ಪಿಸ್ತಾ ತಿನ್ನುವುದರಿಂದ ಯಶಸ್ಸು ನಿಮ್ಮದಾಗುತ್ತದೆ..

0
7599

ಒಣ ಹಣ್ಣುಗಳೊಂದಿಗೆ ಚಿಪ್ಪಿನಂತಿರುವ ಎರಡು ದಳಗಳ ನಡುವಲ್ಲಿ ಕಂದು ಬಣ್ಣದ ತಿನಿಸನ್ನು ನೋಡಿರಬಹುದು. ಒಳಗೆ ತಿಳಿ ಹಸಿರ ಬಣ್ಣವನ್ನು ಹೊಂದಿರುವ ಇದನ್ನು ಉಪ್ಪಿನೊಂದಿಗೆ ಹುರಿದು ಒಣಹಣ್ಣುಗಳೊಂದಿಗೆ ಸೇರಿಸಲಾಗುತ್ತದೆ. ತಿನ್ನುತ್ತಿದ್ದಂತೆ ರುಚಿ ಹೆಚ್ಚುತ್ತಲೇ ಹೋಗುವಂತೆ ಕಾಣುವ ಪಿಸ್ತಾ ರುಚಿಗಷ್ಟೇ ಸೀಮಿತವಾಗಿರದೆ ದೇಹದ ಆರೋಗ್ಯದಲ್ಲೂ ಮಹತ್ವದ ಪಾತ್ರ ವಹಿಸುತ್ತದೆ.ಪಿಸ್ತಾ  : ಬುಧವಾರ ಜ್ಞಾನ ಹಾಗೂ ಬುದ್ದಿಯ ದಿನವಾಗಿದೆ. ಅಂದು ಐದು ಪಿಸ್ತಾ  ತಿನ್ನುವುದರಿಂದ ಯಶಸ್ಸು ನಿಮ್ಮದಾಗುತ್ತದೆ.

ರೋಗ ನಿರೋಧಕ ಶಕ್ತಿಗಾಗಿ ಪಿಸ್ತಾ

ಪಿಸ್ತಾ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಎಂಬುದನ್ನು ಇತ್ತೀಚಿನ ಸಂಶೋಧನೆಯೊಂದು ದೃಢಪಡಿಸಿದೆ. ಪಿಸ್ತಾದಲ್ಲಿರುವ ಬಿ6 ವಿಟಾಮಿನ್ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಅಲ್ಲದೆ ಇದು ಆರೋಗ್ಯಕರ ರಕ್ತಕಣಗಳು ಹೆಚ್ಚುವುದಕ್ಕೆ ಸಹಕಾರಿಯಾಗಿದೆ. ರಕ್ತದಲ್ಲಿನ ಹಿಮೋಗ್ಲೊಬಿನ್ ಪ್ರಮಾಣವನ್ನು ಹೆಚ್ಚಿಸುವ ಜೊತೆಗೆ ಆಮ್ಲಜನಕದ ಪ್ರಮಾಣ ಹೆಚ್ಚಿರುವ ರಕ್ತ ದೇಹದ ಇತರ ಅಂಗಗಳಿಗೆ ರವಾನೆಯಾಗುವಂತೆ ನೋಡಿಕೊಳ್ಳುತ್ತದೆ.

ದೇಹದಲ್ಲಿ ಅಮೈನೋ ಆಮ್ಲ ಹೆಚ್ಚಲು ಮತ್ತು ದೇಹದ ನರವ್ಯೆಹ ಸರಿಯಾಗಿ ಕೆಲಸ ನಿರ್ವಹಿಸಲು ಪಿಸ್ತಾ ಸಹಕಾರಿಯಾಗಿದೆ. ಒಂದು ಹಿಡಿಯಷ್ಟು ಪಿಸ್ತಾಕ್ಕೆ ಸ್ವಲ್ಪ ಜೇನನ್ನು ಸೇರಿಸಿ ದಿನವೂ ಬೆಳಗ್ಗೆ ತಿನ್ನುತ್ತಿದ್ದರೆ ನಿರೋಧಕ ಶಕ್ತಿ ಮತ್ತಷ್ಟು ಹೆಚ್ಚುತ್ತದೆ.

ಹಸಿ ತರಕಾರಿ ಅಥವಾ ಸೊಪ್ಪಿನೊಂದಿಗೆ ಪಿಸ್ತಾ ಸೇವಿಸಿದರೆ ದೇಹವನ್ನು ಸದೃಢಗೊಳಿಸಲು ನೆರವಾಗುತ್ತದೆ.

ಹಣ್ಣು, ಐಸ್‌ಕ್ರೀಮ್‌ಗಳೊಂದಿಗೂ ಪಿಸ್ತಾ ಮಿಶ್ರಣಮಾಡಿ ಸೇವಿಸಿದರೆ ರುಚಿಯೊಂದಿಗೆ ದೇಹದ ಆರೋಗ್ಯವನ್ನೂ ಸ್ವಾಸ್ಥ್ಯಪೂರ್ಣವಾಗುವಂತೆ ಮಾಡುತ್ತದೆ.

ಬಿಳಿ ರಕ್ತಕಣಗಳನ್ನು ಹೆಚ್ಚಿಸುವಲ್ಲಿಯೂ ಇದು ಸಹಕಾರಿ. ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರು ಪಿಸ್ತಾ ಸೇವಿಸುವುದರಿಂದ ರೋಗ ಹತೋಟಿಯಲ್ಲಿರುತ್ತದೆ.

ಬೆಳೆಯುತ್ತಿರುವ ಮಕ್ಕಳ ಆರೋಗ್ಯ ವೃದ್ಧಿಗಾಗಿ ಪಿಸ್ತಾ

ಸರಿಯಾಗಿ ಹುರಿದು ಒಂದಿಷ್ಟು ಉಪ್ಪನ್ನು ಚಿಮುಕಿಸಿದರೆ ಪಿಸ್ತಾದಷ್ಟು ಸ್ವಾದಿಷ್ಟ ಆಹಾರ ಮತ್ತೊಂದಿಲ್ಲ. ಇದು ಕೇವಲ ರುಚಿಕರ ಮಾತ್ರವಲ್ಲ ಆರೋಗ್ಯದ ವಿಷಯದಲ್ಲೂ ಸಾಕಷ್ಟು ಲಾಭದಾಯಕ. ಪಿಸ್ತಾದಲ್ಲಿ ವಿಟಾಮಿನ್ ಬಿ6 ಇರುತ್ತದೆ. ಇದು ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಲು ನೆರವು ನೀಡುತ್ತದೆ.

ಹಿಮೋಗ್ಲೋಬಿನ್ ದೇಹದ ವಿವಿಧ ಭಾಗಗಳಿಗೆ ಆಮ್ಲಜನಕವನ್ನು ರವಾನಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ವಿಟಾಮಿನ್ ಬಿ6 ದೇಹದ ರೋಗ ನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ. ದೇಹದ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಸೋಂಕಿನಿಂದ ರಕ್ಷಣೆಯನ್ನೂ ನೀಡುತ್ತದೆ. ರೋಗದಿಂದ ರಕ್ಷಣೆ ನೀಡುವ ಇದು ಬೆಳೆಯುತ್ತಿರುವ ಮಕ್ಕಳಿಗೆ ಅತ್ಯಂತ ಉತ್ತಮ ಆಹಾರ.

ಕಾಂತಿಯುಕ್ತ ತ್ವಚೆಗಾಗಿ

ಪಿಸ್ತದಲ್ಲಿ ವಿಟಾಮಿನ್ ಇ ಹೇರಳವಾಗಿರುವುದರಿಂದ ಚರ್ಮದ ಆರೋಗ್ಯವನ್ನು ಇದು ಕಾಪಾಡುತ್ತದೆ. ಶುಷ್ಕ ಚರ್ಮವನ್ನು ಹೊಂದಿರುವವರು ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಚರ್ಮ ಕಾಂತಿಯುಕ್ತವಾಗುತ್ತದೆ.

ದಿನ ನಿತ್ಯ ಅರ್ಧ ಮುಷ್ಟಿ ಪಿಸ್ತಾ ತಿಂದರೆ ದೇಹಕ್ಕೆ ಬೇಕಾದಷ್ಟು ಪ್ರಮಾಣದ ವಿಟಾಮಿನ್ ಇ ದೊರೆಯುತ್ತದೆ. ಚರ್ಮದ ಹೊಳಪನ್ನು ಇದು ಹೆಚ್ಚಿಸುತ್ತದೆ. ಸೂರ್ಯನ ನೀಲಾತೀತ (ಅಲ್ಟ್ರಾವಯಲೆಟ್) ಕಿರಣಗಳಿಂದ ಚರ್ಮದ ಮೇಲಾಗುವ ದುಷ್ಪರಿಣಾಮಕ್ಕೆ ತಡೆಯೊಡ್ಡುತ್ತದೆ. ಜೊತೆಗೆ ಚರ್ಮದ ಸುಕ್ಕನ್ನು ಕೂಡ ನಿವಾರಿಸುತ್ತದೆ. ಇನ್ನು ಚರ್ಮದ ಕ್ಯಾನ್ಸರ್ ವಿರುದ್ಧ ಇದು ರಕ್ಷಣೆ ನೀಡುತ್ತದೆ.

ಕಣ್ಣಿನ ಆರೋಗ್ಯಕ್ಕಾಗಿ

ಕಣ್ಣಿನ ಆರೋಗ್ಯದಲ್ಲೂ ಪಿಸ್ತಾ ಪ್ರಮುಖ ಪಾತ್ರ ವಹಿಸುತ್ತದೆ.

ಕೆರೋಟಿನಾಯ್ಡ್ ಮತ್ತು ಲ್ಯುಟಿನ್ ಹೇರಳವಾಗಿರುವ ಪಿಸ್ತಾ ಕಣ್ಣಿನ ಆರೋಗ್ಯದಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ.  ಇದು ಕಣ್ಣಿನಲ್ಲಿ ಅವಶ್ಯಕ ಕೋಶಗಳ ಬೆಳವಣಿಗೆಗೆ ಸಹಕರಿಸಿ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ. ದೇಹದಲ್ಲಿರುವ ತ್ಯಾಜ್ಯವನ್ನು ಹೋಗಲಾಡಿಸಿ, ಹೊಸ ಜೀವಕೋಶಗಳ ಬೆಳವಣಿಗೆಗೆ ನೆರವಾಗುವ ಇದನ್ನು ದೃಷ್ಟಿ ದೋಷ ಇರುವವರು ದಿನ ನಿತ್ಯ ಸೇವಿಸಬೇಕು.

ದೇಹ ತೂಕ ಇಳಿಸಿಕೊಳ್ಳಲು ಸಹಾಯಕ

ಪಿಸ್ತಾದಲ್ಲಿ ಫೈಬರ್ ಸಾಕಷ್ಟಿರುತ್ತದೆ. ಹೀಗಾಗಿ ದೇಹ ತೂಕ ಇಳಿಸಿಕೊಳ್ಳಲು ಯತ್ನಿಸುವವರು ಪಿಸ್ತಾವನ್ನು ಸಾಕಷ್ಟು ತಿನ್ನಬೇಕು. ಇದು ಜೀರ್ಣ ಕ್ರಿಯೆಯನ್ನೂ ಸುಧಾರಿಸುತ್ತದೆ.

ಬೊಜ್ಜು ನಿಯಂತ್ರಿಸುವಲ್ಲಿಯೂ ಇದು ಪ್ರಮುಖ ಪಾತ್ರ ವಹಿಸುವುದು. ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವುದಕ್ಕೂ ಇದು ನೆರವಾಗುತ್ತದೆ. ಈ ಎಲ್ಲಾ ಕಾರಣಗಳಿಂದ ಅಧರಕ್ಕಷ್ಟೇ ಅಲ್ಲದೆ, ಉದರಕ್ಕೂ ಪಿಸ್ತಾ ರುಚಿ ಎನ್ನಿಸಿದೆ.

ಕೊಬ್ಬಿನಾಂಶವನ್ನು ಹತೋಟಿಯಲ್ಲಿಡಲು ಡಯಟ್ ಸಂದರ್ಭದಲ್ಲಿ  ಒಣಹಣ್ಣು ಸೇವಿಸುವುದರಿಂದ ಇನ್ನಷ್ಟು ಹೆಚ್ಚು ಸಹಕಾರಿಯಾಗುತ್ತದೆ. ಭಾರತೀಯ ಮಧುಮೇಹ ಫೌಂಡೇಷನ್ ಹಾಗೂ ನ್ಯಾಷನಲ್ ಡಯಾಬಿಟಿಸ್, ಒಬೆಸಿಟಿ ಹಾಗೂ ಕೊಲೆಸ್ಟ್ರಾಲ್ ಫೌಂಡೇಷನ್ ನಡೆಸಿದ ಇತ್ತೀಚಿನ ಅಧ್ಯಯನದ ಪ್ರಕಾರ, ಪಿಸ್ತಾದಲ್ಲಿ ಕಡಿಮೆ ಪ್ರಮಾಣದಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಇದ್ದು, ನೈಸರ್ಗಿಕವಾಗಿ ಕೊಬ್ಬಿನಾಂಶ ರಹಿತ ತಿನಿಸಾಗಿದೆ. ಅಂತೆಯೇ ಇವುಗಳಲ್ಲಿ ಹೆಚ್ಚು ರೋಗನಿರೋಧಕ ಶಕ್ತಿಯ ಪ್ರೊಟೀನ್‌ಗಳು ಹಾಗೂ ಫೈಬರ್ ಮತ್ತು ಪ್ರೊಟೀನ್‌ಗಳು ಲಭ್ಯವಾಗುತ್ತದೆ.

ಪಿಸ್ತಾವು ಹೃದಯ ಸಂಬಂಧಿಸಿದ ಕಾಯಿಲೆಗಳ ತೊಂದರೆಗಳಿಗೆ ಹೆಚ್ಚು ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುತ್ತದೆ. ಇದಲ್ಲದೆ ಹಸಿ ತರಕಾರಿ, ಹಣ್ಣುಗಳನ್ನು ದಿನ ನಿತ್ಯದ ಆಹಾರದಲ್ಲಿ ಬಳಸುವುದು ಹೆಚ್ಚು ಸೂಕ್ತ. ಇದರೊಂದಿಗೆ ಫ್ಯಾಟಿ ಫಿಶ್, ಸೂರ್ಯಕಾಂತಿ ಬೀಜ ಇತ್ಯಾದಿಗಳು ದೇಹಕ್ಕೆ ಅಗತ್ಯವಾದ ಕೊಬ್ಬಿನಾಂಶವನ್ನು ಹೆಚ್ಚು ಉತ್ಪಾದಿಸುತ್ತದೆ. ಹೆಚ್ಚು ಕೊಬ್ಬಿನಾಂಶದ ಡೈರಿ ಉತ್ಪನ್ನ ಕಡಿಮೆ ಕೊಬ್ಬಿನಾಂಶದ ಉತ್ಪನ್ನವನ್ನಾಗಿ ಬದಲಾಯಿಸಿ.

ದಿನಾಲು ಕನಿಷ್ಠ ೩೦ ನಿಮಿಷಗಳ ಕಾಲ ವ್ಯಾಯಾಮ ಮಾಡುವುದು ಅತ್ಯಂತ ಅವಶ್ಯ. ನಡಿಗೆ, ಈಜು, ಅಥವ ಇಷ್ಟವಾದ ಆಟದಲ್ಲಿ ತೊಡಗುವುದು ಇನ್ನಷ್ಟು ಸಹಾಯಕರ. ಇದಲ್ಲದೆ ಲಿಫ್ಟ್ ಬದಲು ಮೆಟ್ಟಿಲುಗಳನ್ನು ಬಳಸುವುದು ಬದಲಾವಣೆಗೆ ಕಾರಣವಾಗುತ್ತದೆ. ನೆನಪಿಡಿ, ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲೇ ಇದೆ. ನೀವು ಮಾತ್ರ ಇವನ್ನು ಚೆನ್ನಾಗಿ ನೋಡಿಕೊಳ್ಳಲು ಸಾಧ್ಯ.