೊನೆ ದಿನ: ಆಗಸ್ಟ್‌ 14, 2017

ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ

ಹೆಚ್ಚಿನ ವಿವರಗಳಿಗೆ: www.powergridindia.com

ಹುದ್ದೆಗಳ ವಿವರ: 

  • ಎಲೆಕ್ಟ್ರಿಕಲ್‌ ವಿಭಾಗದಲ್ಲಿ 80 ಫೀಲ್ಡ್‌ ಎಂಜಿನಿಯರ್‌ ಹಾಗೂ 192 ಫೀಲ್ಡ್‌ ಸೂಪರ್‌ವೈಸರ್‌ ಹುದ್ದೆಗಳು ಖಾಲಿ ಇವೆ. ಸಿವಿಲ್‌ ವಿಭಾಗದಲ್ಲಿ 42 ಫೀಲ್ಡ್‌ ಎಂಜಿನಿಯರ್‌ ಹಾಗೂ 63 ಫೀಲ್ಡ್‌
  • ಸೂಪರ್‌ವೈಸರ್‌ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಇಎಸ್‌ಎಂ ವಿಭಾಗದಲ್ಲಿ 5 ಫೀಲ್ಡ್‌ ಆಫೀಸರ್‌ ಹುದ್ದೆಗಳು ಖಾಲಿ ಇವೆ.

ಅರ್ಹತೆಗಳೇನು?

  • ಸಿವಿಲ್‌ ಅಥವಾ ಪವರ್‌ ಎಂಜಿನಿಯರಿಂಗ್‌ನಲ್ಲಿ ಬಿಇ/ಬಿಟೆಕ್‌ ಅಥವಾ ಬಿಎಸ್ಸಿ ಎಂಜಿನಿಯರಿಂಗ್‌ ವಿದ್ಯಾರ್ಹತೆ ಇರುವ ಅಭ್ಯರ್ಥಿಗಳು ಫೀಲ್ಡ್‌ ಎಂಜಿನಿಯರ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
  • ಫೀಲ್ಡ್‌ ಸೂಪರ್‌ವೈಸರ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಸಿವಿಲ್‌ ಅಥವಾ ಎಲೆಕ್ಟ್ರಿಕಲ್‌ ವಿಷಯಗಳಲ್ಲಿ ಡಿಪ್ಲೊಮಾ ಕೋರ್ಸ್‌ ಪೂರ್ಣಗೊಳಿಸಿರಬೇಕು.
  • ಇನ್ನು ಫೀಲ್ಡ್‌ ಆಫೀಸರ್‌ ಹುದ್ದೆಗಳಿಗೆ ನ್ಯಾಷನಲ್‌ ರಿಸೋರ್ಸ್‌ ಮ್ಯಾನೇಜ್‌ಮೆಂಟ್‌/ಎನ್ವಿರಾನ್‌ಮೆಂಟಲ್‌ ಸೈನ್ಸ್‌/ಎನ್ವಿರಾನ್‌ಮೆಂಟಲ್‌ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.
  • ಅಭ್ಯರ್ಥಿಗಳು ಡಿಸೈನ್‌, ಎಂಜಿನಿಯರಿಂಗ್‌, ಕನ್‌ಸ್ಟ್ರಕ್ಷನ್‌, ಟೆಸ್ಟಿಂಗ್‌-ಕಮೀಷನಿಂಗ್‌ ಅಥವಾ ಸಿವಿಲ್‌ ವರ್ಕ್‌ನಲ್ಲಿ ಕನಿಷ್ಠ ಒಂದು ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು.
  • ನಿಗದಿತ ವಿದ್ಯಾರ್ಹತೆಯಲ್ಲಿ ಅಭ್ಯರ್ಥಿಗಳು ಕನಿಷ್ಠ ಶೇಕಡಾ 55 ಅಂಕಗಳೊಂದಿಗೆ ತೇರ್ಗಡೆಯಾಗಿದ್ದರೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ

ವಯೋಮಿತಿ:

ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 29 ವರ್ಷ.
ಸರ್ಕಾರಿ ನಿಯಮಾನುಸಾರ ಒಬಿಸಿ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 32 ವರ್ಷ ಹಾಗೂ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 34 ವರ್ಷ ಎಂದು ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕ:
ಫೀಲ್ಡ್‌ ಎಂಜಿನಿಯರ್‌ ಹಾಗೂ ಫೀಲ್ಡ್‌ ಆಫೀಸರ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 400 ರೂ. ಹಾಗೂ ಫೀಲ್ಡ್‌ ಸೂಪರ್‌ವೈಸರ್‌ ಹುದ್ದೆಗೆ 300 ರೂ. ಶುಲ್ಕ ಪಾವತಿಸುವಂತೆ ಸೂಚಿಸಲಾಗಿದೆ.