ಬಾಗಲಕೋಟೆ, ಚಿಕ್ಕೋಡಿಯಲ್ಲಿ ಸೇರಿದ್ದ ಜನಸ್ತೋಮ ನೋಡಿ ಮೋದಿ ಫುಲ್ ಖುಷ್; ತಮಗೆ ಅದ ಅನುಭವವನ್ನು ಫೇಸ್ಬುಕ್ ನಲ್ಲಿ ಹಂಚಿಕೊಂಡ ಮೋದಿ..

0
514

ಲೋಕಸಭಾ ಚುನಾವಣೆ ಸದ್ದು ರಾಜ್ಯದಲ್ಲಿ ಜೋರಾಗಿದ್ದು ಎರಡನೇ ಹಂತದ ಮತದಾನಕ್ಕೆ ಇನ್ನೆರಡು ದಿನಗಳು ಮಾತ್ರ ಬಾಕಿ ಉಳಿದಿವೆ. ಈ ಹಿನ್ನೆಲೆಯಲ್ಲಿ ಮೋದಿಯವರು ಪ್ರಚಾರ ಸಮಾವೇಶದಲ್ಲಿ ಬಾಗಲಕೋಟೆ, ಚಿಕ್ಕೋಡಿಗೆ ಆಗಮಿಸಿದರು ಎರಡು ಕಡೆಯಲ್ಲಿ ಮೋದಿಯವರ ಅಭಿಮಾನಿಗಳು ಅಪಾರ ಪ್ರಮಾಣದಲ್ಲಿ ಸೇರಿದರು ಇದನ್ನು ಕಂಡ ಮೋದಿಯವರು ಕರ್ನಾಟಕದ ಬಗ್ಗೆ ಹೊಗಳಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ಫೋಟೋ ಶೇರ್ ಮಾಡಿ ತಮ್ಮ ಖುಷಿಯನ್ನು ಹಂಚಿಕೊಂಡು ಕರ್ನಾಟಕದ ಜನರನ್ನು ಹೊಗಳಿದ್ದಾರೆ.

Also read: ಶಾಶ್ವತವಾಗಿ ದೇವೇಗೌಡರ ಕುಟುಂಬವನ್ನು ರಾಜಕೀಯದಿಂದ ಕಿತ್ತೊಗೆಯಿರಿ; ಸೈನಿಕರಿಗೆ ಅವಮಾನ ಮಾಡಿದ ಪರಿವಾರಕ್ಕೆ ಈ ಚುನಾವಣೆಯಲ್ಲಿ ಪಾಠ ಕಲಿಸಬೇಕು; ನರೇಂದ್ರ ಮೋದಿ..

ಹೌದು ಬಾಗಲಕೋಟೆ ಹಾಗೂ ಚಿಕ್ಕೋಡಿಯಲ್ಲಿ ಗುರುವಾರ ನಡೆದ ಬಿಜೆಪಿ ಬೃಹತ್ ಸಮಾವೇಶದಲ್ಲಿ ಮೋದಿ ಅವರು ಭಾಗಿಯಾಗಿದ್ದರು. ಸಮಾವೇಶದಲ್ಲಿ ಸೇರಿದ್ದ ಸಾವಿರಾರು ಜನರು ಹಾಗೂ ಅವರ ಬೆಂಬಲವನ್ನು ನೋಡಿ ಮೋದಿ ಖುಷ್ ಆಗಿದ್ದಾರೆ. ಅಲ್ಲದೆ ಈ ಬೆಂಬಲ, ಜನಸ್ತೋಮ ನೋಡಿ ರಾಜ್ಯದಲ್ಲಿರುವ ಮೈತ್ರಿ ಸರ್ಕಾರ ಹೆದರಿದೆ ಎಂದು ಬರೆದು ತಮ್ಮ ಅಧಿಕೃತ ಫೇಸ್‍ಬುಕ್ ಖಾತೆಯಲ್ಲಿ ಸಮಾವೇಶಕ್ಕೆ ಬಂದಿದ್ದ ಜನಸ್ತೋಮದ ಫೋಟೋವನ್ನು ಅಪ್ಲೋಡ್ ಮಾಡಿ, ತಮಗೆ ಆದ ಖುಷಿಯನ್ನು ಹಂಚಿಕೊಂಡಿದ್ದಾರೆ.

ಏನಿದು ಮೋದಿ ಅಭಿಮಾನ?

Also read: ಬೆಂಗಳೂರು ದಕ್ಷಿಣದ ನೈಜ ಮತದಾರರು ಬಿ.ಜೆ.ಪಿ.ಗೆ ಮತ ಹಾಕುವುದನ್ನು ತಪ್ಪಿಸಲು ಅವರ ಹೆಸರನ್ನು ಪಾಲಿಕೆಯವರು ಕೈ ಬಿಟ್ಟಿದ್ದಾರೆ: ಗಂಭೀರ ಆರೋಪ ಮಾಡಿರುವ ಬಿ.ಜೆ.ಪಿ.!!

ಮೋದಿ ಅಲೆಯು ಕರ್ನಾಟಕದಲ್ಲಿ ಜೋರಾಗಿದ್ದು ಮೋದಿಯವರು ರಾಜ್ಯಕ್ಕೆ ಬರುವ ಸುದ್ದಿ ತಿಳಿದ ಕೂಡಲೇ ಜನರು ಬರಲು ಸಜ್ಜಾಗುತ್ತಾರೆ ನೇರವಾಗಿ ಮೋದಿಯನ್ನು ನೋಡಬೇಕು ಎನ್ನುವ ಆತುರದಲ್ಲಿ ದಿನದ ಮೊದಲೇ ಕಾದು ಕುಳಿತ್ತಿರುತ್ತಾರೆ. ಬರಿ ಬಿಜೆಪಿ ಪಕ್ಷದವರು ಮಾತ್ರವಲ್ಲದೆ ಹಳ್ಳಿ ಹಳ್ಳಿಗಳಿದ ಆಗಮಿಸುತ್ತಾರೆ. ಇದೆ ರೀತಿ ಬಾಗಲಕೋಟೆ ಮತ್ತು ಚಿಕ್ಕೋಡಿಯಲ್ಲಿ ಲಕ್ಷಾಂತರ ಜನರು ಸೇರಿದ್ದಾರೆ. ಇದನ್ನು ನೋಡಿದ ಮೋದಿಯವರು ದಂಗಾಗಿ ಹೋಗಿದ್ದಾರೆ. ಮೋದಿ ಮೇಲೆ ಕರ್ನಾಟಕದಲ್ಲಿ ಇಟ್ಟಿರುವ ಪ್ರೀತಿ ಬರಿ ಮಾತಿನಿಂದ ಕೇಳುತ್ತಿದ್ದ ಮೋದಿ ರಿಯಲ್ ಆಗಿ ನೋಡಿ ಹೃದಯ ತುಂಬಾ ಹೊಗಳಿದ್ದಾರೆ. ಅದನ್ನು ಕುರಿತು ಪೋಸ್ಟ್ ಮಾಡಿದ್ದು ಹೀಗಿದೆ ನೋಡಿ.

ಮೋದಿ ಪೋಸ್ಟ್ ಮಾಡಿ ಹೇಳಿದ್ದು ಏನು?

ಬಾಗಲಕೋಟೆ ಹಾಗೂ ಚಿಕ್ಕೋಡಿಯ ಫೊಟೋಗಳನ್ನು ಶೇರ್ ಮಾಡುತ್ತಿದ್ದೇನೆ ಎಂದು ಬರೆದು ಫೋಟೋ ಜೊತೆಗೆ ಫೇಸ್‍ಬುಕ್‍ನಲ್ಲಿ ಮೋದಿ ಪೋಸ್ಟ್ ಮಾಡಿದ ಮೋದಿ ಕರ್ನಾಟಕದಲ್ಲಿ ನಡೆಯುವ ನನ್ನ ರ‍್ಯಾಲಿಯಲ್ಲಿ ಸೇರುತ್ತಿರುವ ಜನಸಾಗರವನ್ನ ನೋಡಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಲ್ಲಿ ಭಯ ಹುಟ್ಟಿಸಿದೆ. ಮೇ 23ರಕ್ಕೆ ಬಿಜೆಪಿ ರಾಜ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ಅವರಿಗೆ ಇನ್ನೂ ದೊಡ್ಡ ಶಾಕ್ ಆಗಲಿದೆ. ನನಗೆ ತುಂಬಾ ಖುಷಿಯಾಗಿದೆ. ಎಂದು ಪೋಸ್ಟ್ ಮಾಡಿದ್ದಾರೆ. ಇದನ್ನು 80 ಸಾವಿರ ಮಂದಿ ಲೈಕ್ ಮಾಡಿದ್ದಾರೆ ಹಾಗೂ 2,500 ಸಾವಿರಕ್ಕೂ ಹೆಚ್ಚು ಮಂದಿ ಕಾಮೆಂಟ್ ಮಾಡಿದ್ದಾರೆ. ಅಲ್ಲದೆ, 5,500ಕ್ಕೂ ಹೆಚ್ಚು ಮಂದಿ ಮೋದಿಯವರ ಪೋಸ್ಟ್ ಅನ್ನು ಶೇರ್ ಮಾಡಿಕೊಂಡಿದ್ದಾರೆ.

Also read: ಬಾಗಲಕೋಟೆಯಲ್ಲಿ ಮೋದಿ ಅಬ್ಬರ; ಕರ್ನಾಟಕದಲ್ಲಿ ಮೈತ್ರಿಯ ನಾಟಕ ನಡೆಯುತ್ತಿದೆ, ಕಾಂಗ್ರೆಸ್​ ಅಧಿಕಾರದಲ್ಲಿದ್ದಾಗ ಭಾರತ ಅಳುತ್ತಿತ್ತು, ಈಗ ಕುಮಾರಸ್ವಾಮಿ ಅಳುತ್ತಿದ್ದಾನೆ..

ಅಷ್ಟೇ ಅಲ್ಲದೆ ಮಂಗಳೂರಿನಲ್ಲಿ ಬಿಜೆಪಿ ಆಯೋಜಿಸಿದ್ದ ಸಂಕಲ್ಪ ರ್ಯಾಲಿಯಲ್ಲಿ ಭಾಗವಹಿಸಿದ್ದ ಜನಸ್ತೋಮ ಪ್ರಧಾನಿ ಮೋದಿ ಅವರಿಗೆ ಆಶ್ಚರ್ಯ ತಂದಿತ್ತು. ಡಿಡಿ ನ್ಯೂಸ್‍ಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮೋದಿ, ನಾನು ಹಲವು ರ‍್ಯಾಲಿಯಲ್ಲಿ ಈಗ ಭಾಗವಹಿಸುತ್ತಿದ್ದೇನೆ. ಈ ವೇಳೆ ಭಾರೀ ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ. 2014ರಲ್ಲಿ ನಾನು ಮಂಗಳೂರಿಗೆ ಹೋದಾಗ ಇಷ್ಟು ಜನ ಸೇರಿರಲಿಲ್ಲ. ಈ ಬಾರಿ ನೆರೆದ ಜನ ನೋಡಿ ನಾನು ಆಶ್ಚರ್ಯಗೊಂಡೆ, ಮಂಗಳೂರಿನಲ್ಲಿ ನನ್ನ ರೋಡ್ ಶೋ ನಿಗದಿಯಾಗಿರಲಿಲ್ಲ. ನಾನು ಕಾರಿನಲ್ಲಿದ್ದಾಗ ರಸ್ತೆ ಬದಿಯಲ್ಲಿ ಭಾರೀ ಸಂಖ್ಯೆಯಲ್ಲಿದ್ದ ಜನರನ್ನು ನೋಡಿದೆ. ಹೀಗಾಗಿ ಅವರಿಗೆ ವಂದನೆ ಸಲ್ಲಿಸಲು ನಾನು ಕಾರಿನಿಂದ ತಲೆ ಹೊರಗಡೆ ಹಾಕಿ ಕೈ ಬೀಸಿದೆ. ಈ ದೃಶ್ಯವನ್ನು ಮೇಲಿನಿಂದ ಯಾರೋ ವಿಡಿಯೋ ಮಾಡಿದ್ದು, ಆ ವಿಡಿಯೋ ಸಮುದ್ರದ ಅಲೆಯಂತೆ ಕಂಡಿದೆ ಎಂದು ಹೇಳಿದ್ದಾರೆ.