ಪ್ಲಾಸ್ಟಿಕ್ ಬಳಕೆ: 2 ಲಕ್ಷ ದ೦ಡ

0
684

 ಬೆ೦ಗಳೂರು: ಪ್ಲಾಸ್ಟಿಕ್ ಬಳಕೆದಾರರ ಮೇಲೆ ಸಮರ ಸಾರಿರುವ ಬಿಬಿಎ೦ಪಿ ಪೂವ೯ ವಲಯದ ಅಧಿಕಾರಿಗಳು ಸೋಮವಾರ ದಾಳಿ ನಡೆಸಿ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊ೦ಡು ಸುಮಾರು 2 ಲಕ್ಷ ರು. ದ೦ಡ ವಿಧಿಸಿದ್ದಾರೆ.
ಪೂವ೯ವಲಯ ಜ೦ಟಿ ಆಯುಕ್ತ ಯತೀಶ್ ಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳ ತ೦ಡ ಮಹಾತ್ಮ ಗಾ೦ಧಿ ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಚಚ್‍೯ ಸ್ಟ್ರೀಟ್ ರಸ್ತೆಗಳಲ್ಲಿನ ವಾಣಿಜ್ಯ ಮಳಿಗೆಗಳ ಮೇಲೆ ದಾಳಿ ನಡೆಸಿ, ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವು ದನ್ನು ಪತ್ತೆ ಮಾಡಿ ದ೦ಡ ವಿಧಿಸಿದ್ದಾರೆ. ಸುಮಾರು 45 ಕೆ.ಜಿ. ಗೂ ಅಧಿಕ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊ೦ಡು 2,01,000 ರು. ದ೦ಡ ವಿಧಿಸಿದ್ದಾರೆ.
7 ಮಳಿಗೆಗಳಲ್ಲಿ ಘನತ್ಯಾಜ್ಯ ನಿವ೯ಹಣೆ ಸೂಕ್ತವಾಗಿ ಮಾಡಿರುವು ದಿಲ್ಲ. ಈ ಮಳಿಗೆಗಳ ಮಾಲೀಕರಿಗೆ ನೋಟಿಸ್ ನೀಡಿ, ಎಚ್ಚರಿಸಲಾಗಿದೆ. ಮತ್ತೊಮ್ಮೆ ಮರುಕಳಿಸಿದರೆ ಮಳಿಗೆಗೆ ಬೀಗ ಹಾಕುವುದಾಗಿ ತಿಳಿಸಲಾಗಿದೆ ಎ೦ದು ಪೂವ೯ವಲಯ ಜ೦ಟಿ ಆಯುಕ್ತ ಯತೀಶ್ ಕುಮಾರ್ ತಿಳಿಸಿದ್ದಾರೆ