ಮಹಿಳಾ ಪೌರ ಕಾರ್ಮಿಕರೊಂದಿಗೆ ಸೇರಿ ಪ್ಲ್ಯಾಸ್ಟಿಕ್ ಕಸ ಬೇರ್ಪಡಿಸಿದ ಪ್ರಧಾನಿ ಮೋದಿ; ಮುಂದೇನು ಮಾಡಿದರು ನೋಡಿ..!

0
148

ದೇಶದ ಹೆಮ್ಮೆಯ ಪ್ರಧಾನಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾದ ನರೇಂದ್ರ ಮೋದಿಯವರು ದೇಶದ ಏಳಿಗೆಗಾಗಿ ಸದಾ ತಾವೇ ಮುಂದೆ ನಿಂತು ಕೆಲಸ ಮಾಡಿ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿರುವ ಮೋದಿಯವರು ಮೊದಲು ಭಾರತದಿಂದ ಪ್ಲಾಸ್ಟಿಕ್ ಎನ್ನುವ ಕಾಯಿಲೆಯನ್ನು ಬೇರು ಸಮೇತ ಕಿತ್ತೆಸೆಯಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ಲ್ಯಾಸ್ಟಿಕ್ ಬಳಕೆ ನಿಷೇಧಕ್ಕೆ ಕರೆ ಕೊಟ್ಟಿದ್ದು ಪೌರಕಾರ್ಮಿಕ ಮಹಿಳೆಯರ ಜೊತೆಗೆ ಕುಳಿತುಕೊಂಡು ಪ್ಲ್ಯಾಸ್ಟಿಕ್ ಮತ್ತು ಕಸ ಬೇರ್ಪಡಿಸಿ ಮಾದರಿಯಾಗಿದ್ದಾರೆ.

ಪ್ಲಾಸ್ಟಿಕ್ ಆರಿಸಿದ ಪ್ರಧಾನಿ ಮೋದಿ;

ಹೌದು ದೇಶದ ಉನ್ನತ ಸ್ಥಾನದಲ್ಲಿದ್ದು ಕಸವನ್ನು ಕೈಯಿಂದ ಮುಟ್ಟಿದ ಮಹಾನ್ ಹೃದಯವಂತರಾದ ನರೇಂದ್ರ ಮೋದಿ. ಪ್ಲ್ಯಾಸ್ಟಿಕ್ ಬಳಕೆ ನಿಲ್ಲಿಸುವಂತೆ ಆ.15 ರ ತಮ್ಮ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಪ್ರಧಾನಿ ಮೋದಿ ಕೆಂಪುಕೋಟೆಯಿಂದ ದೇಶಕ್ಕೆ ಕರೆ ಕೊಟ್ಟಿದ್ದರು. ಆದರೆ ಸುಮ್ಮನೆ ಹೇಳಿ ಮರೆಯವುದು ಮೋದಿ ಜಾಯಮಾನವಲ್ಲ. ಇತರರಿಗೆ ಬುದ್ಧಿವಾದ ಹೇಳುವ ಜೊತೆಗೆ ತಾವೂ ಅದನ್ನು ಪಾಲಿಸುವ ಪ್ರಧಾನಿ ಮೋದಿ, ಅದರಂತೆ ಉತ್ತರಪ್ರದೇಶದ ಮಥುರಾದಲ್ಲಿ ಸ್ವಚ್ಛತಾ ಕರ್ಮಚಾರಿಗಳೊಂದಿಗೆ ಸೇರಿ ಪ್ಲ್ಯಾಸ್ಟಿಕ್ ಕಸವನ್ನು ಬೇರ್ಪಡಿಸಿ ಇಡೀ ದೇಶಕ್ಕೆ ಪ್ಲ್ಯಾಸ್ಟಿಕ್ ಬಳಕೆಗೆ ಅಂತ್ಯ ಹಾಡುವಂತೆ ಸಂದೇಶ ರವಾನಿಸಿದ್ದಾರೆ.

Also read: ರೈತರು, ಕೂಲಿ ಕಾರ್ಮಿಕರಿಗೆ ರಾಜ್ಯ ಸರ್ಕಾರದಿಂದ ಹೊಸ ಯೋಜನೆ; ಇನ್ಮುಂದೆ ಮನೆ ಬಾಗಿಲಿಗೆ ಬರಲಿವೆ ಹಲವು ಸರ್ಕಾರಿ ಸೇವೆಗಳು.!

ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಇಂದು ಪ್ರಧಾನಿಗಳು ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮಥುರಾದಲ್ಲಿ ಕಸದಿಂದ ಪ್ಲಾಸ್ಟಿಕ್ ಬೇರ್ಪಡಿಸುವ ಮಹಿಳೆಯರನ್ನು ಕಂಡು ಅವರಿಗೆ ಸಹಾಯವನ್ನು ಮಾಡಿದ್ದಾರೆ. ಆ ಮೂಲಕ ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್ (ಸಿಂಗಲ್ ಯೂಸ್ ಪ್ಲಾಸ್ಟಿಕ್) ಬಳಕೆಯನ್ನು ನಿಲ್ಲಿಸಲು ಸಂದೇಶ ನೀಡಿದ್ದಾರೆ. ಮಹಿಳೆಯರೊಂದಿಗೆ ನೆಲದ ಮೇಲೆ ಕುಳಿತು ಪ್ರಧಾನಿ ನರೇಂದ್ರ ಮೋದಿ ಅವರು ಪ್ಲಾಸ್ಟಿಕ್ ವಸ್ತುಗಳನ್ನು ಕಸದಿಂದ ಬೇರ್ಪಡಿಸುತ್ತಿರುವ ಫೋಟೋ ಕಾಣಬಹುದಾಗಿದೆ.

ಸುಮಾರು 25ಕ್ಕೂ ಹೆಚ್ಚು ಮಹಿಳೆಯರು ಈ ಸಂದರ್ಭದಲ್ಲಿ ಮೋದಿ ಅವರನ್ನು ಭೇಟಿ ಮಾಡಿದ್ದರು. ಮೋದಿ ಅವರು ತಮ್ಮನ್ನು ಭೇಟಿ ಮಾಡಿದ್ದ ಮಹಿಳೆಯರಿಂದ ಅವರು ಎದುರಿಸುವಂತಹ ಸಮಸ್ಯೆಗಳು ಸೇರಿದಂತೆ ಇತರೇ ಅಂಶಗಳ ಬಗ್ಗೆ ಪ್ರಶ್ನಿಸಿ ಮಾಹಿತಿ ಪಡೆದಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್​ನಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳನ್ನು ಜನರಿಗೆ ವಿವರಿಸಲಾಯಿತು. ಅಲ್ಲದೆ, ಕೆಲವೊಂದಿಷ್ಟು ಪೌರ ಕಾರ್ಮಿಕ ಮಹಿಳೆಯರು ಕೈಗೆ ಮತ್ತು ಮೂಗಿಗೆ ರಕ್ಷಣಾ ಕವಚವನ್ನು ಹಾಕಿಕೊಂಡು ಪ್ರಧಾನಿಗಳ ಪ್ರಶ್ನೆಗೆ ಉತ್ತರಿಸುತ್ತಾ, ಪ್ಲಾಸ್ಟಿಕ್ ತ್ಯಾಜ್ಯಗಳು ಎಲ್ಲಿ ಹೆಚ್ಚು ಉತ್ಪತ್ತಿಯಾಗುತ್ತವೆ? ಮತ್ತು ಇವನ್ನು ಬೇರ್ಪಡಿಸುವ ಬಗೆ ಹೇಗೆ? ಎಂದು ವಿವರಿಸಿದರು.

Also read: ಇನ್ಮುಂದೆ ಚಪ್ಪಲಿ, ಲುಂಗಿ ಹಾಕ್ಕೊಂಡು ಗಾಡಿ ಓಡ್ಸಿದ್ರೂ ಬಿಳ್ಳುತ್ತೆ ದಂಡದ ಜೊತೆಗೆ ಜೈಲು ವಾಸ; ಮೊದಲು ಸಂಪೂರ್ಣ ನಿಯಮ ತಿಳಿದು ವಾಹನ ಹತ್ತಿ..!

ಈ ವಿಚಾರ ಕುರಿತು ಸೋಮವಾರವಷ್ಟೇ ದೇಶದಲ್ಲಿ ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕ್ ವಸ್ತುಗಳನ್ನು ಬ್ಯಾನ್ ಮಾಡುವ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾಹಿತಿ ನೀಡಿದ್ದರು. ಅದರಂತೆ ಪ್ಲಾಸ್ಟಿಕ್ ಬದಲಾಗಿ ಪರಿಸರ ಸ್ನೇಹಿ ಬದಲಿ ಉತ್ಪನ್ನಗಳ ಅಭಿವೃದ್ಧಿಗೆ ಪರಿಣಾಮ ಕ್ರಮಕೈಗೊಳ್ಳು ಬದ್ಧರಾಗಿದ್ದೇವೆ ಇನ್ನೇನು ಪ್ಲ್ಯಾಸ್ಟಿಕ್ ಬಳಕೆಯನ್ನು ನಿಷೇಧಿಸುವ ಕಾಲ ಸನ್ನಿಹಿತವಾಗಿದ್ದು, ಸಿಂಗಲ್ ಯೂಸ್ ಪ್ಲ್ಯಾಸ್ಟಿಕ್ ಬಳಕೆಯನ್ನು ಕೊನೆಗಾಣಿಸಲು ಜನರ ಸಹಕಾರ ಕೋರಿದರು. 2022ರಲ್ಲಿ ಸಿಂಗಲ್ ಯೂಸ್ ಪ್ಲ್ಯಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಎಂದು ಹೇಳಿದ್ದರು.