ಈ ಎರಡು ಪಕ್ಷಗಳನ್ನು ನೋಡಿ ಬಿಜೆಪಿ ಪಾಠ ಕಲಿಯಬೇಕು; ನರೇಂದ್ರ ಮೋದಿ ಹೊಗಳಿದ ಪಕ್ಷಗಳು ಯಾವವು?

0
163

ರಾಜ್ಯಸಭೆಯ 250 ಅಧಿವೇಶನ ಮತ್ತು 2019 ರ ಕೊನೆಯ ಚಳಿಗಾಲದ ಅಧಿವೇಶನ ಆರಂಭಗೊಂಡಿದ್ದು, ಡಿಸೆಂಬರ್ 13ರವರೆಗೂ ಅಧಿವೇಶನ ನಡೆಯಲಿದೆ. ಈ ಹಿನ್ನಲೆಯಲ್ಲಿ ಅಧಿವೇಶನಕ್ಕೆ ಆಗಮಿಸುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ ಮೋದಿಯವರು, ಪ್ರತೀ ವಿಷಯಗಳ ಬಗ್ಗೆಯೂ ಚರ್ಚೆ ನಡೆಸಲು ಕೇಂದ್ರ ಸರ್ಕಾರ ಸಿದ್ಧವಿದೆ. ಸಂಸತ್ತಿನಲ್ಲಿ ಚರ್ಚೆಗಳನ್ನು ಸಮೃದ್ಧಗೊಳಿಸಲು ಪ್ರತೀಯೊಬ್ಬರೂ ಸಹಕರಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. 2019ರ ಕಡೆಯ ಅಧಿವೇಶನ ಇದಾಗಿದೆ. ಅಲ್ಲದೆ, ರಾಜ್ಯಸಭೆಯ 250 ಅಧಿವೇಶನ ಕೂಡ ಆಗಿದ್ದು, ಅತ್ಯಂತ ಪ್ರಮುಖವಾಗಿದೆ. ಅದಕ್ಕಾಗಿ ಸರ್ವ ಪಕ್ಷಗಳು ಗುಣಮಟ್ಟದ ಚರ್ಚೆ ನಡೆಯಲು ಸಹಕರಿಸಬೇಕೆಂದು ಮನವಿ ಮಾಡಿಕೊಂಡರು.

ಅದರಂತೆ ಇಂದು ನಾನು ಎರಡು ಪಕ್ಷಗಳನ್ನು ಅಭಿನಂದಿಸುತ್ತೇನೆ. ಎನ್​ಸಿಪಿ ಮತ್ತು ಬಿಜೆಡಿ ಪಕ್ಷಗಳನ್ನು ಅಭಿನಂದಿಸಲು ಇಚ್ಛಿಸುತ್ತೇಣೆ. ಏಕೆಂದರೆ ಈ ಎರಡು ಪಕ್ಷಗಳು ಸಂಸತ್ತಿನ ಸಂಪ್ರದಾಯಕ್ಕೆ ಬದ್ಧವಾಗಿ ನಡೆದುಕೊಂಡಿವೆ. ಎಂದೂ ಸದನದ ಬಾವಿಗೆ ಇಳಿಯದೇ ತಮ್ಮ ಅಂಶಗಳನ್ನು ಪರಿಣಾಮಕಾರಿಯಾಗಿ ಸದನದಲ್ಲಿ ಎತ್ತಿವೆ. ನನ್ನನ್ನೂ ಸೇರಿದಂತೆ ಇತರೆ ಪಕ್ಷಗಳಿಂದ ಅವುಗಳಿಂದ ಕಲಿಯಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅಷ್ಟೇ ಅಲ್ಲದೆ ಮಹಾರಾಷ್ಟ್ರದಲ್ಲಿ ಹಳೆಯ ಮೈತ್ರಿಪಕ್ಷವಾದ ಬಿಜೆಪಿಯಿಂದ ಬೇರ್ಪಟ್ಟ ಶಿವಸೇನಾ ಹಾಗೂ ಎನ್ ಸಿಪಿ, ಕಾಂಗ್ರೆಸ್ ಜತೆ ಸೇರಿ ಸರ್ಕಾರ ರಚಿಸಲು ಮುಂದಾಗಿರುವ ಬೆಳವಣಿಗೆಯ ನಡುವೆಯೇ ಶರದ್ ಪವಾರ್ ನೇತೃತ್ವದ ಎನ್ ಸಿಪಿ ಹಾಗೂ ಬಿಜೆಡಿ ಪಕ್ಷ ಲೋಕಸಭೆಯಲ್ಲಿ ಶಿಷ್ಟಾಚಾರವನ್ನು ಕಾಪಾಡಿಕೊಂಡು ಬಂದಿರುವ ಪಕ್ಷಗಳಾಗಿದ್ದು, ಇಂತಹ ಪಕ್ಷಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೊಗಳಿ ಸಂಸತ್ ನಲ್ಲಿ ಯಾವುದೇ ಕೋಲಾಹಲ ನಡೆಸದೇ ವಿಷಯದ ಬಗ್ಗೆ ಹೇಗೆ ಧ್ವನಿ ಎತ್ತಬೇಕು ಎಂಬ ಬಗ್ಗೆ ಭಾರತೀಯ ಜನತಾ ಪಕ್ಷ ಸೇರಿದಂತೆ ಉಳಿದ ಪಕ್ಷಗಳು ಕೂಡಾ ಎನ್ ಸಿಪಿ ಮತ್ತು ಬಿಜೆಡಿ ಪಕ್ಷವನ್ನು ನೋಡಿ ಕಲಿಯಬೇಕು ಎಂದು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಸಂಸದರಿಗೆ ಸಲಹೆ ನೀಡಿದರು ಸಂವಿಧಾನದ 375ನೇ ವಿಧಿ ಮತ್ತು 35(ಎ) ರದ್ದುಪಡಿಸಿದ ದಿನ ಮರೆಯಲು ಸಾಧ್ಯವಿಲ್ಲ. ಆ ದಿನ ರಾಜ್ಯಸಭೆಯು ದೇಶದ ಏಕತೆಗಾಗಿ ಒಗ್ಗಟ್ಟಿಗಾಗಿ ಕಾರ್ಯನಿರ್ವಹಿಸಿತು ಎಂದು ಪ್ರಧಾನಿ ಮೋದಿ ಹೇಳಿದರು.

ಮೇಲ್ಮನೆಯ ಕಲಾಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎನ್ ಸಿಪಿಯನ್ನು ಹೊಗಳಿದ್ದನ್ನು ಕೇಳಿ ಹಲವರು ಹುಬ್ಬೇರಿಸುವಂತಾಗಿತ್ತು. ಅದರಂತೆ ಸಂಸತ್​ನಲ್ಲಿ ಇಂದಿನಿಂದ ಮಹತ್ವದ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಆರ್ಥಿಕ ಮುಗ್ಗಟ್ಟು, ಕೃಷಿ ಕ್ಷೇತ್ರದ ಬಿಕ್ಕಟ್ಟು ನಿರುದ್ಯೋಗ ಇತ್ಯಾದಿ ವಿಚಾರಗಳನ್ನ ಇಟ್ಟುಕೊಂಡು ಸರ್ಕಾರಕ್ಕೆ ಚಾಟಿ ಬೀಸಲು ವಿಪಕ್ಷಗಳು ಒಂದೆಡೆ ಸಜ್ಜಾಗಿವೆ. ಇದಕ್ಕೆಲ್ಲ ಯಾವ ರೀತಿಯ ಉತ್ತರ ಕೊಡಲು ಮೋದಿ ಸರ್ಕಾರ ಮುಂದಿನ ತಿಂಗಳು 13 ರ ವರೆಗೆ ರೆಡಿಯಾಗಿದೆ ಎನ್ನುವುದನ್ನು ಕಾದುನೋಡಬೇಕಿದೆ.