ದಯಮಾಡಿ ದಾರಿ ಬಿಡಿ.. ಪ್ರಾಣ ಉಳಿಸಿ.. ನೀವು ಮಾಡುವ ಈ ಸಣ್ಣ ಪುಣ್ಯದ ಕೆಲಸ ಎಷ್ಟೋ ಜನರ ಪ್ರಾಣ ಉಳಿಸಬಲ್ಲದು

0
521

Kannada News | kannada Useful Tips

ಸಮಾಜದ ಮೇಲೆ ನಮಗೆ ನಮ್ಮದೇ ಆದ ಕೆಲವು ಕರ್ತವ್ಯಗಳಿರುತ್ತವೆ‌.. ಆದರೆ ಅದರ ಬಗ್ಗೆ ಯಾರೂ ತಲೆ ಕೆಡೆಸಿಕೊಳ್ಳುವುದಿಲ್ಲ.. ಅನೇಕರಿಗೆ ಈ ಕರ್ತವ್ಯಗಳ ಬಗ್ಗೆ ಉಡಾಫೆಯೂ ಕೂಡ… ಬೇರೆಯವರಿಗೆ ಏಕೆ ಸ್ವತಃ ನಾನೂ ಕೂಡ ನನ್ನ ಬಗ್ಗೆ ನನ್ನ ಸಂಸಾರದ ಬಗ್ಗೆ ಯೋಚನೆ ಮಾಡುತ್ತೇನೆಯೋ ಹೊರತು ಸಮಾಜದ ಬಗ್ಗೆ ಯೋಚಿಸುವ ಗೋಜಿಗೆ ಹೋಗುವುದಿಲ್ಲ.. ಆದರೆ ನಾವುಗಳು ಮಾಡುತ್ತಿರುವ ದೊಡ್ಡ ತಪ್ಪು ಇದೇ..‌ ಸಮಾಜದಲ್ಲಿ‌ ನಮ್ಮ ನಮ್ಮ ಕರ್ತವ್ಯವನ್ನು ನಾವುಗಳು ಪಾಲಿಸುತ್ತಾ ಬಂದರೆ ನಮ್ಮ ದೇಶ ಇನ್ನು ಎತ್ತರದ ಮಟ್ಟಕ್ಕೋಗುವುದಂತೂ ಸುಳ್ಳಲ್ಲ… ಬಿಡಿ ಸದ್ಯಕ್ಕೆ ವಿಷಯಕ್ಕೆ ಬರೋಣ..

ನಾನು ಮೊದಲೇ ಹೇಳಿದಂತೆ ಸಮಾಜದ ಕೆಲವು ಕರ್ತವ್ಯಗಳಲ್ಲಿ ಅತಿ ಮುಖ್ಯವಾದದ್ದು ಒಂದನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.. ಇದನ್ನು ನೀವು ಕರ್ತವ್ಯವೆಂದಾದರೂ ಭಾವಿಸಿ.. ಅಥವಾ ನಾನು ನಿಮ್ಮನ್ನು ಬೇಡಿಕೊಳ್ಳುತ್ತಿದ್ದೇನೆ ಎಂದಾದರೂ ಭಾವಿಸಿ.. ನನಗೆ ಮುಜುಗರವೇನಿಲ್ಲ.. ಆ ಕರ್ತವ್ಯ ಇದೇ ನೋಡಿ.. ನೀವು ರಸ್ತೆಗಳಲ್ಲಿ ಹೋಗುವಾಗ ಆಂಬುಲೆನ್ಸ್ ಬಂದರೆ ದಯಮಾಡಿ ಜಾಗ ಬಿಡಿ.. ಇದು ನಿಮಗೆ ಸಣ್ಣ ವಿಷಯದಂತೆ ಕಾಣುತ್ತಿರಬಹುದು ಆದರೆ ಇದರಲ್ಲಿ ಒಂದೊಂದು ಆಂಬುಲೆನ್ಸ್ ನಿಮ್ಮ ಮುಂದೆ ಹೋದಾಗಲೂ ಅಲ್ಲಿ ಒಂದೊಂದು ಜೀವ ಸಾವು ಬದುಕಿನ ಮಧ್ಯ ಹೋರಾಡುತ್ತಿರುತ್ತದೆ ಎಂಬುದನ್ನು ಮರೆಯಬೇಡಿ..

ಸಾಕಷ್ಟು ಮಂದಿ ಹಿಂದೆ ಆಂಬುಲೆನ್ಸ್ ಬರುತ್ತಿದ್ದರೂ ಜಾಗ ಬಿಡದೇ ಎಲ್ಲೋ ಆಕಾಶಕ್ಕೆ ಹಾರಿ ಹೋಗುತ್ತಿರುವವರ ಹಾಗೆ ನಡೆದುಕೊಳ್ಳುವುದೂ ಉಂಟು.. ಅಂತವರಿಗೆ ನಮ್ಮದೊಂದು ಮನವಿ.. ಆ ಅಂಬುಲೆನ್ಸ್ ನಲ್ಲಿ ನಿಮ್ಮ ಅಮ್ಮನೋ ಅಕ್ಕನೋ ಅಣ್ಣನೋ ತಂಗಿಯೋ ಇದ್ದರೆ ನಿಮ್ಮ ಪರಿಸ್ಥಿತಿ ಹೇಗಿರುತ್ತಿತ್ತು ಒಮ್ಮೆ ನೆನೆಸಿಕೊಳ್ಳಿ.. ಅಲ್ಲಿಯೂ ಕೂಡ ಯಾರದ್ದೊ ಮಗ.. ಯಾರದ್ದೊ ಗಂಡ, ಯಾರದ್ದೊ ತಮ್ಮ ಸಾವು ಬದುಕಿನ ಮಧ್ಯೆ ಹೋರಾಡುತ್ತಿರುತ್ತಾನೆ.. ಅವನ ಚಿಕಿತ್ಸೆಗೆ ನೀವು ದಾರಿ ಬಿಡುವುದರ ಮೂಲಕ ಸಹಾಯ ಮಾಡಿ.. ಎಷ್ಟೋ ಮಂದಿ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸೇರಿಸಲಾಗದೇ ದಾರಿಯ ಮಧ್ಯೆಯಲ್ಲಿ ಕೊನೆಯುಸಿರೆಳೆದಿದ್ದಾರೆ.. ಅಂತವರ ಸಾವಿಗೆ ನೀವು ಕಾರಣರಾಗಬೇಡಿ..

ಬದುಕುವ ಮೂರು ದಿನ ಮಾನವೀಯತೆಯಿಂದ ಬದುಕೋಣ.. ಸರಿ ಎಂದೆನಿಸಿದರೆ ಮಾಹಿತಿ ಹಂಚಿಕೊಳ್ಳಿ…

Also Read: ಈ ಏಳು ಆರೋಗ್ಯ ಸಂಗತಿಗಳ ಬಗ್ಗೆ ಗಮನ ಕೊಡದಿದ್ದರೆ ನಿಮ್ಮ ಆರೋಗ್ಯಕ್ಕೆ ತೀವ್ರ ಹಾನಿಯಾಗುವುದಂತೂ ಖಚಿತ!!