ಪ್ರಧಾನಿ ನರೇಂದ್ರ ಮೋದಿ ಇಂದು ಶಿಕ್ಷಕರಾಗಿ; ಮುಂದಿನ ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾಡಿದ ಭೋಧನೆ ಹೇಗಿತ್ತು ಗೊತ್ತಾ..?

0
433

ಈ ವರ್ಷದ SSLC, PUC ಪರೀಕ್ಷೆ ತಯಾರಿ ಕುರಿತು ಪರೀಕ್ಷಾ ಪೇ ಚರ್ಚಾ’ ಸಂವಾದದಲ್ಲಿ ಪ್ರಧಾನಿ ಮೋದಿ ಅವರು ವಿದ್ಯಾರ್ಥಿಗಳಿಗೆ ಪರೀಕ್ಷೆ ಕುರಿತು ಮಹತ್ವದ ವಿಷಯಗಳನ್ನು ತಿಳಿಸಿದ್ದಾರೆ. ಈ ಪರೀಕ್ಷಾ ಪೆ ಚರ್ಚಾ 2.0′ ಸತತ ಎರಡನೇ ವರ್ಷ ನಡೆದ ಸಂವಾದವಾಗಿದ್ದು ಇದರಲ್ಲಿ ವಿದ್ಯಾರ್ಥಿಗಳಿಗೆ ಜೀವನಕ್ಕೆ ಬರಿ ಮಾರ್ಕ್ಸ್ ಕಾರ್ಡ್ ಮುಖ್ಯವಲ್ಲ ಜೀವನದ ಮಾರ್ಕ್ಸ್ ಕಾರ್ಡ್ ಮುಖ್ಯ ಅದರ ಬಗ್ಗೆ ಯೋಚಿಸಿ, ಪರೀಕ್ಷೆಯಲ್ಲಿ ಪೇಲಾದರೆ ಜೀವನ ಮುಗಿತು ಅಂತಲ್ಲ ಅದನ್ನು ಬಿಟ್ಟು ಹಲವು ಪರೀಕ್ಷೆಗಳು ಇವೆ ಅವುಗಳನ್ನು ಗೆಲ್ಲಿ, ಅದಕ್ಕಾಗಿಯೇ ನೂರಾರು ದಾರಿಗಳಿವೆ ಎಂದು ಕಿವಿಮಾತು ಹೇಳಿದ್ದಾರೆ.

ಏನಿದು ಪರೀಕ್ಷಾ ಪೆ ಚರ್ಚಾ?

ಪರೀಕ್ಷೆ ಹತ್ತಿರ ಬರುತ್ತಿದಂತೆ ವಿದ್ಯಾರ್ಥಿಗಳು ಚಿಂತಿರಾಗುತ್ತಾರೆ. ಇದರ ಬಗ್ಗೆ ಕೆಲವೊಂದು ಮಾಹಿತಿಯನ್ನು ತಿಳಿಸಲು ಮೋದಿಜೀ ಅವರು ಮಾಡಿದ ಪರೀಕ್ಷಾ ಪೇ ಚರ್ಚಾ’ ಸಂವಾದದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರ ನೀಡಲು ಸ್ವತಹ ಪ್ರಧಾನಿಗಳೇ ಶಿಕ್ಷಕರಾಗಿ ಪಾಠಮಾಡುವುದಾಗಿದೆ. ಈ ಚರ್ಚೆಯಲ್ಲಿ ದೇಶದ ಎಲ್ಲ ರಾಜ್ಯಗಳಿಂದ 2 ಸಾವಿರ ವಿದ್ಯಾರ್ಥಿಗಳು ದೆಹಲಿಗೆ ಆಗಮಿಸಿದರು ಈ ಸಂಧರ್ಭದಲ್ಲಿ ಮೋದಿಯವರು ಹೇಳಿದ ಪಾಠ ಹೀಗಿದೆ.

ಪರೀಕ್ಷೆಗಳಲೇ ಜೀವನವಲ್ಲ:

ಪರೀಕ್ಷೆ ಎಂದರೆ ಪ್ರತಿಯೊಬ್ಬರಿಗೂ ಭಯವಿರುತ್ತೆ, ಎಲ್ಲಿ ಒಂದು ಸಾರಿ ಪೆಲಾದರೆ ಜೀವನವೇ ಹಾಳಾಗುತ್ತೆ ಅನ್ನೂ ಭಯವನ್ನು ತೆಗೆದುಹಾಕಿ ಏಕೆಂದರೆ ಜೀವನದ ಸವಾಲು ಪರಿಕ್ಷೆಯಲ್ಲ, ಪರೀಕ್ಷೆ ಅಂತ ಹೆದರಿಸುವ ಪಾಲಕರು ಮಕ್ಕಳನ್ನು ಸ್ನೇಹಿತರಂತೆ ಕಾಣಿರಿ. ನಿಮ್ಮ ಮಕ್ಕಳ ಅಂಕಗಳ ಬಗ್ಗೆ ಚರ್ಚಿಸದಿರಿ. ಬೇರೆಯವರೊಂದಿಗೆ ನಿಮ್ಮ ಮಕ್ಕಳನ್ನು ಹೋಲಿಸದಿರಿ. ನಿಮ್ಮ ಸ್ನೇಹಿತರ ಜತೆ ಚರ್ಚಿಸಿ ಮಗು ಮೇಲೆ ಒತ್ತಡ ಹಾಕಬೇಡಿ. ಅಂಕಪಟ್ಟಿಯನ್ನು ವಿಸಿಟಿಂಗ್​ ಕಾರ್ಡ್​ ರೀತಿ ನೋಡಬೇಡಿ. ಜೀವನ ಎಂಬುವುದು ಪರೀಕ್ಷೆಯನ್ನು ಮೀರಿದ್ದು ಮಕ್ಕಳಿಗೆ ಆತ್ಮವಿಶ್ವಾಸ ತುಂಬಿ. ಪರೀಕ್ಷೆ ಬಿಟ್ಟು ಜೀವನದಲ್ಲಿ ಅದ್ಭುತ ಜೀವನವಿದೆ ಎಂದು ಹೇಳಿದರು.

ಶಿಕ್ಷಕರೆ ಜೀವನದ ಪಾಠ ಹೇಳಿ:

ಈಗಿನ ಕಾಲದ ಶಿಕ್ಷಣ ನೋಡಿದರೆ ಹಳೆಯ ಕಾಲದ ಶಿಕ್ಷಣವೇ ವಿಶೇಷವಾಗಿತ್ತು ಶಿಕ್ಷಕ, ವಿದ್ಯಾರ್ಥಿ ಮತ್ತು ಆಡಳಿತ ಈ ಮೂವರು ಒಂದಾಗಬೇಕು. ಶಿಕ್ಷಣವನ್ನು ಜೀವನದಿಂದ ತೆಗೆದು ಹಾಕಿ ಕೇವಲ ಪರೀಕ್ಷೆಗೆ ಸಿಮೀತ ಮಾಡಿದ್ದೇವೆ. ಶಿಕ್ಷಕರು ಶಿಸ್ತು ಹಾಗೂ ಬದ್ಧತೆಯನ್ನು ಕಲಿಸಿಕೊಡುತ್ತಾರೆ. ಕೇವಲ ಸಿಲಬಸ್​​ ಹೇಳಿಕೊಡುತ್ತಾರೆ. ಆದರೆ, ಅದು ಜೀವನಕ್ಕೆ ಹೇಗೆ ಉಪಯೋಗವಾಗುತ್ತೆ ಎಂಬುದನ್ನು ಹೇಳಿಕೊಡಲ್ಲ. ಹಳೆಯ ಕಾಲದಲ್ಲಿ ಜೀವನದ ಪಾಠ ಮಾಡಿಸುತ್ತಿದ್ದರು. ಆದರೆ, ಇದೀಗ ರ‍್ಯಾಂಕಿಂಗ್​​​ ಹಿಂದೆ ಬೆನ್ನು ಹತ್ತಿ ಶಿಕ್ಷಣದ ವ್ಯವಸ್ಥೆಯನ್ನೇ ಕೆಡಸಿದ್ದೇವೆ ಎಂದು ಇಂದಿನ ಶಿಕ್ಷಣ ಪದ್ಧತಿ ತಿಳಿಹೇಳಿದರು.

ಮಾನಸಿಕ ಒತ್ತಡಕ್ಕೆ ಮೋದಿ ಗುಳಿಗೆ:

ಪರೀಕ್ಷೆಯ ಸಮಯದಲ್ಲಿ ಅಷ್ಟೇ ಅಲ್ಲದೆ ಜೀವನದ ಯಾವುದೇ ಸಂಧರ್ಭದಲ್ಲಿ ಮಾನಸಿಕ ಒತ್ತಡದಿಂದ ದೂರವಾಗಲು ಮನಸ್ಸಿನಲ್ಲಿ ಅನಿಸಿದ್ದನ್ನು ಕಾಗದದಲ್ಲಿ ಬರೆಯಿರಿ. ನಂತರ ಅದನ್ನು ಹರಿದು ಹಾಕಿ. ಹೀಗೆ ಮೂರ್ನಾಲ್ಕು ಸಲ ಮಾಡಿ. ಅದರಿಂದ ಮಾನಸಿಕ ಒತ್ತಡ ಕಡಿಮೆ ಆಗುತ್ತೆ. ನಿಮ್ಮ ವಯಸ್ಸಿಗೆ ತಕ್ಕಂತೆ ಯೋಚನೆ ಮಾಡಿ. ಹಾಗೆಯೇ ಸಲಹೆ ನೀಡುವರು ಆ ವಯಸ್ಸಿನಲ್ಲಿ ನಿಮಗೆ ಏನು ಅನಿಸುತ್ತಿತ್ತು ಎಂಬುದರ ಬಗ್ಗೆ ಯೋಚನೆ ಮಾಡಿ, ಆ ಬಗ್ಗೆ ತಿಳಿದು ನಿಮ್ಮ ಮಕ್ಕಳ ಮೇಲೆ ಅನ್ವಯಿಸಿ, ಹೀಗೆ ಮಾಡುವುದರಿಂದ ಮಕ್ಕಳು ಮತ್ತು ನಿಮ್ಮ ಬಾಂಧವ್ಯ ಚೆನ್ನಾಗಿರುತ್ತೆ ಎಂದು ಪಾಲಕರಿಗೆ ಕಿವಿಮಾತು ಹೇಳಿದರು.

ಕೆಟ್ಟ ವಿಚಾರ, ಜುಗುಪ್ಸೆ ಕೌನ್ಸೆಲಿಂಗ್ ಮಾಡಿ:

ವಿದ್ಯಾರ್ಥಿ ಜೀವನದಲ್ಲಿ ಮಕ್ಕಳ ಮನಸ್ಸು ಹೇಗೆ ಅಂತ ಅರಿತ ಪಾಲಕರು ಮಕ್ಕಳೊಟ್ಟಿಗೆ ಸ್ನೇಹಭಾವದಿಂದ ಮಾತನಾಡಬೇಕು. ಜುಗುಪ್ಸೆ ಅಚಾನಾಕಾಗಿ ಬರಲ್ಲ. ಅದು ಬರುವುದಕ್ಕೆ ಪಾಲಕರೇ ಕಾರಣ. ಅಂತಹ ಸಂದರ್ಭದಲ್ಲಿ ಮಕ್ಕಳಿಗೆ ಕೌನ್ಸೆಲಿಂಗ್ ಮಾಡಿಸಬೇಕು. ಕೌನ್ಸೆಲಿಂಗ್ ವಿಷಯದಲ್ಲಿ ಯಾವುದೇ ಸಂಕೋಚ ಇರಬಾರದು. ಇದರಿಂದ ಮಕ್ಕಳ ತಲೆಯಲ್ಲಿರುವ ಕೆಟ್ಟ ವಿಚಾರ, ಜುಗುಪ್ಸೆ ಭಾವನೆ ದೂರ ಮಾಡಬಹುದು. ಯಾವುದೇ ವಿಷಯದಲ್ಲಿ ಉತ್ಸಾಹವಿರಲಿ.

ದೇಶವೇ ನನ್ನ ಪರಿವಾರ:

ನಾನು ಈ ವಿಚಾರವಾಗಿ ಹೇಳಬೇಕು ಅಂದರೆ ದೇಶಕ್ಕೋಸ್ಕರ ಕೆಲಸ ಮಾಡುವಾಗ ನಾನೆಂದು ಸುಸ್ತಾಗಿಲ್ಲ. ದೇಶವನ್ನು ನನ್ನ ಪರಿವಾರವೆಂದು ಭಾವಿಸಿ ನಾನು ಕೆಲಸ ಮಾಡುತ್ತೇನೆ. ಪ್ರತಿದಿನವೂ ಅದೇ ಉತ್ಸಾಹದಲ್ಲಿ ಕೆಲಸ ಮಾಡುತ್ತೇನೆ. ಯಶಸ್ಸಿಗೆ ಸಮಯ ನಿರ್ವಹಣೆ ಅತ್ಯಗತ್ಯ. ಖುಷಿಯಿಂದ ಕೆಲಸ ಮಾಡಿದರೆ ಯಶಸ್ಸು ಕಾಣುತ್ತೀರಿ. ಯಾವುದೇ ಪರಿಸ್ಥಿಯಲ್ಲಿ ನಮಗೆ ಸಮಯವಿಲ್ಲ ಎಂದು ಹೇಳುವವರು ಸುಳ್ಳು ಹೇಳುತ್ತಿದ್ದಾರೆಂದೇ ಅರ್ಥ. ಆಸಕ್ತಿ ಇರುವ ಕ್ಷೇತ್ರದಲ್ಲಿ ಮುಂದುವರಿಯಬೇಕು. ನಮ್ಮ ಚಿಂತನೆಯಲ್ಲಿ ಸ್ಪಷ್ಟತೆ ಇರುವುದು ಅಗತ್ಯವಾಗಿದ್ದು, ಗಣಿತ, ವಿಜ್ಞಾನ ಹೊರತಾಗಿಯೂ ಓದಲು ಬೇರೆ ವಿಷಯಗಳಿವೆ ಅವುಗಳನ್ನು ಓದವುದು ಮುಖ್ಯವಾಗಿದೆ ಎಂದು ಪಾಲಕರಿಗು ಮತ್ತು ಮಕ್ಕಳಿಗೂ ಮಹತ್ವದ ವಿಚಾರವನ್ನು ತಿಳಿಸಿದ್ದಾರೆ.

Also read: ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಚಿತ್ರದ ಮೊದಲ ಪೋಸ್ಟರ್​ ಬಿಡುಗಡೆ; ಚಿತ್ರದ ಮೋದಿ ನೋಡಿ ದೇಶವೆ confused..