ನೀವು ರಸ್ತೆಯಲ್ಲಿ ಬಿಸಾಡುವ ಪ್ಲಾಸ್ಟಿಕ್ ಹಸುಗಳಿಗೆ ಎಷ್ಟು ಮಾರಕ ಅಂತ ಗೊತ್ತಿದ್ಯಾ? ಈ ಹಸುವಿನ ಹೊಟ್ಟೆಯಲ್ಲಿ ಸಿಕ್ಕಿತು 80 ಕೆಜಿ ಪ್ಲಾಸ್ಟಿಕ್.

0
1001

Kannada News | kannada Useful Tips

ಪ್ಲಾಸ್ಟಿಕ್ ಚೀಲಗಳಲ್ಲಿ ಬಹುತೇಕ ಎಲ್ಲಾ ಆಹಾರ ತ್ಯಾಜ್ಯಗಳು ಮತ್ತು ಕಸವನ್ನು ಹೊರಹಾಕಲಾಗುತ್ತದೆ. ಹಸುಗಳು ಸಾಮಾನ್ಯವಾಗಿ ಪ್ಲಾಸ್ಟಿಕ್ ಸೇರಿದಂತೆ ಎಲ್ಲ ಉಳಿದ ಆಹಾರವನ್ನು ತಿನ್ನುತ್ತವೆ. ತೆರೆದ ಕಸದ ತೊಟ್ಟಿಗಳಲ್ಲಿ ಆಹಾರವನ್ನು ಹಸುಗಳು ತಿನ್ನುತ್ತಿರುವುದನ್ನು ನೀವು ನೋಡಿರುತ್ತೀರ. ಹೀಗೆ ಪ್ಲಾಸ್ಟಿಕ್ ತಿಂದ ಒಂದು ಹಸುವಿಗೆ ಏನಾಯಿತು ಗೊತ್ತೇ?

ಬಿಹಾರ ಪಶುವೈದ್ಯಕೀಯ ಕಾಲೇಜು ಪಾಟ್ನಾದಲ್ಲಿ ಪ್ರಾಧ್ಯಾಪಕರು ಒಂದು ಆರು ವರ್ಷದ ಹಸುವಿನಿಂದ ಹೊಟ್ಟೆಯಿಂದ ಪಾಲಿಥಿನ್ ತ್ಯಾಜ್ಯವನ್ನು ಶಸ್ತ್ರಚಿಕಿತ್ಸೆ ಮತ್ತು ವಿಕಿರಣಶಾಸ್ತ್ರದ ತೆಗೆದಿದ್ದಾರೆ. ಇದನ್ನು ನೋಡಿ ಸ್ವತಃ ಪ್ರಾದ್ಯಾಪಕರೇ ದಂಗಾಗಿದ್ದಾರೆ ಏಕೆಂದರೆ ಆ ಹಸು ತಿಂದ ಪ್ಲಾಸ್ಟಿಕ್ ತ್ಯಾಜ್ಯ ಸುಮಾರು 80 ಕೆಜಿ.

ಹೌದು, ಹಸುವೊಂದು 80 ಕೆಜಿ ಪ್ಲಾಸ್ಟಿಕ್ ತ್ಯಾಜ್ಯ ತಿಂದಿದೆ. ನನ್ನ 13 ವರ್ಷದ ವೃತ್ತಿಪರ ಅಭ್ಯಾಸದಲ್ಲಿ ಹಸುವಿನ ಹೊಟ್ಟೆಯಿಂದ 80 ಕೆಜಿ ಪಾಲಿಥಿನ್ ತ್ಯಾಜ್ಯವನ್ನು ನಾವು ತೆಗೆದಿದ್ದು ಇದು ಮೊದಲ ಪ್ರಕರಣವಾಗಿದ್ದು, ಸುಮಾರು 3 ಗಂಟೆಗಳ ಸತತ ಶಸ್ತ್ರಚಿಕಿತ್ಸೆಯ ನಂತರ ಹಸುವಿನ ಹೊಟ್ಟೆಯಿಂದ ಇಷ್ಟು ಪ್ಲಾಸ್ಟಿಕ್ ತೆಗೆಯಲಾಗಿದೆ ಎಂದು ಪ್ರಾದ್ಯಾಪಕರು ಹೇಳಿದರು.

ಜನರು ಪಾಲಿಥಿನ್ ಚೀಲಗಳಲ್ಲಿ ತಿನ್ನುವವರನ್ನು ಮತ್ತು ಅವುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಎಸೆಯುವುದನ್ನು ತಪ್ಪಿಸಬೇಕು ಹಾಗು ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುವ ಬಗ್ಗೆ ಜಾಗೃತಿ ಮೂಡಿಸಲು ಗಂಭೀರವಾದ ಪ್ರಯತ್ನಗಳನ್ನು ಮಾಡಬೇಕು, ಎಂದು ಅವರು ಸರ್ಕಾರಕ್ಕೆ ತಾಕೀತು ಮಾಡಿದ್ದಾರೆ.

ಪ್ಲಾಸ್ಟಿಕ್ನಿಂದ ಸಂಪೂರ್ಣವಾಗಿ ಹಸುವಿನ ಜೀರ್ಣಕಾರಿ ವ್ಯವಸ್ಥೆಯನ್ನು ಉಸಿರುಗಟ್ಟಿಸುತ್ತದೆ ಮತ್ತು ಪ್ರಾಣಿಗಳಿಗೆ ಕಡುಯಾತನೆಯ ನೋವನ್ನು ಉಂಟುಮಾಡುತ್ತದೆ, ಪ್ಲಾಸ್ಟಿಕ್ ಅವಶೇಷಗಳು ಮಾನವ ಆಹಾರ ಸರಪಳಿಗಳನ್ನು ಡೈರಿ ಮತ್ತು ಪ್ರಾಣಿ ಉತ್ಪನ್ನಗಳ ಮೂಲಕ ಪ್ರವೇಶಿಸುತ್ತವೆ, ಇದರಿಂದ ಕೇವಲ ಹಸುವಿಗೆ ಮಾತ್ರವಲ್ಲದೆ ಹಸುವಿನ ಹಾಲು ಮತ್ತು ಇತರೆ ಡೈರಿ ಪದಾರ್ಥಗಳನ್ನು ಬಳಸುವ ಮನುಷ್ಯನ ಮೇಲು ಪರಿಣಾಮ ಬೀರುತ್ತದೆ ಎಂದರು.

Also Read: ಕೃಷಿ ಚಟುವಟಿಕೆಗಳಲ್ಲಿ ಗೋಮೂತ್ರದ ಉಪಯೋಗ ಗೊತ್ತಾದ್ರೆ ಆಶ್ಚರ್ಯ ಪಡ್ತಿರಾ!!!