ಮೂಲವ್ಯಾಧಿ ಇದೆಯಂಥ ವ್ಯಥೆ ಪಡಬೇಡಿ, ಈ ಮನೆಮದ್ದನ್ನು ಪಾಲಿಸಿ ಬೇಗೆ ನಿವಾರಣೆ ಹೊಂದಿ..

0
4435

ಮೂಲವ್ಯಾಧಿಯಲ್ಲಿ  ಗುದದ್ವಾರ ಹಾಗು ಗುದನಾಳ ದಲ್ಲಿರುವ ರಕ್ತನಾಳಗಳು ಊದಿಕೊಂಡು ಉರಿಯೂತಕ್ಕೊಳಗಾಗಿರುತ್ತವೆ. ಇತ್ತೀಚಿಗೆ ಎಲ್ಲ ವಯಸ್ಸಿನವರಲ್ಲೂ ಕಾಣಿಸಿಕೊಳ್ಳುತ್ತಿರುವ ಈ ಸಮಸ್ಯೆಗೆ ಆಧುನಿಕ ಜೀವನ ಶೈಲಿ ಹಾಗು ಆಹಾರ ಪದ್ಧತಿಗಳೇ ಕಾರಣ. ಅನುವಂಶಿಕತೆ, ಸದಾ ಕುಳಿತಿರುವುದು, ನಾರಿನಂಶವಿಲ್ಲದ ಆಹಾರ ಪದಾರ್ಥಗಳ ಸೇವನೆ, ಬೊಜ್ಜು, ವ್ಯಾಯಾಮ ರಹಿತ ಜೀವನ, ಅಗತ್ಯ ನೀರು ಕುಡಿಯದಿರುವಿಕೆ ಇತರೆ ಅಂಶಗಳು ಈ ವ್ಯಾಧಿಗೆ ಮೂಲಕಾರಣವಾಗಿದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯದಿದ್ದಲ್ಲಿ ಅಧಿಕ ರಕ್ತಸ್ರಾವದಿಂದ ರಕ್ತಹೀನತೆ ಉಂಟಾಗಬಹುದು ಅಥವಾ ಕರುಳಿನ  ಕ್ಯಾನ್ಸರಿಗೂ  ಕಾರಣವಾಗಬಹುದು.

೧) ಅಂಜೂರ ಮತ್ತು ಒಣ ದ್ರಾಕ್ಷಿಯನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಅದೇ ನೀರಿನಲ್ಲಿ ಉಬ್ಬಿದ ಹಣ್ಣುಗಳನ್ನು ಕಿವಿಚಿ ಸೇವಿಸಬೇಕು ( ಸಕ್ಕರೆ ಕಾಯಿಲೆ ಇರುವವರಿಗಲ್ಲ)

source: freeimagescollection.com

೨) ಮೂಲಂಗಿ ಸಿಪ್ಪೆಯನ್ನು ತೆಗೆದು ಚಿಕ್ಕದಾಗಿ ಹೆಚ್ಚಿ ಸ್ವಲ್ಪ ನೀರಿನೊಂದಿಗೆ ರುಬ್ಬಿಕೊಳ್ಳಿ ಅದಕ್ಕೆ ಒಂದು ಚಿಟಿಕೆ ಸೈನ್ದವ ಲವಣ , ಅರ್ಧ ಹೋಳು ನಿಂಬೆ ರಸ,ಹಸಿಶುಂಠಿ ರಸವನ್ನು ಬೆರಸಿ ಸೇವಿಸಬೇಕು.

source: specialtyproduce.com
೩) ಬೀಟ್ರೂಟ್ ಸಿಪ್ಪೆತೆಗೆದು ರುಬ್ಬಿಕೊಳ್ಳಿ. ಈ ರುಬ್ಬಿದ  ಮಿಶ್ರಣಕ್ಕೆ ಒಂದು ಚಿಟಿಕೆ ಸೈನ್ದವ ಲವಣ, ಪುದಿನ ರಸ ಮತ್ತು ಒಂದು ಚಮಚ ಜೇನು ತುಪ್ಪ ಬೆರಸಿ ಸೇವಿಸುವುದರಿಂದ ಮೂಲವ್ಯಾಧಿ ನಿಯಂತ್ರಣಕ್ಕೆ ಬರುತ್ತದೆ.
source: i.ndtvimg.com
೪) ೧ ಬೀಟ್ರೂಟ್, ೧ ಕ್ಯಾರಟ್ ಮತ್ತು ಹಸಿಶುಂಠಿಯನ್ನು ರುಬ್ಬಿಕೊಂಡು ಅದರ ಜ್ಯೂಸು ಅನ್ನು ಸೇವಿಸಿದರೆ ರಕ್ತಹೀನತೆ, ಅಧಿಕ ರಕ್ತದೊತ್ತಡದ ಜೊತೆ ಜೊತೆಗೆ ಮೂಲವ್ಯಾಧಿಯು ಕಡಿಮೆಯಾಗುತ್ತದೆ.
source: mbkr-minimalistbaker.netdna-ssl.com

೫) ಕಾಲು ಚಮಚ ಅಮೃತಬಳ್ಳಿಯ ಮೃದು  ಚೂರ್ಣ, ಕಾಲು ಚಮಚ ಅಳಲೆಕಾಯಿ ಚೂರ್ಣ, ೧ ಚಿಟಿಕೆ ಸೈನ್ದವ ಲವಣ ಗಳನ್ನು ಸೇರಿಸಿ ಅದಕ್ಕೆ ಒಂದು ಲೋಟ ಸಿಹಿ ಮಜ್ಜಿಗೆಯನ್ನು ಬೆರೆಸಿ ಸೇವಿಸಬೇಕು.

೬) ಬೆಳಿಗ್ಗೆ ಎದ್ದ ಕೂಡಲೇ ಒಂದು ಲೀ. ಬೆಚ್ಚಗಿನ ನೀರನ್ನು ಒಮ್ಮೆಲೇ ಕುಡಿಯುವುದರಿಂದ ಮಲವಿಸರ್ಜನೆ ಸರಾಗವಾಗಿ ಆಗುತ್ತದೆ.

source: freehealthyfood.com

೭) ಲೋಳೆರಸದ ತಿರುಳನ್ನು ಮೂಲವ್ಯಾಧಿಯ ಮೊಳಕೆಗೆ ಹಚ್ಚುವುದರಿಂದ ಉರಿ, ನೋವು,ತುರಿಕೆ ಕಡಿಮೆಯಾಗುತ್ತದೆ.

೮) ಒಂದು ದೊಡ್ಡ ಟಬ್ಬಿಗೆ ಬೆಚ್ಚಗಿನ ನೀರಿನ ಜೊತೆ ಸೈನ್ದವ ಲವಣ ಹಾಕಿ ಅದರಲ್ಲಿ ೨೦ ನಿಮಿಷಗಳ ಕಾಲ ಕುಳಿತುಕೊಳ್ಳುವುದರಿಂದ ಮೂಲವ್ಯಾಧಿಯು ನೋವು ಕಡಿಮೆಯಾಗುತ್ತದೆ.

೯) ದಿನಕ್ಕೆ ಕನಿಷ್ಠ ಅರ್ಧ ಗಂಟೆ ಲಘು ವ್ಯಾಯಾಮವನ್ನು ಮಾಡಿ.

೧೦) ಆದಷ್ಟು ಹೆಚ್ಚಾಗಿ ಹಣ್ಣು ಮತ್ತು ಹಸಿ ತರಕಾರಿಗಳನ್ನು ಸೇವಿಸಿ ಇದರಿಂದ ನಾರಿನಂಶಗಳು ದೊರೆಯುವುದರಿಂದ ಕರುಳಿನ ಆರೋಗ್ಯ ವೃದ್ಧಿಸುತ್ತದೆ.