ಪ್ರಧಾನಿ ಮೋದಿ ಹಾಗು ಸಿಎಂ ಯೋಗಿ ಅವರ ಚಿತ್ರ ಬಿಡಿಸಿದ್ದಾಕೆ ಮುಸ್ಲಿಮ್ ಮಹಿಳೆಯ ಮೇಲೆ ಹಲ್ಲೆ ಇದೇನಾ ಸಂಸ್ಕೃತಿ..!

0
756

ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಚಿತ್ರವನ್ನು ಬಿಡಿಸಿದ್ದಕ್ಕೆ ಮುಸ್ಲಿಮ್ ಮಹಿಳೆಯ ಮೇಲೆ ಪತಿ ಸೇರಿದಂತೆ ಐವರು ಸಂಬಂಧಿಕರು ಹಲ್ಲೆ ನಡೆಸಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ನಗ್ಮಾ ಪರ್ವಿನ್ ಮೇಲೆ ಪತಿ ಪರ್ವೆಜ್ ಖಾನ್ ಸೇರಿದಂತೆ ಐದು ಮಂದಿ ಸಂಬಂಧಿಕರು ಹಲ್ಲೆ ನಡೆಸಿದ್ದಾರೆ ಎಂದು ನಗ್ಮಾ ಅವರ ತಂದೆ ಶಂಶೀರ್ ಖಾನ್ ದೂರು ನೀಡಿದ್ದಾರೆ.

ಮೋದಿ ಮತ್ತು ಆದಿತ್ಯನಾಥ್ ಅವರ ಚಿತ್ರವನ್ನು ಬಿಡಿಸಿದ್ದಕ್ಕೆ, ಮಗಳ ಮೇಲೆ ಹಲ್ಲೆ ನಡೆಸಿ ಆಕೆಯನ್ನು ಮನೆಯಿಂದ ಹೊರ ಹಾಕಿದ್ದಾರೆ ಎಂದು ಪರ್ವೆಜ್ ಖಾನ್ ದೂರು ನೀಡಿದ್ದಾರೆ. ಭಾನುವಾರ 6 ಮಂದಿಯ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಸಿಕಂದರ್‍ಪುರ ಎಸ್‍ಪಿ ಅನಿಲ್ ಕುಮಾರ್ ತಿಳಿಸಿದ್ದಾರೆ.

ನಗ್ಮಾ ಅವರು ಕಳೆದ ವರ್ಷ ಸಿಕಂದರ್‍ಪುರದ ಬಸರಿಕಪುರ್ ಗ್ರಾಮದ ಪರ್ವೆಜ್ ಅವರನ್ನು ವಿವಾಹವಾಗಿದ್ದರು.
ನೋಡಿ ಇಂತಹ ಸಂಸ್ಕೃತಿ ಇದ್ರೆ ಹೇಗೆ ಕೋಮುವಾದ ಮರೆಯಾಗುತ್ತದೆ ಹೇಳಿ ಒಂದು ನಮ್ಮ ದೇಶದಲ್ಲಿ ಇರುವ ಪ್ರತಿಯೊಬ್ಬ ಪ್ರಜೆ ಕೂಡ ಭಾರತೀಯ ಅನ್ನೋದನ್ನ ಯಾರು ಮರೆಯಬಾರದು.