ಕಾಡಿನಲ್ಲಿ ಮೋದಿ ಸಾಹಸಮಯ ಪಯಣ! ವೈಲ್ಡ್ ಲೈಫ್ ಸರ್ವೈವರ್ ಬೇರ್ ಗ್ರಿಲ್ಸ್ ಜೊತೆ ದಟ್ಟಾರಣ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ..

0
464

ಇಡಿ ಜಗ್ಗತಿನಲ್ಲಿ ಹೆಮ್ಮೆಯ ಪ್ರಧಾನಿಯಾಗಿ ಮೆರೆಯುತ್ತಿರುವ ನರೇಂದ್ರ ಮೋದಿ. ದೇಶಕ್ಕೆ ಸಿಕ್ಕ ಅದ್ಬುತವಾದರೆ ಇನ್ನೂ ವಿರೋಧಿ ದೇಶಗಳಿಗೆ ತಲೆನೋವು ಆಗಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಅದರಂತೆ ಮೋದಿಯವರ ಯೋಜನೆಗಳು ಒಂದು ನಿಮಿಷವೂ ಸಮಯ ಹಾಳು ಮಾಡದೆ ದೇಶಕ್ಕಾಗಿ ದುಡಿಯುತ್ತಿರುವ ಮೋದಿ. ಕೇವಲ ರಾಜಕೀಯದಲ್ಲಿ ಮಾತ್ರವಲ್ಲದೆ ಹಲವು ಕ್ಷೆತ್ರಗಳಲ್ಲಿ ಯುವಕರಿಗೆ ಇರುವಷ್ಟು ಉತ್ಸಾಹ ತೋರಿಸುತ್ತಾ. ಮಾದರಿಯಾಗುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಕ್ಯಾಮರಾ ಹಿಡಿದು ಯುವಕರಿಗೆ ಸ್ಪೂರ್ತಿ ತುಂಬಿದ ಮೋದಿ ಈಗ ಡಿಸ್ಕವರಿ ವಾಹಿನಿಯ ಪ್ರಖ್ಯಾತ ಕಾರ್ಯಕ್ರಮ ಮ್ಯಾನ್​ ವರ್ಸಸ್​​ ವೈಲ್ಡ್​ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುಲಿದ್ದಾರೆ.

ಏನು ಮೋದಿ ವರ್ಸಸ್ ವೈಡ್?

ಹೌದು ಆಶ್ಚರ್ಯ ಎನಿಸಿದರು ಅಸಲಿಗೆ ಸತ್ಯವಾಗಿದ್ದು, ಜಗತ್ತಿನ ಸುಮಾರು 180 ದೇಶಗಳ ಜನರು ಯಾರಿಗೂ ತಿಳಿಯದ ಮೋದಿ ಅವರನ್ನು ಕಾಣಲಿದ್ದಾರೆ. ಭಾರತದ ವನ್ಯ ಜಗತ್ತು, ಪ್ರಾಣಿ ಸಂರಕ್ಷಣೆ ಮತ್ತು ಪರಿಸರದಲ್ಲಾಗುವ ಬದಲಾವಣೆ ಕುರಿತು ಜಾಗೃತಿ ಮೂಡಿಸಲಿದ್ದಾರೆ. ಆಗಸ್ಟ್ 12 ರಾತ್ರಿ 9ಕ್ಕೆ ಮ್ಯಾನ್ ವರ್ಸಸ್ ವೈಡ್ ವಿಥ್ ನರೇಂದ್ರ ಮೋದಿ ನೋಡಿ ಎಂದು ಬರೆದು #PMModionDiscovery ಹ್ಯಾಶ್‍ಟ್ಯಾಗ್ ಹಾಕಿ ವಿಡಿಯೋ ಜೊತೆ ಬೈರ್ ಗ್ರಿಲ್ಸ್ ಟ್ವೀಟ್ ಮಾಡಿದ್ದಾರೆ. ಅದರಂತೆ ಕಾಡು ಮೇಡು ಅಲೆದು, ಹೊಸ ವಿಚಾರ, ಪ್ರಾಣಿ ಪಕ್ಷಿ, ಸರೀಸೃಪ ಎಲ್ಲ ವಿಧಗಳನ್ನು ತಿಳಿಸುತ್ತಿದ್ದ ಟಿವಿ ಶೋನಲ್ಲಿ ಪ್ರಧಾನಿ ಮೋದಿಯೂ ಭಾಗಿಯಾಗಿರುವುದು ಇದೀಗ ಸಾಮಾಜಿಕ ತಾಣಗಳಲ್ಲಿ ಟ್ರೆಂಡಿಂಗ್‌ ಆಗಿದೆ.

Also read: ಮೊದಲ ಬಾರಿ ರಾಜಕೀಯ ಬಿಟ್ಟು ವಯಕ್ತಿಕ ಜೀವನದ ಬಗ್ಗೆ ನಟ ಅಕ್ಷಯ್ ಕುಮಾರ್ ಅವರ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ..

ಈ ಬಗ್ಗೆ ಡಿಸ್ಕವರಿ ವಾಹಿನಿಯ ನಿರೂಪಕ ಬೇರ್​ ಗ್ರಿಲ್ಸ್​​ ಅಧಿಕೃತ ಮಾಹಿತಿ ತಿಳಿಸಿದ್ದು, ನರೇಂದ್ರ ಮೋದಿಯವರು ಈ ಕಾರ್ಯಕ್ರಮದ ಮೂಲಕ ಭಾರತದಲ್ಲಿ ಪ್ರಾಣಿಗಳ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಆಗಸ್ಟ್​​ 12ರಂದು ರಾತ್ರಿ 9 ಗಂಟೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ ಮಾಧ್ಯಮಗಳ ಮೂಲಕ ಚಿರಪರಿಚಿತರಾಗುವುದು ಮತ್ತು ಯುವಪೀಳಿಗೆಯನ್ನು ಮಾಧ್ಯಮಗಳ ಮೂಲಕ ತಲುಪುವ ಕಲೆ ಮೋದಿಗೆ ಕರಗತವಾಗಿದೆ. ಈ ವಿಡಿಯೋದಲ್ಲಿ ಪ್ರಧಾನಿ ಮೋದಿ ಅವರ ಹೊಸ ಮುಖ ಕಾಣಬಹುದಾಗಿದೆ. ಎಂದು ತಿಳಿಸಿದ್ದಾರೆ.

“ಹಲವು ವರ್ಷಗಳ ಕಾಲ ನಾನು ಪ್ರಕೃತಿಯೊಂದಿಗೆ ಬದುಕಿದ್ದೆ. ಈ ಸಮಯದಲ್ಲಿ ನಿಸರ್ಗದಿಂದ ಬಹಳಷ್ಟು ಪ್ರಭಾವಿತನಾಗಿದ್ದೇನೆ. ಇಂತಹ ವಿಶೇಷ ಕಾರ್ಯಕ್ರಮದಲ್ಲಿ ಭಾಗಿಯಾಗಲು ಯಾವಾಗ ಆಹ್ವಾನ ಸಿಕ್ಕಿತೋ ಆಗ ಪ್ರಕೃತಿ ಮಧ್ಯೆ ಬೆರೆಯಲು ನನಗೆ ಉತ್ಸಾಹ ಮೂಡಿ ಭಾಗವಹಿಸಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು,” ಎಂದು ಕಾರ್ಯಕ್ರಮದ ನಿರ್ಮಾಪಕರು ತಿಳಿಸಿದರು. “ಈ ಕಾರ್ಯಕ್ರಮ ನನಗೆ ಒಂದು ಉತ್ತಮ ಅವಕಾಶ. ಈ ಮೂಲಕ ಭಾರತದ ಶ್ರೀಮಂತ ಪರಿಸರ ಪರಂಪರೆ ಹಾಗೂ ಪರಿಸರ ಉಳಿವಿಕೆಯ ಪ್ರಾಮುಖ್ಯತೆಯನ್ನು ಪ್ರಪಂಚಕ್ಕೆ ತೋರಿಸಲು ಸಹಾಯಕವಾಗಿದೆ. ಕಾಡಿನಲ್ಲಿ ಗ್ರಿಲ್ಸ್​​ ಜೊತೆ ಸಮಯಕಳೆದಿದ್ದು ಜೀವನದ ಅತ್ಯುತ್ತಮ ಕ್ಷಣಗಳಲ್ಲಿ ಒಂದು ಎಂದು ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ”. ಈಗಾಗಲೇ ಡಿಸ್ಕವರಿ ಚಾನೆಲ್ ನಲ್ಲಿ ಬೇರ್ ಗ್ರಿಲ್ಸ್ ಸಾಹಸದ ವಿಡಿಯೋಗಳು ಬಿತ್ತರವಾಗುತ್ತವೆ. ಇನ್ನು ಬೇರ್ ಗ್ರಿಲ್ಸ್ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್ ನಲ್ಲಿ ಸುತ್ತುತ್ತಿರುವ ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.