ಮೈದಾನದೊಳಗೆ ಸಚಿವರ ಹೆಲಿಕಾಫ್ಟರ್‍ ಇಳಿಸುವುದಕೋಸ್ಕರ ಪೊಲೀಸರ ದೌರ್ಜನ್ಯಕ್ಕೆ ಒಳಗಾದ ವಿಶ್ವದಾಖಲೆಯ ವೀರ!

0
757

ಮುಂಬೈ ಕ್ರಿಕೆಟ್ ಸಂಸ್ಥೆಯ ಅಂತರ್ ಶಾಲೆ ಕ್ರಿಕೆಟ್ ಎಚ್.ಟಿ. ಭಂಡಾರಿ ಕಪ್ ಟೂರ್ನಿಯಲ್ಲಿ 15 ವರ್ಷದ ಬಾಲಕ ಪ್ರಣವ್ ಧನವಾಡೆ ಬರೋಬ್ಬರಿ 1009 ರನ್ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ್ದ ಯುವ ಕ್ರಿಕೆಟಿಗ ಪ್ರಾಣವ ಧನವಾಡೆ ಮೇಲೆ ಪೊಲೀಸರು ಹಲ್ಲೆ ಮಾಡಿ ಸುಳ್ಳು ಪ್ರಕರಣ ಧಾಖಲಿಸಿ ಜೈಲಿಗೆ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ಘಟನೆ ಶನಿವಾರ ನಡೆದಿದೆ.

ಆಂಗ್ಲ ಪತ್ರಿಕೆಯೊಂದರ ಪ್ರಕಾರ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿರುವ ಕಲ್ಯಾಣ್ ನಲ್ಲಿರುವ ಸುಭಾಷ್ ಮೈದಾನದಲ್ಲಿ ಶನಿವಾರ ಸಂಜೆ ವೇಳೆಯಲ್ಲಿ ಪ್ರಣವ್ ಧನವಾಡೆ ತರೆಬೇತಿ ನಡೆಸುತ್ತಿದ್ದರು. ಅಲ್ಲೇ ಮಾಫಿಯಲ್ಲಿದ್ದ ಪೊಲೀಸ್ ಬಂದು ಕೇಂದ್ರ ಸಚಿವರು ಹೆಲಿಕಾಪ್ಟರ್ ಮೂಲಕ ಇಲ್ಲಿಗೆ ಆಗಮಿಸುತ್ತಿದ್ದರೆಂದು ಕೂಡಲೇ ಮೈದಾನ ಖಾಲಿ ಮಾಡುವಂತೆ ಪ್ರಣವ್ ಮತ್ತು ಅವರ ತಂದೆಗೆ ಸೂಚನೆ ನೀಡಿದ್ದಾರೆ.

ತಾನು ತರಬೇತಿ ನಡೆಸುತ್ತಿದ್ದು ಇನ್ನು ಐದು ನಿಮಿಷದಲ್ಲಿ ನಾವು ಹೋರಾಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಅವರ ಮತ್ತನು ಸಹ ಕೇಳದೆ ಪೊಲೀಸ್ ಏಕಾಏಕಿ ಪ್ರಣವ್ ರವರ ಕಪಾಳಕ್ಕೆ ಹೊಡೆದಿದ್ದಾರೆ. ಪ್ರಣವ್ ರವರ ವಿಶ್ವದಾಖಲೆ ಕುರಿತು ಮಾಹಿತಿ ಇದ್ದರೂ ಸಬ್ ಇನ್ಸ್ ಪೆಕ್ಟಾರ್ ಕೂಡಲೇ ಮೈದಾನವನ್ನು ಬಿಟ್ಟು ಹೋಗದಿದ್ದರೆ ಇಬ್ಬರ ಮೇಲೂ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳಿಸುತ್ತೇವೆಂದು ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲ ಬಳಿಕ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ, ಠಾಣೆಯಲ್ಲಿದ್ದ ಇನ್ಸ್ ಪೆಕ್ಟಾರ್ ಸೂರ್ಯವಂಶಿ ಕೂಡ ಪ್ರಣವ್ ಮತ್ತು ಅವರ ತಂದೆಯನ್ನು ನಿಂದಿಸಿದ್ದಾರೆ.

ಒಟ್ಟಾರೆ ಸಚಿವರ ಹೆಲಿಕಾಪ್ಟರ್ ಇಳಿಸುವ ಸಲುವಾಗಿ ಪ್ರತಿಭಾವಂತ ಕ್ರಿಕೆಟಿಗನ ತರಬೇತಿ ಅಡ್ಡಿಪಡಿಸಿದ್ದನ್ನು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಅತ್ತ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಪೋಲೀಸರ ದೌರ್ಜನ್ಯವನ್ನು ಟೀಕಿಸಿದ್ದಾರೆ. ಅಲ್ಲದೆ ಪ್ರತಿಭಾವಂತ ಕ್ರಿಕೆಟಿಗನ ಪರವಾಗಿ ನಿಂತು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.