ಇನ್ಮುಂದೆ ದೇವಾಲಯಗಳಿಗೆ ಪ್ಲಾಸ್ಟಿಕ್‌ ಚೀಲಗಳನ್ನು ತಂದರೆ ದೇವರ ದರ್ಶನ ಇಲ್ಲ; ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ರಾಜ್ಯ ಸಮಿತಿಯ ಆದೇಶ..

0
641

ಪರಿಸರಕ್ಕೆ ಮತ್ತು ಪ್ರಾಣಿಗಳಿಗೆ ಮಾರಕವಾಗಬಲ್ಲ ಪ್ಲಾಸ್ಟಿಕ್ ಬಳಕೆಯನ್ನು ನಿಷೆಧಿಸಲಾಗಿದೆ. ತಪ್ಪಿತಸ್ತರಿಗೆ ದಂಡ ಕೂಡ ಹೇರಲಾಗುತ್ತಿದೆ. ಆದರು ಕೆಲವು ಕಡೆ ಕದ್ದು-ಮುಚ್ಚಿ ಪ್ಲಾಸ್ಟಿಕ್ ಮಾರಾಟ ಮಾಡಲಾಗುತ್ತಿದೆ. ದೇವಾಲಯದಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದ್ದು ಭಕ್ತರು ತರುವ ಪ್ಲಾಸ್ಟಿಕ್-ನಿಂದ ಹಲವು ದೇವಾಲಯದ ಪರಿಸರಕ್ಕೆ ದಕ್ಕೆಯಾಗುತ್ತಿದೆ. ಇದರಿಂದ ಎಚ್ಚೆತ್ತುಕೊಂಡ ಮುಜರಾಯಿ ಇಲಾಖೆ ದೇಗುಲದ ಆವರಣದಲ್ಲಿ ಪ್ಲಾಷ್ಟಿಕ್‌ ಚೀಲ ನಿಷೇಧಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು ದೇವಾಲಯಕ್ಕೆ ಪ್ಲಾಸ್ಟಿಕ್ ತಂದರೆ ದೇವರ ದರ್ಶನ ಇಲ್ಲ ಎಂದು ಹೇಳಿದೆ.

Also read: ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ವಂಚನೆ ತಡೆಯಲು, RBI ನಿಂದ ಹೊಸ ಡಿಜಿಟಲ್ ಟೋಕನ್ ಪದ್ಧತಿ ಜಾರಿಗೆ..

ಹೌದು ದೇವಾಲಯಗಳಿಗೆ ಪ್ಲಾಸ್ಟಿಕ್ ತರುವ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿಲ್ಲ ಎಂದು ಮುಜರಾಯಿ ಇಲಾಖೆ ದೇಗುಲದ ಆವರಣದಲ್ಲಿ ಪ್ಲಾಷ್ಟಿಕ್‌ ಚೀಲ ನಿಷೇಧಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಪರಿಸರ ಸಂರಕ್ಷಣೆ ಹಾಗೂ ತ್ಯಾಜ್ಯ ನಿರ್ವಹಣೆಗೆ ನಿವೃತ್ತ ನ್ಯಾ.ಸುಭಾಷ್‌ ಬಿ. ಅಡಿ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ‘ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ರಾಜ್ಯ ಸಮಿತಿ’ಯು ಇತ್ತೀಚೆಗೆ ಕರೆದಿದ್ದ ಸಭೆಯಲ್ಲಿ ದೇವಾಲಯಗಳಲ್ಲಿ ಪ್ಲಾಸ್ಟಿಕ್‌ ಸಂಪೂರ್ಣ ನಿಷೇಧ ಹಾಗೂ ಸ್ವಯಂ ತ್ಯಾಜ್ಯ ಸಂಸ್ಕರಣೆಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ.

Also read: ಕಳ್ಳರು ಈಗ ATM ಕಾರ್ಡ್ ನಿಮ್ಮ ಜೇಬಿನಲ್ಲಿ ಇರುವಾಗಲೇ ಅದರ ಮಾಹಿತಿ ಪಡೆದು ವಂಚನೆ ಮಾಡುತ್ತಿದ್ದಾರೆ, ಅದನ್ನು ತಪ್ಪಿಸುವ ಮಾಹಿತಿ ಹೇಳ್ತೀವಿ ಓದಿ!!

ಈ ಹಿನ್ನೆಲೆಯಲ್ಲಿ ಭಕ್ತರು ಹೂವು, ಹಣ್ಣು-ಕಾಯಿ, ಕಡ್ಡಿ, ಕರ್ಪೂರಗಳನ್ನು ಪ್ಲಾಸ್ಟಿಕ್‌ ಚೀಲಗಳಲ್ಲಿ ತಂದು ನಂತರ ಎಲ್ಲೆಂದರಲ್ಲಿ ಬಿಸಾಡಿ ಹೋಗುತ್ತಾರೆ. ಇದರಿಂದ ದೇವಾಲಯಗಳ ಆವರಣ ಪ್ಲಾಸ್ಟಿಕ್‌ ತ್ಯಾಜ್ಯದಿಂದ ಮಲಿನಗೊಳ್ಳುತ್ತಿವೆ. ಆದ್ದರಿಂದ ಮುಜರಾಯಿ ಇಲಾಖೆಗೆ ಸೇರಿದ ಎಲ್ಲಾ ದೇವಾಲಯಗಳಲ್ಲೂ ಪ್ಲಾಸ್ಟಿಕ್‌ ಚೀಲಗಳ ಸಂಪೂರ್ಣ ನಿಷೇಧಕ್ಕೆ ಕ್ರಮಕೈಗೊಂಡಿದೆ. ಇದಕ್ಕೆ ಮುಖ್ಯ ಕಾರಣ ಎಂದರೆ. ರಾಜ್ಯದ ಮುಜರಾಯಿ ದೇಗುಲಗಳಲ್ಲಿ ಒಂದಾದ ಬೆಳಗಾವಿಯ ಸವದತ್ತಿ ಯಲ್ಲಮ್ಮ ಗುಡ್ಡದಲ್ಲಿ ಕೆಲವು ದಿನಗಳ ಹಿಂದೆ ಮುಜರಾಯಿ ಸಮಿತಿವು ಪರಿಶೀಲನೆ ನಡೆಸಿತ್ತು. ಊ ವೇಳೆ ಅಪಾರ ಪ್ರಮಾಣದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಕಂಡು ಬಂದಿದ್ದು ಐತಿಹಾಸಿಕ ಹಾಗು ಧಾರ್ಮಿಕ ಕ್ಷೇತ್ರದ ದೇವಾಲಯದ ಪರಿಸರಕ್ಕೆ ಮಾರಕವಾಗಿದ್ದನ್ನು ಗಂಭೀರವಾಗಿ ತೆಗೆದುಕೊಂಡ ಇಲಾಖೆ.

ಅಲ್ಲಿನ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ಸೂಚನೆ ನೀಡಿ ಈಗ ರಾಜ್ಯಮಟ್ಟದ ಸಭೆಯಲ್ಲಿ ರಾಜ್ಯಾದ್ಯಂತ ಇರುವ ಮುಜರಾಯಿ ಇಲಾಖೆಗೆ ಸೇರಿದ ಎಲ್ಲಾ ದೇವಾಲಯಗಳಲ್ಲಿ ಪ್ಲಾಸ್ಟಿಕ್‌ ನಿಷೇಧಕ್ಕೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿ. ದೇವಾಲಯಗಳಲ್ಲಿ ಪ್ಲಾಸ್ಟಿಕ್‌ ಸಂಪೂರ್ಣ ನಿಷೇಧಿಸಬೇಕು, ಮುಖ್ಯ ದ್ವಾರದ ಬಳಿಯಲ್ಲೇ ತಪಾಸಣೆ ನಡೆಸಬೇಕು, ದೇವಾಲಯದ ಆವರಣದಲ್ಲಿ ವ್ಯಾಪಾರಿಗಳು ಪ್ಲಾಸ್ಟಿಕ್‌ ಬಳಸದಂತೆ ಪರಿಶೀಲಿಸಬೇಕು, ಪತ್ರಿಕೆ ಹಾಗೂ ಟಿವಿ ಮಾಧ್ಯಮ ಮತ್ತು ಕರಪತ್ರಗಳ ಮೂಲಕ ಜಾಗೃತಿ ಮೂಡಿಸಬೇಕು, ಸ್ಥಳೀಯ ಸ್ವಸಹಾಯ ಗುಂಪುಗಳಿಂದ ಬಟ್ಟೆ ಬ್ಯಾಗ್‌ಗಳನ್ನು ತಯಾರಿಸಿ ದೇವಾಲಯಗಳಿಂದಲೇ ಕಡಿಮೆ ದರಕ್ಕೆ ವಿತರಿಸಬೇಕು. ಎಂದು ಸೂಚಿಸಿದೆ.

ಪ್ಲಾಸ್ಟಿಕ್ ನಿಷೇಧದ ಬಗ್ಗೆ ಸರ್ಕಾರದ ಆದೇಶ:

Also read: ಹೆಚ್ಚು ದುಡ್ಡು ಬರುತ್ತೆ ಅಂತ ಸೌದಿ-ಯು.ಎ.ಇ. ಗೆ ಹೋಗೋರಿಗೆ ಇದನ್ನು ತೋರಿಸಿ, ಭಾರತೀಯರು ಅಲ್ಲಿ ಎಷ್ಟು ಕಷ್ಟ ಎದುರಿಸುತ್ತಿದ್ದಾರೆ ಗೊತ್ತಾ??

ಈ ಮೊದಲೇ ಸರ್ಕಾರ ರಾಜ್ಯದ ತುಂಬೆಲ್ಲ 40 ಮೈಕ್ರಾನ್​ಗಿಂತ ತೆಳುವಾದ ಎಲ್ಲ ಬಗೆಯ ಪ್ಲಾಸ್ಟಿಕ್ ಉತ್ಪನ್ನ ಹಾಗೂ ಥರ್ಮಕೋಲ್, ಮೈಕೋ ಬೀಡ್ಸ್ ಬಳಸಿ ತಯಾರಿಸುವ ವಸ್ತುಗಳನ್ನು ನಿಷೇಧಿಸಲಾಗಿದೆ. 40 ಮೈಕ್ರಾನ್​ಗಿಂತ ತೆಳುವಾದ ಪ್ಲಾಸ್ಟಿಕ್ ಪುನರ್ ಬಳಕೆ(recycle) ಮಾಡಲು ಆಗುವುದಿಲ್ಲ. ಮಣ್ಣಿನಲ್ಲಿ ಕೊಳೆಯುವುದಿಲ್ಲ, ಸುಟ್ಟರೆ ರಾಸಾಯನಿಕಗಳಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಆದರಿಂದರಾಜ್ಯದಲ್ಲಿ ಎಲ್ಲಾ ಬಗೆಯ ಪ್ಲಾಸ್ಟಿಕ್ ಕೈ ಚೀಲ ನಿಷೇಧಿಸಿದೆ. ಅದರಲ್ಲಿ 40 ಮೈಕ್ರಾನ್​ಗಿಂತ ತೆಳುವಾದ ಕ್ಯಾರಿ ಬ್ಯಾಗ್, ಊಟದ ಮೇಜಿನ ಮೇಲೆ ಬಳಸುವ ಪ್ಲಾಸ್ಟಿಕ್ ಸೀಟು, ಥರ್ವಕೋಲ್ ಪ್ಲೇಟ್, ನೀರಿನ ಲೋಟ, ಬ್ಯಾನರ್, ಬಂಟಿಂಗ್ಸ್, ಫ್ಲೆಕ್ಸ್ ಗೆ ನಿಷೇಧ ಹೇರಲಾಗಿದೆ. ಆದರೆ, 40 ಮೈಕ್ರಾನ್​ಗಿಂತ ದಪ್ಪವಾಗಿರುವ ಹಾಲಿನ ಪ್ಯಾಕೆಟ್, ಆರೋಗ್ಯ ಇಲಾಖೆಯ ಸಿರಿಂಜ್, ನರ್ಸರಿಗಳಲ್ಲಿ ಸಸಿ ಬೆಳೆಸಲು ಬಳಸುವ ಪ್ಲಾಸ್ಟಿಕ್ ಚೀಲಗಳಿಗೆ ವಿನಾಯಿತಿ ನೀಡಲಾಗಿದೆ.