ಮೋದಿಯವರು 1.20 ಕೋಟಿ.ರೂ ಬೆಲೆಯ ಅಣಬೆ ತಿನ್ನುತ್ತಿದ್ದಾರಂತೆ, ಯಾವುದು ಆ ಅಣಬೆ ನೀವೇ ನೋಡಿ…

0
1007

ಗುಜರಾತ್‌ ವಿಧಾನಸಭಾ ಚುನಾವಣೆ ಪ್ರಚಾರ ರ‍್ಯಾಲಿ ವೇಳೆ ಕಾಂಗ್ರೆಸ್‌ ಯುವ ನಾಯಕ ಅಲ್ಪೇಶ್‌ ಠಾಕೂರ್‌, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ, ಮೋದಿಯವರು ನನ್ನ ಹಾಗೆಯೇ ಕಪ್ಪಗಿದ್ದರು, ಆದರೆ 2001ರಲ್ಲಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗಿನಿಂದ ಅವರು ಆಮದಾಗುವ ಅಣಬೆ ಅಥವಾ ಮಶ್ರೂಮ್ ತಿಂದು ಬೆಳ್ಳಗಾಗಿದ್ದಾರೆ ಎಂದು ಟೀಕಿಸಿದ್ದಾರೆ.

ಗುಜರಾತ್‌ನ ವಡಗೋನ್‌ ಎಂಬಲ್ಲಿ ನಡೆದ ಕಾಂಗ್ರೆಸ್‌ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅಲ್ಪೇಶ್‌, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮೈಬಣ್ಣ ಹಾಗೂ ಸೇವಿಸುವ ಆಹಾರದ ಕುರಿತು ಹೀಗೆ ಮಾತನಾಡಿದ್ದಾರೆ, ಮೋದಿ ಅವರು ತಿನ್ನುವ ಆಹಾರವನ್ನು ನಾನು ತಿನ್ನಲು ಆಗುವುದಿಲ್ಲ, ಅದು ಬಡವರು ತಿನ್ನಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಅವರು ತಿನ್ನುವ ಅಣಬೆ ತೈವಾನ್‌ನಿಂದ ಆಮದಾಗುತ್ತದೆ ದಿನಕ್ಕೆ 5 ಅಣಬೆ ತಿನ್ನುತ್ತಾರೆ, ಒಂದು ಅಣಬೆಯ ಬೆಲೆ 80 ಸಾವಿರ.ರೂ, ಹೀಗೆ ಅವರು ಪ್ರತಿ ತಿಂಗಳು 1.20 ಕೋಟಿ.ರೂ ಮೌಲ್ಯದ ಅಣಬೆ ತಿನ್ನುತ್ತಾರೆ, ಹಾಗಾಗಿ ಅವರು ಅಷ್ಟು ಬೆಳ್ಳಗಿದ್ದಾರೆ ಎಂದಿದ್ದಾರೆ. ಇಷ್ಟು ಮೌಲ್ಯದ ಅಣಬೆಯನ್ನು ಮೋದಿ ಅವರು ಒಬ್ಬರೇ ತಿಂದಿದ್ದಾರೆ ಅಂದರೆ ನೀವೇ ಲೆಕ್ಕ ಹಾಕಿ ಅವರ ಹಿಂಬಾಲಕರು ಎಷ್ಟು ಮೌಲ್ಯದ ಅಣಬೆ ತಿಂದಿರಬಹುದು ಎಂದು ಅಲ್ಪೇಶ್ ಠಾಕೂರ್‌ ಹೇಳಿದ್ದಾರೆ.

ಒಟ್ಟಿನಲ್ಲಿ ಕೇವಲ ಚುನಾವಣಾ ಪ್ರಚಾರಕ್ಕಾಗಿ, ಪ್ರಧಾನಿಯ ಆಹಾರ ಮತ್ತು ಮೈಬಣ್ಣದ ಬಗ್ಗೆ ಹೀಗೆ ಕೇವಲವಾಗಿ ಮಾತನಾಡಿರುವುದು ಎಷ್ಟು ಸರಿ ನೀವೇ ಯೋಚಿಸಿ…!