ಮಹಿಳಾ ಪ್ರಯಾಣಿಕರಿಗೆ ಸಿಹಿ ಸುದ್ದಿ; ಇನ್ಮುಂದೆ ನೀವು ಪ್ರಯಾಣಿಸುವ ಕ್ಯಾಬ್ ಗೆ ಮಹಿಳೆಯರೇ ಚಾಲಕರು..

0
563

ಮಹಿಳೆಯರು ಯಾವುದಕ್ಕೂ ಕೆಡಿಮೆ ಇಲ್ಲ ಅನ್ನೋದಕ್ಕೆ ಸದ್ಯ ಅವರು ಮಾಡುತ್ತಿರುವ ಉದ್ಯೋಗಗಳು ಮತ್ತು ಸಾಹಸಗಳೆ ಕಾರಣವಾಗಿವೆ. ಮಹಿಳೆ ಮನೆಯ ಕೆಲಸಕ್ಕೆ, ಮಕ್ಕಳ ಸೇವೆ ಮಾಡಲು ಮಾತ್ರ ಮಿಸಲು ಎಂಬ ವಾಕ್ಯ ಹಿಂದೆ ಇತ್ತು ಈಗ ದೊಡ್ಡ ದೊಡ್ಡ ಹುದ್ದೆಗಳಿಂದ ಹಿಡಿದು ಆರ್ಮಿಯಲ್ಲಿವೂ ಕೂಡ ಸೇವೆ ಸಲ್ಲಿಸುತ್ತಿರುವುದು ಸಾಹಸವೇ ಸರಿ. ಅದದಷ್ಟೇ ಅಲ್ಲದೆ ವಾಹನ ಚಾಲನೆ ಮಾಡುವಲ್ಲಿ ಮಹಿಳೆಯರು ಪರಿಣಿತರಾಗುತ್ತಿದ್ದಾರೆ. ಇದರಿಂದ ಯಾರ ಹಗ್ಗಿಲದೆ ಸ್ವತಹ ದುಡಿದು ಕೆಲಸ ಮಾಡಿ ಸಂಪಾದಿಸುವ ಕಲೆಯನ್ನು ಕಲಿತುಕೊಂಡಿದ್ದಾರೆ. ಇದಕ್ಕೆ ನಿದರ್ಶನವಾಗಿ ಬೆಂಗಳೂರಿನಲ್ಲಿ ಕ್ಯಾಬ್ ಚಾಲನೆ ಮಾಡಲು ಸಿದ್ದರಾಗಿದ್ದಾರೆ.

ಹೌದು ಮಹಿಳೆಯರಿಗೆ ಗಂಡು ಮಕ್ಕಳು ಸುರಕ್ಷತೆ ನೀಡುತ್ತಾರೆ ಎಂಬ ಮಾತು ಮೊದಲ್ಲಿತ್ತು ಈಗ ಮಹಿಗೆ ಮಹಿಳೆಯೇ ಸುರಕ್ಷಿತ ಎನ್ನುತ್ತಿದ್ದಾರೆ. ಆದರೆ ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಕಾಮುಕರ ಹಾವಳಿ ಹೆಚ್ಚುತ್ತಿದೆ. ಕೆಲ ಕ್ಯಾಬ್ ಚಾಲಕರು, ಆಟೋ ಚಾಲಕರು ಯುವತಿಯರೊಂದಿಗೆ ಅಸಭ್ಯವಾಗಿ ವರ್ತನೆ ತೋರುತ್ತಿದ್ದು, ಹಗಲಿನಲ್ಲೇ ಮಹಿಳೆಯರೊಂದಿಗೆ ದುರ್ವರ್ತನೆ ತೋರುತ್ತಿದ್ದಾರೆ. ಹೀಗಾಗಿ ಮಹಿಳೆಯರಿಗೆ ಸುರಕ್ಷತೆ ನೀಡುವ ಮಹತ್ತರವಾದ ಧ್ಯೇಯವನ್ನಿಟ್ಟುಕೊಂಡು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರಿಗೆ ಮಹಿಳಾ ಕ್ಯಾಬ್​ ಚಾಲಕರ ಹೊಸ ಸೇವೆಯನ್ನು ಆರಂಭಿಸಲಾಗಿದೆ.

ಇದೆಲ್ಲ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಹಯೋಗದಲ್ಲಿ ಈ ದಿಟ್ಟ ಹೆಜ್ಜೆ ಇಟ್ಟಿದ್ದು, ಮಹಿಳೆಯರ ರಕ್ಷಣೆಗೆ ಮುಂದಾಗಿದ್ದಾರೆ. ಈ ಬೆಳವಣಿಗೆಯಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತೆರಳುವ ಮಹಿಳಾ ಪ್ರಯಾಣಿಕರು ಈ ಮಹಿಳಾ ಕ್ಯಾಬ್ ಚಾಲಕರ ರಕ್ಷಣೆಯಲ್ಲಿ ಪ್ರಯಾಣಿಸಬಹುದಾಗಿದೆ. ಹಾಗೆಯೇ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶರಾಗಿರುವ ಕುಮಾರ್​ ಪುಷ್ಕರ್​ ಈ ಪಿಂಕ್​ ಕ್ಯಾಬ್​ ಸೇವೆಯ ರೂವಾರಿಯಾಗಿದ್ದಾರೆ.

ಪಿಂಕ್​ ಕ್ಯಾಬ್​ ಸೇವೆ ಉದ್ದೇಶಗಳೇನು?

ಕುಮಾರ್​ ಪುಷ್ಕರ್​ ಹೇಳುವ ಪ್ರಕಾರ, ಪಿಂಕ್​ ಕ್ಯಾಬ್​ ಸೇವೆ ಎರಡು ಉದ್ದೇಶಗಳನ್ನು ಇಟ್ಟುಕೊಂಡಿದ್ದು. ಮಹಿಳಾ ಪ್ರಯಾಣಿಕರ ಸುರಕ್ಷತೆ ಮೊದಲ ಆದ್ಯತೆಯಾಗಿದ್ದು, ಮಹಿಳೆಯರನ್ನು ಕಾಮುಕರಿಂದ ರಕ್ಷಿಸುವುದು ಮತ್ತು. ಎರಡನೆಯದು, ಮಹಿಳಾ ಚಾಲಕರು ಸ್ವಂತ ಉದ್ಯೋಗ ಪಡೆದು ಆರ್ಥಿಕವಾಗಿ ಸದೃಢರಾಗಲು ಸಹಕಾರಿಯಾಗಿದೆ. ಈ ಯೋಜನೆ ಜಾರಿಗೆ ತಂದಿರುವುದು ಗ್ರಾಮೀಣ ಭಾಗದ ಮಹಿಳಾ ಡ್ರೈವರ್​ಗಳಿಗೆ ಆರ್ಥಿಕವಾಗಿ ಸದೃಢರಾಗಲು ಉತ್ತಮ ಅವಕಾಶ ಸಿಕ್ಕಂತಾಗಿದೆ. ಅಷ್ಟೇ ಅಲ್ಲದೇ ಸ್ವಸುರಕ್ಷತೆಗೂ ಸಹಕಾರಿಯಾಗಿ ಮಹಿಳೆಯರಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತಹ ಹೊಸ ಯೋಜನೆಯಾಗಿದೆ ಹಾಗೆಯೇ ಕ್ಯಾಬ್ ಚಾಲಕರ ಯಾವುದೇ ಕಿರಿಕಿರಿ ಇಲ್ಲದೇ ನೆಮ್ಮದಿಯಾಗಿ ಪ್ರಯಾಣಿಸಲು ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.

ಈ ಯೋಜನೆಯಲ್ಲಿ ಏನೆಲ್ಲಾ ಸೌಲಭ್ಯ?

  • ಈ ಸೇವೆಯ ದರ ಪ್ರತಿ ಕಿ.ಮೀ.ಗೆ 21.50 ರೂ. ಇರುತ್ತದೆ.
  • ಬೆಳಗ್ಗೆ 6 ಗಂಟೆಯಿಂದ ರಾತ್ರಿ 11.59 ರವರೆಗೆ ಕ್ಯಾಬ್​ ಸೌಲಭ್ಯ ಲಭ್ಯವಿರುತ್ತದೆ.
  • ರಾತ್ರಿ ಪ್ರಯಾಣಕ್ಕೆ ಅಂದರೆ, 12 ಗಂಟೆಯ ನಂತರದ ಪ್ರಯಾಣ ದರ ಪ್ರತಿ ಕಿ.ಮೀ ಗೆ 23.50 ರೂ. ಇರುತ್ತದೆ.
  • ಮಹಿಳಾ ಚಾಲಕರು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ತಂತ್ರಗಳು ಹಾಗೂ ವಿವಿಧ ಭಾಷೆಗಳನ್ನು ಕಲಿತಿರುತ್ತಾರೆ.
  • ಈ ಕ್ಯಾಬ್​ಗಳು ಸುರಕ್ಷಿತ ಫೀಚರ್ಸ್​​ಗಳನ್ನು ಒಳಗೊಂಡಿದೆ.
  • ಜಿಪಿಆರ್​ಎಸ್​ ಟ್ಯ್ರಾಕಿಂಗ್ ಮತ್ತು ಎಸ್​ಒಎಸ್​ ಸ್ವಿಚ್​ಗಳನ್ನು ಹೊಂದಿದೆ.
  • ಮಹಿಳಾ ಪ್ರಯಾಣಿಕರು ಒಬ್ಬರಿರಲಿ, ಹೆಚ್ಚು ಜನ ಇರಲಿ ಈ ಸೇವೆ ಲಭ್ಯವಿರುತ್ತದೆ.

Also read: ಭಾರತದ ಯುದ್ಧವಿಮಾನದ ಮೊದಲ ಮಹಿಳಾ ಪೈಲೆಟ್ ಬಗ್ಗೆ ತಿಳಿದುಕೊಳ್ಳಿ, ಪ್ರತಿಯೊಬ್ಬ ಬಾಲಕಿಗೆ ಹಾಗೂ ಯುವತಿಯರಿಗೆ ಈಕೆ ಸ್ಫೂರ್ತಿ..