ವೀಡಿಯೊ ಕಾನ್ಫರೆನ್ಸ್‌, ಕುತೂಹಲದಲ್ಲಿದ ಜನರಿಗೆ ಮೋದಿ ಹೇಳಿದ್ದೇನು? ಚಿಕ್ಕ ವಿಷಯಕ್ಕೆ ಇಷ್ಟೊಂದು ಪ್ರಚಾರ ಸರಿಯಲ್ಲಎಂದ ಜನರು.!

0
173

ವಿಶ್ವದಲ್ಲಿ ದಿನಕ್ಕೆ ಸಾವಿರಾರು ಜನರನ್ನು ಬಲಿ ತೆಗೆದುಕೊಳ್ಳುತ್ತಿರುವ ಕೊರೊನಾ ವೈರಸ್-ನ್ನು ಭಾರತದಲ್ಲಿ ನಿಯಂತ್ರಿಸಲು ಎಪ್ರಿಲ್ 14 ವರೆಗೆ ಭಾರತ ಲಾಕ್ ಡೌನ್ ಜಾರಿ ಮಾಡಿತ್ತು, ಏಕೆಂದರೆ ಕೊರೋನಾ ವೈರಸ್ಗೆ ಬಲಿಯಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಈವರೆಗೆ ವಿಶ್ವಾದ್ಯಂತ 53,190 ಮಂದಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಸೋಂಕಿತರ ಸಂಖ್ಯೆ ಸುಮಾರು 10 ಲಕ್ಷ ದಾಟಿದೆ ಅಮೆರಿಕಾ ಮತ್ತು ಯುರೋಪ್ನಲ್ಲಿ ಕೊರೋನಾ ಅಟ್ಟಹಾಸ ಮುಂದುವರೆದಿದೆ. ಅಮೆರಿಕದಲ್ಲಿ ಈವರೆಗೆ 6,075 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಅಲ್ಲಿ ಕೇವಲ 24 ಗಂಟೆಗಳ ಅವಧಿಯಲ್ಲಿ ಸುಮಾರು 1,169 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಇದನ್ನು ನಿಯಂತ್ರಿಸಲು ಮತ್ತು ಹತ್ತೊಟ್ಟೆಗೆ ಇಡಲು ಪ್ರಧಾನಿ ಮೋದಿ ಜನರಿಗೆ ವೀಡಿಯೋ ಮೂಲಕ ಸೂಚನೆ ನೀಡಿದ್ದಾರೆ.

ಹೌದು ಕೊರೊನಾ ವೈರಸ್ ಕುರಿತು ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರು ಹಲವು ಮಾಹಿತಿಗಳನ್ನ ಜನರಿಗೆ ತಿಳಿಸಿದ್ದು, ಮತ್ತೆ ಮೂರನೇ ಭಾರಿಗೆ ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದು, ಕಳೆದ ಭಾರಿ ಎಪ್ರಿಲ್ 14 ವರೆಗೆ ಲಾಕ್ಡೌನ್ ಬಗ್ಗೆ ಹೇಳಿ ಜನರಿಗೆ ಆಘಾತಕಾರಿ ಸುದ್ದಿ ತಿಳಿಸಿದ್ದರು, ಈ ಭಾರಿ ಯಾವ ಸುದ್ದಿಯನ್ನು ತಿಳಿಸಲಿದ್ದಾರೆ. ಎನ್ನುವ ಕುತೂಹಲ ಮೂಡಿತ್ತು. ನಿನ್ನೆ ಎಲ್ಲ ರಾಜ್ಯದ ಮುಖ್ಯಮಂತ್ರಿಗಳ ಜೊತೆಗೆ ವೀಡಿಯೋ ಕಾನ್ಫೆರೆನ್ಸ್ ಮಾಡಿ ಮಾತನಾಡಿದ್ದು, ಯಾವ ವಿಚಾರದ ಬಗ್ಗೆ ಮಾಹಿತಿ ನೀಡಲಿದ್ದಾರೆ ಎನ್ನುವುದು ಭಾರಿ ಕುತೂಹಲವೇ ಆಗಿತ್ತು ಆದರೆ ಬನ್ನಿ ಎಲ್ಲರೂ ಕೈ ಜೋಡಿಸೋಣ. ಭಾರತೀಯರೆಲ್ಲ ಒಂದಾಗೋಣ. ದೇಶದಿಂದ ಕೊರೊನಾ ವೈರಸ್ ಮಹಾಮಾರಿಯನ್ನು ಹೋಗಲಾಡಿಸೋಣ ಎಂದು ಪ್ರಧಾನಮಂತ್ರಿ ಸಂದೇಶ ರವಾನಿಸಿದ್ದಾರೆ.

ಏ.5ರಂದು ದೀಪ ಹಚ್ಚಿ ಲಕ್ಷ್ಮಣ ರೇಖೆ ದಾಟಬೇಡಿ;

ಅಷ್ಟೇ ಅಲ್ಲದೆ ಏ.5ರಂದು ದೀಪ ಹಚ್ಚಿ ಲಕ್ಷ್ಮಣ ರೇಖೆ ದಾಟಬೇಡಿ, ಇದೇ ರಾಮಬಾಣ ಎಂದು ಹೇಳಿದ್ದಾರೆ, ಕೆಲವರು ಇದಕ್ಕೆ ಟೀಕೆ ಮಾಡಿದ್ದು ಚಿಕ್ಕ ವಿಷವನ್ನು ಹೇಳಲು ಮೋದಿ ಜನರಿಗೆ ಕುತೂಹಲ ಹುಟ್ಟಿಸುತ್ತಿದ್ದಾರೆ. ಇದರಲ್ಲಿ ತಮ್ಮ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ, ಎಂದು ಹೇಳಿದ್ದಾರೆ. ಅದರಂತೆ ಮೋದಿಯವರು ದೇಶದ 130 ಕೋಟಿ ಜನರು ಒಂದೇ ಎಂಬ ಸಂದೇಶವನ್ನು ಸಾರಿ ಹೇಳುವಂತಾ ಸಂದರ್ಭ ಎದುರಾಗಿದೆ. ನಾವು ಒಬ್ಬರಲ್ಲ ಎಂಬ ಸಂದೇಶವನ್ನು ನಾವು ಸಾರಿ ಹೇಳಬೇಕಿದೆ. ಎಲ್ಲರೂ ಒಗ್ಗಟ್ಟನ್ನು ಪ್ರದರ್ಶಿಸುವ ಸಮಯ ಎದುರಾಗಿದೆ. ಏಪ್ರಿಲ್.05 ಭಾನುವಾರ ರಾತ್ರಿ 9 ಗಂಟೆಗೆ ಪ್ರತಿಯೊಂದು ಮನೆಯ ಲೈಟ್ ಗಳನ್ನು ಬಂದ್ ಮಾಡಿ. ಮೊಬೈಲ್ ಫ್ಲಾಶ್ ಲೈನ್, ದೀಪ, ಮೇಣದಬತ್ತಿಯನ್ನು ರಾತ್ರಿ 9 ಗಂಟೆ 9 ನಿಮಿಷಗಳ ಕಾಲ ದೀಪ ಹಚ್ಚಿ ಇಡಬೇಕು ಎಂದು ಪ್ರಧಾನಿ ಮೋದಿ ಸಂದೇಶ.

ಕೊರೊನಾ ವೈರಸ್ ಗಿಂತಲೂ ಮೊದಲು ಅಂಧಕಾರದಿಂದ ಮೊದಲು ಹೊರಗೆ ಬರಬೇಕಿದೆ. ಇದು ಕೊರೊನಾ ವೈರಸ್ ಗಿಂತಲೂ ಅಪಾಯಕಾರಿಯಾಗಿದೆ. 130 ಕೋಟಿ ಜನರ ಶಕ್ತಿಯು ಪ್ರತಿಯೊಬ್ಬ ಭಾರತೀಯರ ಬೆನ್ನ ಹಿಂದಿದೆ. ದೇಶದಲ್ಲಿ ಕೆಲವರು ನಮ್ಮೊಬ್ಬರಿಂದ ಏನಾಗುತ್ತದೆ ಎಂದು ಯೋಚಿಸುತ್ತಾರೆ. ಆದರೆ ಭಾರತೀಯರು ಅಂದರೆ ಒಬ್ಬರಲ್ಲ ನಮ್ಮ ಜೊತೆಗೆ 130 ಕೋಟಿ ಜನರ ಬಲವಿದೆ. ಕೊರೊನಾ ವೈರಸ್ ವಿರುದ್ಧ ಹೋರಾಟ ಸಾರಿದ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸುತ್ತೇನೆ. ಭಾರತ ಲಾಕ್ ಡೌನ್ ಸಮಯದಲ್ಲಿ ನೀವು ನೀಡಿದ ಸಹಕಾರ ಅಭೂತಪೂರ್ವವಾಗಿದೆ. ಕೊರೊನಾ ವೈರಸ್ ಹಿನ್ನೆಲೆ ಭಾರತ ಲಾಕ್ ಡೌನ್ ಆಗಿ 9 ದಿನಗಳು ಆಗಿವೆ. ಅದರಂತೆ ಎಪ್ರಿಲ್ 5 ರಂದು ರಾತ್ರಿ 9 ಗಂಟೆ 9 ನಿಮಿಷಗಳ ಕಾಲ ದೀಪ ಹಚ್ಚಿ ಇಡಬೇಕು ಎಂದು ಪ್ರಧಾನಿ ಮೋದಿ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.