ನಮ್ಮ ನಿಮ್ಮೆಲ್ಲರ ನೆಚ್ಚಿನ ಪ್ರಧಾನಿ ಮೋದಿಯವರ ಬಗ್ಗೆ ನಿಮಗೆಷ್ಟು ಗೊತ್ತು..?

0
1378

ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕ, ಧೂಳಿನಿಂದ ಎದ್ದು ಬಂದ ಧೀಮಂತ ನಾಯಕ ಮೋದಿ ಯವರ ಬಗ್ಗೆ ನಿಮಗೆ ತಿಳಿಯದ ಕೆಲವು ವಿಷಯಗಳನ್ನು ಈ ಕೆಳಗೆ ತಿಳಿಸಲಾಗಿದೆ.

 • ಸಂಸತ್ತಿಗೆ ಕುಡಿದು ಕಾಲಿಡುವ ಸಂಸದರಿರುವಾಗ ಸಂಸತ್ತಿನ ಮೆಟ್ಟಿಲಿಗೆ ಅಡ್ಡಬಿದ್ದು ಕೈಮುಗಿದು ಒಳ ಪ್ರವೇಶಿಸಿದ ಮೊದಲ ಪ್ರಧಾನಿ.
 • ಹಿಂದೂ ಎಂದು ಕರೆದುಕೊಳ್ಳಲು ನಾಚಿಕೆ ಪಟ್ಟುಕೊಳ್ಳುವ ತುಕಾಲಿ ರಾಜಕಾರಣಿಗಳಿರುವಾಗ ನಾನೊಬ್ಬ ‘ಹಿಂದೂ ರಾಷ್ಟ್ರವಾದಿ’ಯೆಂದು ಹೆಮ್ಮೆಯಿಂದ ಹೇಳಿಕೊಂಡ ಮೊದಲ ಪ್ರಧಾನಿ.
 • ಭಗವದ್ಗೀತೆಯೆಂದರೆ ಅದು ಕೋಮುವಾದಿಗಳ ಗ್ರಂಥವೆಂದು ದೂಷಿಸುವ ರಾಜಕಾರಣಿಗಳಿರುವಾಗ ಅದೇ ಭಗವದ್ಗೀತೆಯನ್ನು ಹೋದಲೆಲ್ಲ ಒಯ್ದು ಗಣ್ಯಾತಿಗಣ್ಯರಿಗೆ ಉಡುಗೊರೆ ಕೊಟ್ಟ ಮೊದಲ ಪ್ರಧಾನಿ.
 • ಜಾತ್ಯತೀತತೆಯ ಹೆಸರಿನಲ್ಲಿ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿರುವಾಗ,’ನನ್ನ ದೃಷ್ಟಿಯಲ್ಲಿ ಜಾತ್ಯತೀತತೆ ಎಂದರೆ ದೇಶ ಮೊದಲು’ಎಂದ ಮೊದಲ ಪ್ರಧಾನಿ.
 • ಜನರ ಹಣವನ್ನು ಸುಲಿಗೆ ಮಾಡಿ ತಾವು, ತಮ್ಮ ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳ ಕಾಲಕ್ಕೂ ಕೂಡಿಟ್ಟ ರಾಜಕಾರಣಿಗಳ ಮಧ್ಯೆ ನಾನು ತಿನ್ನೋದಿಲ್ಲ ಉಳಿದವರನ್ನೂ ತಿನ್ನೋಕೆ ಬಿಡಲ್ಲವೆಂದ ಮೊದಲ ಪ್ರಧಾನಿ.
 • ನಮ್ಮ ಪ್ರಾಚೀನ ಸಂಸ್ಕೃತಿಯಾದ ಯೋಗದ ಬಗ್ಗೆ ಮೂಗುಮುರಿಯುತ್ತಿದ್ದ ರಾಜಕಾರಣಿಗಳನ್ನು ಕ್ಯಾರೇ ಮಾಡದೆ ಜಗತ್ತೇ ಯೋಗಕ್ಕೆ ಶರಣಾಗುವಂತೆ ಮಾಡಿದ ಮೊದಲ ಪ್ರಧಾನಿ.
 • ಸಾಬಿಗಳ ಟೋಪಿ ಹಾಕುವ ರಾಜಕಾರಣಿಗಳ ನಡುವೆ ವಿದೇಶದಿಂದ ಬಂದ ನಾಯಕರನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ತಿಲಕವಿಡಿಸಿದ ಮೊದಲ ಪ್ರಧಾನಿ.
 • ಹಾವಾಡಿಗರ ದೇಶ ಎಂದು ಕರೆಸಿಕೊಳ್ಳುತ್ತಿದ್ದ ಭಾರತವನ್ನು ಆಧ್ಯಾತ್ಮಿಕ ದೇಶವೆಂದು ಹೋದಲೆಲ್ಲಾ ಎದೆ ತಟ್ಟಿಕೊಂಡು ಹೇಳಿದ ಮೊದಲ ಪ್ರಧಾನಿ.
 • ತನ್ನನ್ನು ತಾನು ಪ್ರಧಾನ ಸೇವಕನೆಂದು ಕರೆದುಕೊಂಡು ಅ ಮಾತಿನಂತೆ ದಿನಕ್ಕೆ ಹದಿನೆಂಟು ತಾಸು ದುಡಿದು ತೋರಿಸಿದ ಮೊದಲ ಪ್ರಧಾನಿ.
 • ಹದಿನೆಂಟು ವರ್ಷಗಳಿಂದ ಒಂದೇ ಒಂದು ದಿನ ರಜೆಪಡೆಯದೆ ಸಾರ್ವಜನಿಕ ಜೀವನದಲ್ಲಿ ದಣಿವರಿಯದಂತೆ ದುಡಿಯುತ್ತಿರುವ ಮೊದಲ ಪ್ರಧಾನ ಮಂತ್ರಿ.
 • ಗಾಂಧಿ, ನೆಹರು ಇಂದಿರಾಧಿಯಾಗಿ ಯಾರಿಗೂ ಇಲ್ಲದ ವಿರೋಧಿಗಳನ್ನು ಕಟ್ಟಿಕೊಂಡರೂ ಹೆಜ್ಜೆಹೆಜ್ಜೆಗೂ ಯಶಸ್ಸನ್ನು ಕಾಣುತ್ತಿರುವ ಮೊದಲ ಪ್ರಧಾನಿ.
 • ಟೈಮ್ಸ್ ಸೆನ್ಸ್ ಇಲ್ಲದಿರುವ ರಾಜಕಾರಣಿಗಳ ನಡುವೆ ಟೈಮ್ ಬಾಂಡ್ ಇಟ್ಕೊಂಡು ಕೆಲ್ಸ ಮಾಡುತ್ತಿರುವ ಅಪರೂಪದ ಜನಸೇವಕ.
 • ಕುಟುಂಬದ ಸದಸ್ಯರು ಇದ್ದಾಗ್ಯೂ ಯಾರೊಬ್ಬರನ್ನೂ ಪ್ರಧಾನಿ ನಿವಾಸದಲ್ಲಿ ಇರಿಸಿಕೊಳ್ಳದೆ ಎಲ್ಲರೂ ಇದ್ದು ದೇಶಕ್ಕಾಗಿ ಒಬ್ಬಂಟಿಯಾಗಿ ಬದುಕುತ್ತಿರುವ ಮೊದಲ ಪ್ರಧಾನಿ.
 • ಭಾರತದಿಂದ ದೋಚಿ ವಿದೇಶದಲ್ಲಿ ಕೂಡಿಡುವ ರಾಜಕಾರಣಿಗಳ ನಡುವೆ ವಿದೇಶದಲ್ಲಿ ಬಚ್ಚಿಟ್ಟು ಮೂರ್ತಿಶಿಲ್ಪಗಳನ್ನು ಮರಳಿ ಭಾರತಕ್ಕೆ ತಂದ ಮೊದಲ ಪ್ರಧಾನಿ.
 • ತಮಗೆ ತಾವೇ ಭಾರತ ರತ್ನ ಕೊಟ್ಟುಕೊಂಡ, ಸಾರ್ವಜನಿಕರ ಹಣದಿಂದ ತಮ್ಮ ಪ್ರತಿಮೆಯನ್ನು ತಾವೇ ನಿರ್ಮಿಸಿಕೊಂಡ, ಹೆಂಡತಿ ಮಕ್ಕಳನ್ನು ಮಂತ್ರಿ, ಮುಖ್ಯಮಂತ್ರಿ ಮಾಡಿಕೊಂಡ, ಯೋಜನೆಗಳಿಗೆಲ್ಲಾ ತಮ್ಮ ಪಕ್ಷ, ಕುಟುಂಬದ ಹೆಸರಿಟ್ಟುಕೊಂಡ ರಾಜಕಾರಣಿಗಳ ಮಧ್ಯೆ ಅಂತಹ ಸ್ವಾರ್ಥ ಸಾಧನೆ ಮಾಡದೇ ಕಾರ್ಯನಿರ್ವಹಿಸುತ್ತಿರುವ ರಾಜಕಾರಣಿ.
 • ದೇಶಕ್ಕಾಗಿ ತನ್ನ ವೈಯಕ್ತಿಕ ಸುಖ ಸಂತೋಷವನ್ನು ಬದಿಗಿಟ್ಟು, ಆರೋಗ್ಯವನ್ನು ಲೆಕ್ಕಿಸದೆ ದೇಶಕ್ಕಾಗಿ ನಿಸ್ವರ್ಥ ಸೇವೆ ಮಾಡುತ್ತಿರುವ ದುಡಿಯುತ್ತಿರುವ ಇಂತಹ ದೈತ್ಯ ವ್ಯಕ್ತಿತ್ವದ ಮೋದಿಯ ಭಕ್ತನಾಗದೆ ಇರಲು ನನ್ನಿಂದ ಸಾಧ್ಯವಾಗಲಿಲ್ಲ…!

ಸಂಗ್ರಹ ಮಾಹಿತಿ