ಗೋವಿಂದರಾಜು ಅವರ ಡೈರಿಯಲಿದ್ದ ಕಾಂಗ್ರೆಸ್ ನಾಯಕರ ಮೇಲೆ ಮೋದಿ ಐಟಿ ದಾಳಿ ನಡೆಸುತ್ತಾರೆಯೇ??

0
621
ಡೈರಿಯ ಜಪ ಇನ್ನೂ ಕರ್ನಾಟಕದಲ್ಲಿ ಮಾಸಿಲ್ಲ. ಮಾರುಕಟ್ಟೆಯಲ್ಲೂ.. ವಿಧಾನಸಭೆಯಲ್ಲೂ ಡೈರಿ ತನ್ನ ಪ್ರತಾಪ ತೋರಿಸುತ್ತಿದೆ. ಈಗ ಪ್ರಧಾನಿ ನರೇಂದ್ರ ಮೋದಿ ಅವರು ಡೈರಿ ಜಗಳಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ಹಾಗಿದ್ದರೆ ಮೋದಿ ಅವರು ಏನು ಮಾಡುತ್ತಾರೆ ಎಂಬ ಪ್ರಶ್ನೆಗೆ ಅವರು ತಮ್ಮದೇ ಧಾಟಿಯಲ್ಲಿ ಉತ್ತರ ನೀಡಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಡೈರಿಯಲ್ಲಿ ನಮೂದಿಸಲಾದ ಕಾಂಗ್ರೆಸ್ ಮುಖಂಡರ ಮನೆಗೆ ಐಟಿ ದಾಳಿ ನಡೆಸಲು ನಮೋ ಸುಚಿಸಿದ್ದಾರೆ ಎಂಬ ಮಾಹಿತಿ ಗೊತ್ತಾಗುತ್ತಿದೆ.
ಡೈರಿಗೆ ಡೈರಿಯಿಂದಲೇ ಉತ್ತರ ನೀಡಿದ್ದ ಕಾಂಗ್ರೆಸ್ ನಾಯಕ ಅಸಲಿ ಬಣ್ಣ ಬಯಲು ಮಾಡಲು ಪ್ರಧಾನಿ ಮಾಸ್ಟರ್ ಪ್ಲಾನ್ ರೂಪಿಸಿಕೊಂಡಂತೆ ಕಾಣುತ್ತದೆ. ಸುದ್ದಿಯಾದ ಡೈರಿಯಲ್ಲಿ ಕೆಜೆಜಿ, ಎಂಬಿಪಿ, ಆರ್‌ಜೆ ಕಚೇರಿ, ಎಸ್‌ಜಿ ಕಚೇರಿ, ಡಿಜಿವಿಎಸ್, ಎಚ್.ಕಾಂ, ಎಚ್‌ಸಿಎಂ, ಡಿಕೆಎಸ್, ಆರೆಲ್‌ಆರ್, ಆರ‍್ವಿಡಿ, ಕೆಂಪ್, ರಘು, ಎಸ್‌ಬಿ, ಎಂ.ವೋರ ಮತ್ತಿತ್ತರ ಇನ್ಸಿಯಲ್‌ಗಳು ಈ ಡೈರಿಯಲ್ಲಿದ್ದವು.
ಆದಯ ತೆರಿಗೆ ದಾಳಿ ವೇಳೆ ಎಂಎಲ್‌ಸಿ ಗೋವಿಂದರಾಜು ಅವರ ಮನೆಯಲ್ಲಿ ಸಿಕ್ಕ ಡೈರಿಯ ಬಗ್ಗೆ ರಾಷ್ಟ್ರೀಯ ವಾಹಿಸಿ ಸುದ್ದಿ ಮಾಡಿತ್ತು. ಬಳಿಕ ಗೋವಿಂದ್‌ರಾಜು ಅವರು ನನಗೂ ಈ ಡೈರಿಗೂ ಸಂಬಂಧ ವಿಲ್ಲ ಎಂದು ಕಡ್ಡಿ ಮುರಿದ ಹಾಗೆ ಉತ್ತರ ನೀಡಿದ್ದರು.
ಕಳೆದ ವರ್ಷದ ಮಾರ್ಚ್ ತಿಂಗಳಿನಿಂದ ಐಟಿ ವಿಚಾರಣೆ ಆರಂಭವಾಗಿದ್ದು, ಗೋವಿಂದರಾಜು ಆದಾಯದ ಪಕ್ಕಾ ಲೆಕ್ಕವನ್ನು ಐಟಿ ಅಧಿಕಾರಿಗಳು ಹಾಕುತ್ತಿದ್ದಾರೆ. ಸಕ್ರಮ ಹಾಗೂ ಅಕ್ರಮ ಮೂಲಗಳಿಂದ ಬಂದ ಆದಾಯವೆಷ್ಟು ಎನ್ನುವುದನ್ನು ಲೆಕ್ಕ ಹಾಕುತ್ತಿದ್ದಾರೆ.
ವಿಧಾನಸೌಧದಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷ ದಿನೇಶ್ ಗುಂಡುರಾವ್ ಸುದ್ದಿಗೋಷ್ಟಿ ನಡೆಸಿ, ಲೆಹರ್ ಸಿಂಗ್ ಅವರ ಮನೆ ಮೇಲೆ ಐಟಿ ದಾಳಿ ನಡೆದಾಗ ಸಿಕ್ಕ ಡೈರಿ ಬಹಿರಂಗ ಪಡಿಸಿದ್ದರು.