ಮತ್ತೆ ಪ್ರಧಾನಿ ಮೋದಿ ಅಬ್ಬರ; ಸೈನಿಕರನು ಅವಮಾನಿಸಿದ ಸಿಎಂ ಕುಮಾರಸ್ವಾಮಿ ಮುಳುಗಿಹೋಗಲಿ, ದೇವೇಗೌಡ್ರು ಸನ್ಯಾಸ ಸ್ವೀಕರಿಸಿಲ್ಲ, ಈಗ ಮಗ ಸ್ವೀಕರಿಸುತ್ತಾನಾ??

0
128

ಲೋಕಸಭಾ ಚುನಾವಣೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೌಂಡ್ ಮಾಡುತ್ತಿದ್ದು. ಪ್ರಧಾನಿ ಮೋದಿಯವರು ಗಂಗಾವತಿಗೆ ಆಗಮಿಸಿ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು ಭಾರತೀಯ ಸೇನೆಗೆ ಅಪಮಾನ ಮಾಡಿರುವ ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುಳುಗಿಹೋಗಲಿ, ಕುಟುಂಬ ರಾಜಕಾರಣ ಮಾಡುವ ಅವರು ಮೋದಿ ಮತ್ತೆ ಪ್ರಧಾನಿಯಾದರೆ ನಿವೃತ್ತಿ ಪಡೆಯುತ್ತಾರೆ ಅಂತೆ. ಮೊದಲು ತಂದೆ ಈ ಮಾತನ್ನು ಹೇಳಿದ್ದರು, ಈಗ ಅವರ ಮಗ ಹೇಳಿದ್ದಾರೆ ಎಂದು ಕಿಡಿಕಾರಿದ್ದಾರೆ.

Also read: ಮೋದಿ ವಿರುದ್ದ ಮಾತನಾಡಲು ಹೋಗಿ ಪಾಕಿಸ್ತಾನವನ್ನು ಹಾಡಿ ಹೊಗಳಿದ ಕೈ ಶಾಸಕ; ಆಡಿಯೋ ಬಗ್ಗೆ ಜಾಲತಾಣದಲ್ಲಿ ಬಾರಿ ಚರ್ಚೆ..

ಹೌದು ಕೊಪ್ಪಳದಲ್ಲಿ ನಡದೆ ಬಿಜೆಪಿ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ಜೆಡಿಎಸ್ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಈ ಹಿಂದಿನ ಕಾಂಗ್ರೆಸ್ ಸರ್ಕಾರ 10 ಪರ್ಸೆಂಟ್ ಸರ್ಕಾರವಾಗಿತ್ತು. ಇದೀಗ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡು ಸೇರಿ ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸುತ್ತಿದ್ದು ಇದೀಗ 20 ಪರ್ಸೆಂಟ್ ಸರ್ಕಾರ ನಡೆಯುತ್ತಿದೆ. ಇವರ ಆಲೋಚನೆ ಬರೀ ಕಮಿಷನ್ ಮಾಡುವುದರಲ್ಲಿ ನಿರತವಾಗಿದೆ.

ಟಿಪ್ಪು ಸುಲ್ತಾನ್ ಜಯಂತಿ ಮಾಡಲು ಇವರ ಬಳಿ ಹಣವಿರುತ್ತದೆ. ಆದರೆ ಹಂಪಿ ಜಯಂತಿ ಮಾಡಲು ಸರ್ಕಾರದ ಬಳಿ ಹಣವಿಲ್ಲ. ಅಂತಹ ಸರ್ಕಾರ ನಿಮಗೆ ಬೇಕಾ. ಅಧಿಕಾರಕ್ಕೆ ಬಂದ 24 ಗಂಟೆಯಲ್ಲೇ ರೈತರ ಸಾಲ ಮನ್ನಾ ಮಾಡುತ್ತೀನಿ ಅಂತಾ ಹೇಳಿದ್ರು ಆದರೆ ಸಾಲ ಮನ್ನ ಮಾಡಿದ್ರಾ?. ಕೇಂದ್ರ ಸರ್ಕಾರದ ಕಿಸಾನ್ ಸನ್ಮಾನ್ ಯೋಜನೆ ಕರ್ನಾಟಕ ರೈತರಿಗೆ ತಲುಪದಂತೆ ರಾಜ್ಯ ಸರ್ಕಾರ ಅಡ್ಡಗಾಲು ಹಾಕುತ್ತಿದೆ. ರೈತರ ಪಟ್ಟಿಯನ್ನು ಕಳುಹಿಸಿ ಅಂದ್ರೆ ಅದಕ್ಕೆ ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದೆ. ಹೀಗೆ ಆದರೆ ರೈತರಿಗೆ ಯೋಜನೆಯ ಫಲ ಸಿಗುವುದು ಹೇಗೆ ಎಂದು ಪ್ರಶ್ನಿಸಿದರು.

ಸೈನಿಕರಿಗೆ ಅಪಮಾನಿಸುವ ಸಿಎಂ ಮುಳುಗಿಹೋಗಲಿ:

Also read: ಒಂದು ನಾಯಿಗೆ 5 ಸಾವಿರಬೇಕು; 500 ರೂ. ಗೆ ಮತಹಾಕಬೇಡಿ ಹಾಕಿದರೆ ಪ್ರಾಣಿಗಳಿಗಿಂತ ಕೀಳಾಗುತ್ತೇವೆ; ಮಂಡ್ಯದ ಮತದಾರರಿಗೆ ನಟ ದರ್ಶನ್ ವಿಶೇಷ ಮನವಿ..

ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಭಾರತೀಯ ಸೈನಿಕರ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಎರಡು ಹೊತ್ತಿನ ಊಟವಿಲ್ಲದೆ ಸೇನೆ ಸೇರುತ್ತಾರೆ ಎಂದು ಅಪಮಾನ ಮಾಡುತ್ತಾರೆ. ಇಂಥವರು ಮುಳುಗಿಹೋಗಲಿ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದ ಮೋದಿಯವರು. ಕುಮಾರಸ್ವಾಮಿ ತಮ್ಮ ಹೇಳಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅವರು ಸಬೂಬು ಹೇಳುತ್ತಾರೆ. ದೇಶದ ಗಡಿ ಕಾಯುವ ಸೈನಿಕರನ್ನು ಅಪಮಾನಿಸುವ ನಿಮಗೆ ನಾಚಿಕೆಯಾಗುವುದಿಲ್ಲವೇ ನಿಮ್ಮಂಥವರು ಇದ್ದಿದ್ದರಿಂದಲೇ ನಮ್ಮ ಸೈನಿಕರಿಗೆ ಬುಲೆಟ್ ಪ್ರೂಫ್ ಸಿಗಲಿಲ್ಲ. ನೀವು ಬಾಯಿಯಲ್ಲಿ ಚಿನ್ನದ ಚಮಚವನ್ನು ಇಟ್ಟುಕೊಂಡು ಹುಟ್ಟಿದವರು. ಸೈನಿಕರ ಸಮಸ್ಯೆ ಏನೆಂಬುದು ನಿಮಗೆ ಅರ್ಥವಾಗುತ್ತದೆಯೇ ಎಂದು ಪ್ರಶ್ನೆ ಮಾಡಿದರು.

ದೇವೇಗೌಡ್ರು ರಾಜಕೀಯ ಸನ್ಯಾಸ ಸ್ವೀಕರಿಸಿದ್ರ?

Also read: ಮಂಡ್ಯದ ಚುನಾವಣೆಯಲ್ಲಿ ಹಣದ ಸದ್ದು; ಜೆಡಿಎಸ್ ನಿಂದ ಚುನಾವಣೆಗೆ 150 ಕೋಟಿ ಹಂಚಿಕೆ? ಜೆಡಿಎಸ್ ಕಾರ್ಯಕರ್ತರ ಆಡಿಯೋ ಲೀಕ್..

ಈ ಹಿಂದೆ ಮಾಜಿ ಪ್ರಧಾನಿ ದೇವೇಗೌರಡರು ಮೋದಿ ಪ್ರಧಾನಿಯಾದರೆ ರಾಜಕೀಯ ಸನ್ಯಾಸತ್ವ ಸ್ವೀಕರಿಸುತ್ತೇನೆ ಎಂದಿದ್ದರು. ಈಗ ಅವರು ಸನ್ಯಾಸತ್ವ ಸ್ವೀಕರಿಸಿದ್ರಾ ಎಂದು ಪ್ರಶ್ನಿಸಿದ ಅವರು ದೇವೇಗೌಡರು ಜನರಿಗಾಗಿ ರಾಜಕೀಯ ಮಾಡೋದನ್ನ ಬಿಟ್ಟು, ಕುಟುಂಬದವರಿಗೆ ಟಿಕೆಟ್ ಕೊಡುತ್ತಾ ಕುಳಿತ್ತಿದ್ದಾರೆ. ಹಾಗೆಯೇ ಅವರ ಮಗನೂ ಮೋದಿ ಮತ್ತೆ ಪ್ರಧಾನಿಯಾದರೆ ಸನ್ಯಾಸಿ ಆಗುತ್ತೇನೆ ಅಂದಿದ್ದಾರೆ. ಮುಂದೇ ಅವರು ಆಗ್ತಾರಾ ಇಲ್ಲ. ಬಹುಶಃ ಅವರು ತಮ್ಮ ಐಬಿ ವರದಿ ನೋಡಿದ್ದರೆ, ಮತ್ತೊಮ್ಮೆ ಈ ರೀತಿ ಮಾತನಾಡುವ ಧೈರ್ಯ ಮಾಡುತ್ತಿರಲಿಲ್ಲ, ಈ ಬಾರಿ ನಡೆಯುತ್ತಿರುವ ಲೋಕಸಭಾ ಚುನಾವಣೆ ರಾಷ್ಟ್ರವಾದಿ ಹಾಗೂ ಪರಿವಾರವಾದಿಗಳ ಮಧ್ಯೆ ನಡೆಯುತ್ತಿದೆ. ಯಾರು ಗೆಲ್ಲಬೇಕು ಎನ್ನುವುದನ್ನು ಮತದಾರರು ನಿರ್ಧರಿಸಬೇಕು ಅಂತ ಮೋದಿ ಮನವಿ ಮಾಡಿದರು.