ಶಾಶ್ವತವಾಗಿ ದೇವೇಗೌಡರ ಕುಟುಂಬವನ್ನು ರಾಜಕೀಯದಿಂದ ಕಿತ್ತೊಗೆಯಿರಿ; ಸೈನಿಕರಿಗೆ ಅವಮಾನ ಮಾಡಿದ ಪರಿವಾರಕ್ಕೆ ಈ ಚುನಾವಣೆಯಲ್ಲಿ ಪಾಠ ಕಲಿಸಬೇಕು; ನರೇಂದ್ರ ಮೋದಿ..

0
298

ರಾಜ್ಯದಲ್ಲಿ ಚುನಾವಣೆ ಬಿಸಿ ಏರುತ್ತಿದ್ದು ಇನ್ನೇನಿದ್ದರೂ ಉತ್ತರ ಕರ್ನಾಟಕ ಭಾಗದಲ್ಲಿ ಚುನಾವಣಾ ಪ್ರಚಾರದ ಸದ್ದು ಕೇಳಿಬರುತ್ತಿದೆ. ಅದರಂತೆ ನರೇಂದ್ರ ಮೋದಿಯವರು ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿ ಭಾವನಾತ್ಮಕವಾಗಿ ಕಣ್ಣೀರು ಸುರಿಸುವ ನಾಟಕ ಆಡುವವರಿಂದ ಅಭಿವೃದ್ಧಿ ಸಾಧ್ಯವಿಲ್ಲ. ಕರ್ನಾಟಕ ಸರ್ಕಾರ ರಿಮೋಟ್ ಕಂಟ್ರೋಲ್ ಬೇರೆ ಕಡೆ ಇದೆ. ಆದಷ್ಟು ಬೇಗ ಬೇಗ ಎಲ್ಲ ಮಾಡಿಕೊಳ್ಳಬೇಕು ಎಂದುಕೊಂಡಿದ್ದಾರೆ. ಐದು ವರ್ಷಗಳ ಹಿಂದೆ ದೆಹಲಿಯಲ್ಲಿ ಈ ಸ್ಥಿತಿ ಇತ್ತು. ಇದೀಗ ಕರ್ನಾಟಕದಲ್ಲಿ ಆ ಪರಿಸ್ಥಿತಿ ಇದೆ ಇದಕ್ಕೆ ಕಾರಣವಾದ ದೇವೇಗೌಡರ ಪರಿವಾರವನ್ನು ಸಾರ್ವಜನಿಕ ಜೀವನದಿಂದ ಶಾಶ್ವತವಾಗಿ ಕಿತ್ತೊಗೆಯಿರಿ’ ಎಂದು ಕಿಡಿಕಾರಿದ್ದಾರೆ.

ಹೌದು ಕರ್ನಾಟಕದ ಎರಡನೇ ಹಂತದ ಚುನಾವಣೆಗೆ ತಯಾರಿ ನಡೆಯುತ್ತಿದ್ದು. ಚುನಾವಣಾ ಪ್ರಚಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ತನ್ನ ಅಸ್ತಿತ್ವದ ಪ್ರಶ್ನೆ ಬಂದಾಗಲೆಲ್ಲಾ ಧರ್ಮದ ದಾಳ ಉರುಳಿಸಿ ಕಾಂಗ್ರೆಸ್ ಆಟವಾಡುತ್ತದೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ಲಿಂಗಾಯತರ ವಿಚಾರದಲ್ಲೂ ಇದೇ ರೀತಿ ನಡೆದುಕೊಂಡಿದೆ’ ರಾಜಕೀಯ ಲಾಭಕ್ಕಾಗಿ ಧರ್ಮ ಒಡೆಯಲು ಮುಂದಾಗಿರುವುದು ಅವರೇ ಬರೆದ ಪತ್ರದ ಮೂಲಕ ಬಹಿರಂಗವಾಗಿದೆ. ಈಗಲೂ ಅದೇ ವಿಚಾರದಲ್ಲಿ ಆ ಪಕ್ಷದ ಇಬ್ಬರು ಮಂತ್ರಿಗಳು ಪರಸ್ಪರ ಕಿತ್ತಾಡುತ್ತಿದ್ದಾರೆ. ಕಾಂಗ್ರೆಸ್‌ನ ಈ ಆಟದ ಬಗ್ಗೆ ಎಚ್ಚರವಹಿಸಿರಿ’

ಮೈತ್ರಿ ಸರ್ಕಾರದಿಂದ ತಾಯಿ ಎದೆ ಹಾಲನ್ನು ಭಾಗ ಮಾಡಿಕೊಳ್ಳಲು ಹೊರಟಿರುವ ಕಾಂಗ್ರೆಸ್-ಗೆ ನಾಚಿಕೆ ಇಲ್ಲ ಹೇಗೆ ತಾಯಿಹಾಲು ವಿಭಾಗಿಸಲು ಸಾದ್ಯವಿಲ್ಲವೂ ಅದೇ ರೀತಿ ಲಿಂಗಾಯತ ಸಮಾಜದ ವಿಭಜನೆಯೂ ಸಾಧ್ಯವಿಲ್ಲ. ಧರ್ಮದಲ್ಲಿ ಗೋಡೆ ಕಟ್ಟುವ ಮೂಲಕ ಅಮ್ಮನ ಎದೆಯಹಾಲಿಗೆ ವಿಷ ಹಿಂಡುವ ಕೆಲಸವನ್ನು ಕಾಂಗ್ರೆಸ್‌ನವರು ಮಾಡುತ್ತಿದ್ಧಾರೆ. ಅದರ ನೇತೃತ್ವವನ್ನು ಆ ಪಕ್ಷದ ಮಂತ್ರಿಯೇ ವಹಿಸಿದ್ದಾರೆ’ ಆದರಿಂದ ದೇವೇಗೌಡರ ಪರಿವಾರವನ್ನು ಸಾರ್ವಜನಿಕ ಜೀವನದಿಂದ ಶಾಶ್ವತವಾಗಿ ಕಿತ್ತೊಗೆಯಿರಿ’ ಎಂದು ಚಿಕ್ಕೋಡಿಯಲ್ಲಿ ಗುಡುಗಿದ್ದಾರೆ.

ನಮ್ಮ ಸೈನಿಕರು ರಾತ್ರಿ ಮೂರೂವರೆ ಗಂಟೆಯಲ್ಲಿ ಪಾಕಿಸ್ತಾನ ನಿದ್ದೆ ಮಾಡುವಾಗ ಹನುಮಂತನಂತೆ ಹೊರಟರು. ಅವರ ನೆಲಕ್ಕೆ ನುಗ್ಗಿ ಭಯೋತ್ಪಾದಕರನ್ನು ಹೊಡೆದುರುಳಿಸಿ ಬಂದರು. ಬಾಲಾಕೋಟ್​ ಏರ್​ಸ್ಟ್ರೈಕ್​ ಒಪ್ಪಿಕೊಳ್ಳಲು ಕಾಂಗ್ರೆಸ್ ತಯಾರಿಲ್ಲ. ಕಾಂಗ್ರೆಸ್ ಆಗಲಿ, ಜೆಡಿಎಸ್ ಆಗಲಿ ಅವರಿಗೆ ಬೇಕಿರುವುದು ಓಟ್ ಬ್ಯಾಂಕ್. ಕಾಂಗ್ರೆಸ್​-ಜೆಡಿಎಸ್​ ಓಟ್ ಬ್ಯಾಂಕ್​ ಇರುವುದು ಬಾಗಲಕೋಟೆಯಲ್ಲೋ ಇಲ್ಲ ಬಾಲಾಕೋಟ್​ನಲ್ಲೋ ಎಂದು ಮೋದಿ ಪ್ರಶ್ನೆ ಮಾಡಿದ ಅವರು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಭಾರತೀಯ ಸೇನೆ ಹಾಗೂ ಸೈನಿಕರಿಗೆ ಅಪಮಾನ ಮಾಡಿದ್ದಾರೆ.ತುತ್ತು ಅನ್ನಕ್ಕೂ ಗತಿ ಇಲ್ಲದವರು ಭಾರತೀಯ ಸೇನೆ ಸೇರುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.

ಅದ್ಯಾವ ರೀತಿಯ ಭಾಷೆ? ಇಂತಹ ಭಾಷೆಯನ್ನು ಯಾವ ಸ್ವಾಭಿಮಾನಿ ಭಾರತೀಯನೂ ಸಹಿಸುವುದಿಲ್ಲ; ಸ್ವೀಕರಿಸುವುದಿಲ್ಲ. ಸೈನಿಕರಿಗೆ ಅವಮಾನ ಮಾಡಿದ ಅವರ ಇಡೀ ಕುಟುಂಬಕ್ಕೆ ಈ ಚುನಾವಣೆಯಲ್ಲಿ ಪಾಠ ಕಲಿಸಬೇಕು. ಈ ಅಧಿಕಾರ ಅವಧಿಯಲ್ಲಿನ ಕೆಲಸಗಳು ನಿಮಗೆ ಸಮಾಧಾನ ತಂದಿದೆಯೇ? ಪಾಕಿಸ್ತಾನದ ಮೇಲೆ ನಮ್ಮ ಸೈನಿಕರು ನಡೆಸಿದ ದಾಳಿ ಖುಷಿ ತಂದಿದೆಯೇ?’ ಎಂದು ಸಭಿಕರನ್ನು ಕೇಳಿ, ಜೈಕಾರದ ಉತ್ತರ ಪಡೆದರು.

Also read: ಬೆಂಗಳೂರು ದಕ್ಷಿಣದ ನೈಜ ಮತದಾರರು ಬಿ.ಜೆ.ಪಿ.ಗೆ ಮತ ಹಾಕುವುದನ್ನು ತಪ್ಪಿಸಲು ಅವರ ಹೆಸರನ್ನು ಪಾಲಿಕೆಯವರು ಕೈ ಬಿಟ್ಟಿದ್ದಾರೆ: ಗಂಭೀರ ಆರೋಪ ಮಾಡಿರುವ ಬಿ.ಜೆ.ಪಿ.!!