ರಾಷ್ಟ್ರಪತಿಯಾಗಬೇಕಾದರೆ ಏನು ಮಾಡಬೇಕೆಂದು ಮೋದಿಯವರಿಗೆ ಪ್ರಶ್ನೆ ಮಾಡಿದ ವಿದ್ಯಾರ್ಥಿ; ಇದಕ್ಕೆ ಮೋದಿ ನೀಡಿದ ಉತ್ತರ ಏನು ಗೊತ್ತಾ??

0
413

ಪ್ರಧಾನಿ ನರೇಂದ್ರ ಮೋದಿಯವರು ಇಸ್ರೋದ ಕೌತುಕ ಕ್ಷಣವನ್ನು ವೀಕ್ಷಿಸಲು ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಆಗಮಿಸಿದರು. ಈ ವೇಳೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಮೋದಿಯವರಿಗೆ ವಿದ್ಯಾರ್ಥಿಯೊಬ್ಬ ಪ್ರಶ್ನೆ ಕೇಳಿದ್ದು ಭಾರಿ ವೈರಲ್ ಆಗಿದ್ದು, ಅದಕ್ಕೆ ಪ್ರಧಾನಿಯವರು ಕೂಡ ಅಷ್ಟೇ ಸ್ಪೂರ್ತಿಯಾಗಿ ಉತ್ತರ ನೀಡಿದ್ದಾರೆ. ಇದು ವಿದ್ಯಾರ್ಥಿಗಳಿಗೆ ದೊಡ್ಡ ಮಹತ್ವದ ಉತ್ತರವಾಗಿದೆ. ಅಂತಹ ಪ್ರಶ್ನೆಯಾದರೂ ಏನು ಅಂದರೆ. ನಾನು ರಾಷ್ಟ್ರಪತಿಯಾಗಬೇಕಾದರೆ ಏನು ಮಾಡಬೇಕು? ಎಂದು ಕೇಳಿದಕ್ಕೆ ಮೋದಿ ಕೊಟ್ಟ ಉತ್ತರ ಹೀಗಿದೆ ನೋಡಿ.

ಹೌದು ಇಡೀ ಜಗತ್ತೇ ಎದುರು ನೋಡುತ್ತಿದ್ದ ಇಸ್ರೋದ ಚಂದ್ರಯಾನ-2ನ ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಇಳಿಯುವುದನ್ನು ಕಣ್ಣಾರೆ ಕಣ್ತುಂಬಿಕೊಳ್ಳಲು ಇಸ್ರೋ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿದ್ದರು. ಈ ಸಂದರ್ಭದಲ್ಲಿ ದೇಶದ ವಿವಿಧ ಭಾಗದಿಂದ ಆಗಮಿಸಿದ್ದ 70 ವಿದ್ಯಾರ್ಥಿಗಳ ಜತೆ ಪ್ರಧಾನಿ ನರೇಂದ್ರ ಮೋದಿ ಅವರು ಸಂವಹನ ನಡೆಸಿದ್ದರು. ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೇರವಾಗಿ ವಿದ್ಯಾರ್ಥಿಗಳ ಬಳಿ ತೆರಳಿ, ಜೀವನದಲ್ಲಿ ಯಾವತ್ತೂ ಎದುರಾಗುವ ಹಿನ್ನಡೆಯಿಂದ ಭರವಸೆ ಕಳೆದುಕೊಳ್ಳಬಾರದು. ಇನ್ನಷ್ಟು ಶ್ರಮವಹಿಸುವ ಮೂಲಕ ಫಲಿತಾಂಶ ಪಡೆಯಬೇಕು ಎಂದು ಕಿವಿಮಾತು ಹೇಳಿದ್ದರು.

ಈ ವೇಳೆ ವಿದ್ಯಾರ್ಥಿಯೊಬ್ಬ ದೇಶದ ರಾಷ್ಟ್ರಪತಿಗಳಾಗಬೇಕಾದರೆ ಏನನ್ನು ಮಾಡಬೇಕು. ಯಾವ ರೀತಿ ತಯಾರಿ ನಡೆಸಬೇಕು ಎಂದು ಪ್ರಶ್ನೆ ಕೇಳಿದ್ದಾನೆ. ಈ ವೇಳೆ ಪ್ರತಿಕ್ರಿಯೆ ನೀಡಿದ ಮೋದಿಯವರು, ರಾಷ್ಟ್ರಪತಿ ಏಕೆ? ಪ್ರಧಾನಮಂತ್ರಿ ಏಕಾಗಬಾರದು? ಎಂದು ಮರು ಪ್ರಶ್ನಿಸಿದ್ದಾರೆ. ಬಳಿಕ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿರುವ ಅವರು, ಜೀವನದಲ್ಲಿ ಗುರು ದೊಡ್ಡದಾಗಿರಬೇಕು. ಆ ಗುರಿಯನ್ನು ಚಿಕ್ಕ ಚಿಕ್ಕ ಭಾಗಗಳನ್ನಾಗಿ ಮಾಡಿಕೊಳ್ಳಬೇಕು. ಬಳಿ ಆ ಚಿಕ್ಕ ಚಿಕ್ಕ ಗುರಿಗಳನ್ನು ಸಾಧಿಸಲು ಮುಂದಾಗಬೇಕು. ಯಾವುದನ್ನು ಕಳೆದುಕೊಂಡಿದ್ದೀರೋ ಅದನ್ನು ಮರೆತುಬಿಡಿ. ಜೀವನದ ಮುಂದಿನ ಹಾದಿಗಳನ್ನೂ ನಿರಾಶೆಯಾಗೊಳ್ಳದಂತೆ ನೋಡಿಕೊಳ್ಳಿ ಎಂದು ಹೇಳಿದ್ದಾರೆ.

ಅದರಂತೆ ಪ್ರಧಾನಿ ಜತೆ ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳ ಸ್ಪರ್ಶಿಸುವ ಕ್ಷಣಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಕುಳಿತು ವೀಕ್ಷಿಸಲು 70 ವಿದ್ಯಾರ್ಥಿಗಳು ಅವಕಾಶ ಪಡೆದಿದ್ದರು. ವಿದ್ಯಾರ್ಥಿಗಳು ಪ್ರಧಾನಿ ಮೋದಿ ಅವರನ್ನು ಸುತ್ತುವರೆದು ಚಂದ್ರಯಾನದ ಕುರಿತ ವಿಚಾರಧಾರೆಯನ್ನು ಹಂಚಿಕೊಂಡರು. ನೀವು ಮನೆಗೆ ಹೋದ ಮೇಲೆ ಜನರಿಗೆ ಚಂದ್ರಯಾನ 2ರ ಬಗ್ಗೆ ಏನು ಹೇಳುತ್ತೀರಿ ಎಂದು ಪ್ರಧಾನಿ ವಿದ್ಯಾರ್ಥಿನಿಯೊಬ್ಬಳನ್ನು ಪ್ರಶ್ನಿಸಿದ್ದರು. ಅದಕ್ಕೆ ವಿದ್ಯಾರ್ಥಿನಿ, ಚಂದ್ರಯಾನದ ವಿಕ್ರಮ್ ಲ್ಯಾಂಡರ್ ಸಂಪರ್ಕ ಕಡಿತಗೊಂಡಿರುವುದಾಗಿ ಹೇಳುತ್ತೇನೆ ಎಂದಿದ್ದಳು. ನಂತರ ಮೋದಿ ಚೆನ್ನಾಗಿ ಓದಿ, ಕಠಿಣ ಪರಿಶ್ರಮದ ಮೂಲಕ ವಿಶ್ವಾಸದೊಂದಿಗೆ ಜೀವನದಲ್ಲಿ ಸಾಧನೆಯ ಗುರಿ ತಲುಪಬೇಕು ಎಂದು ಪ್ರಧಾನಿ ಮೋದಿ ವಿದ್ಯಾರ್ಥಿಗಳ ಜತೆಗಿನ ಸಂವಹನದ ವೇಳೆ ಸಲಹೆ ನೀಡಿದರು. ಅದರಂತೆ ಬೇಸರದಲ್ಲಿರುವ ಇಸ್ರೋ ವಿಜ್ಞಾನಿಗಳಿಗೆ ಭಾರತ ನಿಮ್ಮೊಂದಿಗಿದೆ, ಜಗತ್ತಿನಲ್ಲಿ ಬೇರೆ ಯಾರೂ ಮಾಡದ ಸಾಧನೆಗೆ ನೀವು ಕೈ ಹಾಕಿದ್ದೀರಿ ಭಾರತ ನಿಮಗೆ ಹೆಮ್ಮೆಯಿಂದ ಇನ್ನಷ್ಟು ಅವಕಾಶಗಳನ್ನು ನೀಡಲಿದೆ ಎಂದು ಹೇಳಿದರು.

Also read: ನಿರಾಸೆ ಮೂಡಿಸಿದ ಚಂದ್ರಯಾನ-2; ಮೋದಿ ತಬ್ಬಿ ಕಣ್ಣೀರು ಹಾಕಿದ ಇಸ್ರೋ ಅಧ್ಯಕ್ಷ, ಬೆನ್ನು ತಟ್ಟಿ ಸ್ಫೂರ್ತಿತುಂಬಿದ ಮೋದಿ ಮಾತಿಗೆ ಇಡೀ ದೇಶವೇ ಭಾವುಕ.!