ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಅಜಿತ್ ದೋವಲ್ ಹತ್ಯೆಗೆ ಸ್ಕೆಚ್? ಮುಂಬೈ ಬಾಂಬ್ ದಾಳಿ ಮಾದರಿಯಲ್ಲೇ 30 ಕಡೆ ಭಾರೀ ದಾಳಿಗೂ ಸಂಚು.!

0
356

ದೇಶದಲ್ಲಿ ನಡೆಯುತ್ತಿರುವ ಅಭಿವೃದ್ದಿಯನ್ನು ಸಹಿಸದ ಪಾಕಿಸ್ತಾನ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹತ್ಯೆಗೆ ಸಂಚು ನಡೆಸಿದೆ ಎಂದು ಗುಪ್ತಚರ ಮಾಹಿತಿ ನೀಡಿದೆ. 2008ರ ನವೆಂಬರ್​ 26ರಂದು ಮುಂಬೈ ಸ್ಟಾರ್​ ಹೋಟೆಲ್​ಗಳ ಮೇಲಾದ ಬಾಂಬ್​ ದಾಳಿಯಂತೆ 30 ನಗರಗಳ ಮೇಲೆ ದಾಳಿ ನಡೆಸಲು ಹೊಂಚು ಹಾಕಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇದೆ. ಈಗಾಗಲೇ ಪಂಜಾಬ್ ರಾಜ್ಯದಲ್ಲಿ ಪಾಕಿಸ್ತಾನ ಡ್ರೋನ್​ಗಳಿಂದ ಶಸ್ತ್ರಾಸ್ತ್ರಗಳು ಮತ್ತು ಸಿಡಿಮದ್ದುಗಳು ಬೀಳುತ್ತಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣದಿಂದ ಎಲ್ಲೆಡೆ ಹೈ ಅಲರ್ಟ್ ಘೋಷಿಸಿದ್ದಾರೆ.

Also read: ಹತ್ತಾರು ಕೆಲಸಕ್ಕೂ ಒಂದೇ ಸ್ಮಾರ್ಟ್‌ ಕಾರ್ಡ್‌; ಇನ್ಮುಂದೆ ಆಧಾರ್, ಪಾಸ್ಪೋರ್ಟ್, ಡಿಎಲ್ ಮತ್ತು ವೋಟರ್ ಐಡಿ ಎಲ್ಲವೂ ಒಂದೇ ಕಾರ್ಡ್-ನಲ್ಲಿ??

ಮೋದಿ ಅಮಿತ್ ಶಾ ಹತ್ಯೆಗೆ ಸಂಚು?

ಹೌದು ಪಾಕಿಸ್ತಾನಕ್ಕೆ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿಕೊಡುವ 370ನೇ ವಿಧಿ ರದ್ದತಿಯನ್ನು ಸಹಿಸಲು ಸಾಧ್ಯವಾಗುತ್ತಿಲ್ಲ, ಆದ್ದರಿಂದ 370ನೇ ವಿಧಿ ರದ್ದು ಮಾಡಲು ಆದ್ಯತೆ ನೀಡಿದ ಮೋದಿ, ಶಾ ಹಾಗೂ ದೋವಲ್ ಮೇಲೆ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ. ಇತ್ತೀಚೆಗೆ ರಾಷ್ಟ್ರೀಯ ವಿಮಾನಯಾನ ಭದ್ರತಾ ಬ್ಯೂರೋಗೆ ಉಗ್ರರ ದಾಳಿಯ ಬಗ್ಗೆ ಅನಾಮಿಕ ಪತ್ರ ಬಂದಿದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ. ಅಷ್ಟೇ ಅಲ್ಲದೆ 370ನೇ ವಿಧಿ ರದ್ಧತಿಗೆ ಉಗ್ರರು ಪ್ರತಿಕಾರ ತೀರಿಸಿಕೊಳ್ಳುವುದಾಗಿ ಆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಮೋದಿ, ಶಾ ಹಾಗೂ ದೋವಲ್ ಅವರು ಪಾಕಿಸ್ತಾನಿ ಉಗ್ರರ ಹಿಟ್-ಲೀಸ್ಟ್‌ನಲ್ಲಿ ಇದ್ದಾರೆ ಎಂದು ತಿಳಿದ ತಕ್ಷಣ ಅಧಿಕಾರಿಗಳು ಎಲ್ಲೆಡೆ ಹೈ ಅಲರ್ಟ್ ಘೋಷಿಸಿದ್ದಾರೆ.

30 ಸ್ಥಳಗಳಲ್ಲಿ ದಾಳಿಗೆ ಉಗ್ರರ ಸ್ಕೆಚ್

Also read: ನೋಟ್ ಬ್ಯಾನ್ ರೀತಿ ಜನತೆಗೆ ಇನ್ನೊಂದು ಶಾಕ್ ಕೊಡಲು ಮುಂದಾದ ಮೋದಿ ಸರ್ಕಾರ, ಹಳೆಯ ವಾಹನಗಳಿಗೆ ಬ್ಯಾನ್??

ರಾಷ್ಟ್ರೀಯ ವಿಮಾನಯಾನ ಭದ್ರತಾ ಬ್ಯೂರೋಗೆ ಸಿಕ್ಕಿರುವ ಪತ್ರದಲ್ಲಿ, ಜೈಷ್-ಇ-ಮೊಹ್ಮದ್ ಸಂಘಟನೆ ಉಗ್ರರು ದೇಶದ 30 ನಗರಗಳ ಮೇಲೆ ದಾಳಿ ನಡೆಸಲು ಹೊಂಚು ಹಾಕಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇದೆ. ಪಠಾಣ್‍ಕೋಟ್, ಅಮೃತ್‍ಸರ್, ಜೈಪುರ, ಗಾಂಧಿನಗರ, ಲಕ್ನೋ, ಕಾನ್ಪುರ ಸೇರಿದಂತೆ ಜಮ್ಮುವಿನಲ್ಲೂ ದಾಳಿ ನಡೆಸಲು ಸ್ಕೆಚ್ ಹಾಕಿದ್ದಾರೆ. ಜೊತೆಗೆ ದೇಶದ 4 ವಿಮಾನ ನಿಲ್ದಾಣಗಳ ಮೇಲೂ ದಾಳಿ ನಡೆಸಲು ಪ್ಲಾನ್ ಮಾಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇದೆ ಎನ್ನಲಾಗಿದೆ. ಈ ಹಿಂದೆ ಲಷ್ಕರ್-ಇ-ತೈಬಾ(ಎಲ್‍ಇಟಿ) ಉಗ್ರ ಸಂಘಟನೆ ಮೋದಿ ಅವರ ಕ್ಷೇತ್ರ ವಾರಣಾಸಿ ಮೇಲೆ ದಾಳಿಗೆ ಸಂಚು ರೂಪಿಸಿತ್ತು ಎಂದು ವರದಿಯಾಗಿತ್ತು. ಅಲ್ಲದೆ ಎಲ್‍ಇಟಿ ಮುಖ್ಯಸ್ಥ ಹಾಫೀಜ್ ಸಯೀದ್ ನಿರಂತರವಾಗಿ ವಾರಣಾಸಿಯಲ್ಲಿ ದಾಳಿ ನಡೆಸಲು ಪ್ರಯತ್ನಿಸಿದ್ದನು ಎನ್ನಲಾಗಿದೆ. ಗುಪ್ತಚರ ಇಲಾಖೆ ವರದಿ ಪ್ರಕಾರ, ಎಲ್‍ಇಟಿ ಉಗ್ರರು ವಾರಣಾಸಿಯಲ್ಲಿ ದಾಳಿ ನಡೆಸಲು ನಿರಂತರ ಪಿತೂರಿ ನಡೆಸುತ್ತಿದ್ದಾರೆ. ಈ ದಾಳಿಗಳ ಮೂಲಕ ವಾರಣಾಸಿಯಲ್ಲಿ ತಮ್ಮ ನೆಲೆ ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಡ್ರೋನ್​ಗಳಿಂದ ಶಸ್ತ್ರಾಸ್ತ್ರಗಳು ರವಾನೆ?

Also read: ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರದಿಂದ ಬಿಗ್ ಶಾಕ್; ನೌಕರರ ನಿವೃತ್ತಿ ವಯಸ್ಸು ಕಡಿತಗೊಳಿಸಲು ನಡೆಯುತ್ತಿದೆ ಪ್ಲಾನ್??

ಪಂಜಾಬ್ ರಾಜ್ಯದಲ್ಲಿ ಪಾಕಿಸ್ತಾನ ಡ್ರೋನ್​ಗಳಿಂದ ಶಸ್ತ್ರಾಸ್ತ್ರಗಳು ಮತ್ತು ಸಿಡಿಮದ್ದುಗಳು ಬೀಳುತ್ತಿವೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಪಂಜಾಬ್​ ಸಿಎಂ ಅಮರೀಂದರ್ ಸಿಂಗ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ಈ ಬಗ್ಗೆ ಇದೀಗ ಖಾತರಿ ಸಿಕ್ಕಿದ್ದು, ಪಂಜಾಬ್​ನ ತರ್ನ್​ ತರನ್​ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದ ಎಕೆ-47 ರೈಫಲ್​ಗಳು, ಸ್ಯಾಟಲೈಟ್​ ಫೋನ್​ಗಳು ಮತ್ತು ಗ್ರೆನೇಡ್​ಗಳು ಬಿದ್ದಿವೆ. ಆಗಸದಲ್ಲಿ ಹಾರಿದ ಡ್ರೋನ್​ನಿಂದ ಈ ವಸ್ತುಗಳು ಕೆಳಗೆ ಬಿದ್ದಿರುವುದರಿಂದ ಸುತ್ತಮುತ್ತಲಿನ ಜನರು ಆತಂಕಕ್ಕೊಳಗಾಗಿದ್ದಾರೆ.
ಈ ಬಗ್ಗೆ ಪಂಜಾಬ್ ಪೊಲೀಸರು ಖಚಿತಪಡಿಸಿದ್ದು, ಜಿಲ್ಲೆಯ ಗಡಿ ಭಾಗದಲ್ಲಿ ಹಾರಾಡಿದ ಡ್ರೋನ್​ ಪಾಕಿಸ್ತಾನಕ್ಕೆ ಸೇರಿದ್ದು ಎನ್ನಲಾಗಿದೆ. ಪಂಜಾಬ್​ನ ರಜೋಕ್ ಎಂಬ ಗ್ರಾಮದಲ್ಲಿ ಭಾನುವಾರ 5 ಎಕೆ-47 ರೈಫಲ್​ಗಳು ಪತ್ತೆಯಾಗಿದ್ದವು. ಇದರ ಜೊತೆಗೆ ಹ್ಯಾಂಡ್​ ಗ್ರೆನೇಡ್​ಗಳೂ ಪತ್ತೆಯಾಗಿದ್ದವು. ಜಿಪಿಎಸ್​ ಅಳವಡಿಸಿದ್ದ ಡ್ರೋನ್​ ಮೂಲಕ ಈ ಶಸ್ತ್ರಾಸ್ತ್ರಗಳನ್ನು ಪಂಜಾಬ್ ಗಡಿಯಲ್ಲಿ ಹಾಕಲಾಗಿದೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.