ಶಕ್ತಿಯ ಆಗರ ಅನಾನಸ್!!!

0
2062

ಹೊರಗೆ ಮುಳ್ಳಿನಂತಹ ಒರಟಾದ ಹೊದಿಕೆಯಿದ್ದು ಒಳಗೆ ಸಿಹಿ-ಹುಳಿ ಮಿಶ್ರಿತ ರುಚಿಯ, ಹಳದಿ-ಬಂಗಾರ ಬಣ್ಣದ ತಿರುಳು ಇರುವ ಅನಾನಸ್ ಪೌಷ್ಟಿಕಾಂಶ ತುಂಬಿರುವ ಹಣ್ಣು. ಒರಟು-ಗಟ್ಟಿಯಾದ ಸಿಪ್ಪಿ ಇರುವುದರಿಂದ ಸುಲಭವಾಗಿ ತಿನ್ನಲು ಸಾಧ್ಯವಿಲ್ಲ. ಹಾಗೆಂದು ತಿನ್ನದೆ ನಿಮಗೆ ಇದರಿಂದ ದೊರೆಯುವ ಪೌಷ್ಟಿಕಾಂಶ ಇಲ್ಲದಂತಾಗುತ್ತದೆ. ಹಾಗಾದರೆ ಇದರಲ್ಲಿ ಏನೇನಿದೆ ನೋಡುವ ಬನ್ನಿ.ಅನಾನಸ್‍ನಲ್ಲಿ ಮಾಂಸಾ ಹಾರದಲ್ಲಿರುವಂತಹ ಕಿಣ್ವಗಳಿರುತ್ತವೆ. ಹುಳಿಮಿಶ್ರಿತ ರುಚಿಯ ಅನಾನಸ್‍ನಲ್ಲಿ ಯಥೇಚ್ಛವಾಗಿ ವಿಟಮಿನ್ ಸಿ ಹಾಗೂ ನಾರಿನಂಶ ಇದೆ. ಮೆದುಳಿಗೆ ಅಗತ್ಯವಾದ ಮ್ಯಾಂಗನೀಸ್, ನೈಸರ್ಗಿಕ ಸಕ್ಕರೆ ಅಂಶಗಳಾದ ಫ್ರುಟ್ಕೋಸ್ ಹಾಗೂ ಗ್ಲೂಕೋಸ್ ಅಂಶಗಳಿವೆ. ಹಣ್ಣನ್ನು ಹಾಗೇ ತಿನ್ನುವುದಲ್ಲದೆ ಹಲವು ಆಹಾರ ಪದಾರ್ಥಗಳಿಗೆ ಸೇರಿಸಿ ಫ್ರೂಟ್ ಸಲಾಡ್, ಜ್ಯೂಸ್ ರೂಪದಲ್ಲೂ ಸೇವಿಸಬಹುದು.

ಸೀಸನಲ್ ಫ್ರುಟ್ ಅನಾನಸ್ ಹಣ್ಣಿನಲ್ಲಿರುವ ಔಷಧೀಯ ಗುಣಗಳು :

• ದಿನವೂ ಊಟದ ನಂತರ ಅನಾನಸ್ ಹಣ್ಣಿನ ಹೋಳುಗಳಿಗೆ ಸ್ವಲ್ಪ ಉಪ್ಪು ಮತ್ತು ಸ್ವಲ್ಪ ಕರಿಮೆಣಸಿನ ಪುಡಿಯನ್ನು ಹಚ್ಚಿ ಸೇವಿಸುವುದರಿಂದ ಅಜೀರ್ಣ ರೋಗ ದೂರವಾಗುತ್ತದೆ.
• ಅನಾನಸ್ ಹಣ್ಣಿನ ಹೋಳುಗಳಿಗೆ ಸ್ವಲ್ಪ ಕಾಳುಮೆಣಸಿನ ಪುಡಿಯನ್ನು ಹಚ್ಚಿ ಸೇವಿಸುವುದರಿಂದ ಆಮ್ಲಪಿತ್ತ ದೂರವಾಗುತ್ತದೆ.
• ಅನಾನಸ್ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಗಂಟಲು ಬೇನೆ ಗುಣವಾಗುತ್ತದೆ.
• ಪ್ರತಿದಿನ ತಾಜಾ ಅನಾನಸ್ ಹಣ್ಣನ್ನು ಸೇವಿಸುವುದರಿಂದ ಹೃದಯದ ದುರ್ಬಲತೆ ದೂರವಾಗುತ್ತದೆ.
• ಮೂತ್ರ ಕಟ್ಟುವುದು, ಪಿತ್ತಕೋಶ ಊದಿಕೊಳ್ಳುವುದು, ಕಣ್ಣಿನ ಸುತ್ತಮುತ್ತ ಊದಿಕೊಳ್ಳುವುದು ಮುಂತಾದ ತೊಂದರೆಗಳಿಗೆ ತಾಜಾ ಅನಾನಸ್ ಹಣ್ಣನ್ನು ತಿಂದು ಹಾಲು ಕುಡಿಯಬೇಕು. ಬೇರೆ ಏನನ್ನೂ ಸೇವಿಸಬಾರದು. ಹೀಗೆ ಮಾಡುವುದರಿಂದ ಒಂದು ವಾರದಲ್ಲಿ ಗುಣವಾಗುವುದು.
• ಅನಾನಸ್ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಧೂಮಪಾನದಿಂದ ಉಂಟಾಗುವ ಅನೇಕ ದುಷ್ಪರಿಣಾಮಗಳು ದೂರವಾಗುತ್ತವೆ.
• ಅನಾನಸ್ ಹಣ್ಣಿನ ರಸವನ್ನು ಕಜ್ಜಿ, ತುರಿಕೆ ಇದ್ದಲ್ಲಿ ಹಚ್ಚಿ ತಿಕ್ಕಿದರೆ ವಾಸಿಯಾಗುತ್ತವೆ.
• ಅನಾನಸ್ ಹಣ್ಣಿಗೆ ಕರಿಮೆಣಸಿನ ಪುಡಿಯನ್ನು ಹಾಕಿ ಸೇವಿಸಿದರೆ ಕೆಮ್ಮು, ಕಫಾ ಕಡಿಮೆ ಆಗುತ್ತದೆ.
• ಅನಾನಸ್ ಹಣ್ಣಿನ ಹೋಳುಗಳನ್ನು ಜೇನುತುಪ್ಪದೊಡನೆ ಸೇವಿಸುವುದರಿಂದ ಯಕೃತ್ತಿನ ದೋಷ ಮತ್ತು ಅರಿಶಿನ ಕಾಮಾಲೆ ಗುಣವಾಗುತ್ತದೆ.