ಮೂಗಿನಲ್ಲಿ ಬೆಳೆಯುವ ಕೊದಲುಗಳನ್ನು ಹಿಂಸೆಯಿಂದ ತೆಗೆಯುತ್ತೀರಾ? ಇದರಿಂದ ಎಷ್ಟೊಂದು ಅಪಾಯಗಳಿವೆ ನೋಡಿ..

0
487

ಮನುಷ್ಯನ ದೇಹದ ಕೆಲವೊಂದು ಸೂಕ್ಷ್ಮ ಜಾಗದಲ್ಲಿ ಕೂದಲುಗಳ ಬೆಳವಣಿಗೆ ಸಾಮಾನ್ಯ. ಕೊದಲುಗಳು ಬೆಳೆದ ಜಾಗದಲ್ಲಿ ನರಗಳು ಹೆಚ್ಚು ಕಂಡು ಬರುತ್ತೇವೆ. ಕೊದಲುಗಳು ಬರಿ ಅದವಾಗಿ ಕಾಣಲು ಮಾತ್ರ ಬೆಳೆಯುವುದಿಲ್ಲ ಅವುಗಳಿಂದ ದೇಹ ಮತ್ತು ಚರ್ಮಕ್ಕೆ ಹಲವಾರು ಉಪಯೋಗಗಳಿವೆ, ಮುಖ್ಯವಾಗಿ ತಲೆಯ ಮೇಲಿರುವ ಕೂದಲು ತಲೆಯ ರಕ್ಷಣೆ ಮಾಡಲು ಮುಖ್ಯವಾಗಿದೆ. ಹಾಗೆಯೇ ಮೂಗಿನ ಒಳಗೆ ಬೆಳೆಯುವ ಕೂದಲು ಯಾವುದಕ್ಕೆ ಉಪಯೋಗ? ಮತ್ತು ಅವುಗಳನ್ನು ಕಿಳ್ಳುವುದರಿಂದ ಎಷ್ಟೊಂದು ಅಪಾಯ ಅಂತ ಇಲ್ಲಿದೆ ನೋಡಿ .

Also read: ಕೂದಲು ಉದುರುತ್ತಿದೆಯೇ ಚಿಂತಿಸಬೇಡಿ ದಪ್ಪ ಹಾಗೂ ಉದ್ದನೆಯ ಕೂದಲಿಗೆ ಇಲ್ಲಿದೆ ಪರಿಹಾರ ನೋಡಿ..

ಮೂಗಿನಲ್ಲಿರುವ ಕೂದಲು ಕೀಳಬಾರದೇಕೆ?

  • ಮೂಗಿನ ಮೇಲಿನ ಭಾಗದಿಂದ ತುಟಿಗಳ ಎರಡು ಮೂಲೆಗಳನ್ನು ಸೇರಿಸಿದರೆ, ತ್ರೀಕೋನ ಆಕಾರ ಕಾಣಿಸುತ್ತದೆ. ಮುಖದ ಈ ಭಾಗವನ್ನು ಅತೀ ಅಪಾಯಕಾರಿ ಎನ್ನಲಾಗುತ್ತದೆ. ಇದರಿಂದ ಏನೆಲ್ಲಾ ಪರಿಣಾಮಗಳು ಬರಬಹುದು ಎಂದು ವೈದ್ಯರು ತಿಳಿಸಿದ್ದಾರೆ.
  • ಕಣ್ಣು, ಮೂಗು ಮತ್ತು ಬಾಯಿಯನ್ನು ಸಂಧಿಸುವ ಈ ಭಾಗ ಬಹಳ ಸೂಕ್ಷ್ಮವಾಗಿರುತ್ತದೆ.
  • ದೇಹದ ಅನೇಕ ಪ್ರಮುಖ ರಕ್ತನಾಳಗಳು ಮುಖದ ಈ ಭಾಗಗಳ ಮೂಲಕ ಹಾದು ಹೋಗುತ್ತವೆ.
  • ಅಲ್ಲದೆ ರಕ್ತನಾಳಗಳು ನೇರವಾಗಿ ಮೆದುಳನ್ನು ಸಂಪರ್ಕಿಸುತ್ತವೆ.
  • ಕಣ್ಣು, ಬಾಯಿ ಮತ್ತು ಮೂಗಿಗೆ ಯಾವುದೇ ರೀತಿಯ ತೊಂದರೆಗಳು ಉಂಟಾದರೆ ನೇರವಾಗಿ ಅದು ಮೆದುಳಿನ ಮೇಲೆ ಪ್ರಭಾವ ಬೀರುತ್ತದೆ.
  • ಮೂಗಿನಲ್ಲಿ ಕಂಡು ಬರುವ ಬಾರಿ ಸಣ್ಣ ಗಾಯಗಳೂ ಕೂಡ ಅಪಾಯಕಾರಿಯಾಗಿ ಪರಿಣಮಿಸಬಹುದು.
  • ಕೂದಲನ್ನು ಕಿತ್ತುಕೊಂಡರೆ ರಕ್ತನಾಳದಲ್ಲಿ ರಂಧ್ರವಾಗಿ ರಕ್ತಸ್ರಾವ ಉಂಟಾಗಬಹುದು.
  • ಮೂಗಿನ ಗಾಯಕ್ಕೆ ಯಾವುದಾದರೂ ಸೋಂಕು ತಗುಲಬಹುದು.
  • ಮುಖ ತ್ರಿಕೋನ ಭಾಗದ ರಕ್ತನಾಳಗಳ ಮೇಲೆ ನೇರ ಪರಿಣಾಮ ಬೀರಬಹುದು.
  • ವ್ಯಕ್ತಿಯ ಮೆದುಳಿಗೆ ಹಾನಿಯುಂಟಾಗಿ ಸಾವು ಕೂಡ ಸಂಭವಿಸಬಹುದು, ಅಥವಾ ಹುಚ್ಚರಾಗುವ ಸಾಧ್ಯತೆ ಇದೆ.

ಈ ಕೂದಲುಗಳಿಂದ ಎಷ್ಟೊಂದು ಪ್ರಯೋಜನ?

Also read: ಸುಂದರವಾದ ಹಾಗು ಶೈನಿ ಕೂದಲು ನಿಮ್ಮದಾಗಬೇಕೆ ಹಾಗಾದರೆ ಈ ಆಹಾರವನ್ನು ಇಂದಿನಿಂದಲೇ ಸೇವಿಸಿ…

ಮೂಗಿನಲ್ಲಿ ಎರಡು ರೀತಿಯ ಕೂದಲು ಬೆಳೆಯುವುದು ದೇಹದ ಪ್ರಮುಖ ಕಾರ್ಯವನ್ನು ಮಾಡಲು ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಇಲ್ಲಿ ಉದ್ದನೆ ಬೆಳೆಯುವ ಕೂದಲನ್ನು-ವೈಬರಿಸೈ ಎಂದು ಕರೆಯಲಾಗುತ್ತದೆ. ಇದು ನಿಮ್ಮ ದೇಹದ ರಕ್ಷಣಾ ವ್ಯವಸ್ಥೆಯ ಪ್ರಮುಖ ಭಾಗವಾಗಿದೆ. ನಾವು ಆಕ್ಸಿಜನ್ ಮತ್ತು ಇಂಗಾಲದ ಡೈ ಆಕ್ಸೈಡ್​ನ್ನು ಮೂಗಿನ ಮೂಲಕ ಉಸಿರಾಡುತ್ತೇವೆ. ಈ ಉಸಿರಾಟ ಪ್ರಕ್ರಿಯೆ ವೇಳೆ ಆಕ್ಸಿಜನ್​ನೊಂದಿಗೆ ಧೂಳು, ಬ್ಯಾಕ್ಟೀರಿಯಾ ಮತ್ತು ಮಣ್ಣು ನಮ್ಮ ದೇಹ ಸೇರುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಈ ಕೂದಲುಗಳು ಫಿಲ್ಟರ್​ಗಳಾಗಿ ಕಾರ್ಯ ನಿರ್ವಹಿಸುತ್ತದೆ.

ಉಸಿರಾಟಕ್ಕೆ ಉಪಯೋಗವೇ?

Also read: ಈ ಒಂದು ಮನೆಮದ್ದು ನಿಮ್ಮ ಎಲ್ಲ ಚರ್ಮ ಹಾಗು ಕೂದಲು ಸಮಸ್ಸೆಗಳಿಗೆ ಪರಿಹಾರ ನೀಡುತ್ತದೆ..!!

ಮೂಗಿನ ಮೂಲಕ ಧೂಳಿನ ಕಣಗಳು, ಬ್ಯಾಕ್ಟೀರಿಯಾಗಳು ನಮ್ಮ ದೇಹವನ್ನು ಪ್ರವೇಶಿಸುವ ಸಾಧ್ಯತೆ ಹೆಚ್ಚಿರುತ್ತದೆ. ಇಂತಹ ಸಂದರ್ಭದಲ್ಲಿ ಮೂಗಿನಲ್ಲಿ ಕಡಿಮೆ ಕೂದಳಿದ್ದರೆ ಅದು ನೇರವಾಗಿ ಶ್ವಾಸಕೋಶ ಪ್ರವೇಶಿಸುತ್ತದೆ. ಇದರಿಂದ ಅನೇಕ ರೀತಿಯ ಅನಾರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಅದೇ ವೇಳೆ ಕೂದಲುಗಳಿದ್ದರೆ ನಮ್ಮ ಉಸಿರಾಟವನ್ನು ಫಿಲ್ಟರ್ ಮಾಡುವ ಕೆಲಸ ಮಾಡುತ್ತದೆ. ಕಣ್ಣು ರೆಪ್ಪೆಗಳು ಹೇಗೆ ನಮ್ಮ ಕಣ್ಣುಗಳನ್ನು ಶುದ್ಧವಾಗಿಟ್ಟುಕೊಳ್ಳಲು ನೆರವಾಗುತ್ತದೆಯೋ, ಹಾಗೆಯೇ ಮೂಗಿನ ಕೂದಲು ನಮ್ಮ ಮೂಗನ್ನು ಸ್ವಚ್ಛವಾಗಿ ಮತ್ತು ಆರೋಗ್ಯವಾಗಿರಿಸುತ್ತದೆ. ಶ್ವಾಸಕೋಶಕ್ಕೂ ಮೂಗಿಗೂ ನೇರ ಸಂಪರ್ಕ ಇರುವುದರಿಂದ ಮೂಗಿನ ಕೂದಲು ಶ್ವಾಸಕೋಶದ ಫಿಲ್ಟರ್​ ಆಗಿ ಕಾರ್ಯ ನಿರ್ವಹಿಸುತ್ತದೆ. ಇಲ್ಲದಿದ್ದರೆ ಕಲುಷಿತ ಬ್ಯಾಕ್ಟೀರಿಯಾಗಳು ದೇಹ ಸೇರಿ ಸೋಂಕು ಉಂಟಾಗುವ ಸಾಧ್ಯತೆಯೇ ಹೆಚ್ಚಿರುತ್ತದೆ. ಹಾಗೆಯೇ ಮೂಗಿನಲ್ಲಿ ಉದ್ದವಾಗಿ ಬೆಳೆಯುವ ಈ ಕೂದಲನ್ನು ಟ್ರಿಮ್ ಮಾಡುವ ಮೂಲಕ ಅಥವಾ ಕತ್ತರಿಯಲ್ಲಿ ಚಿಕ್ಕದಾಗಿ ಕಟ್​ ಮಾಡಿಕೊಳ್ಳುವುದು ಒಳ್ಳೆಯದು ಎಂದು ವೈದ್ಯರು ತಿಳಿಸಿದ್ದಾರೆ.