ಸೌಮ್ಯತೆಗಾಗಿ ಬಳಸಿ ಗುಲಾಬಿ ಬಣ್ಣ

0
646

ಯಾರಾದರೂ ನಿಮ್ಮ ಮೆಚ್ಚಿನ ಬಣ್ಣ ಯಾವುದು ಎಂದು ಕೇಳಿದರೆ ಅವರಿಗಿಷ್ಟವಾದ ಬಣ್ಣದ ಹೆಸರುಗಳನ್ನು ಸರದಿಯಲ್ಲಿ ಹೇಳುತ್ತಿರುತ್ತಾರೆ. ಯಾವುದೇ ಸರದಿ ಇರಲಿ ಅಲ್ಲಿ ಗುಲಾಬಿ ಬಣ್ಣಕ್ಕೆ ಪ್ರಾಶಸ್ತ್ಯ ಇರುತ್ತದೆ. ಕೆಲವರು ಪ್ರಾರಂಭದಲ್ಲಿ ಹೇಳಿದರೆ ಹಲವರು ಕೊನೆಯಲ್ಲಿ ‘ಈ ಬಣ್ಣವು ನನಗೆ ಇಷ್ಟ’ ಎಂದು ನೆನಪಿಸಿಕೊಂಡಂತೆ ಹೇಳುತ್ತಾರೆ.

ಎಲ್ಲರೂ ಇಷ್ಟಪಡುವ ಬಣ್ಣ: ಮಲ್ಲಿಗೆಗೂ ಬಹಳ ಅಂತರವಿದೆ. ಆದರೆ ಅದರ ಹೊಂದಾಣಿಕೆಯ ಬಗ್ಗೆ ಹೆಚ್ಚಿನವರಿಗೆ ತಿಳಿದಿರಲಾರದು. ಹೊಸದಾಗಿ ಮದುವೆಯಾದ ವರನು ತನ್ನವಳಿಗಾಗಿ ಮಲ್ಲಿಗೆಯೊಡನೆ ಗುಲಾಬಿಯನ್ನು ತೆಗೆದುಕೊಂಡು ಹೋಗುತ್ತಾನೆ. ಏಕೆಂದರೆ ಸುವಾಸನೆಯೊಂದಿಗೆ ಆ ಗಿಲಾಬಿ ಹೂವಿನ ಬಣ್ಣವು ಆಕರ್ಷಿಸುತ್ತದೆ ಎಂಬ ಕಾರಣಕ್ಕೆ.

ಒಬ್ಬ ಸಾಮಾನ್ಯ ರೋಡ್ ರೋಮಿಯೋನಿಂದ ಹಿಡಿದು ಸಿನಿಮಾದಲ್ಲಿ ನಾಯಕನಾಗುವ ಹುಡುಗನಿಗೂ ಈ ಬಣ್ಣದ ಗುಲಾಬಿ ಬೇಕೇ ಬೇಕು ಪ್ರಪೋಸ್ ಮಾಡಲು. ಆದರೆ ಆ ಬಣ್ಣದ ಕಾರಮತ್ತು ಸೋಸ್ವೀಟ್ ಅಂತಾರೆ ತಿಳಿದವರು. ಯಾವುದೇ ಶುಭಕಾರ್ಯಕ್ಕೆ ನಾಂದಿ ಹಾಡಲು ಗುಲಾಬಿಯನ್ನು ಬಳಸುತ್ತಾರೆ. ಆ ಗುಲಾಬಿ ‘ಸೌಂದರ್ಯ’, ಅದರ ಬಣ್ಣ ಎಷ್ಟು ಕಣ್ಣು ತುಂಬಿ ಕೊಂಡರೂ ಸಾಲದೆಂಬಂತೆ ಭಾಸವಾಗುತ್ತಿರುತ್ತದೆ.

ಕಾಡುವ ಬಣ್ಣ: ಯಾವುದೇ ಬಣ್ಣವನ್ನು ತೆಗೆದುಕೊಳ್ಳಿ ಆದರೆ ಈ ಬಣ್ಣ ಬಹಳ ಬೇಗ ನಮ್ಮನ್ನು ಆಕರ್ಷಿಸಿ ಸೂರೆ ಮಾಡಿಬಿಡುತ್ತದೆ. ದೂರದಿಂದಲೇ ದೃಷ್ಟಿಬೊಟ್ಟಿನಂತೆ ಗೋಚರಿಸುವ ಈ ಬಣ್ಣಗಳಿಗಿಂತಲೂ ಈ ಬಣ್ಣವನ್ನು ಹೆಚ್ಚು ಬಳಸಲಾಗುತ್ತದೆ.

ಮಾತು ಬಿಟ್ಟ ಮುಗುದೆಗೆ ಮುನಿಸು ಬಿಡಿಸಲು ಮೊದಲು ಕೊಡುವುದು ಈ ಬಣ್ಣವನ್ನು ಹೆಚ್ಚಾಗಿ ಬಳಸುತ್ತಾರೆ. ತಾರೆಯರಿಗೂ ಈ ಬಣ್ಣ ಹೋಕುಳಿಯಂತೆ. ಮಾರುಕಟ್ಟೆಯಲ್ಲಿ ಈ ಬಣ್ಣಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ. ನಮ್ಮ ದೇಶದ ವ್ಯಾಪಾರ- ವಾಣಿಜ್ಯೋದ್ಯಮದಲ್ಲಿ ಈ ಬಣ್ಣ ಹೊತ್ತ ಗುಲಾಬಿಗೆ ಹೆಚ್ಚಿನ ಬೇಡಿಕೆ ಇದೆ.

ಗುಲಾಬಿ ಬಣ್ಣದಲ್ಲಿ ಎಲ್ಲವೂ ಇದೆ: ಗುಲಾಬಿ ಬಣ್ಣ ಮತ್ತು ಹಸಿರು ಬಣ್ಣ ಗಂಡ-ಹೆಂಡತಿಯಂತೆ, ಸಮುದ್ರದೊಳಗಣ ಉಪ್ಪು-ಮರದ ಮೇಲಿನ ನೆಲ್ಲಿಯ ಹಾಗೆ, ಕೊಗಿಲೆ ಮತ್ತು ವಸಂತಕ್ಕೂ ಇರುವ ಹೊಂದಾಣಿಕೆಯ ರೀತಿ ಈ ಬಣ್ಣಗಳು ಹೊಂದಿಕೆಯಾಗುತ್ತವೆ. ಗುಲಾಬಿ ಮತ್ತು ಹಸಿರಿನ ಕಾಂಬಿನೇಷನ್ ನಿಜಕ್ಕೂ ವಂಡರ್ ಪುಲ್…!

ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಗುಲಾಬಿಯನ್ನು ಹಾಗೂ ಗುಲಾಬಿ ಬಣ್ಣವನ್ನು ಉಪಯೋಗಿಸಬಹುದಾಗಿದೆ. ಜನ್ಮರಾಶಿಯ ಹರಳನ್ನು ಈ ಬಣ್ಣದಿಂದ ಮಾಡಿಸಿದರೆ ಉತ್ತಮ ಆರೋಗ್ಯ-ಅಭಿವೃದ್ಧಿ ಲಭಿಸುತ್ತದೆ.

ಈ ಬಣ್ಣದ ಸ್ವಭಾವ: ಯಾರಾದರೂ ನಿಮ್ಮಲ್ಲಿ ಗುಲಾಬಿ ಬಣ್ಣವನ್ನು ಮೆಚ್ಚಿದರೆ ಅದರಲ್ಲಿ ವಾತ್ಸಲ್ಯಾದಗಣಿ ಶೇಖರಣೆಯಾಗಿರುತ್ತದೆ. ಎಲ್ಲರಲ್ಲೂ ಪ್ರೀತಿ ತೋರುವ, ಸ್ವಭಾವಕ್ಕೆ ಹೊಂದಿಕೊಳ್ಳುವ ಜೊತೆಗೆ ಅರ್ಥಮಾಡಿಕೊಳ್ಳುವ ಔದಾರ್ಯ ಅವರದಾಗಿರುತ್ತದೆ. ಈ ಬಣ್ಣವನ್ನು ಆಪೇಕ್ಷಿಸುವವರಲ್ಲಿ ಮನೋಸಂಕಲ್ಪ ದೃಢವಾಗಿರುವುದಿಲ್ಲ. ಸ್ವಲ್ಪಹಿಂಜರಿಕೆಯವರಾಗಿದ್ದು ಯಾವುದೇ ಒಳಗುಟ್ಟುಗಳನ್ನು ‘ಕೀ’ಯನ್ನು ಬಳಸುವುದೇ ಇಲ್ಲ.

ಮಕ್ಕಳ ಮನಸ್ಸಿನ ಸ್ವಭಾವವನ್ನು ಮೈಗೂಡಿಸಿ ಕೊಂಡು ಎಲ್ಲರಿಗೂ ಸಹಾಯ ಮಾಡಲು ಇರುವ ನಿಸ್ಸೀಮರು. ಎಲ್ಲವನ್ನು ಸ್ವೀಕರಿಸಿ, ಎಲ್ಲರನ್ನೂ ಪ್ರೀತಿಸುತ್ತಾರೆ. ಒಂದಿಷ್ಟು ಸಂತೋಷದೊಂದಿಗೆ ಜಿಗುಪ್ಸೆಯು ಇವರನ್ನು ಆಳುತ್ತಿರುತ್ತದೆ. ಗುಲಾಬಿ ಬಣ್ಣವೆಂದರೆ ಸಾಕು ಅದು ಹುಡುಗಿಯರನ್ನು ಗುರುತಿಸುವ ಮರ್ಗವೆಂಬುದು ಹುಡುಗರು ಕೀಟಲೆ ಮಾಡುವುದನ್ನು ನೀವು ಕೇಳಿಸಿರುತ್ತದೆ ಅಲ್ಲವೇ…?

ಈ ಗುಲಾಬಿ ಬಣ್ಣವು ಶುದ್ಧ ಬಿಳಿ ಮತ್ತು ಕೆಂಪು ಬಣ್ಣದ ಮಿಶ್ರಣಗೊಂಡ ರಚನೆಯಾಗಿರುವುದರಿಂದ ಇದು ಪ್ರೀತಿ ಮತ್ತು ಹಾರೈಸುವಂತಹ ಗುಣವನ್ನು ಸಹಜವಾಗಿ ಹೊಂದಿದೆ. ಸಾಮಾನ್ಯವಾಗಿ ಗುಲಾಬಿ ಬಣ್ಣವು ಮುದ್ದಾದ ಆಗತಾನೆ ಜನಿಸಿದ ಮಗು ಹಾಗೂ ಪ್ರಾಣಿಗಳ ಮರಿಸಂತಾನಗಳಿಗೆ ಸಂಬಂಧಿಸಿದ್ದಾಗಿದೆ. ಮುಖ್ಯವಾಗಿ ಗುಲಾಬಿ ಬಣ್ಣವು ಹೊಸ ಹುಟ್ಟಿಗೆ ಮತ್ತು ದಯಾಶೀಲತೆಗೆ ಗುಲಾಬಿ ಬಣ್ಣವನ್ನು ಸೌಮ್ಯತೆ ಎಂಬ ಹೆಸರಿನಿಂದಲೂ ಕರೆಯುತ್ತಾರೆ.