ನಿಮ್ಮ ಬಳಿ ಬುಲೆಟ್, ಡ್ಯೂಕ್ ಬೈಕ್ ಇದೆಯೇ ಹಾಗಾದರೆ ನೀವು ಭಾರಿ ದಂಡ ತೆರಬೇಕಾಗಬಹುದು ಹುಷಾರ್…!

0
1761

ನಿಮ್ಮ ಬಳಿ ರಾಯಲ್ ಏನ್ ಫೀಲ್ಡ್ ಬುಲೆಟ್, ಡ್ಯೂಕ್, ಯಮಾಹ, ಹಾರ್ಲೆ ಡೇವಿಡ್ ಸನ್ ನಂತಹ ಸ್ಪೋರ್ಟ್ಸ್ ಅಥವಾ ಕ್ರೂಸರ್ ಬೈಕ್ ಇದೆಯೇ, ಹಾಗಿದ್ದರೆ ನಿಮಗೆ ಯಾವಾಗ ಬೇಕಾದರೂ ಬೆಂಗಳೂರು ಸಂಚಾರಿ ಪೊಲೀಸರು ಶಿಕ್ಷೆ ವಿಧಿಸಬಹುದು, ಗಾಬರಿ ಪಡಬೇಡಿ ಇದು ಕೇವಲ ಬೈಕ್ ಮಾಡಿಫೈ ಮಾಡಿಸಿದ ಸವಾರರಿಗೆ ಮಾತ್ರ ಅನ್ವಯಿಸುತ್ತದೆ.

ಈ ನಡುವೆ ಬೆಂಗಳೂರಿನಲ್ಲಿ ಹೆಚ್ಚು CCಯ ಸ್ಪೋರ್ಟ್ಸ್ ಮತ್ತು ಕ್ರೂಸರ್ ಬೈಕ್-ಗಳದ್ದೇ ಹಾವಳಿಯಾಗಿದೆ. ಇನ್ನು ಕೆಲವು ಬೈಕ್ ಪ್ರಿಯರಂತೂ ವಿದೇಶದಿಂದ ಗಾಡಿಗಳನ್ನು ಆಮದು ಮಾಡಿಕೊಳ್ಳುತ್ತಿದ್ದಾರೆ. ಇನ್ನು ಒಯಲ್ ಏನ್ ಫೀಲ್ಡ್ ಬೈಕ್ ಗಳಿಗೆ ತಮಗಿಷ್ಟವಾದ ಕಾನೂನು ಬಾಹಿರ ಹೆಚ್ಚು ದ್ವನಿ ಮಾಡುವ ಸೈಲೆನ್ಸರ್-ಗಳನ್ನು ಅಳವಡಿಸುತಿದ್ದಾರೆ,

ಈ ಮಾಡಿಫೈ ಮಾಡಿದ ಬೈಕ್ ಸೈಲೆನ್ಸರ್-ನಿಂದ ತುಂಬಾನೆ ವಾಯು ಮಾಲಿನ್ಯವಾಗುತ್ತಿದೆ ಎಂದು ಸಾರ್ವಜನಿಕರು ನೀಡಿದ್ದ ದೂರುಗಳನ್ನು ಆದರಿಸಿ ಬೆಂಗಳೂರು ನಗರ ಪೊಲೀಸರು ಇಂತಹ ಬಾಹಿರ ಬೈಕ್ ಮಾಡಿಫೈ ಬೈಕ್ ಸವಾರರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

ಕೆಲ ವರ್ಷಗಳ ಮೊದಲು ರಾಜಧೂತ್, ಜಾವಾ, ಯಮಾಹ ಅಥವಾ ಬುಲೆಟ್ ಗಾಡಿಗಳು ಬರುತ್ತಿದ್ದರೆ ಮೈಲಿಗಳಿಂದ ಅದರ ಶಬ್ದ ಕೇಳುತ್ತಿತ್ತು, ಇದು ಕೆಲವರಿಗೆ ತುಂಬ ಇಷ್ಟವಾದರೆ ಇನ್ನು ಕೆಲವರಿಗೆ ಶಬ್ದದಿಂದ ಕಿರಿ-ಕಿರಿಯಾಗುತ್ತಿತ್ತು, ಇದನ್ನು ದೃಷ್ಟಿಯಲ್ಲಿಟ್ಟುಕೊಂಡೇ, ಸಂಚಾರಿ ನಿಯಮದಲ್ಲಿ ಮಾರ್ಪಡುತಂದು ಇಂತಹ ಬೈಕ್ಗಳ ಸೈಲೆನ್ಸರ್ ಧ್ವನಿಗಳನ್ನು ಕಡಿಮೆ ಮಾಡಲು ಬೈಕ್ ತಯಾರಿಕಾ ಕಂಪನಿಗಳಿಗೆ ಸೂಚಿಸಲಾಗಿತ್ತು.

ಈ ಹೊಸ ನಿಯಮವನ್ನು ಬದಿಗಿಟ್ಟು, ಬೈಕ್ ಮತ್ತು ಅದರ ಧ್ವನಿ ಕ್ರೇಜ್ ಇರುವ ಈಗಿನ ಯುವಜನರು, ಬೈಕಿನ ಎಕ್ಸಾಸ್ಟ್ ಸಿಸ್ಟಮ್ ಅನ್ನು ಮಾಡಿಫೈ ಮಾಡಿಸಿ ಹಳೆಯ ಹಾಗು ಹೆಚ್ಚು ಶಬ್ದ ಮಾಡುವ ಎಕ್ಸಾಸ್ಟ್ ಸಿಸ್ಟಮ್ ಅನ್ನು ಮತ್ತೆ ಅಳವಡಿಸಿಕೊಂಡಿದ್ದಾರೆ. ಇದರಿಂದ ಬೈಕ್ ಸವಾರನಿಗೆ ಹೆಚ್ಚಿನ ಅನುಕೂಲಕತೆಗಳಿದ್ದರು ಅದು ಸಾರ್ವಜನಿಕ ಜೀವನದಲ್ಲಿ ಹೆಚ್ಚೆಚ್ಚು ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತಿದೆ.

ಬೆಂಗಳೂರು ಪೊಲೀಸರು ಈಗಾಗಲೇ 500 ಕ್ಕೂ ಹೆಚ್ಚು ಕಾನೂನು ಬಾಹಿರ ಬೈಕ್ ಎಕ್ಸಾಸ್ಟ್ ಮಾದರಿಗಳನ್ನು ವಶಕ್ಕೆ ಪಡೆದು ಸೂಕ್ತ ಕ್ರಮ ಜರುಗಿಸಿದ್ದಾರೆ. ಮಾಡಿಫೈ ಎಕ್ಸಾಸ್ಟ್ ಮಾಡಿಸುವ ಬೈಕ್ ಸವಾರರ RC (ರಿಜಿಸ್ಟ್ರೇಷನ್ ಸರ್ಟಿಫಿಕೇಟ್) ರದ್ದುಗೊಳಿಸಲು ಮುಂದಾಗಿದ್ದಾರೆ. ಬೆಂಗಳೂರು ಸಾರಿಗೆ ಆಯುಕ್ತರು, ಕಾನೂನು ಬಾಹಿರ ಎಕ್ಸಾಸ್ಟ್ ಹೊಂದಿರುವ ಬೈಕ್ ಸವಾರರ ಆರ್‌ಸಿ ಅನ್ನು ನಾಲ್ಕು ತಿಂಗಳು ರದ್ದು ಮಾಡಿ, ಕಠಿಣ ಕಾನೂನು ಕ್ರಮ ಕೈಗೊಳ್ಳಿ ಎಂದು ಸಂಚಾರಿ ಪೊಲೀಸರಿಗೆ ಸೂಚಿಸಿದ್ದಾರೆ.