ಮೋದಿಯಿಂದಲೇ ಚಂದ್ರಯಾನ-2ಗೆ ಅಪಶಕುನವಾಯಿತು; ಎಚ್.ಡಿ.ಕೆ.ಯಿಂದ ಬೇಜವಾಬ್ದಾರಿ ಹೇಳಿಕೆ!!

0
169

ಚಂದ್ರಯಾನ-2 ವಿಪಲವಾಗಲು ಪ್ರಧಾನಿ ನರೇಂದ್ರ ಮೋದಿಯೇ ಅಪಶಕುನ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದು, ಮೋದಿ ಬೆಂಗಳೂರಿಗೆ ಬಂದಿದ್ದು ಪ್ರಚಾರ ಗಿಟ್ಟಿಸಲು, ಇವರು ಇಸ್ರೊ ಕೇಂದ್ರಕ್ಕೆ ಕಾಲಿಟ್ಟದ್ದೇ ತಡ ವಿಜ್ಞಾನಿಗಳಿಗೆ ಅದು ಅಪಶಕುನ ಆಯಿತು. ಯಾರೋ ಮಾಡಿದ್ದು ನಾನೇ ಮಾಡಿದೆ ಎಂದು ಹೇಳಿಕೊಳ್ಳುವ ಮೋದಿ. ರಾಜ್ಯದ ಬಿಜೆಪಿ ನಾಯಕರ ಮೇಲೆ ಎಷ್ಟೊಂದು ಅಕ್ಕರೆ ಇಟ್ಟುಕೊಂಡಿದ್ದಾರೆ ಎನ್ನುವುದು ತಿಳಿಯುತ್ತಿದೆ. ಎಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ವಿವಾದಾತ್ಮಕ ಹೇಳಿಕೆ ನೀಡಿದ್ದು ಭಾರಿ ವೈರಲ್ ಆಗಿದೆ.

Also read: ಪಾಲಕರೇ ಮಕ್ಕಳ ಕೈಯಲ್ಲಿ ವಾಹನ ಕೊಡುವ ಮುನ್ನ ಎಚ್ಚರ; ನಿಮಗೆ ಬಿಳ್ಳುತ್ತೆ 25 ಸಾವಿರ ದಂಡದ ಜೊತೆಗೆ 3 ವರ್ಷ ಜೈಲು ವಾಸ.!

ಚಂದ್ರಯಾನ-2 ಗೆ ಮೋದಿ ಅಪಶಕುನ?

ಪ್ರಧಾನಿ ಮೋದಿ ಅವರು ಪ್ರಚಾರಕ್ಕಾಗಿ ಚಂದ್ರಯಾನ್-2ನ ವಿಕ್ರಂ ಲ್ಯಾಂಡರ್ ಚಂದ್ರಸ್ಪರ್ಶದ ವೇಳೆ ಇಸ್ರೋ ಕಚೇರಿಗೆ ಬಂದಿದ್ದರು. ಈ ಸಾಧನೆಯನ್ನು ತಾವೇ ಮಾಡಿದ್ದಾಗಿ ಬಿಂಬಿಸುವುದಕ್ಕೆ ಬಂದಿದ್ದರು. ಆದರೆ ಅಲ್ಲಿ ಅವರು ಕಾಲಿಟ್ಟಿದ್ದು ಇಸ್ರೋ ವಿಜ್ಞಾನಿಗಳಿಗೆ ಎಲ್ಲೋ ಒಂದು ಕಡೆ ಅಪಶಕುನ ಉಂಟಾಯಿತೋ ಏನೋ ಗೊತ್ತಿಲ್ಲ. ವಿಕ್ರಂ ಲ್ಯಾಂಡರ್ ಸರಿಯಾಗಿ ಲ್ಯಾಂಡ್ ಆಗಲಿಲ್ಲ , ಚಂದ್ರಯಾನ-2 ಬಾಹ್ಯಾಕಾಶ ಯೋಜನೆಗೆ ವಿಜ್ಞಾನಿಗಳು 10ರಿಂದ 12 ವರ್ಷಗಳ ಕಾಲ ಕಷ್ಟಪಟ್ಟು ಕೆಲಸ ಮಾಡಿದ್ದರು. ಚಂದ್ರಯಾನ-2ಗೆ 2008-09ರಲ್ಲಿಯೇ ಅನುಮೋದನೆ ನೀಡಿ ಅದೇ ವರ್ಷ ಹಣ ಬಿಡುಗಡೆ ಮಾಡಲಾಗಿತ್ತು. ಆದರೆ ಅದರ ಶ್ರೇಯಸ್ಸನ್ನೆಲ್ಲ ತಾವೇ ಪಡೆದುಕೊಳ್ಳಲು ಮೋದಿಯವರು ಬೆಂಗಳೂರಿಗೆ ಬಂದರು. ಅದೇ ವಿಜ್ಞಾನಿಗಳಿಗೂ ಅಪಶಕುನವಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

Also read: ಹೊಸ ಕಾರು ಖರೀಧಿಸುವವರಿಗೆ ಸುವರ್ಣಾವಕಾಶ; 2 ಲಕ್ಷದವರೆಗೆ ಭರ್ಜರಿ ಡಿಸ್ಕೌಂಟ್ ಆಫರ್, ಯಾವ ಕಾರಿಗೆ ಎಷ್ಟು ಕಡಿಮೆ ಇಲ್ಲಿದೆ ನೋಡಿ ಮಾಹಿತಿ.!

ಮುಂದೆ ಮಾತನಾಡಲು ದೈರ್ಯ ಇಲ್ಲ?

ರಾಜ್ಯದ ನೆರೆ ಪರಿಸ್ಥಿತಿ ಕುರಿತು ಕೇಂದ್ರ ಸಚಿವರು ಈಗಾಗಲೇ ಪರಿಶೀಲನೆ ಮಾಡಿದ್ದಾರೆ. ಆದರೂ ಕೂಡ ಇನ್ನು ಪರಿಹಾರ ಬಿಡುಗಡೆಯಾಗಿಲ್ಲ. ಪ್ರಧಾನಿಗಳಿಗೆ ರಷ್ಯಾಗೆ ಹೋಗಿ 7,000 ಕೋಟಿ ಅನುದಾನ ನೀಡಲು ಸಮಯವಿದೆ. ಆದರೆ ಕರ್ನಾಟಕದಲ್ಲಿ ಆಗಿರುವ ಅನಾಹುತಕ್ಕೆ ಹಣಕೊಡುವ ಔದಾರ್ಯ ತೋರಿಲ್ಲ. ಇದು ಬಿಜೆಪಿ ಸರ್ಕಾರಕ್ಕೆ ಕರ್ನಾಟಕದ ಮೇಲಿರುವ ಪ್ರೀತಿ. ಮೋದಿ ಅವರ ಮುಂದೆ ಮಾತನಾಡುವುದಕ್ಕೆ ರಾಜ್ಯ ಬಿಜೆಪಿ ನಾಯಕರು ಹೆದರುತ್ತಾರೆ ಎಂದು ಕುಮಾರಸ್ವಾಮಿ ವ್ಯಂಗ್ಯ ಮಾಡಿದರು.

ವಸತಿ ಸಚಿವರೋ, ದಸರಾ ಸಚಿವರೋ?

Also read: ವಿಕ್ರಮ್ ಲ್ಯಾಂಡರ್ ಪತ್ತೆ; ಸಹಾಯಕ್ಕೆ ಬಂದ ಮಿತ್ರ ಇಸ್ರೇಲ್ ದೇಶ, ಯಶಸ್ವಿಯಾಗುತ್ತ ಚಂದ್ರಯಾನ-2??

ವಿ ಸೋಮಣ್ಣ ವಸತಿ ಸಚಿವರೋ, ದಸರಾ ಸಚಿವರೋ ಎಂಬ ಅನುಮಾನ ಮೂಡುತ್ತಿದೆ. ಪ್ರವಾಹ ಪೀಡಿತ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಸರ್ಕಾರ ನೆರೆಸಂತ್ರಸ್ತರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ವಸತಿ ಸಚಿವರು ಇದ್ದಾರೋ ಇಲ್ಲವೋ ಗೊತ್ತಿಲ್ಲ. ಯಾರಿಗೆ ಖಾತೆ ಹಂಚಿಕೆಯಾಗಿದೆಯೋ ಅನುಮಾನ ಮೂಡುತ್ತದೆ. ವಸತಿ ಸಚಿವರು ದಸರಾ ಸಚಿವರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ದಸರಾಗೆ ಮಂತ್ರಿ ವಿ ಸೋಮಣ್ಣ ತಲೆ‌ಕೆಡಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕ ಪಾಲಿಗೆ ವಸತಿ ಸಚಿವರೇ ಇಲ್ಲ. ಅಲ್ಲಿ ಅವರಿಗೆ ಶೆಡ್​ ನಿರ್ಮಿಸುವಂತೆ ಸೂಚನೆ ನೀಡಲು ಕೂಡ ಸಚಿವರು ಹೋಗಿಲ್ಲ. ದಸರಾವನ್ನು ಅಧಿಕಾರಿಗಳು ಮಾಡುತ್ತಾರೆ. ಅದಕ್ಕೆ ಅವರು ಸಮರ್ಥರಿದ್ದಾರೆ. ವಸತಿ ಸಚಿವರು ಇನ್ನಾದರೂ ದಯಮಾಡಿ ನೆರೆ ಪ್ರದೇಶಗಳಿಗೆ ಹೋಗಿ, ನೆರೆ ಸಂತ್ರಸ್ತರಿಗೆ ಮನೆ ಕಲ್ಪಿಸುವ ಬಗ್ಗೆ ಚಿಂತಿಸಬೇಕು ಎಂದು ಹೇಳಿದ್ದಾರೆ.