ವಿಷಕಾರಿ ಪಕ್ಷಿ ಪಿಟ್ಟೋಯೀ

0
1232

ವಿಷ ಎಂಬ ಪದ ಕೇಳಿದಾಕ್ಷಣ ನಮಗೆ ನೆನೆಪಾಗುವ ಮೊದಲ ಪ್ರಾಣಿ ಸರ್ಪ. ಆದರೆ ವಿಷ ಎಂಬುದು ಸರ್ಪಕ್ಕೆ ಮಾತ್ರ ಸೀಮಿವಾಗಿಲ್ಲ. ಈ ಜೀವಜಗತ್ತಿನ ವಿಸ್ಮಯದಲ್ಲಿ ಅನೇಕ ಅಚ್ಚರಿಯ ಸಂಗತಿಗಳೂ ಇವೆ.

hooded-pitohui

ನ್ಯೂ ಗಿನಿ ದೇಶದಲ್ಲಿ ಕಂಡುಬರುವ ಪಿಟ್ಟೋಯೀ ಅತ್ಯಂತ ವಿಷಕಾರಿ ಪಕ್ಷಿ ಎಂದೇ ಗುರುತಿಸಲ್ಪಟ್ಟಿದೆ. ಇದರ ಚರ್ಮ ಮತ್ತು ಗರಿಗಳು ಅತ್ಯಂತ ವಿಷಕಾರಿ. ಪಿಟ್ಟೋಯೀ ಪ್ರಬೇಧದ ಪಕ್ಷಿಗಳಲ್ಲಿ ಹೂಡೆಡ್ ಪಿಟ್ಟೋಯಿ ಪ್ರಬಲ ನಂಜು ಹೊಂದಿದೆ. ಇದರ ಚರ್ಮ ಮತ್ತು ಪುಕ್ಕಗಳು ನ್ಯೂಟ್ರೋಟಾಕ್ಸಿಕ್ ಆಲ್ಕಲಾಯ್ಡ್ ಎಂಬ ವಿಷಯುಕ್ತ ರಾಸಾಯನಿಕ ಹೊಂದಿದೆ. ಹಾವುಗಳು ಮತ್ತಿತ್ತರ ಅಪಾಯಕಾರಿ ಪ್ರಾಣಿಗಳೇ ಪಿಟ್ಟೋಯೀಯನ್ನು ನೋಡಿದರೆ ಹೆದರುತ್ತವೆ. ಇದರ ಥರಾನೇ ಇನ್ನೊಂದು ಪಕ್ಷಿ ಇದೆ ಅದರ ಹೆಸರು The African spur-winged goose ಇದನ್ನ ತಿಂದರೆ ಮಾತ್ರ ಇದು ವಿಷಕಾರಿ ಹಾಗಾಗಿ ಯಾವ ಪ್ರಾಣಿ ಅಥವಾ ಪಕ್ಷಿಯೂ ಕೂಡ ಇದನ್ನು ತಿನ್ನುವ ಧೈರ್ಯ ಮಾಡುವುದಿಲ್ಲ.

ಈ ಪುಟ್ಟ ಪಿಟ್ಟೋಯೀಯಲ್ಲಿ ದೊಡ್ಡ ಪ್ರಮಾಣದ ವಿಷ ಇರುವುದು ಪ್ರಕೃತಿಯ ವಿಸ್ಮಯವಲ್ಲದೇ ಮತ್ತೇನು ?