ಬಾಗಲಕೋಟೆಯಲ್ಲಿ ಮೋದಿ ಅಬ್ಬರ; ಕರ್ನಾಟಕದಲ್ಲಿ ಮೈತ್ರಿಯ ನಾಟಕ ನಡೆಯುತ್ತಿದೆ, ಕಾಂಗ್ರೆಸ್​ ಅಧಿಕಾರದಲ್ಲಿದ್ದಾಗ ಭಾರತ ಅಳುತ್ತಿತ್ತು, ಈಗ ಕುಮಾರಸ್ವಾಮಿ ಅಳುತ್ತಿದ್ದಾನೆ..

0
328

ಲೋಕಸಭಾ ಚುನಾವಣೆಯ ವಿಜಯ ಸಂಕಲ್ಪ ಯಾತ್ರೆಯನ್ನು ಉದ್ದೇಶಿಸಿ ಬಾಗಲಕೋಟೆಯಲ್ಲಿ ಮಾತನಾಡಿರುವ ನರೇಂದ್ರ ಮೋದಿಯವರು ರಾಜ್ಯ ಸರ್ಕಾರದ ವಿರುದ್ದ ಕಿಡಿ ಕಾರಿದ ಅವರು. ದೆಹಲಿಯಲ್ಲಿ ರಿಮೋಟ್ ಕಂಟ್ರೋಲ್ ಪ್ರಧಾನಿ ಇದ್ದರು. ಈಗ ಕರ್ನಾಟಕದಲ್ಲಿ ಅಂತಹ ಮುಖ್ಯಮಂತ್ರಿ ಇದ್ದಾರೆ. ಒಳಗೊಳಗೆ ಒಬ್ಬರ ಮೇಲೋಬ್ಬರು ದ್ವೇಷ ಕಾರುತ್ತಿದ್ದಾರೆ. ಕಾಂಗ್ರೆಸ್‍ಗೆ ಇಂತಹ ಅಭದ್ರ ಸರ್ಕಾರ, ದುರ್ಬಲ ಮುಖ್ಯಮಂತ್ರಿ ಬೇಕಾಗಿದ್ದಾರೆ. ಕರ್ನಾಟಕದ ದುರ್ಬಲ ಮುಖ್ಯಮಂತ್ರಿ ಕಣ್ಣೀರು ಹಾಕೋದನ್ನು ನಿಲ್ಲಿಸುತ್ತಿಲ್ಲ ಎಂದು ಮೋದಿ ಕಿಡಿಕಾರಿದ್ದಾರೆ.

ಹೌದು ಬಾಗಲಕೋಟೆಯಲ್ಲಿ ನಡೆದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೈತ್ರಿ ಸರ್ಕಾರ ಬಹುದಿನಗಳ ಕಾಲ ಉಳಿಯಲ್ಲ ಎಂಬುವುದು ಬಹುತೇಕ ನಾಯಕರಿಗೆ ಗೊತ್ತಾಗಿದೆ. ಹಾಗಾಗಿ ಐದು ವರ್ಷದಲ್ಲಿ ಬಾಚಿಕೊಳ್ಳಲು ಪ್ಲಾನ್ ಮಾಡಿದ್ದ ಹಣವನ್ನು ಈಗಲೇ ದೋಚಿಕೊಳ್ಳುತ್ತಿದ್ದಾರೆ. ಇಂತಹುದೇ ದುರ್ಬಲ, ಅಭದ್ರತೆಯ ಸರ್ಕಾರ ಕೇಂದ್ರದಲ್ಲಿತ್ತು. 5 ವರ್ಷದ ಹಿಂದೆ ದೆಹಲಿಯಲ್ಲಿ ರಿಮೋಟ್ ಕಂಟ್ರೋಲ್ ಪ್ರಧಾನಿಯಾಗಿದ್ದರು. ಆ ಸರ್ಕಾರ ಕೇವಲ ಹಗರಣದಿಂದ ಕೂಡಿತ್ತು. ಇದರಿಂದ ಬೇಸತ್ತ ದೇಶದ ಜನತೆ 2014ರಲ್ಲಿ ದೆಹಲಿಯಲ್ಲಿ ಚೌಕಿದಾರನ ಭದ್ರ ಸರ್ಕಾರವನ್ನು ನೇಮಕ ಮಾಡಿದರು.

ನಮ್ಮ ಸೈನಿಕರು ರಾತ್ರಿ ಮೂರೂವರೆ ಗಂಟೆಯಲ್ಲಿ ಪಾಕಿಸ್ತಾನ ನಿದ್ದೆ ಮಾಡುವಾಗ ಹನುಮಂತನಂತೆ ಹೊರಟರು. ಅವರ ನೆಲಕ್ಕೆ ನುಗ್ಗಿ ಭಯೋತ್ಪಾದಕರನ್ನು ಹೊಡೆದುರುಳಿಸಿ ಬಂದರು. ಬಾಲಾಕೋಟ್​ ಏರ್​ಸ್ಟ್ರೈಕ್​ ಒಪ್ಪಿಕೊಳ್ಳಲು ಕಾಂಗ್ರೆಸ್ ತಯಾರಿಲ್ಲ. ಕಾಂಗ್ರೆಸ್ ಆಗಲಿ, ಜೆಡಿಎಸ್ ಆಗಲಿ ಅವರಿಗೆ ಬೇಕಿರುವುದು ಓಟ್ ಬ್ಯಾಂಕ್. ಕಾಂಗ್ರೆಸ್​-ಜೆಡಿಎಸ್​ ಓಟ್ ಬ್ಯಾಂಕ್​ ಇರುವುದು ಬಾಗಲಕೋಟೆಯಲ್ಲೋ ಇಲ್ಲ ಬಾಲಾಕೋಟ್​ನಲ್ಲೋ ಎಂದು ಮೋದಿ ಪ್ರಶ್ನೆ ಮಾಡಿದ ಅವರು.

ಕಾಂಗ್ರೆಸ್​ ಸರ್ಕಾರವಿದ್ದಾಗ ಎಲ್ಲರೂ ಭಾರತ ವಿರುದ್ಧ ಬಾಲ ಬಿಚ್ಚುತ್ತಿದ್ದರು. ನಮ್ಮ ಬಳಿ ಅಣುಬಾಂಬ್​ ಇದೆ ಎಂದು ಪಾಕ್​ ಹೆದರಿಸುತ್ತದೆ. ನಾವು ಯಾವುದಕ್ಕೂ ಹೆದರದೆ ಪಾಕ್​ ನೆಲಕ್ಕೆ ನುಗ್ಗಿ ಆತಂಕವಾದಿಗಳನ್ನು ಸದೆ ಬಡಿದು ಬಂದೆವು. ಮುಂಜಾನೆ ಐದು ಗಂಟೆಗೆ ಪಾಕಿಸ್ತಾನ, ಭಾರತದವರು ಹೀಗೆ ಮಾಡಿದರು ಎಂದು ಟ್ವೀಟ್ ಮಾಡುತ್ತಾ ಮರುಗಿದರು. ಈಗ ಪಾಕಿಸ್ತಾನದ ಒಂದೇ ಒಂದು ಹೇಳಿಕೆ ನೀಡುತ್ತಿಲ್ಲ. ಎಲ್ಲೆ ಹೋದರು ಮೋದಿ ನಮ್ಮನ್ನು ಹೊಡೆಯುತ್ತಿದ್ದಾರೆ ನಮ್ಮನ್ನು ಕಾಪಾಡಿ… ಕಾಪಾಡಿ ಎಂದು ಕೇಳಿಕೊಳ್ಳುತ್ತಿದ್ದಾರೆ.
ಬಸವಣ್ಣನನ್ನು ನೀಡಿದ ಜನ್ಮಭೂಮಿಯಲ್ಲಿದ್ದೇನೆ. ಬಸವಣ್ಣ ತಿಳಿಸಿದ ಮಾರ್ಗದಲ್ಲಿ ನಿಮ್ಮ ಸೇವಕ ಕೆಲಸ ಮಾಡುತ್ತಿದ್ದಾನೆ. ದೇಶ ಇಂದು ಏನೇ ಆಭಿವೃದ್ಧಿ ಕಂಡಿದ್ದರೂ ಎಲ್ಲದರ ಹಿಂದೆ ಜನತೆಯ ಆಶೀರ್ವಾದವಿದೆ. ಜಗತ್ತಿನ ಅತಿ ದೊಡ್ಡ ಆರೋಗ್ಯ ಯೋಜನೆ ನಮ್ಮ ದೇಶದಲ್ಲಿದೆ. ಆಯುಷ್ಮಾನ್ ಭಾರತ್ ಯೋಜನೆಯ ಮೂಲಕ ಬಡ ಮತ್ತು ಸಾಮಾನ್ಯ ವರ್ಗದಲ್ಲಿ ಕಡಿಮೆ ದರದಲ್ಲಿ ಚಿಕಿತ್ಸೆ ಸಿಗುತ್ತಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಗಡಿ ದಾಟಿ ಶತ್ರುಗಳನ್ನು ನಾಶ ಮಾಡಿದೆ. ಈ ಎಲ್ಲ ಕೆಲಸಗಳು ನಡೆಯಲು ಕೇವಲ ಸ್ಪಷ್ಟ ಪ್ರಾಮಾಣಿಕತೆಯಿಂದ ಸಾಧ್ಯವಾಗಿದೆ. ಬಾಗಲಕೋಟೆ ಇಳಕಲ್ ಸೀರೆಯ ನೇಕಾರರಿಗೆ ಪಿಂಚಣಿ ಸಿಗುವಂತೆ ಯೋಜನೆಗಳನ್ನು ರೂಪಿಸಲಾಗುವುದು. ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಸೂಕ್ತ ಬೆಲೆ ಸಿಗಲಿದೆ. ಆಲಮಟ್ಟಿ ಡ್ಯಾಂ ಹೂಳು ತೆಗೆಯಲು ಅನುದಾನ ಮತ್ತು ಎತ್ತರವನ್ನು ಹೆಚ್ಚಿಸಲಾಗುವುದು ಎಂದು ಈ ವೇಳೆ ಮೋದಿ ಭರವಸೆ ನೀಡಿದರು.ಬಾಗಲಕೋಟೆಯಲ್ಲಿ ಮೋದಿ ಅಬ್ಬರ; ಕರ್ನಾಟಕದಲ್ಲಿ ಮೈತ್ರಿಯ ನಾಟಕ ನಡೆಯುತ್ತಿದೆ, ಕಾಂಗ್ರೆಸ್​ ಅಧಿಕಾರದಲ್ಲಿದ್ದಾಗ ಭಾರತ ಅಳುತ್ತಿತ್ತು, ಈಗ ಕುಮಾರಸ್ವಾಮಿ ಅಳುತ್ತಿದ್ದಾನೆ..

ಲೋಕಸಭಾ ಚುನಾವಣೆಯ ವಿಜಯ ಸಂಕಲ್ಪ ಯಾತ್ರೆಯನ್ನು ಉದ್ದೇಶಿಸಿ ಬಾಗಲಕೋಟೆಯಲ್ಲಿ ಮಾತನಾಡಿರುವ ನರೇಂದ್ರ ಮೋದಿಯವರು ರಾಜ್ಯ ಸರ್ಕಾರದ ವಿರುದ್ದ ಕಿಡಿ ಕಾರಿದ ಅವರು. ದೆಹಲಿಯಲ್ಲಿ ರಿಮೋಟ್ ಕಂಟ್ರೋಲ್ ಪ್ರಧಾನಿ ಇದ್ದರು. ಈಗ ಕರ್ನಾಟಕದಲ್ಲಿ ಅಂತಹ ಮುಖ್ಯಮಂತ್ರಿ ಇದ್ದಾರೆ. ಒಳಗೊಳಗೆ ಒಬ್ಬರ ಮೇಲೋಬ್ಬರು ದ್ವೇಷ ಕಾರುತ್ತಿದ್ದಾರೆ. ಕಾಂಗ್ರೆಸ್‍ಗೆ ಇಂತಹ ಅಭದ್ರ ಸರ್ಕಾರ, ದುರ್ಬಲ ಮುಖ್ಯಮಂತ್ರಿ ಬೇಕಾಗಿದ್ದಾರೆ. ಕರ್ನಾಟಕದ ದುರ್ಬಲ ಮುಖ್ಯಮಂತ್ರಿ ಕಣ್ಣೀರು ಹಾಕೋದನ್ನು ನಿಲ್ಲಿಸುತ್ತಿಲ್ಲ ಎಂದು ಮೋದಿ ಕಿಡಿಕಾರಿದ್ದಾರೆ.

ಹೌದು ಬಾಗಲಕೋಟೆಯಲ್ಲಿ ನಡೆದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೈತ್ರಿ ಸರ್ಕಾರ ಬಹುದಿನಗಳ ಕಾಲ ಉಳಿಯಲ್ಲ ಎಂಬುವುದು ಬಹುತೇಕ ನಾಯಕರಿಗೆ ಗೊತ್ತಾಗಿದೆ. ಹಾಗಾಗಿ ಐದು ವರ್ಷದಲ್ಲಿ ಬಾಚಿಕೊಳ್ಳಲು ಪ್ಲಾನ್ ಮಾಡಿದ್ದ ಹಣವನ್ನು ಈಗಲೇ ದೋಚಿಕೊಳ್ಳುತ್ತಿದ್ದಾರೆ. ಇಂತಹುದೇ ದುರ್ಬಲ, ಅಭದ್ರತೆಯ ಸರ್ಕಾರ ಕೇಂದ್ರದಲ್ಲಿತ್ತು. 5 ವರ್ಷದ ಹಿಂದೆ ದೆಹಲಿಯಲ್ಲಿ ರಿಮೋಟ್ ಕಂಟ್ರೋಲ್ ಪ್ರಧಾನಿಯಾಗಿದ್ದರು. ಆ ಸರ್ಕಾರ ಕೇವಲ ಹಗರಣದಿಂದ ಕೂಡಿತ್ತು. ಇದರಿಂದ ಬೇಸತ್ತ ದೇಶದ ಜನತೆ 2014ರಲ್ಲಿ ದೆಹಲಿಯಲ್ಲಿ ಚೌಕಿದಾರನ ಭದ್ರ ಸರ್ಕಾರವನ್ನು ನೇಮಕ ಮಾಡಿದರು.

ನಮ್ಮ ಸೈನಿಕರು ರಾತ್ರಿ ಮೂರೂವರೆ ಗಂಟೆಯಲ್ಲಿ ಪಾಕಿಸ್ತಾನ ನಿದ್ದೆ ಮಾಡುವಾಗ ಹನುಮಂತನಂತೆ ಹೊರಟರು. ಅವರ ನೆಲಕ್ಕೆ ನುಗ್ಗಿ ಭಯೋತ್ಪಾದಕರನ್ನು ಹೊಡೆದುರುಳಿಸಿ ಬಂದರು. ಬಾಲಾಕೋಟ್​ ಏರ್​ಸ್ಟ್ರೈಕ್​ ಒಪ್ಪಿಕೊಳ್ಳಲು ಕಾಂಗ್ರೆಸ್ ತಯಾರಿಲ್ಲ. ಕಾಂಗ್ರೆಸ್ ಆಗಲಿ, ಜೆಡಿಎಸ್ ಆಗಲಿ ಅವರಿಗೆ ಬೇಕಿರುವುದು ಓಟ್ ಬ್ಯಾಂಕ್. ಕಾಂಗ್ರೆಸ್​-ಜೆಡಿಎಸ್​ ಓಟ್ ಬ್ಯಾಂಕ್​ ಇರುವುದು ಬಾಗಲಕೋಟೆಯಲ್ಲೋ ಇಲ್ಲ ಬಾಲಾಕೋಟ್​ನಲ್ಲೋ ಎಂದು ಮೋದಿ ಪ್ರಶ್ನೆ ಮಾಡಿದ ಅವರು.

ಕಾಂಗ್ರೆಸ್​ ಸರ್ಕಾರವಿದ್ದಾಗ ಎಲ್ಲರೂ ಭಾರತ ವಿರುದ್ಧ ಬಾಲ ಬಿಚ್ಚುತ್ತಿದ್ದರು. ನಮ್ಮ ಬಳಿ ಅಣುಬಾಂಬ್​ ಇದೆ ಎಂದು ಪಾಕ್​ ಹೆದರಿಸುತ್ತದೆ. ನಾವು ಯಾವುದಕ್ಕೂ ಹೆದರದೆ ಪಾಕ್​ ನೆಲಕ್ಕೆ ನುಗ್ಗಿ ಆತಂಕವಾದಿಗಳನ್ನು ಸದೆ ಬಡಿದು ಬಂದೆವು. ಮುಂಜಾನೆ ಐದು ಗಂಟೆಗೆ ಪಾಕಿಸ್ತಾನ, ಭಾರತದವರು ಹೀಗೆ ಮಾಡಿದರು ಎಂದು ಟ್ವೀಟ್ ಮಾಡುತ್ತಾ ಮರುಗಿದರು. ಈಗ ಪಾಕಿಸ್ತಾನದ ಒಂದೇ ಒಂದು ಹೇಳಿಕೆ ನೀಡುತ್ತಿಲ್ಲ. ಎಲ್ಲೆ ಹೋದರು ಮೋದಿ ನಮ್ಮನ್ನು ಹೊಡೆಯುತ್ತಿದ್ದಾರೆ ನಮ್ಮನ್ನು ಕಾಪಾಡಿ… ಕಾಪಾಡಿ ಎಂದು ಕೇಳಿಕೊಳ್ಳುತ್ತಿದ್ದಾರೆ.
ಬಸವಣ್ಣನನ್ನು ನೀಡಿದ ಜನ್ಮಭೂಮಿಯಲ್ಲಿದ್ದೇನೆ. ಬಸವಣ್ಣ ತಿಳಿಸಿದ ಮಾರ್ಗದಲ್ಲಿ ನಿಮ್ಮ ಸೇವಕ ಕೆಲಸ ಮಾಡುತ್ತಿದ್ದಾನೆ. ದೇಶ ಇಂದು ಏನೇ ಆಭಿವೃದ್ಧಿ ಕಂಡಿದ್ದರೂ ಎಲ್ಲದರ ಹಿಂದೆ ಜನತೆಯ ಆಶೀರ್ವಾದವಿದೆ. ಜಗತ್ತಿನ ಅತಿ ದೊಡ್ಡ ಆರೋಗ್ಯ ಯೋಜನೆ ನಮ್ಮ ದೇಶದಲ್ಲಿದೆ. ಆಯುಷ್ಮಾನ್ ಭಾರತ್ ಯೋಜನೆಯ ಮೂಲಕ ಬಡ ಮತ್ತು ಸಾಮಾನ್ಯ ವರ್ಗದಲ್ಲಿ ಕಡಿಮೆ ದರದಲ್ಲಿ ಚಿಕಿತ್ಸೆ ಸಿಗುತ್ತಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಗಡಿ ದಾಟಿ ಶತ್ರುಗಳನ್ನು ನಾಶ ಮಾಡಿದೆ. ಈ ಎಲ್ಲ ಕೆಲಸಗಳು ನಡೆಯಲು ಕೇವಲ ಸ್ಪಷ್ಟ ಪ್ರಾಮಾಣಿಕತೆಯಿಂದ ಸಾಧ್ಯವಾಗಿದೆ. ಬಾಗಲಕೋಟೆ ಇಳಕಲ್ ಸೀರೆಯ ನೇಕಾರರಿಗೆ ಪಿಂಚಣಿ ಸಿಗುವಂತೆ ಯೋಜನೆಗಳನ್ನು ರೂಪಿಸಲಾಗುವುದು. ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಸೂಕ್ತ ಬೆಲೆ ಸಿಗಲಿದೆ. ಆಲಮಟ್ಟಿ ಡ್ಯಾಂ ಹೂಳು ತೆಗೆಯಲು ಅನುದಾನ ಮತ್ತು ಎತ್ತರವನ್ನು ಹೆಚ್ಚಿಸಲಾಗುವುದು ಎಂದು ಈ ವೇಳೆ ಮೋದಿ ಭರವಸೆ ನೀಡಿದರು.