ಕರ್ನಾಟಕದ ಕಾಶ್ಮೀರ ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳ ಕಂಪ್ಲೀಟ್ ಡೀಟೇಲ್ಸ್..

0
2152
 • ಓಂಕಾರೇಶ್ವರ ದೇವಸ್ಥಾನ
  ಇದು ಮಡಿಕೇರಿಯಲ್ಲಿದೆ.. ಇದನ್ನು ಎರಡನೇ ಲಿಂಗರಾಜನು ಕಟ್ಟಿಸಿದನು. ಇಂದು ಇದು ಇಲ್ಲಿಯ ಒಂದು ಪ್ರಮುಖ ದೇವಸ್ಥಾನವೂ, ಪ್ರವಾಸಿ ತಾಣವೂ ಅಗಿದೆ.

 • ರಾಜಾಸೀಟ್
  ರಾಜಾಸೀಟ್ ಅರಮನೆ,ಗದ್ದಿಗೆಯು ಸಹ ಮಡಿಕೇರಿಯ ಇಂದಿನ ಪ್ರವಾಸಿ ತಾಣಗಳಲ್ಲಿ ಹೆಸರಾಗಿದೆ.

 • ತಲ ಕಾವೇರಿ..
  ತಲ ಕಾವೇರಿಯಲ್ಲಿ,ಕಾವೇರಿ ನದಿಯು ಹುಟ್ಟಿ ಅಲ್ಲಿಂದ ಸುಮಾರು ೧,೨ ಕಿ ಮಿ ವರೆಗೆ ಅಂತರ್ಗಾಮಿಯಾಗಿ ಹರಿದು ಮುಂದೆ ಭಾಗಮಂಡಲದಲ್ಲಿ ಪುನಃ ತನ್ನ ದರ್ಶನವನ್ನು ನೀಡುತ್ತದೆ.ಇದು ಜಿಲ್ಲೆಯ ಮತ್ತು ರಾಜ್ಯದ ಪ್ರಮುಖ ನದಿಯು ಸಹ ಅಗಿದೆ.ತಲ ಕಾವೇರಿಯಲ್ಲಿ ಪ್ರತಿ ವರ್ಷವು ತೀರ್ಥೊದ್ಭವವು ಸಂಭವಿಸುತ್ತದೆ,ಇದರ ದರ್ಶನಕ್ಕೆ ಸಾವಿರರು ಭಕ್ತರು ಅಲ್ಲಿ ಬಂದು ಸೇರುತ್ತಾರೆ. ಈ ನದಿಯು ಮುಂದೆ ತಮಿಳುನಾಡು ರಾಜ್ಯದ ಮೂಲಕ ಬಂಗಾಳಕೊಲ್ಲಿಯನ್ನು ಸೇರುತ್ತದೆ.

 • ಮಲ್ಲಳ್ಳಿ ಜಲಪಾತ
  ಮಲ್ಲಳ್ಳಿ ಜಲಪಾತ ಮಲ್ಲಳ್ಳಿ ಜಲಪಾತ ಸೋಮವಾರಪೇಟೆಯಿಂದ ೨೫ ಕಿ.ಮೀ ದೂರದಲ್ಲಿದೆ. ಎತ್ತರದ ಸುಂದರ ಫಾಲ್ಸ್ ಇದಾಗಿದೆ..

 • ಪುಷ್ಪಗಿರಿ
  ಪುಷ್ಪಗಿರಿ ಸೋಮವಾರಪೇಟೆಯಿಂದ ೩೦ ಕಿ.ಮೀ ದೂರದಲ್ಲಿ ಕುಕ್ಕೆ ಸುಬ್ರಮಣ್ಯ ಕಡೆಗಿನ ರಸ್ತೆಯಲ್ಲಿದೆ.ಹಲವಾರು ವನ್ಯ ಜೀವಿಗಳ ತವರೂರು.
 • ಗವಿಬೆಟ್ಟದಿಂದ ಹೊನ್ನಮ್ಮನ ಕೆರೆ..
  ಹೊನ್ನಮ್ಮನ ಕೆರೆ ಸೋಮವಾರಪೇಟೆಯಿಂದ ೬ ಕಿಮಿ ದೂರದಲ್ಲಿದೆ. ಈ ಜಾಗವು ಒಂದು ಪ್ರವಾಸಿ ಹಾಗು ಪಾರಂಪರಿಕ ಜಾಗವೆಂದು ಹೆಸರುವಾಸಿಯಾಗಿದೆ. ಇದರ ಸುತ್ತಲು ಬೆಟ್ಟಗಳಿವೆ ಇದರಲ್ಲಿ ‘ಮೋರಿ’ ಹಾಗು ‘ಗವಿ’ ಬೆಟ್ಟಗಳು ಬಹಳ ಹೆಸರುವಾಸಿ.
 • ಬೆಳೂರು
  ಬೆಳೂರು ಬಾಣೆಸೋಮವಾರಪೇಟೆಯಿಂದ ೮ ಕಿ.ಮೀ ದೂರದಲ್ಲಿದೆ .ಇದು ಇಲ್ಲಿಯ ಒಂದು ಪ್ರವಾಸಿ ತಾಣವಾಗಿದೆ..

 • ಅಬ್ಬಿ ಜಲಪಾತ..
  ಅಬ್ಬಿ ಜಲಪಾತವು ಕೊಡಗು ಜಿಲ್ಲೆಯ ಮುಖ್ಯ ಪಟ್ಟಣವಾದ ಮಡಿಕೇರಿಯಿಂದ ಕೇವಲ 7-8 ಕಿ.ಮೀ. ದೂರದಲ್ಲಿದೆ. ಮಡಿಕೇರಿಯವರೆಗೆ ಬಸ್ ಸೌಕರ್ಯವಿದ್ದು ಅಲ್ಲಿಂದ ೫ ಕಿ.ಮೀ. ಯಾವುದೇ ಸ್ಥಳೀಯ ಖಾಸಗಿ ವಾಹನವನ್ನು ಹಿಡಿದು ಹೋಗಬಹುದು.ನಂತರ ಸುಮಾರು ೫೦೦ ಮೀ ನಷ್ಟು ಕಾಫಿ ತೋಟದ ಮಧ್ಯೆ ನಡೆದುಕೊಂಡು ಹೋದರೆ ಈ ಸುಂದರವಾದ ಜಲಪಾತ ಕಾಣಸಿಗುತ್ತದೆ. ಮಳೆಗಾಲದ ನಂತರದ ಅವಧಿಯಲ್ಲಿ ಹೋದರೆ ೧೦೭ ಅಡಿ ಎತ್ತರದಿಂದ ಮೈದುಂಬಿಕೊಂಡು ಧುಮುಕುವ ಜಲಪಾತದ ವೈಭವವನ್ನು ಸವಿಯಬಹುದು. ಸುತ್ತಮುತ್ತಲು ದಟ್ಟವಾದ ಕಾಡು, ಕಾಫಿ ತೋಟದ ಮಧ್ಯೆ ಹಾಲಿನ ನೊರೆಯಂತೆ 30ರಿಂದ 40 ಅಡಿ ಎತ್ತರದ ಬೆಟ್ಟದಿಂದ ಧುಮ್ಮಿಕ್ಕುವ ನೀರನ್ನು ನೋಡುವುದೇ ಚೆಂದ. ನೋಡಿದಾಕ್ಷಣ.. ‘ಅಬ್ಬಾ’ ಎನ್ನುವಂತೆ ಉದ್ಘಾರ ತೆಗೆಯದವರೇ ಇಲ್ಲ ಎನ್ನಬಹುದು. ಇಷ್ಟೊಂದು ರಮಣೀಯವಾಗಿರುವ ಸ್ಥಳವು ಖಾಸಗಿ ಮಾಲೀಕರಿಗೆ ಸೇರಿದೆ ಎನ್ನುವುದು ಗಮನಾರ್ಹ.ನೆರವಂಡ ಇಂದಿರಾ ಅವರಿಗೆ ಸೇರಿದ ಜಾಗದಲ್ಲಿ ಅಬ್ಬಿ ಜಲಪಾತವಿದೆ.

 • ಬಲಮುರಿ
  ಬಲಮುರಿ ಕೊಡಗು ಜಿಲ್ಲೆಯ ಒಂದು ತೀರ್ಥಕ್ಷೇತ್ರ. ಇದು ಮಡಿಕೇರಿಯಿಂದ ಸುಮಾರು ೨೦ ಕಿ.ಮೀ. ದೂರದಲ್ಲಿದೆ. ಕಾವೇರಿ ನದಿಯ ದಡದಲ್ಲಿರುವ ಈ ಕ್ಷೇತ್ರದಲ್ಲಿ ತುಲಾ ಮಾಸದಲ್ಲಿ ಜಾತ್ರೆ ನಡೆಯುತ್ತದೆ. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ನೆರೆಯುತ್ತಾರೆ.ಇಲ್ಲಿ ದೊಡ್ಡ ವೀರರಾಜೇಂದ್ರ ಅರಸರು ಕಟ್ಟಿಸಿದ ಅತಿಥಿಗೃಹವಿದ್ದು, ಈಗಲೂ ಸುಸ್ಥಿತಿಯಲ್ಲಿದೆ.

 • ಮಂದಲ್ ಪಟ್ಟಿ (ಮುಗಿಲು ಪೇಟೆ)
  ಕೊಡಗಿನ ಸುಂದರ ಪ್ರವಾಸಿತಾಣಗಳ್ಳೊಂದು ಮಂದಲ್ ಪಟ್ಟಿ(ಮಾಂದಲ ಪಟ್ಟಿ).ತನ್ನದೇ ಆದ ನಿಸರ್ಗ ಸೌಂದರ್ಯದಿಂದಾಗಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಮಡಿಕೇರಿಗೆ ಸುಮಾರು ಇಪ್ಪತ್ತು ಕಿ.ಮೀ. ದೂರದಲ್ಲಿದ್ದು, ಪುಷ್ಪಗಿರಿ ವನ್ಯಧಾಮಕ್ಕೆ ಸೇರಿದೆ.


ಮಂದಲ್ ಪಟ್ಟಿ ಪ್ರವಾಸಿಗರ ಸ್ವರ್ಗ ತಾಣ ಎಂದರೆ ತಪ್ಪಾಗಲಾರದು. ಏಕೆಂದರೆ ಏರು ರಸ್ತೆಯಲ್ಲಿ ಹರಸಹಾಸ ಮಾಡಿ ಬೆಟ್ಟವೇರಬೇಕು. ಇಲ್ಲಿ ಫೋರ್ ವೀಲರ್ ಗಳು ಮಾತ್ರ ಸಲೀಸಾಗಿ ಮುಂದೆ ಸಾಗುತ್ತದೆ. ಹೆಚ್ಚಿನವರು “ನಡೆದು ನೋಡಾ ಕೊಡಗಿನ ಬೆಡಗಾ” ಎಂಬ ಕವಿ ವಾಣಿಯಂತೆ ನಡೆದೇ ಬೆಟ್ಟದ ಮೇಲೆ ಸಾಗುತ್ತಾರೆ. ಕಲ್ಲು, ಮುಳ್ಳನ್ನು ಮೆಟ್ಟುತ್ತಾ ಏರು ರಸ್ತೆಯಲ್ಲಿ ಸಾಗುವಾಗ ಆಯಾಸವಾಗುವುದು ಸಹಜ ಆದರೆ ಬೆಟ್ಟದ ತುತ್ತ ತುದಿ(ವ್ಯೂಪಾಯಿಂಟ್) ತಲುಪಿದಾಗ ಕೈಗೆ ಎಟುಕುತ್ತದೆಯೇನೋ ಎಂಬಂತೆ ಭಾಸವಾಗುವ ಮುಗಿಲು…. ಪುಷ್ಪಗಿರಿ ಹಾಗೂ ಕೋಟೆಬೆಟ್ಟದ ಸುತ್ತಲೂ ಹರಡಿ ನಿಂತ ಪರ್ವತ ಶ್ರೇಣಿಗಳು …ಅಲೆಅಲೆಯಾಗಿ ತೇಲಿ ಬರುವ ಮಂಜು … ಸುಂದರ ನಿಸರ್ಗ ಸೌಂದರ್ಯ ಆಯಾಸವನ್ನೆಲ್ಲಾ ಮಾಯ ಮಾಡಿಬಿಡುತ್ತವೆ. ನಡುಬೇಸಿಗೆಯಲ್ಲೂ ತಂಪು ಹವೆ. ಮುಂಜಾನೆ ಇಬ್ಬನಿಯ ಸಿಂಚನ, ಸಂಜೆ ಮಂಜು ಮುಸುಕಿನಲ್ಲಿ ರಕ್ತದ ಚೆಂಡಿನಂತೆ ಹೊಳೆವ ಸೂರ್ಯ ಬೆಟ್ಟಗಳ ನಡುವೆ ಲೀನವಾಗುವ ಮನಮೋಹಕ ಅದು ವರ್ಣಿಸಲಸಾಧ್ಯ.

ಮಂದಲ್ ಪಟ್ಟಿಯ ಸೌಂದರ್ಯಕ್ಕೆ ಮನಸೋತ ಚಿತ್ರತಂಡಗಳು ಕೂಡ ಶೂಟಿಂಗ್ ಗಾಗಿ ಮಂದಲ್ ಪಟ್ಟಿಯನ್ನು ಆರಿಸುತ್ತಿದ್ದಾರೆ. ಗಾಳಿಪಟ ಚಿತ್ರದ ಚಿತ್ರಿಕರಣವನ್ನು ಸರಿಸುಮಾರಾಗಿ ಇಲ್ಲೆ ಮಾಡಲಾಗಿದೆ. ಆ ಚಿತ್ರದಲ್ಲಿ ಮಂದಲ್ ಪಟ್ಟಿಯನ್ನು “ಮುಗಿಲು ಪೇಟೆ”ಎಂಬುದಾಗಿ ಕರೆಯಲಾಗಿದೆ. ಹಾಗಾಗಿ ಮಾಂದಲ ಪಟ್ಟಿ ಯನ್ನು ಮುಗಿಲು ಪೇಟೆ ಅಂತಲೂ ಕರೆಯುವುದುಂಟು..

ನಿಮಗೂ ಕೊಡಗಿಗೆ ಹೋಗುವ ಮನಸಿದ್ದರೆ ಶೇರ್ ಮಾಡಿ ಇಟ್ಟುಕೊಳ್ಳಿ ಉಪಯೋಗಕ್ಕೆ ಬರಬಹುದು.