ಚೀನಾದಲ್ಲಿ ಉಗಮವಾದ ಪಿಂಗಾಣಿ ಹಿನ್ನಲೇ

0
621

ಪಿಂಗಾಣಿಯು ಚೀನದಲ್ಲಿ ಉಗಮವಾಯಿತು ಎಂಬ ಸಾಮಾನ್ಯ ನಂಬಿಕೆಯಿದೆ. ಅರೆ-ಪಿಂಗಾಣಿಉ ಸಲಕರಣೆ ವಸ್ತುಗಳನ್ನು ಸುಮಾರು ಕ್ರಿ.ಪೂ. 1600 ವರ್ಷಗಳಿಂದಲೂ ಬಳಸಲಾಗುತ್ತದೆ. ಪೂರ್ವಚೀನಾದ ಹ್ಯಾನ್ ಮನೆತನದ ಆಳ್ವಿಕೆಯಷ್ಟೋತ್ತಿಗೆ (ಕ್ರಿ.ಪೂ. 2ನೆಯ ಶತಮಾನ) ಹೊಳಪಿನ ಪಿಂಗಾಣಿಯ ಅಭಿವೃದ್ಧಿಪಡಿಸಲಾಗಿತ್ತು. ಪ್ರಾಚೀನ ಚೀನಿಯರು ಸತ್ತವರ ಜೊತೆಯಲ್ಲಿ ಪಿಂಗಾಣಿ ಮಡಿಕೆಗಗಳು. ಪ್ರಾಣಿಗಳು ಹಾಗೂ ಅವರು ಬದುಕಿದ್ದ ವೇಳೆಯಲ್ಲಿ ಅವರಿಗೆ ಪ್ರಿಯವಾಗಿದ್ದ ವಸ್ತುಗಳನ್ನು ಹೂಳುತ್ತಿದ್ದರು.

ಚೀನಿಯರು ತೆಳುವಾದ ನೂಲಿನ ಉಡುಪನ್ನು ಧರಿಸುತ್ತಿದ್ದರು. ಶಾಂಗ್ ಜನತೆ ರೇಷ್ಮೆಯನ್ನು ಸಹ ಬಳಸುತ್ತಿದ್ದರು. ರೇಷ್ಮೆ ಹುಳುಗಳ ಬೇಸಾಯದಲ್ಲೂ ತೊಡಗಿದ್ದರು. ರೇಷ್ಮೆ ಉತ್ಪಾದನೆಯ ಪ್ರಮುಕ ಉದ್ಯಮವಾಗತೊಡಗಿತ್ತು. ಚೀನಾದವರು ಅತ್ಯುತ್ತಮವಾದ ಮಡಿಕೆಗಳನ್ನು ತಯಾರಿಮಾಡಿದ್ದರು. ಪಿಂಗಾಣಿಯ ವಿವಿಧ ವಸ್ತುಗಳನ್ನು ತಯಾರಿಸುವುದನ್ನು ಕಲಿತಿದ್ದರು. ಪೂರ್ವಿಕರನ್ನು ಪೂಜಿಸುವ ಅಭ್ಯಾಸವು ಇದರಲ್ಲಿ ಜನಪ್ರಿಯವಾಗಿತ್ತು. ಸತ್ತ ಮನುಷ್ಯನು ಆತ್ಮವಾಗಿ ಪರಿವರ್ತಿತವಾಗುವುದು ಹಾಗೂ ಆ ಆತ್ಮಕ್ಕೆ ವಿಶೇಷ ಶಕ್ತಿಗಳಿದ್ದವು ಎಂಬ ನಂಬಿಕೆ ಅವರದ್ದು. ಸತ್ತ ಮನುಷ್ಯನ ದೇಹವನ್ನು ಶವಸಂಸ್ಕಾರ ಮಾಡಿ ಅದರೊಂದಿಗೆ ಮರದ ವಸ್ತುಗಳು, ಮಡಿಕೆ, ಕಂಚಿನ ಪಾತ್ರೆಗಳು ಇತ್ಯಾದಿಗಳನ್ನು ಸಮಾಧಿಯಲ್ಲಿ ಇಡುತ್ತಿದ್ದರು. ರಾಜರುಗಳು ಶವಗಾರ ಸಾಕಷ್ಟು ವಿಶಾಲವಾಗಿತ್ತು. ಚೀನಿಯರ ಲಿಖಿತ ಪರಂಪರೆಯು ಚಿತ್ರಲಿಪಯಿಂದ ಪ್ರಾರಂಭವಾಗಿ ವೈಚಾರಿಕ ಸಂದೇಶವನ್ನು ನೀಡುವ ಲಿಪಿಯಾಗಿ ಪರಿವರ್ತಿತವಾಯಿತು. ಬರಹಗಾರರು ರೇಷ್ಮೆ ಹಾಗೂ ಬಿದಿರಿನ ಚಕ್ಕೆಗಳ ಮೇಲೆ ಲಿಪಿಯನ್ನು ಮೂಡಿಸುತ್ತಿದ್ದರು. ಪಿಂಗಾಣಿ ಹಾಗೂ ಚೀನಾದ ಮಹಾಗೋಡೆಯು ಈ ಸಂಸ್ಕೃತಿಯ ವಿಶಿಷ್ಟ ಕೊಡುಗೆಯಾಗಿದೆ.