ಮಹಿಳೆಯರ ಸುರಕ್ಷತೆಗಾಗಿ ಬರುತ್ತಿವೆ ಪಿಂಕ್ ಆಟೋ, ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

0
6507

ಮಹಿಳಾ ಸಬಲೀಕರಣ ಬರೀ ಬಾಯಿಮಾತಿನಲ್ಲಿ ಹೇಳಿದರೆ ಸಾಲುವುದಿಲ್ಲ ಅದನ್ನು ಸಾದಿಸಿ ತೋರಿಸಬೇಕು ಎಂದು ರಾಜಧಾನಿ ಬೆಂಗಳೂರಿನ ಬಿಬಿಎಂಪಿ ಮಹಿಳೆಯರಿಗಾಗಿ ಒಂದು ಹೊಚ್ಚ ಹೊಸ ಯೋಜನೆಯನ್ನು ಹೊರತರುತ್ತಿದೆ. ಏನದು ವಿಶೇಷ ಯೋಜನೆ, ಯಾರೆಲ್ಲ ಸದುಪಯೋಗ ಪಡಿಸಿಕೊಳ್ಳಬಹುದು ಎಂದು ತಿಳಿದುಕೊಳ್ಳಲು ಮುಂದೆ ಓದಿ.

ಬಿಬಿಎಂಪಿಯ ಕಲ್ಯಾಣ ಕಾರ್ಯಕ್ರಮದಡಿ ನಗರದ 500 ಪಿಂಕ್ ಆಟೋ ರಿಕ್ಷಾಗಳನ್ನು ಸಬ್ಸಿಡಿ ದರದಲ್ಲಿ ವಿತರಣೆ ಮಾಡಲು ಚಿಂತನೆ ನಡೆಸುತ್ತಿದೆ. ಈ ಆಟೋ ರಿಕ್ಷಾಗಳನ್ನು ಮಹಿಳೆಯರು ಮತ್ತು ಪುರುಷರಿಬ್ಬರಿಗೂ ಆಟೋಗಳನ್ನು ನೀಡಲಾಗುವುದು ಆದರೆ, ಮಹಿಳೆಯರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.

ಬೇರೆ ಆಟೋಗಳಿಗೆ ಮತ್ತು ಈ ಪಿಂಕ್ ಆಟೋಗಳಿಗೆ ಏನು ವ್ಯತ್ಯಾಸ ಅಂತೀರ. ಈ ಪಿಂಕ್ ಆಟೋಗಳಲ್ಲಿ ಸಿಕ್ಕಾಪಟ್ಟೆ ಹೈಟೆಕ್ನಾಲಜಿಯನ್ನು ಉಪಯೋಗಿಸಲಾಗಿದೆ, ವಿಶೇಷವಾಗಿ ಮಹಿಳಾ ಪ್ರಯಾಣಿಕರ ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಸಿಸಿಟಿವಿ ಕ್ಯಾಮರಾ ಮತ್ತು ಜಿಪಿಎಸ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ಇನ್ನು ಪಿಂಕ್ ಆಟೋ ಪಡೆಯುವ ಪುರುಷರಿಗೆ ಮಹಿಳಾ ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸುವ ಕುರಿತು ವಿಶೇಷ ತರಬೇತಿ ನೀಡಲಾಗುತ್ತದೆ. ಮಾರ್ಚ್ ಅಥವಾ ಏಪ್ರಿಲ್ ವೇಳೆಗೆ ಆಟೋಗಳನ್ನು ವಿತರಣೆ ಮಾಡಲಾಗುತ್ತದೆ. ಪಾಲಿಕೆಯಿಂದ 80 ಸಾವಿರ ರೂ. ಸಬ್ಸಿಡಿ ನೀಡಲಾಗುತ್ತದೆ, ಉಳಿದ ಹಣವನ್ನು ಫಲಾನುಭವಿಗಳೇ ಭರಿಸಬೇಕು.