ವಿಷ ಕನ್ಯೆ ಅಂಬಿಕಾ ಪ್ರಸಾದದಲ್ಲಿ ವಿಷ ಹಾಕಿ 15 ಜನರ ಪ್ರಾಣ ತೆಗೆದಿದ್ದು ಯಾಕಂತೆ ಗೊತ್ತಾ..?

0
984

ಮಾರಮ್ಮ ದೇವಸ್ಥಾನದ ಪ್ರಸಾದದಲ್ಲಿ ವಿಷ ಬೆರೆಸಿ 15 ಜನರ ಪ್ರಾಣವನ್ನು ಬಲಿ ತೆಗೆದುಕೊಂಡು, 80 ಕ್ಕೂ ಹೆಚ್ಚು ಜನರು ಸಾವು ಬದುಕಿನ ಮದ್ಯ ಹೋರಾಡುತ್ತಿರುವ ಘಟಣೆ ಇಡಿ ರಾಜ್ಯವನ್ನೆ ತಲ್ಲಣಗೊಳಿಸಿದೆ. ಇಂತಹ ವಿಕೃತ ಕೆಲಸ ಮಾಡಿದ ಆ ಪಾಪಿ ಆದ್ರು ಯಾರು ಅವರನ್ನು ಸ್ವಲ್ಪ ನೋಡಲೇಬೇಕು ಎಂಬ ಕಾತುರ ಎಲ್ಲರಲ್ಲೂ ಇತ್ತು. ಈಗ ಪಾಪಿಗಳು ಸುಳಿವು ಸಿಕ್ಕಿದು ವಿಚಾರಣೆ ವೇಳೆ ತಪ್ಪು ಒಪ್ಪಿಕೊಂಡಿದ್ದಾರೆ. ಈ ಕೃತ್ಯ ಮಾಡಿದು ದೊಡ್ಡ ರೌಡಿಗಳು ಏನ್ ಅಲ್ಲ! ಒಬ್ಬ ಸಾಮಾನ್ಯ ಮಹಿಳೆ ಎಂಬುದು ಇನ್ನೂ ಆಘಾತ ತಂದಿದೆ. ಹಾಗಾದ್ರೆ ಈ ಮಹಿಳೆ ಯಾರು? ಅವಳ ಉದ್ದೇಶವಾದ್ರು ಏನು? ಎಂಬ ರೋಚಕ ಮಾಹಿತಿ ಇಲ್ಲಿದೆ ನೋಡಿ.


Also read: ನೀವು ಈ ಆಹಾರ ಪದಾರ್ಥಗಳನ್ನು ಸೇವಿಸುತ್ತಿದ್ದೀರ? ಹಾಗಾದ್ರೆ ಪಕ್ಕಾ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಚ್ಚರ..

ಯಾರು ಈ ಅಂಬಿಕಾ?

15 ಮಂದಿಯನ್ನು ಬಲಿತೆಗೆದುಕೊಂಡ ವಿಷ ಪ್ರಸಾದ ದುರಂತಕ್ಕೆ ತಾನೇ ಕಾರಣ ಎಂದು ಅಂಬಿಕಾ ಎಂಬ ಮಹಿಳೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಇವಳು ದೇವಸ್ಥಾನದ ಆಡಳಿತ ಮಂಡಳಿಯ ಮ್ಯಾನೇಜರ್ ಪತ್ನಿಯಾಗಿದು. ಸಾಲೂರು ಮಠದ ಕಿರಿಯ ಸ್ವಾಮಿಜೀಯಾಗಿರುವ ಇಮ್ಮಡಿ ಮಹಾದೇವ್ ಸ್ವಾಮಿ ಆದೇಶದ ಮೇರೆಗೆ ಪ್ರಸಾದದಲ್ಲಿ ವಿಷ ಬೆರೆಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಈ ಕುರಿತು ಪೊಲೀಸರ ಮುಂದೆ ಸತ್ಯ ಬಾಯ್ಬಿಟ್ಟಿರುವ ಅಂಬಿಕಾ ದೇವಸ್ಥಾನದ ಆದಾಯವೆಲ್ಲಾ ತಮ್ಮ ವಶಕ್ಕೆ ಪಡೆದುಕೊಳ್ಳುವ ಹುನ್ನಾರದ ಭಾಗವಾಗಿ ಪ್ರಸಾದದಲ್ಲಿ ವಿಷ ಬೆರೆಸಲಾಗಿತ್ತು ಎಂದು ಈ ಪಾಪಿ ತಪ್ಪೊಪ್ಪಿಕೊಂಡಿದ್ದಾಳೆ.


Also read: ಮಾರಮ್ಮನ ಪ್ರಸಾದ ಬಲಿ ತೆಗೆದುಕೊಂಡಿರುವುದು ಕೇವಲ ಭಕ್ತರನ್ನು ಅಷ್ಟೇಅಲ್ಲ; ಏನು ಅರಿಯದ ಪಕ್ಷಿಗಳನ್ನು ಕೂಡ ಬಲಿ ತೆಗೆದುಕೊಂಡಿದೆ..

ವಿಷ ಹಾಕಲು ಮೂಲ ಉದ್ದೇಶ?

ಅಂಬಿಕಾ ಪತಿ ಮಾದೇಶ್-ರನ್ನು ದೇವಸ್ಥಾನದ ಮುಖ್ಯಸ್ಥರನ್ನಾಗಿ ಮಾಡಬೇಕೆಂಬ ದುರುದ್ದೇಶದಿಂದಲೇ ಈ ಕುಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ. ಕಳೆದ ಕೆಲವು ವರ್ಷಗಳಿಂದಲೇ ಮಾದೇಶ್ ದೇವಸ್ಥಾನದ ಟ್ರಸ್ಟಿಯಾಗಿದ್ದರು. ಆದರೇ ದೇವಸ್ಥಾನದ ಆಡಳಿತದ ಪಾರುಪತ್ಯ ವಹಿಸಬೇಕೆಂಬ ದುರುದ್ದೇಶದಿಂದಲೇ ಈ ರೀತಿ ಮಾಡಿದ್ದಾರೆ ಎನ್ನಲಾಗಿದ್ದು. ಅಸಲಿಗೆ ಅಂಬಿಕಾಗೆ ತನ್ನ ಪತಿ ಬಲು ಬೇಗ ಟ್ರಸ್ಟಿನ ಅಧ್ಯಕ್ಷನಾದರೇ. ಶ್ರೀಮಂತರಾಗಬಹುದೆಂಬ ದುರುದ್ದೇಶದಿಂದಲೇ ಈ ವ್ಯವಸ್ಥಿತ ಯೋಜನೆಯನ್ನು ರೂಪಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಈ ಘಟನೆಗೆ ಪ್ರಮುಖ ಸೂತ್ರದಾರರಾಗಿ ಸಾಲೂರು ಮಠದ ಕಿರಿಯ ಶ್ರೀಗಳ ಹೆಸರು ಥಳುಕು ಹಾಕಿಕೊಳ್ಳುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


Also read: ಐ.ಟಿ.ಯಿಂದ Refund ಬಂದಿದೆ ಅಂತ ಸುಳ್ಳು ಇ-ಮೇಲ್, ಎಸ್.ಎಂ.ಎಸ್. ಮತ್ತು ಕರೆ ಮಾಡಿ ಖದೀಮರು ವಂಚನೆ ಮಾಡುತ್ತಿದ್ದಾರೆ, ನೀವು ಮೋಸ ಹೋಗಬಾರದು ಅಂದ್ರೆ ಇದನ್ನು ಓದಿ..

ದೇವಸ್ಥಾನಕ್ಕೂ ಅಂಬಿಕಾ-ಗೂ ಸಂಬಂಧವೇನು?

ತಮಿಳುನಾಡಿನವರಾದ ಅಂಬಿಕಾ ಮಾದೇಶ್ ಅವರನ್ನು ಮದುವೆಯಾದ ಬಳಿಕ ಗ್ರಾಮದಲ್ಲಿ ನೆಲೆಸಿದ್ದರು. ಹನೂರಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಲ್ಲದೇ ದೇವಸ್ಥಾನದ ಎಲ್ಲಾ ಕಾರ್ಯಕ್ರಮಗಳಲ್ಲೂ ಮುಂದಡಿಯಿಡುತ್ತಿದ್ದರು. ಮಠ ಮತ್ತು ದೇವಸ್ಥಾನವನ್ನು ತಮ್ಮ ಹಿಡಿತಕ್ಕೆ ಪಡೆದುಕೊಳ್ಳುವ ಉದ್ದೇಶ ಹೊಂದಿದ್ದರು. ಟ್ರಸ್ಟ್‌ನ ಪೂಜಾರಿ ಚಿನ್ನಪ್ಪಿ ಅವರನ್ನು ಬೆದರಿಸುವುದು ಅವರ ಗುರಿಯಾಗಿತ್ತು. ಈ ಕಾರಣಗಳಿಂದ ಆಹಾರಕ್ಕೆ ವಿಷ ಬೆರೆಸಿದ್ದರು ಎನ್ನಲಾಗಿದೆ.
ಈ ಘಟಣೆಗೆ ಸಂಬಂಧಪಟ್ಟಂತೆ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದು, ಅವರ ಮೇಲೆ ಯಾವ ಸೆಕ್ಷನ್ ಹಾಕಬೇಕು ಎಂದು ಚರ್ಚಿಸಲಾಗುತ್ತಿದೆ. ಪ್ರಾಥಮಿಕ ತನಿಖೆಯ ವರದಿಯನ್ನು ಡಿವೈಎಸ್ಪಿ ಪುಟ್ಟ ಮಾದಯ್ಯ ಸಲ್ಲಿಸಿದ್ದು, ಅದರ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತಿದೆ. ಹಾಗೆಯೇ ಕೊಳ್ಳೇಗಾಲದ ದಾಸೋಹ ಮಠದಲ್ಲಿರುವ ಇಮ್ಮಡಿ ಮಹದೇವಸ್ವಾಮಿ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.