ಪ್ರಧಾನಿ ಮೋದಿಗೆ ಮತ್ತೊಂದು ಪ್ರಶಸ್ತಿ; ಯುಎಇ ಅತ್ಯುನ್ನತ ನಾಗರಿಕ ಪ್ರಶಸ್ತಿ, ಯುಎಇ ಅಧ್ಯಕ್ಷ ಝಾಯದ್ ಮೆಡಲ್’ ಘೋಷಣೆ..

0
164

ಎರಡು ದೇಶಗಳ ಮಧ್ಯೆ ಐತಿಹಾಸಿಕ ಹಾಗೂ ವಿಸ್ತಾರವಾದ ರಣನೀತಿಗೆ ಸಂಬಂಧಿಸಿದ ಒಪ್ಪಂದಗಳ ಮೂಲಕ ಮತ್ತೊಮ್ಮೆ ಸಂಬಂಧಗಳ ವೃದ್ಧಿಸುವಲ್ಲಿ ಪ್ರಧಾನಿ ಮೋದಿ ಪ್ರಮುಖ ಪಾತ್ರ ವಹಿಸಿದ್ದ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಯುನೈಟೆಡ್ ಅರಬ್ ಎಮಿರೇಟ್ಸ್(UAE) ನ ಅತ್ಯುನ್ನತ ನಾಗರಿಕ ಗೌರವವನ್ನು ಮುಡಿಗೇರಿಸಿಕೊಳ್ಳಲಿದ್ದಾರೆ. ಯುಎಇ ರಾಷ್ಟ್ರಪತಿ ಖಲೀಫಾ ಝಾಯಿದ್ ಬಿನ್ ಸುಲ್ತಾನ್ ಅಲ್ ನಹ್ಯಾನ್‍ ಅವರು ಪ್ರಧಾನಿ ಮೋದಿಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಘೋಷಿಸಿದ್ದಾರೆ.

Also read: ಸಿ ವೋಟರ್ ನಡೆಸಿದ ಸಮೀಕ್ಷೆಯಲ್ಲಿ ಮೋದಿ ಮುಂದಿದ್ದಾರೆ; ಚುನಾವಣೆ ಮುಗಿಯುವ ಒಳಗೆ ರಾಹುಲ್ ಗಾಂಧಿ ಮುಂದೆ ಬರಲು ಸಾಧ್ಯವಾ?

ಪ್ರಧಾನಿ ನರೇಂದ್ರ ಮೋದಿ ಅವರ ಸಂಯುಕ್ತ ಅರಬ್‌ ಸಂಸ್ಥಾನದ (ಯುಎಇ) ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಝಾಯೆದ್ ಮೆಡಲ್’ ಗೌರವಕ್ಕೆ ಪಾತ್ರರಾಗಿದ್ದಾರೆ. ಎರಡೂ ದೇಶಗಳ ನಡುವಿನ ಬಾಂಧವ್ಯಕ್ಕೆ ವೃದ್ಧಿಗೆ ಮೋದಿ ವಹಿಸಿದ ಪ್ರಮುಖ ಪಾತ್ರಕ್ಕಾಗಿ ಈ ಅತ್ಯುನ್ನನ ಪುರಸ್ಕಾರ ನೀಡಿರುವುದಾಗಿ ಯುಎಇ ಸರಕಾರ ತಿಳಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಯುಎಇ ಅಧ್ಯಕ್ಷ ಶೇಖ್‌ ಖಲೀಫಾ ಬಿನ್‌ ಜಾಯೆದ್‌ ಅಲ್‌ ನಹ್ಯಾನ್‌, “ನಾವು ಭಾರತದೊಂದಿಗೆ ಐತಿಹಾಸಿಕ ಮತ್ತು ಸಮಗ್ರವಾದ ಕಾರ್ಯತಂತ್ರದ ಸಂಬಂಧಗಳನ್ನು ಹೊಂದಿದ್ದೇವೆ. ನಮ್ಮ ಆತ್ಮೀಯ ಗೆಳೆಯರಾದ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ನಡುವಿನ ಸಂಬಂಧಗಳನ್ನು ವೃದ್ಧಿಸುವಲ್ಲಿ ಗಮನಾರ್ಹ ಪಾತ್ರ ವಹಿಸಿದ್ದಾರೆ. ಎಂದು ಯುಎಇ ಹೇಳಿದೆ.
2015ರಲ್ಲಿ ಮೋದಿ ಅವರು ಯುಎಇಗೆ ಭೇಟಿ ನೀಡಿದ ಬಳಿಕ ಎರಡೂ ದೇಶಗಳ ನಡುವೆ ಸಂಬಂಧ ವೃದ್ಧಿಗೊಂಡಿತ್ತು. 2017ರಲ್ಲಿ ಗಣರಾಜ್ಯೋತ್ಸವ ಪರೇಡ್ ಮುಖ್ಯ ಅತಿಥಿಯಾಗಿ ಯುಎಇ ಯುವರಾಜ ಭೇಟಿ ನೀಡಿದ್ದರು. ಮೋದಿ ಎರಡು ಸಲ ಭೇಟಿ ನೀಡಿರುವ ದೇಶಗಳಲ್ಲಿ ಯುಎಇ ದೇಶ ಸಹ ಒಂದಾಗಿದೆ. ಯುಎಇ ಮೂಲಕ ಭಾರತಕ್ಕೆ ಶೇ.8ರಷ್ಟು ಇಂಧನ ಆಮದಾಗುತ್ತದೆ. ಭಾರತಕ್ಕೆ ಕಚ್ಚಾ ತೈಲವನ್ನು ಪೂರೈಸುವ ಐದನೇ ಅತಿ ದೊಡ್ಡ ದೇಶ ಯುಎಇ. ಗುರುಗ್ರಾಮದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಅಂತಾರಾಷ್ಟ್ರೀಯ ಸೌರ
ಒಕ್ಕೂಟದಲ್ಲೂ (ಐಎಸ್‍ಎ) ಯುಎಇ ಭಾಗಿಯಾಗಿದೆ.

Also read: ಲಾಲ್ ಬಹದ್ದೂರ್ ಶಾಸ್ತ್ರಿ, ವಾಜಪೇಯಿ ನಂತರ ಪ್ರಧಾನಿ ಆದ ಮೇಲೂ ಬೃಹತ್ ಆಸ್ತಿ ಮಾಡದ ಏಕೈಕ ಪ್ರಧಾನಿ ಅಂದ್ರೆ ಮೋದಿ ಅನ್ಸುತ್ತೆ; ಮೋದಿ ಆಸ್ತಿ ವಿವರ ನೋಡಿ ನಿಮ್ಗೆ ಗೊತ್ತಾಗುತ್ತೆ!!

ಇಂತಹ ದೇಶದ ಜೊತೆಗೆ ಭಾರತದ ಸಂಬಂಧವನ್ನು ಗಟ್ಟಿ ಗೊಳಿಸಿದೆ. ಇದಕ್ಕೆ ಮೂಲ ಕಾರಣ ಮೋದಿಯವರು ಅವರ ಈ ಪ್ರಯತ್ನಕ್ಕಾಗಿ ಯುಎಇ ಅಧ್ಯಕ್ಷರು ಝಾಯೆದ್ ಮೆಡಲ್ ನೀಡಿ ಗೌರವಿಸುತ್ತಿದ್ದಾರೆ” ಎಂದಿದ್ದಾರೆ. ಈ ಅತ್ಯುನ್ನತ ಪುರಸ್ಕಾರವನ್ನು ವಿಶೇಷವಾಗಿ ರಾಜರು, ಅಧ್ಯಕ್ಷರು ಹಾಗೂ ರಾಜ್ಯದ ಮುಖ್ಯಸ್ಥರಿಗೆ ಪ್ರದಾನ ಮಾಡಲಾಗುತ್ತದೆ. ಇಂತಹ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಮೋದಿ ಭಾಜನರಾಗಿರುವುದು ವಿಶೇಷ. ಈ ಹಿಂದೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಯುಕೆ ರಾಣಿ ಎಜಿಜಬೆತ್ 2 ಅವರಿಗೆ ನೀಡಲಾಗಿದೆ.

Also read: ನರೇಂದ್ರ ಮೋದಿಯವರ ಪ್ರಶಸ್ತಿಯ ಮೇಲೆ ಪಾಕ್ ಕರಿನೆರಳು; ವಿಶ್ವಸಂಸ್ಥೆಯಿಂದ ‘ಚಾಂಪಿಯಲ್‌ ಆಫ್‌ ಅರ್ಥ್’| ಪ್ರಶಸ್ತಿ ಹಿಂಪಡೆಯಲು ಪಾಕ್ ಕೋರಿಕೆ..

2015ರಲ್ಲಿ ಮೋದಿ ಅವರು ಯುಎಇಗೆ ಭೇಟಿ ನೀಡಿದ ಬಳಿಕ ಎರಡೂ ದೇಶಗಳ ನಡುವೆ ಸಂಬಂಧ ವೃದ್ಧಿಗೊಂಡಿತ್ತು. 2017ರಲ್ಲಿ ಗಣರಾಜ್ಯೋತ್ಸವ ಪರೇಡ್ ಮುಖ್ಯ ಅತಿಥಿಯಾಗಿ ಯುಎಇ ಯುವರಾಜ ಭೇಟಿ ನೀಡಿದ್ದರು. ಮೋದಿ ಎರಡು ಸಲ ಭೇಟಿ ನೀಡಿರುವ ದೇಶಗಳಲ್ಲಿ ಯುಎಇ ದೇಶ ಸಹ ಒಂದಾಗಿದೆ.