ಎಂಜಿನಿಯರಿಂಗ್ ಪದವೀಧರರಿಗೆ ಭಾರತೀಯ ಪೊಲೀಸ್ ಅಕ್ಕರೆ!

0
474

ಎಂಜಿನಿಯರ್ ಗಳಿಗೆ ಐಪಿಎಸ್ ಅಕ್ಕರೆ

ಎಂಜಿನಿಯರಿಂಗ್ ಪದವೀಧರರಿಗೆ ಭಾರತೀಯ ಪೊಲೀಸ್ ಅಕ್ಕರೆ! ರಾಜ್ಯದ 146 ಐಪಿಎಸ್ ಅಧಿಕಾರಿಗಳಿಗ ಪೈಕಿ 40 ಅಧಿಕಾರಿಗಳು ಬಿಇ, ಬಿಟೆಕ್, ಎಂಟೆಕ್ ಪದವೀಧರರು ಎಂಬುದು ವಿಶೇಷ.

24 ಐಪಿಎಸ್ ಅಧಿಕಾರಿಗಳು ಎಂಎ ಪದವೀಧರರಾಗಿದ್ದರೆ, 9 ಅಧಿಕಾರಿಗಳು ಬಿಎ ವ್ಯಾಸಂಗ ನಂತರ ಐಪಿಎಸ್ ಗೆ ಸೇರಿದ್ದಾರೆ, ಇವರಲ್ಲಿ ಕೆಲವರು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗಮಾಡಿದ್ದಾರೆ ಎಂಬುದು ಗಮನಾರ್ಹ. 14 ಅಧಿಕಾರಿಗಳು ಎಂಬಿಬಿಎಸ್ ಪದವೀಧರರಾಗಿದ್ದಾರೆ. ಐಜಿಪಿಯಾಗಿ ಕರ್ತವ್ಯ ನಿರ್ವಹಿಸಿ ಇತ್ತೀಚೆಗೆ ಸ್ವಯಂ ನಿವೃತ್ತಿ ಘೋಷಿಸಿರುವ ಸುರೇಶ್ ಕುಂಞ ಮಹಮ್ಮದ್ ಅವರು ಎಂಬಿಬಿಎಸ್ ಪದವೀಧರರಾಗಿದ್ದಾರೆ. ಇನ್ನು ಐಜಿಪಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಎ.ಎಸ್.ಎನ್.ಮೂರ್ತಿ ಅವರು ಬಿಇ, ಎಲ್ ಎಲ್ ಬಿ, ಪಿಎಚ್ ಡಿ, ಪಿಜಿಡಿ ಪಿಪಿಎಂ. ಪಿಜಿಡಿಬಿಎಂ ವ್ಯಾಸಂಗ ಮಾಡಿ, ಐಪಿಸ್ ಅಧಿಕಾರಿಗಳಲ್ಲೇ ಹೆಚ್ಚು ಶೈಕ್ಷಣಿಕ ಪದವಿಗಳನ್ನು ಗಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ಕೆಲವರ ಮುಡಿಗೆ ಪಿಎಚ್’ಡಿ

ಮತ್ತೊಂದೆಡೆ 9 ಅಧಿಕಾರಿಗಳು ನಾನಾ ವಿಷಯಗಳಲ್ಲಿ ಡಾಕ್ಟರೇಟ್ ಪಡೆದಿದ್ದಾರೆ. ಐವರು ಅಧಿಕಾರಿಗಳು ಕಾನೂನು ಎಂಎಸ್’ಸಿ ವ್ಯಾಸಂಗ ಪೂರೈಸಿದ್ದಾರೆ. ರಾಯಚೂರಿನ ಎಸ್ಪಿ ಡಾ.ಚೇತನ್ ಸಿಂಗ್ ರಾಥೋಡ್ ಅವರು, ಎಂಎಸ್’ಸಿ ಜತೆಗೆ ತೋಟಗಾರಿಕೆ ವಿಷಯದಲ್ಲಿ ಪಿಎಚ್’ಡಿ ಪಡೆದಿದ್ದಾರೆ.

ಕರ್ನಾಟಕ ಮೂಲದವರೇ ಹೆಚ್ಚು

ರಾಜ್ಯದಲ್ಲಿರುವ 146 ಐಪಿಎಸ್ ಅಧಿಕಾರಿಗಳಲ್ಲಿ 65 ಅಧಿಕಾರಿಗಳು ಕರ್ನಾಟಕ ಮೂಲದವರಾಗಿದ್ದಾರೆ. ಆಂಧ್ರಪ್ರದೇಶ 15, ಉತ್ತರ ಪ್ರದೇಶದ 8, ಬಿಹಾರದ 15, ತಮಿಳುನಾಡಿನ 8 ಸೇರಿ ದೇಶದ ನಾನಾ ರಾಜ್ಯಗಳ ಐಪಿಎಸ್ ಅಧಿಕಾರಿಗಳು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮತ್ತೊಂದು ವಿಶೇಷವೆಂದರೆ ಹೊರ ರಾಜ್ಯದ ಬಹುತೇಕ ಐಪಿಎಸ್ ಅಧಿಕಾರಿಗಳು ಅಚ್ಚಕನ್ನಡದಲ್ಲಿ ಮಾತನಾಡುವ ಮೂಲಕ ಕನ್ನಡಿಗರಿಗೆ ಅಚ್ಚರಿಮೂಡಿಸಿದ್ದಾರೆ.